ವಿಜೀ ವೆಂಕಟೇಶ್

ಕ್ಯಾನ್ಸರ್‌ ಗೆ ಚಿಕಿತ್ಸೆ ನೀಡುದರ ಜೊತೆಗೆ ಸಿನಿಮಾರೆಗೂ ವಿಜೀ ವೆಂಕಟೇಶ್‌ ಎಂಥ ಆದರ್ಶವಾಗಿದ್ದಾರೆ ಎಂದರೆ, ಬದಲಾವಣೆ ತರುವುದರೊಂದಿಗೆ ಹೊಸ ಕನಸುಗಳನ್ನು ಕಾಣುವುದರಲ್ಲಿ ತಡ ಆಗವುದಿಲ್ಲ ಎಂದು ನಿರೂಪಿಸಿದ್ದಾರೆ. ಗೃಹಶೋಭಾ ಇನ್ ಸ್ಪೈರಿಂಗ್‌ ಅವಾರ್ಡ್ಸ್ 2025ರ ನ್ಯೂ ಬಿಗಿನಿಂಗ್‌ ವಿಭಾಗಕ್ಕಾಗಿ ವಿಜೀ ವೆಂಕಟೇಶ್‌ ರನ್ನು ಸನ್ಮಾನಿಸಿದ್ದು ಮಹಾಸೂಕ್ತ ಎಂಬುದರಲ್ಲಿ 2 ಮಾತಿಲ್ಲ. 71ರ ಹರೆಯದಲ್ಲಿ ಈಕೆ ರೋಗಗಳ ವಿರುದ್ಧ ಉಗ್ರ ಹೋರಾಟ ನಡೆಸಿರುವುದಲ್ಲದೆ, ನಾನ್‌ ಸ್ಟಾಪ್‌ ಮೈಲ್ ‌ಸ್ಟೋನ್ ಅಚೀವ್ ‌ಮಾಡಿದ್ದಾರೆ.

ಈಕಿ ಹೆಲ್ತ್ ಕೇರ್‌ ಅಡ್ವೋಕೇಟ್‌ ಆಗಿರುವುದರ ಜೊತೆಯಲ್ಲೇ ಉತ್ತಮ ನಟಿಯೂ ಹೌದು. ಇಂದಿಗೂ ಇವರ ಆತ್ಮವಿಶ್ವಾಸ ಕಂಡು ಯಾರೂ ಇವರಿಗೆ 71 ತುಂಬಿದೆ ಎಂದು ಹೇಳಲಾಗದು. ಉತ್ಸಾಹ ತುಂಬಿದ, ಹೊಳಪಿನ ಕಂಗಳನ್ನು ಅರಳಿಸುತ್ತಾ, ಪ್ರತಿಯೊಂದು ಸವಾಲನ್ನೂ ದಿಟ್ಟವಾಗಿ ಎದುರಿಸುವ ಇವರ ಬಾಳದಾರಿ ಗಮನಿಸೋಣವೇ? :

71 ಹರೆಯದಲ್ಲೂ ಪವರ್ಹೌಸ್‌!

37 ವರ್ಷಕ್ಕೂ ಹೆಚ್ಚಾಗಿ ಈಕೆ ರೋಗಿಗಳ ಸಹಾಯ, ಅವರ ಪರ ವಕಾಲತ್ತು ವಹಿಸುತ್ತಾ ಮುನ್ನಡೆದಿದ್ದಾರೆ. `ದಿ ಮ್ಯಾಕ್ಸ್ ಫೌಂಡೇಶನ್‌' ನಲ್ಲಿ ಭಾರತ ದ. ಏಷ್ಯಾದ ರೀಜನಲ್ ಹೆಡ್‌ ಆಗಿ, ಆಕೆ ವಿಶ್ವವಿಡಿಯ ಕೆಳ, ಮಧ್ಯಮ ವರ್ಗದ ಆದಾಯವುಳ್ಳ  ದೇಶಗಳ ಕ್ಯಾನ್ಸರ್‌ ರೋಗಿಗಳಿಗೆ ಜೀವರಕ್ಷಕ ಔಷಧಿ ನೀಡುತ್ತಾ ಪ್ರಧಾನ ಪಾತ್ರ ವಹಿಸುತ್ತಿದ್ದಾರೆ. ಇವರ ಈ ಸೇವೆಯಿಂದ ಸಹಸ್ರಾರು ಕುಟುಂಬಗಳು ಕ್ಯಾನ್ಸರ್‌ ಮಾರಿಯಿಂದ ಪಾರಾಗಿವೆ.

ಇವರ ಕ್ಯಾನ್ಸರ್‌ ಚಿಕಿತ್ಸಾ ಯಾತ್ರೆಯು 1987ರಿಂದ ಶುರುವಾಯ್ತು. ಮುಂಬೈನ ಮನೆ ಮನೆಗೂ ಹೋಗಿ ಚಂದಾ ವಸೂಲಿ ಮಾಡುತ್ತಾ, ನಾರಿಮನ್‌ ಪಾಯಿಂಟ್‌ ನ ಶ್ರೀಮಂತ ಆಫೀಸುಗಳಿಂದ, ಕ್ವಾಬೇಲಾಪುರದ ಮಿಲ್ ಗಳವರೆಗೂ ದಂಡಯಾತ್ರೆ ಮಾಡಿದ್ದಾರೆ. 1200 ರೂ. ಸಂಪಾದಿಸುವ ಸಿಬ್ಬಂದಿ ಸಹ 25 ರೂ. ದಾನ ನೀಡಿದ್ದಾರೆ. ಇವರಿಗೆ ಉಪಕಾರ ಮಾಡಲೆಂದೇ ಈಕೆ ಬ್ರಿಟಿಷ್‌ ಕೌನ್ಸಿಲ್ ಲೈಬ್ರೆರಿ ಕ್ಯಾನ್ಸರ್‌ ಶೋಧದ ಪುಸ್ತಕಗಳನ್ನು ಓದುತ್ತಾ, ಕಾರ್ಮಿಕರಿಗಾಗಿ ತಂಬಾಕು ಜಾಗೃತಿ ಅಭಿಯಾನ ನಡೆಸುತ್ತಾ, ಅವರ ಪತ್ನಿಯರಿಗೆ ಬ್ರೆಸ್ಟ್ ಸೆಲ್ಫ್ ಎಗ್ಸಾಮಿನೇಶನ್‌ ವರ್ಕ್‌ ಶಾಪ್‌ ಶುರು ಮಾಡಿದರು, ಇದು ಕ್ಯಾನ್ಸರ್‌ ಗೆ ಒಂದು ಮೂಲಕಾರಣ.

ಇಡೀ ದ. ಏಷ್ಯಾ ಖಂಡದಲ್ಲಿ 60 ಸಾವಿರಕ್ಕೂ ಹೆಚ್ಚಿನ ಕ್ಯಾನ್ಸರ್‌ ರೋಗಿಗಳಿಗೆ, ವಿಜೀ ಲೈಫ್‌ ಸೇವಿಂಗ್‌ ಥಿರಪೀಸ್‌ ನ ಸದವಕಾಶ ಒದಗಿಸಿದ್ದಾರೆ. ಜೊತೆಗೆ 30 ಸಾವಿರಕ್ಕೂ ಹೆಚ್ಚಿನ ಕ್ರಾನಿಕ್‌ ಮೈಲ್ಡ್ ಲ್ಯುಕೇಮಿಯಾದ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ. ಇವರ ಬಳಿ ವೈಯಕ್ತಿಕವಾಗಿ ಕ್ಯಾನ್ಸರ್‌ ಕುರಿತಾದ ಅನುಭವ ಇರಲಿಲ್ಲ. ಇದರ ಹೊರತಾಗಿಯೂ ಇಷ್ಟೆಲ್ಲ ಹರಸಾಹಸ ಮಾಡಲು ಈಕೆ ಹಿಂಜರಿಯಲಿಲ್ಲ.

Viji-_MG_2513

ಏಜ್ಈಸ್ಜಸ್ಟ್ ನಂಬರ್

ಕಳೆದ 3 ದಶಕಗಳಿಂದ ಕ್ಯಾನ್ಸರ್‌ ಚಿಕಿತ್ಸಾ ಕ್ಷೇತ್ರದಲ್ಲಿ ನಿರತರಾಗಿರುವ ವಿಜೀ, ಜೊತೆಯಲ್ಲೇ ನಟನೆಗೂ ತೊಡಗಿದರು. ಈಕೆ ಇತ್ತೀಚೆಗೆ ಅಖಿಲ್ ‌ಸತ್ಯನ್‌ ರ ನಿರ್ದೇಶನದ `ಪಾಚ್ಚುಂ ಅದ್ಬುದ ವಿಳಕ್ಕುಂ' ತಮಿಳು ಚಿತ್ರದಲ್ಲಿ ನಟಿಸಿದ್ದರು. ಈ ಸಂದರ್ಭದಲ್ಲಿ, ಇವರನ್ನು ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ, ನೀವು ನಮ್ಮ ಮಹಿಳೆಯರಿಗೆ ಏನು ಸಂದೇಶ ನೀಡುತ್ತೀರಿ ಎಂದು ಪ್ರಶ್ನಿಸಿದಾಗ, ಎಲ್ಲರೂ ತಂತಮ್ಮ ಹೃದಯ ಹೇಳಿದಂತೆ ಕೇಳಬೇಕೆಂದರು. ನಿರ್ಭಯವಾಗಿ ಮನಸ್ಸಿಗೆ ಸರಿ ಎನಿಸಿದ್ದನ್ನು ಮಾಡಿ. ನಿಮ್ಮಲ್ಲಿ ಸೇವಾ ಮನೋಭಾವ, ಇತರರಿಗೆ ಶಕ್ತಿ ತುಂಬವ ಕಲೆ ಇದೆ. ಯಾವಾಗ ಅವಕಾಶ ಸಿಗುತ್ತದೋ ಇದನ್ನು ಬಳಸಿ ಗೆಲುವು ಸಾಧಿಸಿಕೊಳ್ಳಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ