ಭಾರತೀಯರಾದ ನಾವು ಈ ಕೆಲವು ದೇಶಗಳ ಪ್ರವಾಸಕ್ಕಾಗಿ ವೀಸಾಗಾಗಿ ಕಾಯಬೇಕಿಲ್ಲ. ಅವು ಯಾವುವು.....?
ಈ ಬೇಸಿಗೆಯ ರಜಾ ದಿನಗಳಲ್ಲಿ ಮಕ್ಕಳಿಗಾಗಿ ಪೋಷಕರು ವಿದೇಶ ಪ್ರಯಾಣ ಹೊರಡುವುದು ಈಗೆಲ್ಲ ಬಲು ಮಾಮೂಲಿ. ಅಲ್ಲಿನ ವಿಭಿನ್ನ ಸಂಸ್ಕೃತಿ, ಭಾಷೆ, ಆ ದೇಶದ ಪ್ರಕೃತಿ ಸೌಂದರ್ಯ ಇತ್ಯಾದಿಗಳ ಸೆಳೆತ ಎಲ್ಲರಲ್ಲೂ ಇದ್ದದ್ದೇ. ಆದರೆ ವಿದೇಶಕ್ಕೆ ಹೋಗುವುದರ ಕುರಿತಾದ ಜಂಜಾಟಗಳನ್ನು ನೆನೆದು, ಇದನ್ನು ಕನಸಾಗಿ ಮರೆತುಬಿಡುತ್ತೇವೆ. ಅದರಲ್ಲೂ ಮುಖ್ಯವಾಗಿ ಅತಿ ದುಬಾರಿ ಟಿಕೆಟ್ ದರ, ವೀಸಾ ದೊರೆಯದ ಕಾಟಗಳಿಂದ ವಿದೇಶ ಪ್ರವಾಸದ ಆಸೆ ತೊರೆಯುತ್ತೇವೆ. ಆದರೆ ಗಾಬರಿಗೊಳ್ಳಬೇಡಿ, ಎಷ್ಟೋ ದೇಶಗಳಿಗೆ ಭಾರತೀಯರಾದ ನಾವು ವೀಸಾ ಇಲ್ಲದೆಯೇ ಪ್ರವಾಸ ಹೊರಡಬಹುದು. ವೀಸಾ ಪರ್ಮೀಶನ್ ಗಾಗಿ ಕಾಯಬೇಕಿಲ್ಲ. ಈ ರೀತಿ ಭಾರತೀಯರಾದ ನಾವು ಸುಮಾರು 62 ದೇಶಗಳಿಗೆ ವೀಸಾ ಫ್ರೀ ಆಗಿ ಪ್ರವಾಸ ಹೊರಡಬಹುದು. ಇದರಲ್ಲಿ ನಮ್ಮ ನೆರೆ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಭೂತಾನ್ ಪ್ರಮುಖ.
ಇತರ ದೇಶಗಳ ಬಗ್ಗೆ ತಿಳಿಯುವ ಮೊದಲು ವೀಸಾ ಸಹಿತ ಹಾಗೂ ವೀಸಾ ರಹಿತ ಪ್ರಯಾಣದ ಬಗ್ಗೆ ತಿಳಿಯೋಣ.
ಯಾವುದೇ ದೇಶಕ್ಕೆ ಪ್ರವಾಸಿಗರಾಗಿ ನಾವು ಹೋಗಲು 1 ವಾರ, 1 ತಿಂಗಳು ಅಥವಾ 6 ತಿಂಗಳು ಅಲ್ಲಿ ಇರಬೇಕಾದರೆ, ವೀಸಾ ಅತ್ಯಗತ್ಯ. ನಮ್ಮ ದೇಶ ನೀಡುವ ಅನುಮತಿ ಪಾಸ್ ಪೋರ್ಟ್ ಆದರೆ, ಆಯಾ ದೇಶ ನೀಡುವ ಅನುಮತಿಯೇ ವೀಸಾ. ಇದನ್ನು ಪಡೆದರು ಆಯಾ ದೇಶಗಳಿಗೆ ಕಾನೂನುಬದ್ಧವಾಗಿ, ಸುರಕ್ಷಿತ ಪ್ರಯಾಣ ಕೈಗೊಳ್ಳಬಹುದು. ಈ ವೀಸಾವನ್ನು ಸಾಮಾನ್ಯವಾಗಿ ಪ್ರಯಾಣಿಕರ ಪಾರ್ಸ್‌ಪೋರ್ಟ್ ನಲ್ಲೇ ಅಂಟಿಸಲಾಗುತ್ತದೆ, ಸ್ಟಾಂಪ್ ಗೊಳಿಸಲಾಗುತ್ತದೆ.
ಹಾಗಾದರೆ ವೀಸಾ ಫ್ರೀ ದೇಶದ ಪ್ರವಾಸಕ್ಕಾಗಿ ನಿಮ್ಮ ಬಳಿ ಕೇವಲ ಪಾರ್ಸ್ ಪೋರ್ಟ್ ಇದ್ದರೆ ಸಾಕು, ವೀಸಾ ಕೇಳಿ ಪಡೆಯಬೇಕಾದ್ದಿಲ್ಲ. ಇದನ್ನು ಸರಿಯಾಗಿ ತಿಳಿಯಬೇಕು. ಹಾಗಾದರೆ ವೀಸಾಫ್ರೀ ದೇಶಗಳ ಪ್ರವಾಸಕ್ಕೆ ರೆಡಿಯಾ? :
ಮಕಾ ಹಾಂಕಾಂಗ್ ತರಹವೇ ಮಕಾ ಸಹ ಚೀನಾದ ಆಡಳಿತವುಳ್ಳ ಪ್ರದೇಶ, ಇದು ತನ್ನ ಪ್ರಾಕೃತಿಕ ಸೌಂದರ್ಯಕ್ಕಾಗಿ ಹೆಚ್ಚು ಖ್ಯಾತಿಪಡೆದಿದೆ. ಇದು ತಟೀಯ ದ್ವೀಪಗಳ ಒಂದು ಗುಂಪನ್ನುಳ್ಳ ದೇಶ. `ಲಾಸ್ ವೇಗಸ್ ಆಫ್ ಈಸ್ಟ್' ಎಂದೇ ಪ್ರಸಿದ್ಧವಾಗಿದೆ. ಭಾರತೀಯ ಪಾಸ್ ಪೋರ್ಟ್ ವುಳ್ಳವರಿಗೆ ಇದು ಶುಲ್ಕರಹಿತ ವೀಸಾ ಒದಗಿಸುತ್ತದೆ. ಪ್ರತಿ ವರ್ಷ ವಿಶ್ವವಿಡೀ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.
ಇಲ್ಲಿನ ಪ್ರಮುಖ ಆಕರ್ಷಣೆಗಳು ಅಂದ್ರೆ ಮಕಾ ಪರ್ಯಾಯ ದ್ವೀಪ, ತೈಪಾಗಾಂವ್, ಕ್ಯಾಸಿನೋವಾ, ಚೀನಿ ಮಂದಿರಗಳು ಇತ್ಯಾದಿ. ಸರಿಸುಮಾರು 28 ಮಿಲಿಯನ್ ಪ್ರವಾಸಿಗರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ.
ನೆನಪಿರಲಿ : ಇಲ್ಲಿನ ಪ್ರವಾಸಿ ತಾಣಗಳಲ್ಲಿ ಕಳ್ಳರಿದ್ದಾರೆ, ಎಚ್ಚರಿಕೆ! ದಟ್ಟ ಜನಸಂದಣಿ ಇರುವಂಥ ಜಾಗಗಳಾದ ಶಾಪಿಂಗ್ ಸೆಂಟರ್, ಮಾಲ್, ಏರ್‌ಪೋರ್ಟ್, ಕ್ಯಾಸಿನೋವಾ ಮುಂತಾದೆಡೆ ಪ್ರವಾಸಿಗರು ಸದಾ ಅಲರ್ಟ್ ಆಗಿರಬೇಕು. ಅಪರಿಚಿತರಿಂದ ಎಂದೂ ಆಹಾರ, ಪಾನೀಯ, ಸಿಗರೇಟ್ ಇತ್ಯಾದಿ ಸ್ವೀಕರಿಸಬೇಡಿ. ಅದರಲ್ಲಿ ನಶೆ ಪದಾರ್ಥ ತುಂಬಿಸಿ ನಿಮ್ಮನ್ನು ಅವರು ದೋಚುತ್ತಾರೆ. ಇಂಥ ಪದಾರ್ಥಗಳನ್ನು ನೀವೇ ಖರೀದಿಸಿ ಬಳಸಿಕೊಳ್ಳಿ.





