ವಿಶ್ವೇಶ್ವಯರಯ್ಯನವರು ಮೈಸೂರಿನ ದಿವಾನರಾಗಿದ್ದಾಗ ಮಲೆನಾಡಿನ ಪ್ರಾಂತ್ಯದಲ್ಲಿ ಜೋರಾದ ಮಳೆಯಾಗಿ ಶರಾವತಿ ಉಕ್ಕಿ ಹರಿಯುತ್ತಿದ್ದಳು. ಜೋಗದ ಜಲಪಾತದಲ್ಲಿ ರಾಜಾ ರಾಣಿ, ರೋರರ್ ಮತ್ತು ರಾಕೆಟ್ ಧುಮ್ಮಿಕ್ಕೆ ಹರಿಯುತ್ತಿತ್ತು. ಅಂತಹ ರಮಣೀಯ ದೃಶ್ಯವನ್ನು ನೋಡಲು ಮೈಸೂರು ಮಹಾರಾಜರು ದಿವಾನರಾಗಿದ್ದ ವಿಶ್ವೇಶ್ವರಯ್ಯನವರನ್ನೂ ಒಳಗೊಂಡಂತೆ ತಮ್ಮ ಮಂತ್ರಿಗಣದ ಪರಿವಾರ ಸಮೇತ ಜೋಗಕ್ಕೆ ಭೇಟಿ ನೀಡಿ ಎಲ್ಲರೂ ಜೋಗದ ರುದ್ರರಮಣೀಯ ದೃಶ್ಯವನ್ನು ಸವಿಯುತ್ತಿದ್ದರೆ, ವಿಶ್ವೇಶ್ವರಯ್ಯನವರ ಬಾಯಿಯಿಂದ ಉದ್ಗಾರವಾದ ಮಾತು Oh! What a waste? ಎಲ್ಲರೂ ಪ್ರಕೃತಿಯ ಸೌಂದರ್ಯೋಪಾಸಕರಾಗಿದ್ದರೆ, ವಿಶ್ವೇ

ಕರ್ನಾಟಕದ ಚಿಕ್ಕಬಳ್ಳಾಪುರದ ನಂದೀ ಬೆಟ್ಟದ ತಪ್ಪಲಿನಲ್ಲಿರುವ ಮುದ್ದೇನಹಳ್ಳಿ ಗ್ರಾಮದಲ್ಲಿ , ಸೆಪ್ಟೆಂಬರ್ 15, 1861 ರಂದು ಸಾಮಾನ್ಯ ಸಾಂಪ್ರದಾಯಸ್ಥರ ಕುಟುಂಬದಲ್ಲಿ ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ತಮ್ಮ ಕಠಿಣ ಪರಿಶ್ರಮ ಮತ್ತು ಸ್ವಸಾಮರ್ಥ್ಯದಿಂದ ಓದಿ, ಬೆಳೆದು ಭಾರತದ ಅತ್ಯಂತ ಸಮರ್ಥರಾದ ಸಿವಿಲ್ ಎಂಜಿನಿಯರ್, ಅಣೆಕಟ್ಟು ನಿರ್ಮಾಣಕಾರ, ಅರ್ಥಶಾಸ್ತ್ರಜ್ಞರು, ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೇ ಕಳೆದ ಶತಮಾನದ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದರು. ವಿಶ್ವೇಶ್ವರಯ್ಯನವರು 1912 ರಿಂದ 1918 ರವರೆಗೆ ಮೈಸೂರಿನ ದಿವಾನರಾಗಿದ್ದರು. ಅವರು ದಿವಾನರಾಗಿದ್ದ ಕಾಲದಲ್ಲಿ ಮೈಸೂರು ರಾಜ್ಯವನ್ನು ಮಾದರಿ ರಾಜ್ಯ ಎಂದು ಕರೆಯುತ್ತಿದ್ದರು. ಅವರು ದಿವಾನರಾಗಿ
- ಕನ್ನಂಬಾಡಿ ಕಟ್ಟೆ
- ಎಚ್‌ಎಎಲ್
- ಜೋಗದ ಜಲವಿದ್ಯುತ್ ಯೋಜನೆ,
- ಶಿವನಸಮುದ್ರ
- ಬ್ಲಾಕ್ ಸಿಸ್ಟಮ್(ನೀರಾವರಿ ಯೋಜನೆ)
- ಭಟ್ಕಳ ಬಂದರು
- ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ
- ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ,
- ಸರಕಾರಿ ಸಾಬೂನು ಕಾರ್ಖಾನೆ,
- ಮೈಸೂರು ಸಕ್ಕರೆ ಕಾರ್ಖಾನೆ
- ಶ್ರೀಗಂಧ ಎಣ್ಣೆ ತಯಾರಿಕೆ
- ಮೈಸೂರು ಸ್ಯಾಂಡಲ್ ಸೋಪ್
- ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ
- ಕನ್ನಡ ಸಾಹಿತ್ಯ ಪರಿಷತ್
- ಮೈಸೂರು ವಿವಿ
- ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು
- ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
- ಕಬ್ಬನ್ ಪಾರ್ಕ್‌ನ ಸೆಂಚುರಿ ಕ್ಲಬ್
ಕರ್ನಾಟಕದ ಹೊರತಾಗಿಯೂ ದೇಶ ವಿದೇಶಗಳಲ್ಲಿ ಅವರ ಸಾಮರ್ಥ್ಯವನ್ನು ಸದ್ಬಳಕೆಮಾಡಿಕೊಳ್ಳಲಾಯಿತು. ಅವು
- ಪ್ಯಾರಾಸಿಟಾಯ್ಡ್ಸ್ ಲ್ಯಾಬೋ ರೇಟರಿ
- ಹಿಂದೂ ಮಾಡರ್ನ್ ಹೋಟೆಲ್
- ಪೂನಾ ಡೆಕ್ಕನ್ ಕ್ಲಬ್
- ಪುಣೆಯ ಖಡಕ್ ವಾಸ್ಲಾ ಜಲಾಶಯ
- ಗ್ವಾಲಿಯರ್‌ನ ಟೈಗರ್ ಡ್ಯಾಂ
- ಮೂಸಿ ನದಿ ಪ್ರವಾಹದಿಂದ ಹೈದರಾಬಾದ್ ನಗರದ ಪ್ರವಾಹ ಸಂರಕ್ಷಣಾ ವ್ಯವಸ್ಥೆ
- ಸೂರತ್ ನಲ್ಲಿ ಎಸ್ಎಕ್ಯುಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ
- ಸಿಂಧ್ ಪ್ರಾಂತದ ಸುಕ್ಕೂರ್ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಭಂದಪಟ್ಟ ವಿನ್ಯಾಸ ಹಾಗು ಕಾರ್ಯನಿರ್ವಹಣೆ.
- ಶಿಮ್ಲಾ ವ್ಯವಸಾಯ ಆಯೋಗದಲ್ಲಿ ಬಾಂಬೆ ಸರ್ಕಾರವನ್ನು ಪ್ರತಿನಿಧಿಸಿದ್ದು.
- ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ .
- ಚೀನ, ಜಪಾನ್, ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿ ನೀಡಿದ್ದಲ್ಲದೇ ಅವರ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿ ಭಾರತದ ಗೌರವವನ್ನು ವಿದೇಶಗಳಲ್ಲಿ ಎತ್ತಿಹಿಡಿದಿದ್ದಾರೆ.






