ಅಪಾಯದಲ್ಲಿ ವೈಯಕ್ತಿಕ ಸ್ವಾತಂತ್ರ್ಯ

ವಾಟ್ಸ್ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌ ಇವೆಲ್ಲ ಈಚೆಗೆ ಸರ್ಕಾರ ಹಾಗೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿವೆ. ಫೇಸ್‌ಬುಕ್‌ ಯಾವಾಗ ತನ್ನಲ್ಲಿರುವ ಜನರ ವರ್ತನೆಯ ಕುರಿತಾದ ಮಾಹಿತಿಯನ್ನು ಕೇಂಬ್ರಿಜ್‌ ಅನಾಲಿಟಿಕ್ಸ್ಗೆ ಮಾರಿಕೊಂಡು ಹಣ ಗಳಿಸಲು ಮುಂದಾಯಿತೊ, ಆಗಿನಿಂದ ಡಿಜಿಟಲ್ ಮೀಡಿಯಾ, ಡಿಜಿಟಲ್ ಸಂವಾದದ ಬಗ್ಗೆ ಪ್ರಶ್ನೆ ಎದ್ದಿದೆ.

ಗೂಗಲ್‌ನ ಸುಂದರ್‌ ಪಿಚ್ಚಾಯಿ ಅವರು ಅಮೆರಿಕ ಸಂಸತ್ತಿಗೆ ಹೇಳಿರುವ ಪ್ರಕಾರ, ಉಚಿತವಾಗಿ ಕಳಿಸಲ್ಪಡುವ ಜೀಮೇಲ್‌ ಅಕೌಂಟ್‌ಗಳ ಮಾಹಿತಿಯನ್ನು ಕೂಡ ಓದಬಹುದಂತೆ.

ವಾಸ್ತವದಲ್ಲಿ ಡಿಜಿಟಲ್ ಕ್ರಾಂತಿ ಜಗತ್ತಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಸ್ವಲ್ಪ ಮಟ್ಟಿಗೆ ಪರಮಾಣು ಬಾಂಬ್‌ಗಳ ರೀತಿಯಲ್ಲಿ. ಪರಮಾಣು ಪರೀಕ್ಷೆಗಳ ಅಪಾಯಕಾರಿ ಉದಾಹರಣೆಗಳು ಆ ಬಳಿಕ ಗಮನಕ್ಕೆ ಬಂದವು. ಆದರೆ ಆ ಅವಧಿಯಲ್ಲಿ ನಡೆಸಿದ ಸಂಶೋಧನೆಗಳ ಲಾಭ ಬಹಳಷ್ಟು ಕ್ಷೇತ್ರಗಳಿಗೆ ಲಭಿಸಿತು. ಇತ್ತೀಚಿನ ದಿನಗಳಲ್ಲಿ ರೇಡಿಯೇಶನ್‌ನ ದುಷ್ಪರಿಣಾಮದ ಬಗ್ಗೆ ಹೇಳಲಾಗುತ್ತಿದೆ. ಅವೆಲ್ಲ ಪರಮಾಣು ಪರೀಕ್ಷೆಗಳಿಗೆ ಸಂಬಂಧಪಟ್ಟಿವೆ. ಡಿಜಿಟಲ್ ಕ್ರಾಂತಿಯಲ್ಲಿ ಇದು ತದ್ವಿರುದ್ಧವಾಗಿದೆ. ಮೊದಲು ಅದರಿಂದ ಲಾಭವಾಯಿತು. ಈಗ ಅದರ ದುಷ್ಪರಿಣಾಮಗಳು ಗೋಚರಿಸುತ್ತಿವೆ.

ಡಿಜಿಟಲ್ ಮೀಡಿಯಾ ಮುಖಾಂತರ ತಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಗ್ರಾಹಕರ ತನಕ ಸಂದೇಶ ರವಾನಿಸಬಹುದು. ಸುಳ್ಳು ಸುದ್ದಿ ಹರಡುವವರು ಇದನ್ನು ಸಾಕಷ್ಟು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಜಗತ್ತಿನಾದ್ಯಂತ ಸುಳ್ಳು ಸುದ್ದಿಗಳು ಧಾರಾಳವಾಗಿ ಹರಿದಾಡುತ್ತಿವೆ. ಪರದೆಯ ಹಿಂದೆ ಯಾರಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಯಾರನ್ನು ಯಾರು ಬೇಕಾದರೂ ಮೂರ್ಖರನ್ನಾಗಿ ಮಾಡಬಹುದು.

ಕೆಲವರು ಈಗ ಫೇಸ್‌ಬುಕ್‌, ವಾಟ್ಸ್ಆ್ಯಪ್‌ ಮೂಲಕ ಪ್ರೀತಿ ಮಾಡುತ್ತಾರೆ. ಆದರೆ ಅದರ ವಾಸ್ತವ ಮಾತ್ರ ಅವರಿಗೆ ಗೊತ್ತಾಗುವುದೇ ಇಲ್ಲ. ಯಾವ ಸಂಗತಿ ಇಬ್ಬರ ನಡುವೆ ಗುಪ್ತವಾಗಿರಬೇಕೊ, ನೂರಾರು ಜನರ ಮಧ್ಯೆ ಯಾವಾಗ ಹಂಚಿ ಹೋಗುತ್ತೋ ಗೊತ್ತಾಗುವುದೇ ಇಲ್ಲ.

ಸರ್ಕಾರಗಳಿಗೆ ಈ ಪ್ಲ್ಯಾಟ್‌ಫಾರ್ಮ್ ಗಳು ಬಹಳ ಉಪಯುಕ್ತವಾಗಿ ಪರಿಣಮಿಸಿವೆ. ವಿರೋಧಿಗಳ ಮೇಲ್‌, ಮೆಸೇಜ್‌ ಹಾಗೂ ಇತರೆ ಸಂಗತಿಗಳನ್ನು ದಕ್ಕಿಸಿಕೊಳ್ಳುತ್ತಿವೆ.

ಈಗ ಮೊಬೈಲ್‌ನಲ್ಲಿ ಆಡಿದ ಮಾತುಗಳು ಕೂಡ ಸುರಕ್ಷಿತವಲ್ಲ. ಅನ್ನುವುದನ್ನು ಕೂಡ ರೆಕಾರ್ಡ್‌ ಮಾಡಿಕೊಳ್ಳಲಾಗುತ್ತಿದೆ. ವಿರೋಧ ಪಕ್ಷದವರ ಪ್ರತಿಯೊಂದು ಹೆಜ್ಜೆಯನ್ನು ಆಡಳಿತ ಪಕ್ಷಗಳು ತಿಳಿದುಕೊಳ್ಳಬಹುದಾಗಿದೆ. ಇವೆಲ್ಲ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿವೆ.

ಈಗ ಕಾಗದದ ಮೇಲೆಯೇ ಬರೆಯಿರಿ ಎಂದು ಯಾರೂ ಹೇಳುತ್ತಿಲ್ಲ. ಆದರೆ ನೀವು ಗಮದಲ್ಲಿಟ್ಟುಕೊಳ್ಳಬಹುದಾದ ಒಂದು ಸಂಗತಿಯೆಂದರೆ, ಸರ್ಕಾರದ ಗುರಿ ನಿಮ್ಮ ಮೇಲೆಯೇ  ಇದೆ. ನೀವು ವ್ಯಾಪಾರಿಗಳಿಗೂ ಟಾರ್ಗೆಟ್‌ ಆಗುತ್ತಿರುವಿರಿ. ಅವು ನಿಮ್ಮ ಯೋಚನೆ, ನಿಮ್ಮ ಖರೀದಿಯ ಸಾಮರ್ಥ್ಯವನ್ನು ನಿಯಂತ್ರಿಸುತ್ತಿವೆ.

ಸೆಕ್ಸ್ ಸಂಬಂಧದಲ್ಲಿ ನಿರಾಸಕ್ತಿ ಏಕೆ?

ಸೆಕ್ಸ್ ರಹಿತವಾಗಿ ಗಂಡು ಹೆಣ್ಣಿನ ಸಂಬಂಧ ಅಪೂರ್ಣ. ಸೆಕ್ಸ್ ಕೆಟ್ಟದ್ದು ಎಂದು ಯಾರು ಎಷ್ಟೇ ಜರಿದರೂ ಕೂಡ ಗಂಡು ಹೆಣ್ಣಿನಲ್ಲಿ ಪ್ರೀತಿ ಹಾಗೂ ಒಡನಾಟ ಹೆಚ್ಚುವುದು ಸೆಕ್ಸ್ ನಿಂದಲೇ. ಕೆಲವು ಪ್ರಕರಣಗಳಲ್ಲಿ ಈ ಪ್ರೀತಿ ಒಡನಾಟ ಕೆಲವು ನಿಮಿಷಗಳು ಮಾತ್ರ ಇರುತ್ತದೆ. ಪ್ರಕ್ರಿಯೆ ಮುಗಿಯುತ್ತಿದ್ದಂತೆ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿಬಿಡುತ್ತಾರೆ. ಹೊಟ್ಟೆ ಹೊರೆಯುವುದು ಕೂಡ ಅಷ್ಟೇ ಮಹತ್ವದ್ದು.

ಅಮೆರಿಕದ ಜನರ ಮೇಲೆ ಅಲ್ಲಿನ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, ಅಮೆರಿಕನ್ನರಲ್ಲಿ ಸೆಕ್ಸ್ ಅಪೇಕ್ಷೆ ಕ್ರಮೇಣ ಕಡಿಮೆಯಾಗುತ್ತ ಹೊರಟಿದೆ. ಅವರು ಸೆಕ್ಸ್ ಬದಲು ವಿಡಿಯೋ ಗೇಮ್ಸ್ ಅಥವಾ ವೃತ್ತಿಯಲ್ಲಿ ಹೆಚ್ಚಿನ ಸಮಯ ತೊಡಗಿಸುತ್ತಿದ್ದಾರೆ. ಯುವತಿಯರಲ್ಲಿ ಶೇ.18ರಷ್ಟು ಹಾಗೂ ಯುವಕರಲ್ಲಿ ಶೇ.23ರಷ್ಟು ಜನರು ತಾವು ಕಳೆದ ಒಂದು ವರ್ಷದಲ್ಲಿ ಸಮಾಗಮದ ಸುಖ ಕಂಡಿಲ್ಲ ಎಂದು ಹೇಳಿಕೊಂಡರು. 60ಕ್ಕೂ ಮೇಲ್ಪಟ್ಟವರಲ್ಲಿ ಶೇ.50ರಲ್ಲಿ ಜನರು ಸೆಕ್ಸ್ ನಿಂದ ದೂರ ಉಳಿಯುತ್ತಾರೆ.

ಸೆಕ್ಸ್ ರಹಿತ ಜೀವನದ ಬಗ್ಗೆ ಸಾಕಷ್ಟು ಗುಣಗಾನ ಮಾಡಲಾಗುತ್ತದೆ. ಆದರೆ ಇದು ತಪ್ಪು. ಗಂಡು-ಹೆಣ್ಣಿನ ಸಂಬಂಧ ನೈಸರ್ಗಿಕವಾದುದು. ನಿಸರ್ಗ ಅದರಲ್ಲಿ ಖುಷಿ ತುಂಬಿದೆಯೋ ಇಲ್ಲವೋ ಎನ್ನುವುದು ಗೊತ್ತಾಗುವುದಿಲ್ಲ. ನಾಗರಿಕ ಸಮಾಜ ಸೆಕ್ಸ್ ನ್ನು ಅವಲಂಬಿಸಿದೆ. ಏಕೆಂದರೆ ಸುರಕ್ಷಿತ ಸೆಕ್ಸ್ ಹಾಗೂ ಸಂಗಾತಿಯ ಒಪ್ಪಿಗೆಯ ಮೇರೆಗೆ ವಿವಾಹ ಸಂಸ್ಥೆ ಹುಟ್ಟಿಕೊಂಡಿತು. ವಿವಾಹ ಇದೆಯೆಂದರೆ ಮನೆಯಿದೆ, ಮನೆಯಿದೆ ಎಂದರೆ ಊರು, ಊರುಗಳಿವೆಯೆಂದರೆ ನಗರಗಳಿವೆ. ಸೆಕ್ಸ್ ಇಲ್ಲದಿದ್ದರೆ ಜನರು ಏಕಾಂಗಿಯಾಗಿಬಿಡುತ್ತಾರೆ. ಜೀವನದ ಬಗೆಗಿನ ಅವರ ದೃಷ್ಟಿಕೋನವೇ ಬದಲಾಗಿಬಿಡುತ್ತದೆ.

ನಾಗರಿಕತೆಯ ಬೇರಿನಲ್ಲಿ ಸುಖ ಪಡೆಯುವ ಇರಾದೆ ಏನಿರುತ್ತೊ, ಅದರ ಹಿಂದೆ ಸೆಕ್ಸ್ ಇದ್ದೇ ಇರುತ್ತದೆ. ಆ ಸುಖ ಪಡೆದುಕೊಳ್ಳಲು ಧರ್ಮದ ಆಧಾರದಲ್ಲಿ ಮಹಿಳೆಯರನ್ನು ಗುಲಾಮರನ್ನಾಗಿ ಮಾಡಲಾಯಿತು. ಆಶ್ರಮಗಳು, ಮಠಗಳಲ್ಲಿ ಅವರನ್ನು ಜಮೆ ಮಾಡಲಾಯಿತು. ರಾಜರು ಕೂಡ ಆ ಸುಖದ ಅಪೇಕ್ಷೆಗಾಗಿ ಮಹಲುಗಳನ್ನೇ ನಿರ್ಮಿಸಿಕೊಂಡರು. ಸೆಕ್ಸ್ ಇಲ್ಲದೆ ಹೋಗಿದ್ದರೆ, ಇಂದು ಏನು ಕಾಣುತ್ತದೋ, ಅದರಲ್ಲಿ ಬಹುಪಾಲು ಕಾಣುತ್ತಿರಲಿಲ್ಲ.

ಇಂದಿನ ಡಿಜಿಟಲ್ ಕ್ರಾಂತಿಯ ಹಿಂದೆ ಪೋರ್ನ್‌ ಮತ್ತು ಮಹಿಳೆಯರ ವ್ಯಾಪಾರ ಹೀಗೆ ಬಹಳಷ್ಟು ಅಡಗಿದೆ. ಇಲ್ಲಿ ಸಾಕಷ್ಟು ಹಣ ಹರಿದಾಡುತ್ತದೆ. ಮೊದಲು ಜನರು ಸೆಕ್ಸ್ ನ್ನು ಬಹಳ ಕೆಟ್ಟದ್ದು ಎಂದು ಜರಿಯುತ್ತಿದ್ದರು. ಆದರೆ ಅವರೇ ಅದರಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಿದ್ದರು. ಆಗ ಸಮಯ ಇರುತ್ತಿತ್ತು. ಜೊತೆಗೆ ಸಂಗಾತಿಗಳೂ ಇರುತ್ತಿದ್ದರು. ಈಗ ಸಮಯವಂತೂ ಇಲ್ಲವೇ ಇಲ್ಲ, ಸಂಗಾತಿಯ ನಖರಾಗಳು ಮಿತಿಮೀರಿವೆ.

ಸೆಕ್ಸ್ ಸುಖ ಪಡೆಯಲು ಪುರುಷರು ಸಾಕಷ್ಟು ತ್ಯಾಗ ಮಾಡಬೇಕಾಗಿ ಬರುತ್ತದೆ. ಆದರೆ ಮಹಿಳೆಯರು ಅದನ್ನು ಉಚಿತವಾಗಿ ಕೊಡಲು ಸಿದ್ಧರಿಲ್ಲ. ಎರಡು ಬದಿಯೂ ಹಿಂಜರಿಕೆ ಬೇಸರ ಇದ್ದರೆ ಸೆಕ್ಸ್ ಸಂಬಂಧ ಆಗುವುದು ಕಡಿಮೆಯೇ. ನಮ್ಮಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲ. ಆದರೆ ಹೆಚ್ಚುತ್ತಿರುವ ಒತ್ತಡ ಮತ್ತು ವಿಚ್ಛೇದನಕ್ಕೆ ಒಂದು ಮುಖ್ಯ ಕಾರಣ ಸೆಕ್ಸ್ ನ ಕೊರತೆ ಕೂಡ ಆಗಿರಬಹುದು.

ಇದೇ ಏನು ಕುರುಡು ಕಾನೂನು?

ನೀವು ಯಾರಿಂದಾದರೂ ಸಾಲ ಪಡೆದಿದ್ದರೆ, ಅದನ್ನು ಪಾವತಿಸದೆ ಇದ್ದರೆ ಸಾಲ ಕೊಟ್ಟ ನಿಮಗೆ ಸಾಲದ ಮೊತ್ತ ವಾಪಸ್‌ ಮಾಡಲು ಒತ್ತಡ ಹೇರಿದರೆ ಅದನ್ನು ಆತ್ಮಹತ್ಯೆಗೆ ಪ್ರೇರೇಪಿಸಿದರು ಎಂದು ಹೇಳಲಿಕ್ಕಾಗುತ್ತದೆಯೇ? ತಮಿಳುನಾಡಿನ ಮ್ಯಾಜಿಸ್ಟ್ರೇಟ್‌ ಹಾಗೂ ಉಚ್ಚ ನ್ಯಾಯಾಲಯದ ಅಭಿಪ್ರಾಯವಂತೂ ಹೀಗೆಯೇ ಇದೆ. ತಮಿಳುನಾಡಿನ ಅರ್ಜುನನ್‌, ರಾಜಗೋಪಾಲ್ ಎಂಬುವರಿಗೆ 2010ರಲ್ಲಿ 80,000 ರೂ. ಸಾಲ ಕೊಟ್ಟಿದ್ದರು. ಅವರು 80,000 ರೂ. ಅಸಲು ಹಾಗೂ 5,000 ರೂ. ಬಡ್ಡಿ ಕೇಳಿದಾಗ ರಾಜಗೋಪಾಲ್ ಆತ್ಮಹತ್ಯೆ ಮಾಡಿಕೊಂಡರು. `ಸಾಲದ ಬಾಧೆ ತಾಳಾರದೆ ತಾನು ಆತ್ಮಹತ್ಯೆ ಮಾಡಿಕೊಂಡೆ’ ಎಂದು ಚೀಟಿ ಬರೆದಿಟ್ಟಿದ್ದರು.

ನಮ್ಮ ದೇಶದ ನ್ಯಾಯಾಲಯಗಳು ಸಾಲ ಕೊಟ್ಟವನನ್ನೇ ಏಕೆ ಅಪರಾಧಿ ಎಂದು ಭಾವಿಸುತ್ತವೋ ಏನೋ? ಕೆಳ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯ ಅರ್ಜುನನ್‌ಗೆ ಶಿಕ್ಷೆ ವಿಧಿಸಿ ಜೈಲಿಗಟ್ಟಿದೆ. ಭಾರತೀಯ ದಂಡ ಸಂಹಿತೆಯ 306ನೇ ವಿಧಿಯನ್ವಯ ಆತ್ಮಹತ್ಯೆಗೆ ಪ್ರೇರೇಪಿಸುವುದು ಅಪರಾಧ. ತನ್ನ ಹಣವನ್ನು ವಾಪಸ್‌ ಕೇಳಿದ್ದು ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದಂತೆಯೇ?

ದುರ್ಬಲ ಹೃದಯದ ಒಬ್ಬ ವ್ಯಕ್ತಿ ತನ್ನ ತಪ್ಪಿಗೆ ತಾನೇ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಆತ್ಮಹತ್ಯೆಗೆ ಪ್ರೇರೇಪಿಸಿದಂತೆ ಎಂದು ಹೇಳುವುದು ಕಾನೂನಿನ ಗೌರವಕ್ಕೆ ಚ್ಯುತಿ ತಂದಂತೆ. ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾರಣ ಸೃಷ್ಟಿ ಮಾಡಬಾರದು ಎಂದು ಕಾನೂನು ಹೇಳುತ್ತದೆ.

ಮನೆಯಲ್ಲಿ ಈ ತೆರನಾದ ಸಾಕಷ್ಟು ಮಾತುಗಳು ಕೇಳುತ್ತವೆ. ಗಂಡ ಅಥವಾ ಅತ್ತೆಯ ಗದರಿಕೆ, ತಂದೆಯ ಏಟು, ಸೋದರಿಯ ಮುನಿಸು, ಪ್ರೇಯಸಿ ಅಥವಾ ಪ್ರಿಯಕರ ಒಪ್ಪಿಗೆ ಸೂಚಿಸದೇ ಇದ್ದರೆ ಹುಡುಗ-ಹುಡುಗಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಇವೆಲ್ಲವನ್ನೂ ಆತ್ಮಹತ್ಯೆಗೆ ಪ್ರೇರೇಪಣೆ ಎಂದು ಹೇಳಲಾಗದು. ಸುಪ್ರೀಂ ಕೋರ್ಟ್‌ ಅರ್ಜುನನ್‌ಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ಅದೂ ಕೂಡ 15 ವರ್ಷಗಳ ಬಳಿಕ. 80,000 ರೂ. ಕೊಟ್ಟ ಅರ್ಜುನನ್‌ಗೆ ಲಕ್ಷಾಂತರ ರೂ. ವಕೀಲರ ಫೀಸ್‌ ಕೊಡಬೇಕಾಗಿ ಬಂತು.

ಕಾನೂನು ವ್ಯಾವಹಾರಿಕವಾಗಬೇಕು. ನ್ಯಾಯಾಲಯಗಳು ಅದನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಬೇಕಾಬಿಟ್ಟಿ ಸಂಗತಿ ಆಗಬಾರದು. ತಪ್ಪು ನಿರ್ಧಾರ, ತಪ್ಪು ತೀರ್ಪು ಕೊಟ್ಟು ನಿರಪರಾಧಿ ನ್ಯಾಯಕ್ಕಾಗಿ ಅಲೆದಾಡುವಂತೆ ಮಾಡಿದ ಪೊಲೀಸರು ಮ್ಯಾಜಿಸ್ಟ್ರೇಟ್‌ರು ಹಾಗೂ ಉನ್ನತ ನ್ಯಾಯಾಲಯವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಳ್ಳಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ