2015ರಲ್ಲಿ 70ರಲ್ಲಿ 67 ಸ್ಥಾನಗಳ ಗೆಲುವಿನ ಬಳಿಕ ದೆಹಲಿಯ ಅರವಿಂದ್‌ ಕೇಜ್ರಿವಾಲ್ ‌ರ ಆಮ್ ಆದ್ಮಿ ಪಾರ್ಟಿಗೆ 2017ರಲ್ಲಿ ದೆಹಲಿ ಮಹಾನಗರ ಚುನಾವಣೆಯಲ್ಲಿ ಸೋಲು. 2019ರ ಲೋಕಸಭೆ ಚುನಾವಣೆಯಲ್ಲೂ ಕೂಡ. ಆದರೆ ಈ ಸಲದ ದೆಹಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್‌ ಶಾಹ್‌ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿ ವಿದ್ಯುತ್‌, ನೀರು, ಶಾಲೆ, ಆಸ್ಪತ್ರೆ ಮುಂತಾದ ಸಾಮಾನ್ಯ ವಿಷಯಗಳನ್ನು ಮುಂದಿಟ್ಟುಕೊಂಡು 70ರಲ್ಲಿ 62 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರು.

ಭಾಜಪಾ ದೇಶಕ್ಕೆ ಏನು ಕೊಡಲು ಬಯಸುತ್ತಿದೆ ಎಂಬುದನ್ನು ಭಾಜಪಾ ಸಮರ್ಥಕ ಟಿ.ವಿ ಚಾನೆಲ್ ವೊಂದರ ಸಂಪಾದಕ ಎಗ್ಸಿಟ್‌ ಪೋಲ್ ‌ನ ಪರಿಣಾಮಗಳ ಬಳಿಕ ಸ್ಪಷ್ಟಪಡಿಸಿದರು. ಆ ಚಾನೆಲ್ ‌ಹೇಳಿದ್ದೇನು ಗೊತ್ತೆ? ದೆಹಲಿಯ ಸ್ವಾರ್ಥಿ ಮತದಾರರಿಗೆ ಬಾಲಾಕೋಟ್‌ ವಿಷಯ, ಪಾಕಿಸ್ತಾನದ ಭಯೋತ್ಪಾದನೆಯ ವಿಷಯ ಬೇಕಿಲ್ಲ. 370ನೇ ವಿಧಿ ತಮಗೇನೂ ಸಂಬಂಧ ಇಲ್ಲದಂತೆ ಇದ್ದಾರೆ. ಪೌರತ್ವ ತಿದ್ದುಪಡಿಗೂ ಸಂಬಂಧ ಇಲ್ಲ ಎನ್ನುತ್ತಾರೆ. ಅವರಿಗೆ ರಸ್ತೆ, ವಿದ್ಯುತ್‌, ನೀರಷ್ಟೇ ಬೇಕಿದೆ. ದೇಶದ ಗಂಭೀರ ಸಮಸ್ಯೆಗಳು ಇಲ್ಲಿ ಮೂಲೆಗುಂಪಾದವು.

ವಾಸ್ತವದಲ್ಲಿ ಭಾಜಪಾ ಸರ್ಕಾರ ಅಧಿಕಾರ ಹಿಡಿದಾಗಿನಿಂದ ಮನೆ ಮನೆಯನ್ನು ಪ್ರಭಾವಿತಗೊಳಿಸು, ಪ್ರತಿಯೊಬ್ಬ ಮಹಿಳೆಯನ್ನು ತೊಂದರೆಗೀಡು ಮಾಡುವ, ಪ್ರತಿಯೊಬ್ಬ ನಾಗರಿಕರನ್ನು ಸುಖದಿಂದ  ಇಡುವ ವಿಷಯಗಳು ಸರ್ಕಾರದ ಅಜೆಂಡಾದಿಂದ ಮಾಯವಾಗಿ ಹೋಗಿವೆ. 2014ರಲ್ಲಿ ಭಾಜಪಾ ಒಳ್ಳೆಯ ದಿನಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿತ್ತು. ಈ ಒಳ್ಳೆಯ ದಿನಗಳಲ್ಲಿ ವಿಧಿ 370ರ ರದ್ಧತಿಯೂ ಇರಲಿಲ್ಲ, ಭಯೋತ್ಪಾದನೆ ವಿರುದ್ಧ ಹೋರಾಟ ಹಾಗೂ ಪೌರತ್ವ ತಿದ್ದುಪಡಿ ವಿಷಯಗಳಾವು ಇರಲಿಲ್ಲ. ಜನ ಸಾಮಾನ್ಯರಿಗೆ ಬೆಲೆ ಏರಿಕೆ ನಿಯಂತ್ರಣ, ಒಳ್ಳೆಯ ಜೀವನಶೈಲಿ, ಆರ್ಥಿಕ ಪ್ರಗತಿಯ ಅಪೇಕ್ಷೆ ಇತ್ತು. ಅದರ ಬದಲಿಗೆ ದೊರೆತದ್ದು ನೋಟು ರದ್ಧತಿ ಹಾಗೂ ಜಿಎಸ್‌ಟಿ. ಇವೆರಡೂ ದೇಶದ ವ್ಯಾಪಾರವನ್ನೇ ನಾಶ ಮಾಡಿದವು.

ಚೀನಾಕ್ಕೆ ಸರಿಸಮನಾಗಿ ಹೊರಟಿದ್ದ ದೇಶ ಈಗ ಹಿಂದುಳಿದ ದೇಶಗಳ ಪಟ್ಟಿಯಲ್ಲಿ ಸೇರಿಕೊಂಡಿತು. ಏಕೆಂದರೆ ಸರ್ಕಾರಕ್ಕೆ ಹಿಂದೂ, ಮುಸಲ್ಮಾನ್‌, ಮಸೀದಿ ಜಾಗದಲ್ಲಿ ಮಂದಿರ, ಮುಸ್ಲಿಂ ನುಸುಳುಕೋರರನ್ನು ಹೊರಹಾಕುವ ಚಿಂತೆ ಸತಾಯಿಸುತ್ತಿತ್ತು. ಜನಹಿತದ ಮಾತುಗಳು ಎಂದಾದರೊಮ್ಮೆ ಘೋಷಣೆಯಲ್ಲಿ ಕಂಡು ಬಂದರೂ ಅವನ್ನು ಅನುಷ್ಠಾನಕ್ಕೆ ತರಲಿಲ್ಲ. ಈಗಲೂ ಸ್ವಚ್ಛ ಭಾರತ ಹೆಸರಿನಲ್ಲಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೆ ಪರಿಸ್ಥಿತಿ ಸುಧಾರಣೆ ಆಗಿಲ್ಲ. ದೆಹಲಿ ಮಹಾನಗರ ಪಾಲಿಕೆ ಭಾಜಪಾ ಕೈಯಲ್ಲಿದೆ. ಆದರೆ ಎಲ್ಲಿ ನೋಡಿದರಲ್ಲಿ ಕಸದ ರಾಶಿ ಕಂಡುಬರುತ್ತದೆ. ಕಳೆದ 6 ವರ್ಷಗಳಲ್ಲಿ ದೆಹಲಿ ಒಳ್ಳೆಯ ದಿನಗಳನ್ನು ಕಂಡಿಲ್ಲ. ಅಂದರೆ ದೇಶದ ಇನ್ನುಳಿದ ಭಾಗ ಹೇಗಿರಬಹುದು ನೋಡಿ.

ಈ ಸಲ ಕೇಜ್ರಿವಾಲ್ ‌ಮನೆ ವಿಷಯಗಳನ್ನು ಚುನಾವಣೆ ವಿಷಯವಾಗಿ ಮಾಡಿಕೊಂಡು ಒಳ್ಳೆಯ ಕೆಲಸ ಮಾಡಿದರು. ಎಲ್ಲ ಮುಖಂಡರಿಗೂ ಮೊದಲ ಆದ್ಯತೆ ನಾಗರಿಕರಿಗೆ ಒಳ್ಳೆಯ ಜೀವನ ಕೊಡುವುದಾಗಿರಬೇಕು. ಎಲ್ಲಿಯವರೆಗೆ ಬಾಹ್ಯ ಆಕ್ರಮಣದ ಖಚಿತ ಭಯ ಇರುವುದಿಲ್ಲವೆ, ಅಲ್ಲಿಯವರೆಗೆ `ವೈರಿ ಬಂದ..... ವೈರಿ ಬಂದ' ಎಂದು ವ್ಯರ್ಥ ಭಯ ಹುಟ್ಟಿಸಿ ಆಂತರಿಕ ಜವಾಬ್ದಾರಿ ಮರೆಯಬಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ