ಸಮಾನತೆಯ ವಿಷಯ :

`ಅಲ್ಲಾವುದ್ದೀನ್‌ ಮತ್ತು 40 ಕಳ್ಳರ ಕಥೆ' ಇಂದಿಗೂ ಸಹ ಕೇಳಲು, ಹೇಳಲು, ಓದಲು ಮಾತ್ರವಲ್ಲದೆ ಸಿನಿಮಾಗಳಾಗಿಯೂ ಪ್ರಸಿದ್ಧಿ ಪಡೆದಿದೆ. 2019ರಲ್ಲಿ ತಯಾರಾದ `ಅಲ್ಲಾವುದ್ದೀನ್‌' ಆಂಗ್ಲ ಚಿತ್ರ ವಿಶ್ವಾದ್ಯಂತ ಕೋಟ್ಯಂತರ ಮಿಲಿಯನ್‌ ಡಾಲರ್‌ ಬಾಚಿಕೊಂಡಿತು. ಇದರಲ್ಲಿನ ವೈಶಿಷ್ಟ್ಯಎಂದರೆ 50% ಪಾತ್ರಧಾರಿಗಳು ಬಿಳಿಯರಲ್ಲ, ಅಮೆರಿಕಾದ ಅಲ್ಪಸಂಖ್ಯಾತರು. ಅಮೆರಿಕಾದ ಸಮಾಜ, ಸರ್ಕಾರ ಅಲ್ಲಿನ ಹೆಂಗಸರು, ಅಲ್ಪಸಂಖ್ಯಾತರಿಗೆ ಸದಾ ಸಮಾನತೆಯ ದರ್ಜೆ ನೀಡಲು ಯತ್ನಿಸುತ್ತಿರುತ್ತದೆ. ಆದರೆ ಅಲ್ಲಿಯೂ ಸಹ ಹಾಳು ಕಂದಾಚಾರಿ ಬಿಳಿಯರಿಗೇನೂ ಕೊರತೆ ಇಲ್ಲ. ಅವರು ಹಣ, ಬಂದೂಕಿನ ಅಧಿಕಾರದಿಂದ ಆಡಳಿತದ ದರ್ಬಾರು ನಡೆಸುತ್ತಾರೆ. ಇವರುಗಳ ಮುಖ್ಯ ಆಕ್ಷೇಪಣೆ ಗರ್ಭಪಾತದ ಕಾನೂನು, ಸಲಿಂಗಿಗಳ ಮದುವೆ, ಲ್ಯಾಟಿನ್‌ ಅಮೆರಿಕನ್ನರು ಅಮೆರಿಕಾದಲ್ಲಿ ನೆಲೆಸಿ ಹಣ ಸಂಪಾದಿಸುವುದರ ವಿರುದ್ಧ ಇರುತ್ತದೆ. ಹಾಲಿವುಡ್ ಚಿತ್ರಗಳಲ್ಲಿ ಕರಿಯರಿಗೆ ಕೊರತೆ ಇಲ್ಲ, ಇದೀಗ ನಮ್ಮ ಖಂಡ ಏಷ್ಯಾದವರಿಗೂ ಅವಕಾಶವಿದೆ.

ವಿಭಿನ್ನತೆಯಲ್ಲೂ ಮಜಾ :

 

ಸಿಡ್ನಿಯಲ್ಲಿ ಲೂನಾರ್‌ ಫೆಸ್ಟಿವಲ್ ‌ಇದೀಗ ಜೋರುಜೋರಾಗಿ ನಡೆಯುತ್ತಿದೆ, ಏಕೆಂದರೆ ಅಲ್ಲಿ ಚೀನೀಕೊರಿಯನ್ಸ್ ಭಾರಿ ಸಂಖ್ಯೆಯಲ್ಲಿ  ನೆಲೆಸಿದ್ದಾರೆ. ಆಸ್ಟ್ರೇಲಿಯಾ ಈಗಲೂ ಸಹ ವಿದೇಶಿಯರನ್ನು ಕೈ ಬೀಸಿ ಕರೆಯುತ್ತದೆ. ಏಕೆಂದರೆ ದೇಶ ಮಾತ್ರವಲ್ಲದೆ, ಅತಿ ಚಿಕ್ಕ ಖಂಡ ಆಗಿರುವ ಆಸ್ಟ್ರೇಲಿಯಾ ಕೇವಲ ಬಿಳಿಯರಿಂದಷ್ಟೇ ಪ್ರಗತಿ ಸಾಧಿಸಲು ಆಗುತ್ತಿಲ್ಲ ಎಂದು ಒಪ್ಪಿಕೊಂಡಿದೆ. ಅಲ್ಲಿನ ರಾಜಧಾನಿ ಸಿಡ್ನಿ ನಗರ ಈ ತರಹದ ಎಥ್ನಿಕ್‌ ಉತ್ಸವಗಳ ತಯಾರಿಗೆ ತೊಡಗಿದೆ. ಯಾರೇ ಬರಲಿ ಅವರಿಗೆ ಜಾಗ, ಹಣ, ಆದರಾಥಿತ್ಯಕ್ಕೆ ಕೊರತೆ ಇಲ್ಲ. ವಿಭಿನ್ನತೆಯಲ್ಲಿ ಏಕತೆ ಗುರುತಿಸಿದೆ! ನಮ್ಮಲ್ಲಿಯೂ ಈ ಭಾವನೆ ದಟ್ಟವಾಗಿದೆ. ಆದರೆ ಜಾತಿ, ಧರ್ಮಗಳ ಹೆಸರಿನಲ್ಲಿ ಒಡಕು ಮೂಡಿಸುತ್ತೇವೆ. ಇಂದಿಗೂ ಕ್ರಿಸ್ಮಸ್‌, ರಂಜಾನ್‌, ದಸರಾ ಹಬ್ಬಗಳು ಆಯಾ ಧರ್ಮೀಯರದಾಗಿಯೇ ಉಳಿದಿವೆಯೇ ಹೊರತು ಎಲ್ಲರ ಹಬ್ಬ ಎನಿಸಲ್ಲ. ಇಲ್ಲಿ ಕಲಹದ ಆತಂಕ ಹೆಚ್ಚು, ಪ್ರೀತಿ ವಾತ್ಸಲ್ಯದ ಸೌಹಾರ್ದತೆ ಕಡಿಮೆ.

ಹೆಸರು ಅದೇ ಸ್ಟೈಲ್ ಬೇರೆ :

samachar-darshan-3

1996ರಲ್ಲಿ `ಸ್ಪೈಸ್‌ ಗರ್ಲ್ಸ್'ನ ಸಂಗೀತ ಇಡೀ ವಿಶ್ವವನ್ನೇ ಬೆರಗಾಗಿಸಿತ್ತು. ಇಂದು ಇದು ಆ ಮಟ್ಟದಲ್ಲಿ ಮೆರೆಯುತ್ತಿಲ್ಲವಾದರೂ, ಹಳೆಯ ಅಭಿಮಾನಿಗಳು, ಸಂಗೀತ ರಸಿಕರನ್ನು ತಣಿಸುವ ಪ್ರಯತ್ನದಲ್ಲಿ ಈ ನಾಲ್ವರು ಹೆಂಗಸರು ಮತ್ತೆ ಸ್ಟೇಜ್‌ ಶೋ ನಡೆಸತೊಡಗಿದ್ದಾರೆ. ಇತ್ತೀಚೆಗೆ ಹೊಸ ಆಲ್ಬಂ ಸಹ ಲಾಂಚ್‌ ಮಾಡಿದರು. `ಸ್ಪೈಸ್‌ ಗರ್ಲ್ಸ್' ನಿಜಕ್ಕೂ ಗರ್ಲ್ಸ್ ಪವರ್‌ ಎಂಥದ್ದು ಎಂದು ಮ್ಯೂಸಿಕ್‌ ಮೂಲಕ ಸಾಧಿಸಿ ತೋರಿಸಿದ್ದಾರೆ. ಹೆಣ್ಮಕ್ಳೇ ಸ್ಟ್ರಾಂಗು ಗುರು!

ಬೀದಿಗಿಳಿದ ಜಲಕನ್ಯೆಯರು :

ಅಮೆರಿಕಾದ ನ್ಯೂ ಓರ್ಲಿಯನ್ಸ್ ನಗರ ಬಹಳ ದಿಲ್ ದಾರ್‌. ಸದಾ ಬಿಂದಾಸ್‌ ಆದ ಈ ಜನ, ಬೀದಿಗಿಳಿದು ಒಂದಲ್ಲ ಒಂದು ಮೆರವಣಿಗೆ ಮಾಡುತ್ತಿರುತ್ತಾರೆ. ಸಂಗೀತದ ಉತ್ಸವಗಳಿಗೇನೂ ಕಡಿಮೆ ಇಲ್ಲ. ಅಲ್ಲಿನ ಸೈರೆನ್ಸ್ ಸಂಸ್ಥೆ ಕಳೆದ 10 ವರ್ಷಗಳಿಂದ ಕೇವಲ ಹೆಂಗಸರೇ ತುಂಬಿರುವ ಒಂದು ಪೆರೇಡ್‌ ನಡೆಸುತ್ತಿದೆ. ಪ್ರತಿ ವರ್ಷ ಮತ್ತಷ್ಟು ಭವ್ಯವಾಗುತ್ತಿರುವ ಈ ಪೆರೇಡ್‌, ಎಲ್ಲೆಲ್ಲೂ ಕಾರ್ನಿವಾಲ್ ‌(ನಮ್ಮಲ್ಲಿನ ಜಾತ್ರೆಗಳಂತೆ) ವಾತಾವರಣ ಕ್ರಿಯೇಟ್‌ ಮಾಡುತ್ತದೆ. ಅಲ್ಲಿ ಜನಕನ್ಯೆಯರಾಗಿ ಇವರು ವಿಜೃಂಭಿಸುತ್ತಾರೆ. ಅಲ್ಲಿನ ಪತ್ನಿಯರು ತಮ್ಮ ಗಂಡಂದಿರು ಅಂಥದ್ದನ್ನು ನೋಡಬೇಡಿ ಎಂದು ಕಟ್ಟಿಹಾಕಲು ಸಾಧ್ಯವೇ.....?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ