ನಿಸರ್ಗದೊಂದಿಗೆ ನಾವೇ ಚೇಷ್ಟೆ ಮಾಡುತ್ತಿದ್ದೇವೆ. ಮುಂದೊಂದು ದಿನ ನಮಗೆ ಕುಡಿಯಲು, ಸ್ನಾನ ಮಾಡಲು, ಊಟ ಮಾಡಲು ಒಂದೇ ಒಂದು ಬಾಟಲ್ ನೀರಷ್ಟೇ ಸಿಗಬಹುದು. 

ಈ ಉದ್ಯಮ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷ ರೂಪದಲ್ಲಿ ಮೂರನೇ ಒಂದರಷ್ಟು ತಾಜಾ ನೀರನ್ನು ಬಳಸುತ್ತಿದೆ. ಈ ಉದ್ಯಮದ ಉತ್ಪಾದನೆ 23 ಕೋಟಿ ಮೆಟ್ರಿಕ್‌ ಟನ್‌ (2002)ನಿಂದ 2020ರ ಹೊತ್ತಿಗೆ 46 ಕೋಟಿ ಮೆಟ್ರಿಕ್‌ ಟನ್‌ ಆಗಲಿದೆ.

ಅಮೆರಿಕದವರು ತಿನ್ನುವ ಹಾಗೆ ಜಗತ್ತಿನ ಪ್ರತಿಯೊಂದು ದೇಶದವರೂ ಮಾಂಸಾಹಾರ ಸೇವನೆ ಮಾಡಿದ್ದೇ ಆದರೆ, ನಮಗೆ ನೀರು ಒಂದಿಷ್ಟೂ ಉಳಿಯದೇ ಹೋಗಬಹುದು. ಎಲ್ಲ ನೀರು ಮಾಂಸೋದ್ಯಮಕ್ಕೆ ಖರ್ಚು ಆಗಬಹುದು.

ನೀರಿನ ವ್ಯರ್ಥ ಉಪಯೋಗ

ಜಗತ್ತಿನಾದ್ಯಂತ ಪ್ರತಿವರ್ಷ 40 ದಶಕೋಟಿಯಷ್ಟು ಪ್ರಾಣಿಗಳನ್ನು ಸಾಯಿಸಿ ಅವನ್ನು ಸ್ವಾಹಾ ಮಾಡಲಾಗುತ್ತದೆ. ಅದರಲ್ಲಿ ಹೆಚ್ಚಿನವು ಕೋಳಿಗಳು. ಒಂದು ಕೆ.ಜಿ. ಚಿಕನ್‌ 200ರೂ.ಗಿಂತಲೂ ಕಡಿಮೆ ಬೆಲೆಗೆ ದೊರೆಯುತ್ತದೆ. ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ 270 ಕೋಟಿ ಕೋಳಿಗಳನ್ನು ಸಾಯಿಸಿ ತಿನ್ನಲಾಗಿತ್ತು. ಚಿಕನ್‌ ಸೇವಿಸುವವರು ತಾವು ಬೇಳೆ ಸೇವಿಸುವವರಿಗಿಂತ ಉನ್ನತ ಎಂದು ಭಾವಿಸುತ್ತಾರೆ.

ಚಿಕನ್‌ ಉತ್ಪಾದನೆಯಲ್ಲಿ ನೀರಿನ ಯಥೇಚ್ಛ ಬಳಕೆ ಮಾಡಲಾಗುತ್ತದೆ. ಕುಕ್ಕುಟ ಉತ್ಪಾದನೆಗಾಗಿ ಸಾಕಷ್ಟು ಧಾನ್ಯಗಳನ್ನು ಬೆಳೆಯಬೇಕಾಗುತ್ತದೆ. ಅದಕ್ಕಾಗಿ ನೀರು ಬೇಕೇಬೇಕು. ಪೌಲ್ಟ್ರಿ ಫಾರ್ಮ್ ಗಳು ನೀರನ್ನು ಸಾಕಷ್ಟು ಮಲಿನಗೊಳಿಸುತ್ತವೆ. ಈ ಮಲಿನ ನೀರನ್ನು ಕೃಷಿ ಕ್ಷೇತ್ರಕ್ಕೂ ಬಳಸಲಾಗುವುದಿಲ್ಲ. ಪ್ರತಿಯೊಂದು ಕೋಳಿಯೂ ದಿನಕ್ಕೆ 1 ಲೀಟರ್‌ನಷ್ಟು ನೀರನ್ನು  ಬಳಸುತ್ತದೆ.

ಕೋಳಿಗಳಿಗೆ ಜೋಳ, ಸೋಯಾಬೀನ್‌, ಸಜ್ಜೆ, ಗೋಧಿ, ಅಕ್ಕಿಯನ್ನು ಹಾಕಲಾಗುತ್ತದೆ. 1 ಕಿಲೋ ಆಹಾರವನ್ನು ಬೆಳೆಯಲು ಸುಮಾರು 1000 ಲೀ. ನೀರಿನ ಅವಶ್ಯಕತೆ ಉಂಟಾಗುತ್ತದೆ.

ಒಂದು ವೇಳೆ ಕೋಳಿಗಳನ್ನು ಫಾರ್ಮ್ ಗಳಲ್ಲಿ ಸಾಕದೆ ಮುಕ್ತವಾಗಿ ಸಾಕುವುದಾದರೆ, ಅವುಗಳಿಗೆ ತಗಲುವ ನೀರಿನ ಬಳಕೆ 40% ಕಡಿಮೆಯಾಗುತ್ತದೆ. ಆಧುನಿಕ ಫಾರ್ಮ್ ಗಳಲ್ಲಿ ಕೋಳಿಗಳನ್ನು ತೀರಾ ಹತ್ತಿರ ಹತ್ತಿರ ಇಟ್ಟು ಬೆಳೆಸಲಾಗುತ್ತದೆ. ಅವು ರೆಕ್ಕೆ ಬಿಚ್ಚಿ ತಮ್ಮಲ್ಲಿರುವ ಉಷ್ಣತೆಯನ್ನು ಹೊರಗೆ ಹಾಕಲಾಗುವುದಿಲ್ಲ. ಹೀಗಾಗಿ ಅವನ್ನು ನೀರಿನ ಕೂಲರ್‌ಗಳ ಗಾಳಿಯಲ್ಲಿ ಇಡಲಾಗುತ್ತದೆ. ನೀರಿನಿಂದಲೇ ಅವುಗಳ ಮಾಂಸವನ್ನು ಸ್ವಚ್ಛಗೊಳಿಸಲಾಗುತ್ತದೆ.

ಮೇಲಿಂದ ಮೇಲೆ ಪೋಲಾಗುವ ನೀರು

ಕೋಳಿಗಳನ್ನು ಸಾಯಿಸುವ ಮುಂಚೆ ಅವುಗಳನ್ನು ನೀರಿನ ಟಬ್‌ಗಳಲ್ಲಿ ಸ್ನಾನ ಮಾಡಿಸಲಾಗುತ್ತದೆ. ಆದರೆ ಕೋಳಿಗಳು ಅದರಲ್ಲಿ ಮೂತ್ರ ಮಾಡಿ ನೀರನ್ನು ಗಲೀಜು ಮಾಡುತ್ತವೆ. ಹೀಗಾಗಿ ಮೇಲಿಂದ ಮೇಲೆ ನೀರನ್ನು ಬದಲಿಸಬೇಕಾಗುತ್ತದೆ. ಕೋಳಿಯ ಒಳಭಾಗವನ್ನು ಸ್ವಚ್ಛಗೊಳಿಸಲು ನೀರಿನ ಹೆಚ್ಚಿನ ಬಳಕೆ ಮಾಡಲಾಗುತ್ತದೆ. ಪ್ರತಿಯೊಂದು ಕೋಳಿಯನ್ನು ಸಾಯಿಸಿ ಅದನ್ನು ತಿನ್ನಲು ಅರ್ಹಗೊಳಿಸಲು 35 ಲೀ. ನೀರಿನ ಅವಶ್ಯಕತೆ ಉಂಟಾಗುತ್ತದೆ. 238ನ್ನು 35ರಿಂದ ಗುಣಿಸಿ ನೋಡಿ. ಆಗ ಕೋಳಿಯೊಂದು ಎಷ್ಟು ನೀರನ್ನು ಹಾಳುಗೆಡಹುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.

ದೇಶದ ಹಳ್ಳಿಗಳಿಗೆ ಹಾಗೂ ರೈತರಿಗೆ ನೀರು ದೊರೆಯದಿರುವಾಗ, ಈ ರೀತಿಯ ನೀರಿನ ವ್ಯಯ ಭಯಾನಕ ಎನಿಸುತ್ತದೆ. ಭಾರತದಲ್ಲಿ ಸಸ್ಯಾಹಾರ ಸೇವನೆಯಲ್ಲಿ ಸಾಕಷ್ಟು ವಿಭಿನ್ನತೆ ಇದೆ. ಒಂದು ಗ್ರಾಂ ಚಿಕನ್‌ ಪ್ರೋಟೀನ್‌ಗೆ 38 ಲೀ. ನೀರಿನ ಅಗತ್ಯ ಉಂಟಾಗುತ್ತದೆ. ಅದೇ ಬೇಳೆಗಳ 1 ಗ್ರಾಂ ಪ್ರೋಟೀನ್‌ಗೆ 19 ಲೀ. ನೀರಿನ ಅವಶ್ಯಕತೆ ಉಂಟಾಗುತ್ತದೆ. ಆದರೆ ನೀರು ಹಾಳಾಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ