ಯಾರಿಗುಂಟು.... ಯಾರಿಗಿಲ್ಲ....? : ಮಿಸ್‌ ಕಾಂಟೆಸ್ಟ್ ಹೆಸರಿನಲ್ಲಿ ನಡೆಸಲಾಗುವ ಸೌಂದರ್ಯ ಸ್ಪರ್ಧೆಗಳು ಇಂದಿನ ಆಧುನಿಕ ಯುವತಿಯರ ಆತ್ಮವಿಶ್ವಾಸ ಹೆಚ್ಚಿಸುತ್ತವ. ಹೀಗಾಗಿ ವಿಶ್ವಾದ್ಯಂತ ಇದನ್ನು ಎಲ್ಲಾ ದೇಶಗಳೂ ನಡೆಸುತ್ತಿರುತ್ತವೆ. ಇತ್ತೀಚೆಗೆ ಜಪಾನಿನಲ್ಲಿ ನಡೆದ ಇಂಟರ್‌ ನ್ಯಾಷನಲ್ ಬ್ಯೂಟಿ ಪೇಜೆಂಟ್‌ನಲ್ಲಿ ಅಂತಿಮ ಸುತ್ತಿನಲ್ಲಿ ಗೆದ್ದ ಈ ಮೂರು ವಿಜೇತರು ಮಂದಹಾಸ ಬೀರಿದ್ದು ಹೀಗೆ.

samachar-7

ಹುಣಿಸೆ ಮರಕ್ಕೆ ಮುಪ್ಪು ಬಂದರೆ  : ಈಕೆ ಹಾಲಿವುಡ್‌ನ ಮಾಜಿ ಡ್ರೀಂ ಗರ್ಲ್ ಇರಬಹುದು, ಆದರೆ ಈಗಲೂ ಈಕೆ ನೀಡುವ ಶೋಗಳಿಗಾಗಿ ಬಾಯಿ ಬಿಡುವಮಂದಿ, ಹಳೆ ಗಾದೆ ನೆನಪಿಸುತ್ತಾರೆ.

samachar-2

ಎವ್ರಿ ಡಾಗ್‌ ಹ್ಯಾಸ್‌ ಎ ಡೇ! : ಆಹಾ..... ಇದಲ್ಲವೇ ಭಾಗ್ಯ! ಪಡ್ಡೆ ಹುಡುಗರು ಎಷ್ಟೇ ಹಲ್ಲು ಗಿಂಜಿಕೊಂಡು ಅಂಡಲೆದರೂ ಒಲಿಯದ ಹೆಣ್ಣು ಈ ನಾಯಿಗೆ ಹೀಗೆ ಮುತ್ತಿಡುವುದೇ? ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ನಾಯಿ ಮೇಳದಲ್ಲಿ, ಬ್ಲಡ್ ಹೌಂಡ್‌ ತಳಿಯ ಈ ನಾಯಿ ಎಲ್ಲರಿಗಿಂತ ಬೆಸ್ಟ್ ಅನಿಸಿತು. ಹೀಗಾಗಿ ಇದಕ್ಕೆ ಈ ಅದೃಷ್ಟ ಖುಲಾಯಿಸಿರಬಹುದೇ?

samachar-3

ನಾವು ಯಾರಿಗೇನು ಕಡಿಮೆ? : ಈ ಹುಡುಗಿ ಯಾವುದೋ ಪಾಶ್ಚಿಮಾತ್ಯ ದೇಶದ ಮಾಡೆಲ್ ಎಂದುಕೊಳ್ಳಬೇಡಿ, ಬದಲಿಗೆ ನಮ್ಮ ನೆರೆಯ ಪಶ್ಚಿಮ ಪಾಕಿಸ್ತಾನದ ಬೆಡಗಿ. ಅಲ್ಲಿನ ಕಂದಾಚಾರಿಗಳು ಧರ್ಮದ ಹೆಸರಿನಲ್ಲಿ ಎಷ್ಟೇ ಕೂಗಾಡಿ, ಹೆಣ್ಣಿನ ಸೌಂದರ್ಯವನ್ನು ತೆರೆಮರೆಯಲ್ಲಿ ಅಡಗಿಸಿಟ್ಟರೂ, ದಿನೇದಿನೇ ಬೀಸುತ್ತಿರುವ ಪರಿವರ್ತನೆಯ ಅಲೆ, ಅಲ್ಲಿನ ಆಧುನಿಕ ಹೆಣ್ಣನ್ನು ಹೀಗೆ ಫ್ಯಾಷನೆಬಲ್ ಆಗಿಸಿದೆ.

samachar-4

ಅಪಹಾಸ್ಯಕ್ಕೆ ಗುರಿಯಾದ ಪುಢಾರಿಗಳು : ಇಟಲಿಯಲ್ಲಿ ಪ್ರತಿ ವರ್ಷ ತಮ್ಮ ರಾಜಕೀಯ ಮುಖಂಡರನ್ನು ಅಪಹಾಸ್ಯಕ್ಕೆ ಗುರಿಮಾಡಲೆಂದೇ ಅವರ ಪುತ್ಥಳಿಗಳನ್ನು ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಲಾಗುತ್ತದೆ. ಈ ಬಾರಿಯಂತೂ ಅಲ್ಲಿನ ಮಾಜಿ ಪ್ರಧಾನಿ ಮಾತ್ರವಲ್ಲದೆ ಇನ್ನೂ ಹಲವರನ್ನು ಹೀಗೆ ಪ್ರದರ್ಶಿಸಲಾಯಿತು. ನಮ್ಮ ದೇಶದಲ್ಲಿ ಹೀಗೆ ಮಾಡಿದರೆ....? ಅಂಥ ಧೈರ್ಯ ಯಾರಿಗಿದ್ದೀತು?

samachar-5

ಹಾಟ್‌ ಹುಡುಗಿಯರ ಕೂಲ್ ‌ಸ್ಟೈಲ್ : ಇಂಥ ಹಾಟ್‌ ಹುಡುಗಿಯರು ಈ ಪೋಸ್‌ನಲ್ಲಿ ಬಂದು ನಿಂತರೆ ಮಂಜುಗಡ್ಡೆಗಳಿರಲಿ, ಕಲ್ಲೂ ಕರಗುವುದರಲ್ಲಿ ಸಂದೇಹವಿಲ್ಲ. ಇತ್ತೀಚೆಗೆ ಚೀನಾದ ಒಂದು ಸ್ಕೀ ರೆಸಾರ್ಟ್‌ನ್ನು ಪ್ರಮೋಟ್‌ ಮಾಡಲು, ಎಲ್ಲೆಡೆ ಹರಡಿದ ಐಸ್ ಮಧ್ಯೆ ನಿಂತ ಈ ಷೋಡಶಿಯರು ಮುಗುಳ್ನಗುತ್ತಾ ಸ್ವಾಗತ ಕೋರಿದ್ದು ಹೀಗೆ. ರೆಸಾರ್ಟ್‌ಗೆ ಬಂದವರ ಗತಿ....? ಅದ ಕೇಳಂಗಿಲ್ರೀ!

samachar-8

ಬಿಯಾನ್ಸೆಯ ಮೋಡಿ : ಈ ಮೋಹಕ ಮಂದಹಾಸಕ್ಕೆ ಮರುಳಾಗದವರಾರು? ಅಮೆರಿಕಾದ ಹಾಲಿ ಪಾಪ್‌ ಸಿಂಗರ್‌ ಬಿಯಾನ್ಸೆಯ ಶಾರೀರ ಮಾತ್ರವಲ್ಲ, ಶರೀರ, ಲ್ಯಾಕ್‌ ಇನ್‌ ಒನ್‌! ಹೀಗಾಗಿ ಅವಳಿಲ್ಲದ ಆಲ್ಬಮೇ ಇಲ್ಲ.

samachar-6

ಧಾರ್ಮಿಕ ಮೆರವಣಿಗೆಗಿಂತ ಮೇಲು : ಇತ್ತೀಚೆಗೆ ಅಮೆರಿಕಾದಲ್ಲಿ ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ಪೆರೇಡ್‌ ಎಂಬುದು ಅಲ್ಲಿನ ಫ್ಯಾಷನ್‌ ಆಗಿಹೋಗಿದೆ. ಬಣ್ಣಬಣ್ಣದ ಚಿತ್ರವಿಚಿತ್ರ ವೇಷ ಧರಿಸಿ, ಡೋಲು ಬಾರಿಸುತ್ತಾ ಮೋಜು ಉಡಾಯಿಸಲು ಹೊರಟೇಬಿಡುತ್ತಾರೆ. ಈ ವ್ಯಕ್ತಿ ಇಲ್ಲಿ ಮರ ವೇಷಧಾರಿಯಾಗಿ, ಬಿಳಿಯರೇತರ ಮುಖಂಡ ಮಾರ್ಟಿನ್‌ ಲೂಥರ್‌ ಕಿಂಗ್‌ರ ಸ್ಮರಣಾರ್ಥ, ಪೆರೇಡ್‌ನ ಭಾಗವಾಗಿದ್ದಾನೆ. ಧಾರ್ಮಿಕ ಮೆರವಣಿಗೆಗಳಿಗಿಂತ ಇದೆಷ್ಟೋ ಮೇಲಲ್ಲವೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ