ಎಂದಿನಂತೆ ಆಫೀಸಿನಿಂದ ಸಂಜೆ 6 ಗಂಟೆಗೆ ಹೊರಟು ವಂದನಾ ಆ ಶುಕ್ರವಾರ ಮಗನಿದ್ದ ಕ್ರೀಚ್‌ ತಲುಪಿದಳು. ಅವಳ ಮಗ ರಾಹುಲ್ ನ ಮೈ ಜ್ವರದಿಂದ ಸುಡುತ್ತಿರುವುದನ್ನು ಕಂಡು ಬಹು ಕಳವಳಕ್ಕೆ ಒಳಗಾದಳು.

ಮಗನನ್ನು ಕರೆದುಕೊಂಡು ನೇರ ಮಕ್ಕಳ ತಜ್ಞರಾದ ಡಾ. ನಮನ್‌ ರ ಕ್ಲಿನಿಕ್‌ ತಲುಪಿದಳು ಅಲ್ಲಿ ಬಹಳ ರಶ್‌ ಇದ್ದುದನ್ನು ಕಂಡು ಅವಳ ಎದೆ ಧಸಕ್‌ ಎಂದಿತು. 8 ಗಂಟೆಗೆ ಮೊದಲು ತಾನು ಮನೆ ತಲುಪಲು ಆಗುವುದೇ ಇಲ್ಲ ಎಂದು ಅವಳಿಗೆ ಗೊತ್ತಾಯಿತು. ಕೊರೋನಾ ಎಷ್ಟೋ ತಗ್ಗಿದ್ದರಿಂದ ಇದೀಗ ಎಲ್ಲಾ ಕ್ಲಿನಿಕ್‌ ಗಳೂ ಹಿಂದಿನಂತೆಯೇ ತುಂಬಿರುತ್ತಿದ್ದವು.

ಸ್ವಲ್ಪ ಹೊತ್ತಾದ ನಂತರ ಕೊಸರಾಡುತ್ತಿದ್ದ ರಾಹುಲ್ ಅವಳ ಎದೆ ಅಪ್ಪಿಕೊಂಡು ಹಾಕಿ ನಿದ್ರಿಸಿಬಿಟ್ಟ. ಅಮ್ಮನಿಗೆ ಫೋನ್‌ ಮಾಡಿ ಕ್ಲಿನಿಕ್‌ ಗೇ ಕರೆಸಿಕೊಳ್ಳಲೇ ಎಂದು ಯೋಚಿಸಿದಳು. ಆದರೆ ಅವಳು ಹಾಗೆ ಮಾಡಲು ಹೋಗಲಿಲ್ಲ ತಾಯಿ ಶಾರದಮ್ಮ ಬಂದರೆ ಕೊಡುವ ಉದ್ದುದ್ದ ಲೆಕ್ಚರ್‌ ಕೇಳುವ ಮೂಡ್‌ ನಲ್ಲಿ ಈಗ ಅವಳು ಇರಲಿಲ್ಲ.

ಟೋಕನ್‌ ಹಿಡಿದು ಕಾಯುತ್ತಿದ್ದ ಅವಳನ್ನು 7 ಗಂಟೆ ಹೊತ್ತಿಗೆ ಅಕ್ಕಾ ವಿನುತಾಳ ಫೋನ್‌ ಎಚ್ಚರಿಸಿತು. ರಾಹುಲನಿಗೆ ಜ್ವರ ಎಂದು ತಿಳಿದು ಅವಳೂ ವಿಹ್ವಲಳಾದಳು.

``ಮನೆಗೆ ಹೋಗಿ ರಾತ್ರಿ ಅಡುಗೆ ಬಗ್ಗೆ ಯೋಚಿಸಬೇಡ ವಂದನಾ. ನೀವು ಮನೆ ತಲುಪಿಸುವಷ್ಟರಲ್ಲಿ ನಾನು ನಿಮ್ಮಿಬ್ಬರಿಗೂ ಮನೆಗೆ ಊಟ ತಂದುಕೊಡ್ತೀನಿ,'' ಎಂದು ಅಕ್ಕರೆಯಿಂದ ಹೇಳಿದಳು ವಿನುತಾ.

ವಿನುತಾಳ ಮಾತು ಕೇಳಿ ಅವಳಿಗೆಷ್ಟೋ ಸಮಾಧಾನವಾಯಿತು. ಮಗುವನ್ನು ಪರೀಕ್ಷಿಸಿದ ಡಾ. ನಮನ್‌, ಮಾಮೂಲಿ ನೇಸ್‌ ಫೀವರ್‌, ಆತಂಕ ಪಡಬೇಕಾಗಿಲ್ಲ ಎಂದರು.

``ಮಗುವಿಗೆ ಜ್ವರ ಬಿಡುವವರೆಗೂ ಹುಷರಾಗಿ ನೋಡಿಕೊಳ್ಳಿ. ಗಂಜಿ, ಇಡ್ಲಿ, ಮೊಸರನ್ನ ಮಾತ್ರ ಕೊಡಿ, ಖಾರದ್ದು ಏನೂ ಬೇಡ. ಅಗತ್ಯವೆನಿಸಿದರೆ ನನಗೆ ಫೋನ್‌ ಮಾಡಿ. ಯಾವುದಕ್ಕೂ ಒಂದು ಸಲ ಆರ್‌ಟಿಪಿಸಿ ಕೋವಿಡ್‌ ಟೆಸ್ಟ್ ಮಾಡಿಸಿಬಿಡಿ, ಆಗ ಟೆನ್ಷನ್ ಇರುವುದಿಲ್ಲ,'' ಎಂದು ಸಲಹೆ ನೀಡಿದರು.

ಪಕ್ಕದಲ್ಲಿದ್ದ ಕೆಮಿಸ್ಟ್ ನಿಂದ ಮಾತ್ರೆ, ಟಾನಿಕ್‌ ಕೊಂಡು, ಆಟೋ ಹಿಡಿದು ಅವಳು ಮನೆ ತಲುಪುವಷ್ಟರಲ್ಲಿ 8 ದಾಟಿತ್ತು. ಬಂದವಳೇ ಪಕ್ಕದ ಹೋಟೆಲ್ ‌ನಿಂದ ಎರಡು ಬಿಸಿ ಇಡ್ಲಿ ತಂದು ರಾಹುಲನಿಗೆ ತಿನ್ನಿಸಿ, ಮಾತ್ರೆ ಕೊಟ್ಟು, ಟಾನಿಕ್‌ ಕುಡಿಸಿದಳು. ನಂತರ ಟೀ ಕುಡಿಯೋಣ ಎಂದು ನೀರು ಕುದಿಸಿ, ಪುಡಿ ಹಾಕಿದಳು. ಟೀ ಜೊತೆ ಅಗತ್ಯ ತಲೆ ನೋವಿನ ಮಾತ್ರೆ ಬೇಕೆನಿಸಿತು. ಮಾತ್ರೆ ನುಂಗಿದ ಅವಳು ಎರಡು ಗುಟುಕು ಟೀ ಕುಡಿಯುವಷ್ಟರಲ್ಲಿ ರಾಹುಲ್ ‌ಎದ್ದು ವ್ಯಾಕ್‌ ಎಂದು ವಾಂತಿ ಮಾಡಿಕೊಂಡಿದ್ದ. ಗಾಬರಿಯಲ್ಲಿ ಟೀ ಮರೆತು ಓಡಿಹೋಗಿ, ಅವನ ಬಾಯಿ ತೊಳೆಸಿ, ಕ್ಲೀನ್‌ ಮಾಡಿ, ಬಟ್ಟೆ ಬದಲಿಸಿ ಅವನನ್ನು ಮಲಗಿಸಿ ಬರುವಷ್ಟರಲ್ಲಿ ಅವಳ ಟೀ ಆರಿ ತಣ್ಣಗಾಗಿತ್ತು.

ದಿನವಿಡೀ ದುಡಿತದ ಹೋರಾಟದಿಂದ ಹೈರಾಣಾಗಿದ್ದ ಅವಳಿಗೆ ಅಳು ಉಕ್ಕಿ ಬಂತು. ಅಷ್ಟರಲ್ಲಿ ಕರೆಗಂಟೆ ಬಾರಿಸಿದ ವಿನುತಾ, ಪತಿ ಸೌರವ್ ನೊಡನೆ ಒಳಬಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ