``ಓಹ್‌ ಇದಾ ವಿಷಯ...... ಎಂಥ ಸುದ್ದಿ ಕೊಟ್ಟೆ ನನ್ನ ಗೆಳತಿ. ಬಹಳ ಥ್ರಿಲ್ ‌ಆಯಿತು,'' ಎಂದು ಪಾರ್ವತಿ ಹೇಳಿದಳು.

``ನಿಧಾನವಾಗಿ ಮಾತಾಡು. ಗೋಡೆಗಳಿಗೂ ಕಿವಿ ಇರುತ್ತದೆ. ಈ ವಿಷಯ ಆಫೀಸಿನಲ್ಲಿ ಗೊತ್ತಾಗದಿರಲಿ,'' ಎಂದು ನಾದಿರಾ ಪಾರ್ವತಿಯ ಕೈ ಒತ್ತಿ ಹಿಡಿದು ಹೇಳಿದಳು.

`ಅದೆಂಥ ಹ್ಯಾಂಡ್‌ ಸಮ್ ಆಗಿದ್ದಾನೆ ಸಚಿನ್‌. ಜಿಮ್ ನಲ್ಲಿ ಕೆತ್ತಿ ಮಾಡಿಸಿದಂತಹ ದೇಹ, ಆದರೆ ಇದೆಲ್ಲ ಆದದ್ದು ಯಾವಾಗ?' ಪಾರ್ವತಿಗೆ ಮತ್ತಷ್ಟು ಕುತೂಹಲವಿತ್ತು. ಆ ಸುದ್ದಿ ಕೂಡ ಹಾಗೆಯೇ ಇತ್ತು. ಅದೂ ಕೂಡ ತನ್ನ ಏಕೈಕ ಆಪ್ತ ಗೆಳತಿಯ ಬಗ್ಗೆ.

ನಾದಿರಾ ಮೊದಲ ಬಾರಿ ಸಚಿನ್‌ ನನ್ನು ಕಂಪನಿಯ ಟೀಮ್ ಮೀಟಿಂಗ್‌ ನಲ್ಲಿ ನೋಡಿದಾಗ, ಅವಳ ಕಣ್ಣುಗಳು ಅವನ ಮೇಲೆಯೇ ನೆಟ್ಟಿದ್ದವು. ಎತ್ತರದ ಕಾಯ, ಶರ್ಟ್‌ ನ ಹೊರಗೆ ಇಣುಕುತ್ತಿದ್ದ ದಷ್ಟಪುಷ್ಟ ತೋಳುಗಳು. ಅದು ಜಿಮ್ ಟ್ರೇನಿಂಗ್‌ ನ ಪರಿಣಾಮ ಎನ್ನುವುದನ್ನು ಎತ್ತಿ ತೋರಿಸುತ್ತಿದ್ದವು. ಅದಕ್ಕೆ ಮೇಲಾಗಿ, ಇಂದಿನ ಲೇಟೆಸ್ಟ್ ಫ್ಯಾಷನ್‌ ಆಗಿದ್ದ ಟ್ರಿಮ್ ಮಾಡಿದ ಗಡ್ಡ. ನಾದಿರಾಗೆ ಫ್ಯಾಷನೆಬಲ್ ಜನರು ಬಹಳ ಇಷ್ಟವಾಗುತ್ತಿದ್ದರು. ಅವಳೂ ಕೂಡ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಹುಡುಗಿಯಾಗಿದ್ದಳು.

ಸಚಿನ್‌ ನ ದೃಷ್ಟಿ ಕೂಡ ಅವಳ ಮೇಲೆ ನೆಟ್ಟಿತ್ತು. ನಾದಿರಾಳ ತೆಳ್ಳನೆಯ ದೇಹ, ಆಕರ್ಷಕ ಬಣ್ಣರೂಪ, ಮುತ್ತಿನಂತಹ ಹಲ್ಲುಗಳು, ಆತ್ಮವಿಶ್ವಾಸ ಭರಿತ ಮೋಹಕ ಮುಗುಳ್ನಗು. ಉದ್ದನೆಯ ಕೂದಲು, ಎದುರಿಗಿನ ವ್ಯಕ್ತಿಯನ್ನು ಮೋಹಪಾಶಕ್ಕೆ ಒಳಗಾಗಿಸಲು ಸಾಕಷ್ಟಾಗಿದ್ದವು. ಅವಳ ದೊಡ್ಡ ದೊಡ್ಡ ಕಪ್ಪು ಕಣ್ಣುಗಳು, ಅದಕ್ಕೆ ಹೊಂದುವಂತಹ ಬಂಗಾರ ಬಣ್ಣದ ಫ್ರೇಮ್ ವುಳ್ಳ ಕನ್ನಡಕ ಅವಳನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿತ್ತು.

ಸಚಿನ್‌ ಹಾಗೂ ನಾದಿರಾ ಜೊತೆ ಜೊತೆಗೆ ಕೆಲಸ ಮಾಡುತ್ತಾ 6 ತಿಂಗಳಾಗುತ್ತಾ ಬಂದಿತ್ತು. ಆಫೀಸಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ರೊಮ್ಯಾನ್ಸ್ ಅವರಲ್ಲಿ ಮೊಳಕೆ ಒಡೆದಿತ್ತು. ಕಣ್ಣುಗಳ ಸನ್ನೆಯಿಂದ ಆರಂಭವಾದ ಅವರ ಪ್ರೀತಿ ಬಳಿಕ ಇಬ್ಬರೂ ಜೊತೆ ಜೊತೆಗೆ ಕುಳಿತು ಊಟ ಮಾಡಲು ಪ್ರೇರೇಪಿಸಿತು. ಒಮ್ಮೊಮ್ಮೆ ಅವರು ಬೆಂಗಳೂರಿನ ಜನದಟ್ಟಣೆಯಿಲ್ಲದ ಕಡೆ ಸಂಜೆ ಹೊತ್ತು ಸುತ್ತಾಡಲು ಹೊರಟುಬಿಡುತ್ತಿದ್ದರು. ಬಳಿಕ ಈವ್ನಿಂಗ್‌ ಡೇಟ್‌ ಗೆಂದು ಸಿನಿಮಾಕ್ಕೋ, ಡಿನ್ನರ್‌ ಗೊ ಹೋಗುತ್ತಿದ್ದರು. ಏಕೆಂದರೆ ಆಫೀಸಿನಲ್ಲಿ ಇದಕ್ಕೆಲ್ಲ ಅವಕಾಶ ಇರುತ್ತಿರಲಿಲ್ಲ. ಹೀಗಾಗಿ ಅವರು ಹೊರಗಡೆಯೇ ಭೇಟಿ ಆಗುತ್ತಿದ್ದರು. ಆದರೆ ಅದಕ್ಕೆ ಅವಕಾಶ ಸಿಗುತ್ತಿದ್ದುದು ಬಹಳ ಕಡಿಮೆಯೇ.

ನಾದಿರಾ ಹಾಗೂ ಸಚಿನ್‌ ರ ಮನೆಯವರು ಧಾರ್ಮಿಕ ಚಿಂತನೆಗೆ ಒಳಗಾದರು. 21ನೇ ಶತಮಾನದ ಆಧುನಿಕ ವಿಚಾರಧಾರೆಯ ಮಧ್ಯೆಯೂ ಧರ್ಮದ ಸಂಕೋಲೆಗಳು ಬಲವಾಗಿ ಬಿಗಿಯಲ್ಪಟ್ಟಿವೆ. ತಮ್ಮ ಮಕ್ಕಳನ್ನು ಸ್ವಾವಲಂಬಿಯಾಗಿಸಿರುವುದರ ಹೊರತಾಗಿ, ಅವರಿಗೆ ತಮ್ಮ ಜೀವನದ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಕೊಡುವುದಿಲ್ಲ. ಹಿಂದೂ ಮುಸ್ಲಿಂ ಆಗಿರುವುದರ ಕಾರಣದಿಂದ ಈ ಸಂಬಂಧಕ್ಕೆ ಮನೆಯವರು ಅನುಮತಿ ಸಿಗುವುದರ ಆಶಾಭಾವನೆ ಬಹಳ ಕಡಿಮೆ ಇತ್ತು. ಇಬ್ಬರ ನಡುವೆ ಇದ್ದ ಬಲಿಷ್ಠ ಧರ್ಮದ ಗೋಡೆಯನ್ನು ದಾಟುವುದು ಅಷ್ಟು ಸುಲಭವಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ