``ನಾಳೆ ರಾತ್ರಿ ಅಡುಗೆ ಸ್ವಲ್ಪ ಹೆಚ್ಚಿಗೆ ಮಾಡು,'' ಎಂದು ಆನಂದ್‌ ಹೇಳಿದಾಗ, ಅಮೃತಾಗೆ ಎಷ್ಟು ಜನ ಸ್ನೇಹಿತರು ಬರಲಿದ್ದಾರೆ ಎಂದು ಕೇಳಬೇಕೆನಿಸಿತು. ಆದರೆ ಆನಂದ್‌ ನ ಮೂಡ್‌ ಬಗ್ಗೆ ಹೇಳೋಕೆ ಆಗದು. `ಮನಸ್ಸಿದ್ದರೆ ಉತ್ತರ ಕೊಡುತ್ತಾನೆ. ಇಲ್ಲದಿದ್ದರೆ, ನಿನಗೇನಾಗಬೇಕು? ಎಷ್ಟು ಹೇಳ್ತಿನೋ ಅಷ್ಟು ಕೇಳು,' ಎಂದು ಹೇಳಿ ತನ್ನ ಬಾಯಿ ಮುಚ್ಚಿಸುತ್ತಾನೆ, ಅವಮಾನಿಸುತ್ತಾನೆ.

ಆನಂದ್‌ ಮೇಲಿಂದ ಮೇಲೆ ತನ್ನ ಸ್ನೇಹಿತರನ್ನು ಊಟಕ್ಕೆ ಆಹ್ವಾನಿಸುತ್ತಿರುತ್ತಾನೆ. ಆ ಊಟದ ಪಾರ್ಟಿಯಲ್ಲಿ ಮದ್ಯ ಸೇರಿರುತ್ತದೆ. ಅವರ ನಗು, ಹಾಸ್ಯ ಚಟಾಕಿಗಳಲ್ಲಿ ಅವರವರ ಹೆಂಡತಿಯರ ಬಗ್ಗೆ ಅವಹೇಳನಗಳು ಕೂಡ ಕೇಳಬರುತ್ತಿರುತ್ತವೆ. ಅಂದಹಾಗೆ ಆನಂದ್‌ ನಿಗೆ ಅಮೃತಾ ಎಲ್ಲಿಯಾದರೂ ಏಕಾಂಗಿಯಾಗಿ ಹೋಗುವುದು, ಯಾರಾದರೂ ಪುರುಷರ ಜೊತೆ ಮಾತಾಡುವುದು ಇಷ್ಟವಿರಲಿಲ್ಲ. ಆದರೆ ತನ್ನ ಸ್ನೇಹಿತರಿಗಾಗಿ ಗಂಟೆಗಟ್ಟಲೆ ಅಡುಗೆ ತಯಾರಿಸುವುದು ಅವನ ಅಹಂನ್ನು ತೃಪ್ತಗೊಳಿಸುತ್ತಿತ್ತು.

ಅಮೃತಾ ತನ್ನ ಮನೆಗೆ ಬಂದ ಗಂಡನ ಸ್ನೇಹಿತರ ನಗು ಕೀಟಲೆ ಅಪಹಾಸ್ಯದ ಮಾತುಗಳನ್ನು ಕೇಳಿಯೂ ಕೇಳಿಸಿಕೊಳ್ಳದವಳಂತೆ ಇದ್ದು ತಲೆ ತಗ್ಗಿಸಿ ಆಹಾರ ಬಡಿಸುವುದು, ತಡರಾತ್ರಿಯತನಕ ಅವರು ಹೋಗುವವರೆಗೆ ಎಚ್ಚರದಿಂದಿರುವುದು ಆನಂದ್‌ ನ ಎದೆ ಅಹಂಕಾರದಿಂದ ಇನ್ನಷ್ಟು ವಾಲುವಂತೆ ಮಾಡುತ್ತಿತ್ತು.

`ಎಂದಾದರೂ ತನ್ನ ಹೆಂಡತಿಯ ದುಃಖ ಅರ್ಥ ಮಾಡಿಕೊಳ್ಳುತ್ತಾನೆಯೇ? ತನ್ನನ್ನು ಸ್ನೇಹಿತರ ಹಾಗೆ ಇಷ್ಟಪಡುತ್ತಾನೆಯೇ?' ಎಂದು ಅಮೃತಾ ಯೋಚಿಸುತ್ತಾ ಅವನ ಹಿಟ್ಲರ್‌ ಗಿರಿಯನ್ನು ಸಹಿಸಿಕೊಳ್ಳುತ್ತಿದ್ದಳು. ಎಂದಿನಂತೆ ಇಂದೂ ಕೂಡ ಮಲಗುವ ಸಮಯದಲ್ಲಿ ಕೆಲವು ನಿಮಿಷಗಳ ಮಟ್ಟಿಗೆ ಖುಷಿಯಿಂದಿರುವ ಪಟ್ಟಿಯಂತಾದಾಗ, ಅಮೃತಾ ಕೇಳಿಯೇಬಿಟ್ಟಳು, ``ನಾಳೆ ಸಂಜೆ ಎಷ್ಟು ಜನರಿಗಾಗಿ ಅಡುಗೆ ಸಿದ್ಧಪಡಿಸಬೇಕು?''

``ನಾಳೆ ಪರಮ್ ಅಣ್ಣ ಸ್ವಿಡ್ಜರ್ಲೆಂಡ್‌ ನಿಂದ ವಾಪಸ್ಸಾಗುತ್ತಿದ್ದಾರೆ. ನಾಳೆಯ ಡಿನ್ನರ್‌ ನಮ್ಮ ಮನೆಯಲ್ಲಿಯೇ ಆಗಬೇಕು,'' ಆನಂದ್‌ ಹೇಳಿದ.

ಪರಮ್ ನ ಹೆಸರು ಅಮೃತಾಳ ಮನಸ್ಸಿನಲ್ಲಿ  ಖುಷಿಯ ಸಿಂಚನವನ್ನುಂಟು ಮಾಡಿತು. ಆನಂದನ ಮಿತ್ರ ಚಂದುವಿಗಿಂತ 5 ವರ್ಷ  ದೊಡ್ಡವನಾದ ಪರಮ್ ಅಮೃತಾಳಿಗೆ ಏನೂ ಆಗಿರಲಿಲ್ಲ. ಆದರೂ ಅವನು ಒಂದಿಷ್ಟು ತನ್ನವರಂತೆ ಭಾಸವಾಗುತ್ತಿದ್ದ.

ಪರಮ್ ಹೆಸರು ಉಲ್ಲೇಖ ಆಗುತ್ತಿದ್ದಂತೆ 3 ವರ್ಷದ ಹಿಂದಿನ ನೆನಪಲ್ಲಿ ಅವಳು ಕಳೆದುಹೋದಳು. ಆಗಷ್ಟೇ ಅಮೃತಾಳಿಗೆ ಆನಂದ್‌ ಜೊತೆಗೆ ವಿವಾಹವಾಗಿತ್ತು. ವಿವಾಹದ ಬಳಿಕ ಪರಮ್ ಗಾಗಿ ಅಮೃತಾಳ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ನಿರ್ಮಾಣವಾಗಿತ್ತು. ಆಗ ಪರಮ್ ಅಮೃತಾಳನ್ನು ಹೇಗೆ ಸ್ವಾಗತಿಸಿದ್ದನೆಂದರೆ, ಈಗ ನನಗೆ ಆನಂದ್‌ ಬಗ್ಗೆ ಎಳ್ಳಷ್ಟೂ ಚಿಂತೆಯಿಲ್ಲ. ನಿನ್ನಂತಹ ಸುಂದರ, ತಿಳಿವಳಿಕೆಯುಳ್ಳ ಹೆಂಡತಿ ದೊರಕಿದ್ದಾಳಲ್ಲ ಅದಕ್ಕೆ.

ಅಂದಹಾಗೆ ಪರಮ್ ಸಹೃದಯಿಯಾಗಿದ್ದ. ಎಲ್ಲರಲ್ಲೂ ಬೆರೆಯುವ ವ್ಯಕ್ತಿಯಾಗಿರುವ ಜೊತೆ ಜೊತೆಗೆ ಪ್ರತಿಭಾವಂತ ಕೂಡ ಆಗಿದ್ದ. ತನ್ನ ತಮ್ಮ ಚಂದ್ರು ಬಿಎಸ್ಸಿ ಓದುತ್ತಿದ್ದಾಗ, ಅಪಘಾತವೊಂದರಲ್ಲಿ ಅವನ ತಾಯಿ ತಂದೆಯರು ಅಸುನೀಗಿದ್ದರು. ಆ ಸಮಯದಲ್ಲಿ ಪರಮ್ ಒಂದು ರಿಸರ್ಚ್‌ ಇನ್‌ ಸ್ಟಿಟ್ಯೂಟ್‌ ನಲ್ಲಿ ಅಸಿಸ್ಟೆಂಟ್‌ ಡೈರೆಕ್ಟರ್‌ ಹುದ್ದೆಯಲ್ಲಿ ನೇಮಕವಾಗಿದ್ದ. ಚಂದ್ರುವಿಗೆ ತಾಯಿ ತಂದೆಯರ ಪ್ರೀತಿ ಧಾರೆಯೆರೆಯುತ್ತ ಚೆನ್ನಾಗಿ ಓದಿಸಿ ಎಂಜಿನಿಯರ್‌ ಮಾಡಿದ ಹಾಗೂ ಬಹುರಾಷ್ಟ್ರೀಯ ಕಂಪನಿಯೊಂದರ ಪ್ಲೇಸ್‌ ಮೆಂಟ್‌ ಗಳು ಬಂದಾಗ ಹಲವು ಹುಡುಗಿಯರನ್ನು ನೋಡಿ, ಚಂದ್ರುವಿನ ಒಪ್ಪಿಗೆಯ ಮೇರೆಗೆ ಅವನ ವಿವಾಹ ಕೂಡ ಮಾಡಿದ್ದ. ಪರಮ್ ಆನಂದ್‌ ಗೂ ಕೂಡ ಅನೇಕ ಉಪಕಾರಗಳನ್ನು ಮಾಡಿದ್ದ. ಅವನ ಓದಿಗಾಗಿಯೂ ಬಹಳಷ್ಟು ನೆರವು ನೀಡಿದ್ದ. ಅಷ್ಟೇ ಅಲ್ಲ ಅಮೃತಾಳ ವಿವಾಹಕ್ಕೂ ಹಲವು ವರ್ಷ ಮುಂಚೆ ಆನಂದ್‌ ನ ವಿಧವಾ ತಾಯಿ ಕ್ಯಾನ್ಸರ್‌ಪೀಡಿತರಾಗಿ ಅಂತಿಮ ದಿನಗಳನ್ನು ಎಣಿಸುತ್ತಿದ್ದಾಗ, ಪರಮ್ ಪ್ರತಿದಿನ ಅವರ ಹತ್ತಿರ ಬಂದು ಕುಳಿತುಕೊಳ್ಳುತ್ತಿದ್ದ. ಕೆಲವೊಮ್ಮೆ ರಾತ್ರಿ ಹೊತ್ತು ಅಲ್ಲಿಯೇ ಉಳಿದುಕೊಳ್ಳುತ್ತಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ