ಹರ್ಷ ಪ್ರೀತಿಯಿಂದ ತ್ರಿನೇತ್ರಾಳ ಕೂದಲನ್ನು ತನ್ನ ಬೆರಳುಗಳಿಂದ ಸವರುತ್ತಿದ್ದ. ಅವಳು ಅವನ ಮಡಿಲಲ್ಲಿ ತಲೆಯಿಟ್ಟು ಕಣ್ಮುಚ್ಚಿ ಮುಗುಳ್ನಗುತ್ತಿದ್ದಳು.

ಪಾರ್ಕ್‌ ನ ಒಂದು ಮೂಲೆಯ ಬೆಂಚ್‌ ಮೇಲೆ ಕುಳಿತಿದ್ದ ಇಬ್ಬರೂ ಜಗತ್ತಿನ ಪರಿವೆಯೇ ಇಲ್ಲದಂತೆ ಇದ್ದರು.

``ಹರ್ಷ ಮುಂದಿನದರ ಬಗ್ಗೆ ಏನು ಯೋಚನೆ ಮಾಡಿದಿಯಾ?'' ಅವಳು ಕಣ್ಮುಚ್ಚಿಕೊಂಡೇ ಅವನ ಕೈಗೊಂದು ಸಿಹಿ ಮುತ್ತನಿಟ್ಟು ಆತುರದಿಂದ ಕೇಳಿದಳು, ``ನಿನಗೆ ಸ್ಕಾಲರ್‌ ಶಿಪ್‌ ಸಿಕ್ಕುಬಿಟ್ರೆ ನೀನು ವಿದೇಶಕ್ಕೆ ಹೊರಟು ಹೋಗ್ತೀಯಾ.... ನೀನಿಲ್ಲದೇ ನಾನಿಲ್ಲಿ ಏಕಾಂಗಿಯಾಗಿ ಹೇಗಿರಲು ಸಾಧ್ಯ ಎಂದು ನೀನೇನಾದರೂ ಯೋಚಿಸಿದ್ದೀಯಾ?'' ತ್ರಿನೇತ್ರಾ ಕೇಳಿದಳು.

``ನಾನು ಅದರ ಬಗ್ಗೆ ಯೋಚಿಸಿಯೇ ಇಲ್ಲ,'' ಹರ್ಷ ಗಂಭೀರ ಸ್ವರದಲ್ಲಿ ಹೇಳಿದ, ``ನೀನು ಮದುವೆ ಮಾಡಿಕೊ, ಜೀವನದಲ್ಲಿ ವ್ಯಸ್ತವಾಗಿ ಬಿಡ್ತೀಯಾ. ನಾನಿಲ್ಲಿ ವಾಪಸ್‌ ಬರುವ ಹೊತ್ತಿಗೆ ನಿನಗೆ 1-2 ಮಕ್ಕಳು ಆಗಿಯೇ ಆಗುತ್ತವೆ. ಇದಕ್ಕೇನು ಹೇಳ್ತೀಯಾ?'' ಅವನು ಹೇಗೋ ತನ್ನ ನಗುವನ್ನು ತಡೆದುಕೊಂಡು ಹೇಳಿದ, ``ನಾನು ನಿನ್ನ ಮಕ್ಕಳಿಗಾಗಿ ವಿದೇಶಿ ಬೊಂಬೆಗಳನ್ನು ತೆಗೆದುಕೊಂಡು ಬರ್ತೀನಿ.''

ಹರ್ಷನ ಮಾತು ಕೇಳಿ ತ್ರಿನೇತ್ರಾ ಒಮ್ಮೆಲೇ ಎದ್ದು ನಿಂತು, ``ನಾನು ಬೇರೆಯವರನ್ನು ಮದುವೆಯಾಗಬೇಕೆಂದೇ ನೀನು ಬಯಸುತ್ತೀಯಾ? ಹಾಗಾದರೆ ಸರಿ, ನನ್ನನ್ನು ನೋಡಲು ಅನೇಕರು ಬರ್ತಿದ್ದಾರೆ. ಅವರಲ್ಲಿ ಒಬ್ಬರಿಗೆ ನಾನು `ಹ್ಞೂಂ' ಎಂದು ಹೇಳಿಬಿಡ್ತೀನಿ,'' ಎಂದು ಹೇಳುತ್ತಾ ಅವಳು ಅಲ್ಲಿಂದ ಹೆಜ್ಜೆ ಹಾಕತೊಡಗಿದಳು.

ಹರ್ಷ ಅವಳ ಕೈಹಿಡಿದು ಹೇಳಿದ, ``ಅದೇನೊ ಸರಿ, ಆದರೆ ನೀನು ಒಂದು ವಿಷಯ ಸ್ಪಷ್ಟಪಡಿಸಿ ಹೋಗು, ನೀನು ನಿನ್ನ ಮದುವೆಗೆ ನನ್ನನ್ನು ಕರೀತಿಯಾ ಅಥವಾ ಇಲ್ವಾ? ನಿನಗೆ ಮದುವೆಯ ಶುಭ ಹಾರೈಕೆಗಳನ್ನು ಈಗಲೇ ಕೊಡ್ತೀನಿ,'' ಎಂದು ಹೇಳುತ್ತಾ ಹರ್ಷ ತನ್ನ ನಗುವನ್ನು ತಡೆದುಕೊಂಡ.

``ಥ್ಯಾಂಕ್ಯು ಯೂ ಸೋಮಚ್‌,'' ಎಂದು  ಹೇಳುತ್ತಾ ತ್ರಿನೇತ್ರಾ ಮುಖ ಸಿಂಡರಿಸುತ್ತಾ, ``ಬಿಡು ನನ್ನ ಕೈ. ನಿಲ್ಲಿಸು ನಿನ್ನ ಮೂರ್ಖತನ,'' ಎಂದು ಹೇಳಿದಳು.

``ಅದ್ಹೇಗೆ ನಿನ್ನ ಕೈ ಬಿಡಬೇಕು? ಜೀವನವಿಡೀ ಜೊತೆಗಿರಬೇಕೆಂದು ನಿನಗೆ ಮಾತು ಕೊಟ್ಟಿದ್ದೇನಲ್ಲ,'' ಹರ್ಷನ ಬಾಹುಗಳು ಅವಳನ್ನು ತಡೆದಾಗ ಅವಳು ನಿಂತಳು. ಆ ಬಳಿಕ ಹರ್ಷನ ತುಟಿಗಳು ಅವಳ ತುಟಿಯನ್ನು ಸ್ಪರ್ಶಿಸಿದಾಗ ನಾಚಿಕೆಯಿಂದ ಅವಳ ದೃಷ್ಟಿ ನೆಲವನ್ನು ನೋಡತೊಡಗಿತು.

ಹರ್ಷ ತನ್ನ ಕೈಯಿಂದ ಅವಳ ಮುಖವನ್ನು ಎತ್ತುತ್ತಾ, ``ಸಮುದ್ರ ಮಂಥನದ ಪ್ರಯತ್ನ ವ್ಯರ್ಥವಾಯಿತು. ಏಕೆಂದರೆ 14 ರತ್ನಗಳು ನಿನ್ನ ಕಣ್ಣುಗಳಲ್ಲಿಯೇ ಇದೆ. ಮತ್ತೊಂದು ಸತ್ಯ ಹೇಳಾ, ಕೋಪದಲ್ಲಿ ನೀನು ಬಹಳ ಮುದ್ದಾಗಿ ಕಾಣ್ತೀಯಾ.....?''

``ಸರಿ, ಸರಿ, ಉಳಿದ ಸಮಯದಲ್ಲಿ ನಾನು ಕುರೂಪಿಯಾಗಿ ಕಂಡುಬರ್ತೀನಿ ಎಂದಲ್ಲವೇ ನಿನ್ನ ಮಾತಿನ ಅರ್ಥ,'' ತನ್ನನ್ನು ಹರ್ಷನ ಬಾಹುಗಳಿಂದ ಬಿಡಿಸಿಕೊಳ್ಳುತ್ತಾ ತ್ರಿನೇತ್ರಾ ಹೇಳಿದಳು, ``ಇಂತಹ ಮಾತುಗಳನ್ನು ಆಡಬೇಡ ಅಂತಾ ನಾನು ನಿನಗೆ ಎಷ್ಟು ಸಲ ಹೇಳಿದ್ದೇನೆ. ನನಗೆ ಆ ಮಾತುಗಳು ಇಷ್ಟವಾಗುವುದಿಲ್ಲ. ಆದರೂ ನೀನು ಅಂತಹ ಮಾತುಗಳನ್ನು ಏಕೆ ಆಡ್ತೀಯಾ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ