ಮೀನಾಕ್ಷಿಯ ಮದುವೆಗಾಗಿ ಎಲ್ಲರೂ ಅವಳಿಗೆ ದುಂಬಾಲು ಬಿದ್ದಿದ್ದರು. ``ಸಕಾಲಕ್ಕೆ ಮದುವೆಯಾಗಬೇಕು, ಇಲ್ಲದಿದ್ದರೆ ಒಳ್ಳೆಯ ಗಂಡ ಸಿಗುವುದಿಲ್ಲ,'' ಎಂದು ಅವಳಿಗೆ ಹೇಳುತ್ತಿದ್ದರು.

ಮೀನಾಕ್ಷಿ ಏನೆಲ್ಲ ವ್ರತ ಉಪವಾಸ ಕೈಗೊಂಡಿದ್ದಳು. ಈಗ ಅವಳಂತೂ ರಾಜಕುಮಾರನ ನಿರೀಕ್ಷೆಯಲ್ಲಿದ್ದಳು. ಅವನು ಕುದುರೆಯ ಮೇಲೆ ಬರುತ್ತಾನೆ ಹಾಗೂ ತನ್ನ ಕನಸನ್ನು ನನಸು ಮಾಡುತ್ತಾನೆ. ಜೀವನ ಸುಂದರವಾಗುತ್ತದೆ ಎಂದೇ ಅವಳು ಭಾವಿಸಿದ್ದಳು. ಅವಳ ನಿರೀಕ್ಷೆಗಂತೂ ವಿರಾಮ ಸಿಕ್ಕಿತು. ರಾಜಕುಮಾರ ಕುದುರೆಯ ಮೇಲೆ ಬರಲಿಲ್ಲ. ಆದರೆ ಕಾರಿನಲ್ಲಂತೂ ಬಂದ.

ಅಂದಹಾಗೆ ಮದುವೆಯ ಮೊದಲಿನ ವಿಷಯಗಳನ್ನು ತಿಳಿಸುವುದು ಅತ್ಯವಶ್ಯ. ಮದುವೆಯ ನಿಶ್ಚಿತಾರ್ಥದ ಬಳಿಕ ಆ ರಾಜಕುಮಾರ ಫೋನ್‌ ಮಾಡುತ್ತಿದ್ದ. ಗಂಟೆಗಟ್ಟಲೆ ಜೊತೆ ಜೊತೆಗೆ ಕಾಲಕಳೆಯುತ್ತಿದ್ದ. ಬೇಕಿದ್ದುದನ್ನು ತಿನ್ನಿಸುತ್ತಿದ್ದ. ಮೀನಾಕ್ಷಿಗಂತೂ ಅದೃಷ್ಟದ ಖಜಾನೆ ಸಿಕ್ಕಂತಾಗಿತ್ತು. ಓದುಬರಹ ಬಲ್ಲ ಕಟ್ಟುಮಸ್ತಾದ ಯುವಕ ಅವಳ ಪಾಲಿಗೆ ಸಿಕ್ಕಿದ್ದ. ಶೀಘ್ರದಲ್ಲಿಯೇ ವಿಜೃಂಭಣೆಯಿಂದ ಮದುವೆಯೂ ಆಯಿತು. ಮೀನಾಕ್ಷಿಯ ನಗುವಿಗೆ ಮತ್ತಷ್ಟು ಚಾಲನೆ ಸಿಕ್ಕಿತು.

ಅವಳ ರಾಜಕುಮಾರ ಕೂಡ ಆರಂಭದಲ್ಲಿ ಹೀರೋನ ಹಾಗೆ ರೊಮ್ಯಾಂಟಿಕ್‌ ಆಗಿದ್ದ. ಆದರೆ ಪತಿಯಾಗುತ್ತಿದ್ದಂತೆ ಅವನ ಪಿತ್ತ ನೆತ್ತಿಗೇರಿತು. ಈ ಪತಿ ಮಹಾಶಯನಿಗೆ ಅದೇನಾಗಿ ಹೋಯಿತೋ ಎಂದು ಅವಳಿಗೂ ಅಚ್ಚರಿಯಾಯಿತು. ಈವರೆಗೆ ನಗು ನಗುತ್ತಾ ಮಾತಾಡುತ್ತಿದ್ದ ಪತಿ ಮಹಾಶಯ ಈಗ ಮುಖ ಉಬ್ಬಿಸಿಕೊಂಡು ಕುಳಿತುಕೊಳ್ಳಲಾರಂಭಿಸಿದ. ಪ್ರೇಮದ ಅರಮನೆಯಲ್ಲಿ  ಆದೇಶಗಳ ಸುರಿಮಳೆ ಅವಳಿಗೆ ಇಷ್ಟವಾಗಲಿಲ್ಲವಾದರೂ, ಮದುವೆ ಮಾಡಿಕೊಂಡಾಗಿದೆ, ಸಹಿಸಿಕೊಳ್ಳಲೇಬೇಕೆಂದು ಮೀನಾಕ್ಷಿ ತನ್ನ ಮನಸ್ಸನ್ನು ತಾನು ಒಪ್ಪಿಸಿದಳು.

ಹೆಂಡತಿ ಸಹಿಸಿಕೊಂಡಳು. ಆದರೆ ಗಂಡು ಪ್ರಾಣಿ ಹೇಗೆ ತಾನೇ ಸಹಿಸಿಕೊಂಡೀತು. ಇಲ್ಲದಿದ್ದರೆ ಗಂಡನಾಗಿ ಏನು ಲಾಭ ಎಂದು ಅವನ ಮನಸ್ಸು ಯೋಚಿಸಿತು.

``ಬಟ್ಟೆಗಳನ್ನು ಇನ್ನೂ ಏಕೆ ಒಣ ಹಾಕಿಲ್ಲ. ಇಲ್ಲದಿದ್ದರೆ ಅವು ವಾಷಿಂಗ್‌ ಮೆಷಿನ್‌ ನಲ್ಲಿಯೇ ಕೊಳೆತು ಹೋಗುತ್ತವೆ,'' ಪತಿ ಮಹಾಶಯ ಆದೇಶದ ಬಾಣಬಿಟ್ಟ.

ಮೀನಾಕ್ಷಿ ಏನೋ ಯೋಚಿಸಿ, ``ಇಲ್ಲ ಮರೆತು ಬಿಟ್ಟಿದ್ದೆ,'' ಎಂದಳು.

``ಫೇಸ್‌ ಬುಕ್‌, ವಾಟ್ಸ್ ಆ್ಯಪ್‌, ಪುಸ್ತಕಗಳು ನೆನಪಲ್ಲಿರುತ್ತವೆ. ಇದೆಲ್ಲ ಹೇಗೆ ಮರೆತು ಹೋಗುತ್ತದೆ?'' ಎಂದು ವಿಚಿತ್ರವಾಗಿ ಕೇಳಿದ.

``ಮರೆತು ಹೋದದ್ದನ್ನು ಮರೆತುಬಿಡಿ, ಈಗ ಆ ತಪ್ಪನ್ನು ಸುಧಾರಿಸಿಕೊಳ್ಳಲಾಗುತ್ತೆ,'' ಎಂದು ತನ್ನ ಮನಸಲ್ಲೇ ಹೇಳಿಕೊಂಡಳು.

``ಮರೆತು ಬಿಡುವುದು ಎಷ್ಟೊಂದು ದೊಡ್ಡ ತಪ್ಪು. ಈಗ ನೀನೇನೂ ಕೆಲಸ ಮಾಡುವುದು ಬೇಡ. ನನ್ನ ಕೆಲಸ ನಾನೇ ಮಾಡಿಕೊಳ್ತೀನಿ,'' ಪತಿ ಮಹಾಶಯ ಹೊಸದೊಂದು ಆದೇಶ ನೀಡಿದ.

``ಹಾಗೆ ಮಾಡಿ ಪತಿ ಮಹಾಶಯ. ನನಗೂ ಬಟ್ಟೆ ಒಣ ಹಾಕುವುದು ಇಷ್ಟದ ಕೆಲಸವಲ್ಲ,'' ಎಂದು ಮೀನಾಕ್ಷಿ ಮನಸ್ಸಲ್ಲಿಯೇ ಹೇಳಿಕೊಂಡಳು.

ಪತಿ ಮಹಾಶಯ ಮುಖ ಊದಿಸಿಕೊಂಡು ಕುಳಿತುಬಿಟ್ಟ. ಈಗ ಮಾತಾಡೋದು ಬಂದ್‌. ಅದು 1-2 ಗಂಟೆಯಲ್ಲ, 3-4 ದಿನ ಬಿಲ್ ಕುಲ್‌ ಮಾತು ಬಂದ್‌. ಮೀನಾಕ್ಷಿ ಮಾಡಿದ ತಪ್ಪಿಗೆ ಅವಳ ಗಂಡ ಈ ರೀತಿಯ ಶಿಕ್ಷೆ ಕೊಡಲು ಹೊರಟಿದ್ದ. ಈಗ ಮೀನಾಕ್ಷಿಗೆ ಪಚನ ಆಗೋದಾದ್ರೂ ಹೇಗೆ ಹೇಳಿ. ಅಸಿಡಿಟಿ ಆಗುವುದು ಪಕ್ಕಾ. ಬಳಿಕ ತಲೆನೋವು ಕೂಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ