ಬೆಳಗ್ಗೆಯಿಂದಲೇ ಆಗಸದಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. ಬೆಣ್ಣೆ ಮುದ್ದೆಯಂತಹ ಬಿಳಿಯ ಮೋಡಗಳು ಚಲಿಸುವ ಪರಿ, ಅವುಗಳ ನಡುವೆ ಚಂದಿರನ ರಂಗಿನಾಟ ಮತ್ತೆ ಮತ್ತೆ ನೋಡಿ ಕಣ್ಣು ತುಂಬಿಸಿಕೊಂಡ ಮಾಧವಿ ಹಾಗೂ ಅಜಯ್‌ ಹಲವಾರು ಬಾರಿ ಆನಂದಿಸಿದ್ದರು. ಆದರೆ ಇಂದು ಯಾಕೋ ಮಾಧವಿಯ ಮನಸ್ಸು ಅಲ್ಲೋಲ ಕಲ್ಲೋಲವಾಗಿತ್ತು. ಎಲ್ಲ ಅಸ್ಪಷ್ಟ, ಗೊಂದಲದ ಗೂಡಾಗಿತ್ತು. ಜೊತೆಗೆ ನಡುನಡುವೆ ಮನದ ಮೂಲೆಯಲ್ಲಿ ಅನುಮಾನದ ಸುಳಿ ಹರಿದಾಡಲಾರಂಭಿಸಿತ್ತು. ಅದಕ್ಕೂ ಒಂದು ಕಾರಣವಿದೆ. ಕೆಲವು ದಿನಗಳಿಂದೀಚೆಗೆ ಮಾಧವಿಗೆ ತನ್ನ ಪತಿ ಅಜಯ್‌ ನಡವಳಿಕೆಯಲ್ಲಿ  ಕೆಲವು ಬದಲಾವಣೆಗಳು ತೋರಿ ಬಂದಿದ್ದವು. ಈ ನಡುವೆ ಅಜಯ್‌ ಮಾತು ಮಾತಿಗೂ ಸಿಡುಕುತ್ತಿದ್ದ, ಮಾಧವಿಯ ಯಾವುದೇ ಮಾತುಗಳಿಗೂ ಮನ್ನಣೆ ನೀಡುತ್ತಿರಲಿಲ್ಲ ಹಾಗೂ ಚಿಕ್ಕ ಪುಟ್ಟ ವಿಚಾರಗಳಿಗೆಲ್ಲಾ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದ. ಕೇವಲ ಎರಡು ದಿನಗಳ ಹಿಂದೆ ನಡೆದಿದ್ದ ಪುಟ್ಟ ಘಟನೆಯಿಂದ ಅಜಯ್‌ ಮೊದಲಿನಂತಿಲ್ಲ ಎನ್ನುವುದನ್ನು ಸಾಬೀತುಪಡಿಸಿತ್ತು.

ನೀಟಾಗಿ ಅಲಂಕಾರ ಮಾಡಿಕೊಂಡು ಬಂದ ಮಾಧವಿ ಮಾಮೂಲಾಗಿ ಕೇಳುವ ಹಾಗೇ ಅಜಯ್‌ನನ್ನು ಪ್ರೀತಿಯಿಂದ, ``ಈ ಹೇರ್‌ಸ್ಟೈಲ್‌ನಲ್ಲಿ ನಾನು ಹೇಗೆ ಕಾಣಿಸ್ತಾ ಇದ್ದೀನಿ.... ಈ ಹೊಸ ಸೀರೆ ನಂಗೆ ಚೆನ್ನಾಗಿ ಒಪ್ಪುತ್ತಾ....? ಹೇಳು ಅಜಯ್‌...'' ಅಂದಾಗ ಸಿಡುಕುತ್ತಲೇ ಅಜಯ್‌, ``ನನ್ನನ್ನು ಏನು ಕೇಳ್ತೀಯಾ...? ನಿನಗೆ ಇಷ್ಟ ಆಗಿರೋದ್ರಿಂದ ತಾನೇ ನೀನು ತಗೊಂಡಿರೋದು...?'' ಎಂದ.

ಅನಿರೀಕ್ಷಿತವಾದ ಉತ್ತರದಿಂದ ಕೊಂಚ ಗಲಿಬಿಲಿಗೊಂಡ ಮಾಧವಿ ಒಂದು ಕ್ಷಣ ಮಾತು ಹೊರಡದಂತಾದಳು. ಇವನು ಅದೇ ಅಜಯ್‌ನಾ...? ಅನ್ನುವಷ್ಟು ಬದಲಾಗಿದ್ದ. ಮದುವೆಯ ಹೊಸತರಲ್ಲಿ ಮಾಧವಿಯ ಪ್ರತಿ ಮಾತು, ನಗು ಎಲ್ಲದರ ಬಗ್ಗೆ ಸುಂದರವಾಗಿ ಕವನ ರಚಿಸುತ್ತಿದ್ದ. ಅವಳ ಸೌಂದರ್ಯವನ್ನು ರಸವತ್ತಾಗಿ ಕಾವ್ಯಮಯವಾಗಿ ಹಾಡಿ ಹೊಗಳುತ್ತಿದ್ದ. ಅವಳ ಸುಂದರ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಅವಳ ಕಂಗಳನ್ನು ಒಂದೇ ಸಮನೆ ಎವೆಯಿಕ್ಕದೆ ಹಾಗೇ ನೋಡುತ್ತ ರೋಮಾಂಚಿತನಾಗಿ ತನ್ನ ಎದೆಯ ಮೇಲೆ ಎಳೆದುಕೊಳ್ಳುವಲ್ಲಿ ಸದಾ ಮುಂದಿರುತ್ತಿದ್ದ. ಪ್ರತಿ ಬಾರಿ ಹೊಸ ಸೀರೆ ಉಟ್ಟಾಗೆಲ್ಲಾ ಎಂತಹ ಕೆಲಸದ ಒತ್ತಡವಿದ್ದರೂ ಬದಿಗೆ ಸರಿಸಿ, ``ಮಾಧವಿ... ಈ ಗಿಳಿ ಬಣ್ಣದ ಸೀರೆಯಲ್ಲಿ ಥೇಟ್‌ ಅಪ್ಸರೆ ಹಾಗೆ ಕಾಣಿಸ್ತಾ ಇದೀಯ...'' ಎನ್ನುತ್ತಾ ಅವಳನ್ನಪ್ಪಿ ಹಣೆಗೊಂದು ಹೂಮುತ್ತಿಡುತ್ತಿದ್ದ. ಆದರೆ ಆಗಿನ ಅಜಯ್‌ ಈಗೆಲ್ಲಿ ಕಳೆದುಹೋದ...? ಆ ಮೋಹಕ ಪ್ರೀತಿ, ಮಾಧುರ್ಯ ಎಲ್ಲಿ ಹೋಯಿತು....? ಮಾಧವಿ ಮತ್ತಷ್ಟು ಚಿಂತಾಕ್ರಾಂತಳಾದಳು. ಅಜಯ್‌ ಮೊದಲಿನಂತಿಲ್ಲ ಅನ್ನುವುದು ಇಂದು ಖಾತ್ರಿಯಾಗಿಬಿಟ್ಟಿತು.

ಬೆಳಗ್ಗೆ ತಿಂಡಿ ತಿನ್ನುತ್ತಿದ್ದಂತೆ ಫೋನ್‌ ರಿಂಗಾಯಿತು. ತಿಂಡಿಯನ್ನು ಅರ್ಧದಲ್ಲೇ ಬಿಟ್ಟು ತಕ್ಷಣವೇ ಕಾರಿನ ಕೀ ತೆಗೆದುಕೊಂಡು ಹೊರಟ. ಮಾಧವಿ, ``ಅಜಯ್‌ ಫೋನ್‌ ಯಾರದ್ದು....? ದಿಢೀರ್‌ ಅಂತ ಎಲ್ಲಿಗೆ ಹೊರಟಿದ್ದೀಯಾ....? ನನಗೆ ತಿಳಿಸಿ ಹೋಗಬಾರದಾ...?'' ಎನ್ನುತ್ತಿದ್ದಂತೆ ಅಜಯ್‌ ಸಿಟ್ಟಿನಿಂದ, ``ಎಲ್ಲಾ ನಿನಗೆ ಹೇಳೇ ಹೋಗಬೇಕಾ....? ಹೇಳಿದ್ರೆ ಏನ್‌ಮಾಡ್ತೀಯಾ? ನೋಡು....! ಬಿಸ್‌ನೆಸ್‌ ಮ್ಯಾನ್‌ಗೆ ಪ್ರತಿದಿನ ಹತ್ತಾರು ಜನರ ಕರೆ ಬರುತ್ತೆ, ಆ್ಯನ್ಸರ್‌ ಮಾಡಬೇಕಾಗುತ್ತೆ. ಅಗತ್ಯ ಬಿದ್ದರೆ ಅರ್ಧ ರಾತ್ರೀಲೂ ಎದ್ದು ಹೋಗಬೇಕಾಗುತ್ತೆ. ನೀನು ಪ್ರತಿ ಬಾರಿ ಇದೇ ರೀತಿ ಪ್ರತಿಯೊಂದಕ್ಕೂ ಅನುಮಾನಿಸುತ್ತಲೇ ಇದ್ದರೆ.... ನನಗೆ ಫ್ರೀಯಾಗಿ ಕೆಲಸ ಮಾಡೋಕಾಗಲ್ಲ. ತಿಳೀತಾ...?'' ಎನ್ನುತ್ತ ನಡೆದೇಬಿಟ್ಟ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ