ಪಲ್ಲವಿ ಪ್ರಥಮ ದರ್ಜೆ ವಿಶ್ರಾಂತಿ ಕೋಣೆಯಲ್ಲಿ ಕುಳಿತು ರೈಲಿಗಾಗಿ ಕಾಯುತ್ತಿದ್ದಳು. ರೈಲು ಬರುವುದಕ್ಕೆ ಇನ್ನೂ 2 ಗಂಟೆ ಬಾಕಿ ಇತ್ತು. ಅವಳು ಸಮ್ಮೇಳನಕ್ಕಾಗಿ ಬಂದಿದ್ದಳು. ಸಮ್ಮೇಳನ 4 ಗಂಟೆಗೆ ಮುಗಿದುಹೋಗಿತ್ತು. ನಗರವನ್ನು ಸುತ್ತಾಡುವ ಮನಸ್ಸು ಇರಲಿಲ್ಲ. ಅವಳ ಜೊತೆ ಬಂದಿದ್ದವರು ಊರು ಸುತ್ತಲು ಹೋಗಿದ್ದರು. ವಿಶ್ರಾಂತಿ ಕೋಣೆಯಲ್ಲಿ ಬೇರಾರೂ ಇರಲಿಲ್ಲ. ಆದ್ದರಿಂದ ಅವಳು ನಿಶ್ಚಿಂತಳಾಗಿದ್ದಳು. ಆಗ ಒಬ್ಬ ಕೂಲಿ ಸಾಮಾನು ಹೊತ್ತುಕೊಂಡು ಬಂದ. ಏಕಾಂತಕ್ಕೆ ಭಂಗ ಬರುವುದು ಅವಳಿಗಿಷ್ಟವಿರಲಿಲ್ಲ. ಆದರೆ ಸಾರ್ವಜನಿಕ ಸ್ಥಳದಲ್ಲಿ ಯಾರ ಪ್ರವೇಶವನ್ನೂ ತಡೆಯುವುದಕ್ಕಾಗುವುದಿಲ್ಲ. ಕೂಲಿಯ ಹಿಂದೆ ಒಳಗೆ ಬಂದ ವ್ಯಕ್ತಿಯನ್ನು ನೋಡಿ ಪಲ್ಲವಿಗೆ ಮುಜುಗರವಾಯಿತು. ಅದ್ಯಾರೂ ಅಲ್ಲ, ನರೇಂದ್ರ! ಪಲ್ಲವಿಯನ್ನು ನೋಡಿ ಅವನಿಗೂ ಒಂದು ರೀತಿಯಾಯಿತು. ಒಂದು ಕ್ಷಣ ತಡೆದು ನರೇಂದ್ರ ಔಪಚಾರಿಕವಾಗಿ ``ಹೇಗಿದ್ದೀಯ?'' ಎಂದು ಕೇಳಿದ.

``ಚೆನ್ನಾಗಿದ್ದೀನಿ,`` ಪಲ್ಲವಿ ಸಪ್ಪೆ ನಗು ಬೀರುತ್ತಾ ಹೇಳಿದಳು. ಯಾವುದೋ ಹಳೆಯ ಭಾವನೆಗಳಿಂದ ಪಲ್ಲವಿಯ ಮನದಲ್ಲಿ ಸಂಗೀತ ಕೇಳಿದಂತಾಯಿತು. ಆದರೆ ಅವಳಿಗೆ ಅದರ ಮಾಧುರ್ಯವನ್ನು ಅನುಭವಿಸಲಾಗಲಿಲ್ಲ. ಆತನ ಹಿಂದಿನಿಂದ ಒಬ್ಬ ಯುವತಿ ಮತ್ತು 3-4 ವರ್ಷದ ಒಬ್ಬ ಮುದ್ದಾದ ಬಾಲಕನೂ ಒಳಬಂದರು. ನರೇಂದ್ರ ಹೆಸರಿಗೆಂಬಂತೆ ಪರಿಚಯ ಮಾಡಿಸಿದ. ``ಶೀಲಾ, ಇವರನ್ನು ಪರಿಚಯ ಮಾಡಿಕೋ, ನನ್ನ ಹಳೇ ಸ್ನೇಹಿತೆ ಪಲ್ಲವಿ''

ಶೀಲಾ ನಮಸ್ಕರಿಸಿದಳು, ನಂತರ ಸಾಮಾನನ್ನು ಒಂದು ಕಡೆ ಇಡುವುದರಲ್ಲಿ ಮಗ್ನಳಾದಳು. ಹಿಂದೆ ತಾನು ನರೇಂದ್ರನಿಗೆ ಸರ್ವಸ್ವ ಆಗಿದ್ದವಳು ಇಂದು ಬರೀ ಹಳೆ ಸ್ನೇಹಿತೆಯಾಗಿದ್ದೇನೆ ಎಂದು ತಿಳಿದು ಪಲ್ಲವಿಗೆ ಒಂದು ರೀತಿಯ ಆಘಾತವಾಯಿತು. ಆಮೇಲೆ ಅವಳಿಗೆ ಸರಿಯಾಗೇ ಹೇಳಿದ ಅನ್ನಿಸಿತು. ಈಗ ಅವರಿಬ್ಬರ ನಡುವೆ ಉಳಿದಿರುವ ಸಂಬಂಧವಾದರೂ ಏನು? ಅವಳು ತನ್ನನ್ನು ಶೀಲಾಳಿಗೆ ಹೋಲಿಸಿ ನೋಡಿದಳು. ಅವಳಿಗೆ ಅಸೂಯೆಯಾಯಿತು. ನೆಪ ಮಾತ್ರಕ್ಕೆ ಅವಳು ಪುಸ್ತಕ ಓದುವಂತೆ ಇದ್ದಳು. ಆದರೆ ಅವಳ ಮನಸ್ಸು ಅವಳ ಹತೋಟಿ ಮೀರಿ ಕಳೆದು ಹೋದ ಕಾಲದತ್ತ ಹೋಯಿತು.

ಪಲ್ಲವಿ ಎಂ.ಎ ಕಡೆಯ ವರ್ಷದಲ್ಲಿದ್ದಳು. ಆಗ ಒಂದು ಮದುವೆಯ ಸಮಾರಂಭದಲ್ಲಿ ಅವಳ ರೂಪವನ್ನು ಮೆಚ್ಚಿಕೊಂಡು ಮದುಮಗಳ ಸೋದರತ್ತೆ, ತಮ್ಮ ಮಗ ನರೇಂದ್ರನಿಗೆ ಕೇಳಿದರು. ಸುಂದರ, ಸುಶೀಲ, ಸರ್ಕಾರಿ ಹುದ್ದೆಯಲ್ಲಿದ್ದ ನರೇಂದ್ರ ತಂದೆತಾಯಿಗೆ ಒಬ್ಬನೇ ಮಗ. ಇಷ್ಟು ಒಳ್ಳೆಯ ವರ ತಾನಾಗೇ ಬಂದಿರುವಾಗ ಪಲ್ಲವಿಯ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಮಗಳು ಬೇರೆ ಮನೆಯಲ್ಲಿ ಹೇಗಿರುತ್ತಾಳೋ ಎಂಬ ಚಿಂತೆ. ಈಗ ಅವಳು ತನ್ನ ಸಾಮಾನನ್ನೇ ಸರಿಯಾಗಿ ಇಟ್ಟುಕೊಳ್ಳುವುದಿಲ್ಲ. ಅಂತಹವಳು ಸಂಸಾರವನ್ನು ತೂಗಿಸಬಲ್ಲಳೇ? ಇತ್ತ ಪಲ್ಲವಿಯ ಮನಸ್ಸೂ ಹಾಗೇ ಚಿಂತಿಸುತ್ತಿತ್ತು. ನರೇಂದ್ರನಂತಹ ಪತಿ ಸಿಕ್ಕಿದರೆ ಅವಳ ಕನಸುಗಳೆಲ್ಲಾ ಸಾಕಾರವಾದಂತೆ. ಆದರೆ ತಾಯಿ ಒಬ್ಬಳೇ ಇರಬೇಕಾಗುತ್ತಲ್ಲ ಅನ್ನುವ ಚಿಂತೆ. ಅವಳಿಗೆ ಬುದ್ಧಿ ತಿಳಿದಾಗಿನಿಂದ ಅವಳು ಮತ್ತು ತಾಯಿ ಇಬ್ಬರೇ ಇರುತ್ತಿದ್ದುದು. ಅಪ್ಪನ ಮುಖದ ನೆನಪೂ ಅವಳಿಗಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ