ಕಥೆ - ಪ್ರೀತಿ ಆರ್‌

ಸುಮಿತ್‌ ತನ್ನ ರೂಢಿಯಂತೆ ರೈಲ್ವೆ ಸ್ಟೇಷನ್‌ಗೆ ಒಂದು ಗಂಟೆ ಮೊದಲೇ ಬಂದಿದ್ದ. ಆಫೀಸ್‌ ಕೆಲಸದ ನಿಮಿತ್ತ ಅವನು ಹೈದರಾಬಾದಿಗೆ ಹೊರಟಿದ್ದ. ಬಸ್ಸಿನಲ್ಲಿ ಹೊರಟಿದ್ದರೆ ಆರಾಮವಾಗಿ ರಾತ್ರಿ ಹೋಗಬಹುದಿತ್ತು. ಆದರೆ ಅವನಿಗೆ ರೈಲು ಪ್ರಯಾಣವೆಂದರೆ ತುಂಬಾ ಇಷ್ಟ. ಬೆಳಗ್ಗೆ 11ಕ್ಕೇ ಸ್ಟೇಶನ್ನಿಗೆ ಬಂದು ಕುಳಿತ. ಅವನಿಗೆ ಓದುವ ಹವ್ಯಾಸ. ಆದ್ದರಿಂದ ಕೆಲವು ಪುಸ್ತಕಗಳು, ಅಂದಿನ ದಿನಪತ್ರಿಕೆಗಳನ್ನು ಮನೆಯಿಂದಲೇ ತಂದಿದ್ದ. ರೈಲು ಬರಲು ಇನ್ನೂ 15 ನಿಮಿಷವಿತ್ತು. ಒಂದು ದಿನಪತ್ರಿಕೆಯನ್ನು ತೆಗೆದು ಬೆಂಚ್‌ ಮೇಲೆ ಕುಳಿತುಕೊಂಡು ಓದಲಾರಂಭಿಸಿದ. ಸ್ವಲ್ಪ ಹೊತ್ತಿಗೆ ಅಪ್ಪ ಅಮ್ಮ ಮಗಳೊಂದಿಗೆ ಒಂದು ಪರಿವಾರ ಅಲ್ಲಿಗೆ ಬಂದಿತು. ಅವರೂ ಅದೇ ಬೆಂಚಿನ ಮೇಲೆ ಕುಳಿತುಕೊಂಡರು. ಅವರನ್ನು ನೋಡಿದರೆ ಏಕೋ ತುಂಬಾ ದುಃಖದಲ್ಲಿರುವಂತೆ ಕಾಣುತ್ತಿದ್ದರು. ಅಪ್ಪ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದರು, ``ಏನು ಮಾಡುವುದು ಎಲ್ಲ ನಮ್ಮ ನಸೀಬು. ಮಗಳ ಇಚ್ಛೆಯಂತೆ ಎಲ್ಲವನ್ನೂ ಒಪ್ಪಿಕೊಂಡರೂ ಹೀಗಾಯಿತು. ಈಗ ಹೈದರಬಾದ್‌ಗೆ ವಾಪಸ್‌ ಹೊರಟಿದ್ದೇವೆ. ಅಲ್ಲಿ ತಲುಪಿದ ಮೇಲೆ ಮಾತನಾಡುತ್ತೇನೆ,'' ಎಂದು ಹೇಳಿ ಫೋನ್‌ ಇಟ್ಟರು.

ತಾಯಿ ಮಗಳಿಗೆ ಚಹಾ ತಂದು ಕೊಟ್ಟರು. ಇಬ್ಬರೂ ಬಲವಂತವಾಗಿ ಅರ್ಧರ್ಧ ಟೀ ಕುಡಿದು ಕಪ್‌ನ್ನು ಕಸದ ಬುಟ್ಟಿಗೆ ಹಾಕಿದರು.

ರೈಲು ಬೆಳಗಾವಿ ನಿಲ್ದಾಣದಲ್ಲಿ ಬಂದು ನಿಂತಾಗ 1-2 ಗಂಟೆ. ಸ್ಲೀಪರ್‌ ಕೋಚ್‌ ನಂಬರ್‌ನ್ನು ಹುಡುಕುತ್ತಾ ಸುಮಿತ್‌ ಮುಂದೆ ಹೋದ. ಅವನು ತನ್ನ ಸೀಟ್‌ನಲ್ಲಿ ಕುಳಿತಾಗ ತುಂಬಾ ಖುಷಿಯಾಗಿದ್ದ. ಕಾರಣ ಕಿಟಕಿ ಬಳಿಯ ಸೀಟೆಂದರೆ ಅವನಿಗೆ ಎಲ್ಲಿಲ್ಲದ ಖುಷಿ. ಬರೀ ಸೀಟಿನ ನಂಬರ್‌ ನೋಡಿಯೇ ಅದು ಕೆಳಗಿನದೇ ನಡುವಿನದೇ ಅಥವಾ ಮೇಲಿನದೇ ಎಂದು ಹೇಳುತ್ತಿದ್ದ. ರೈಲಿನ ಬಗೆಗಿನ ಎಲ್ಲ ಮಾಹಿತಿಗಳು ಅವನಿಗೆ ಗೊತ್ತಿದ್ದವು. ರೈಲಿನ ಟೈಮ್ ಟೇಬಲ್‌ನ ಎಲ್ಲ ಪುಸ್ತಕಗಳನ್ನು ಕೊಂಡುಕೊಳ್ಳುತ್ತಿದ್ದ. ಅವನಮ್ಮ ತಮಾಷೆಗೆ ನಿನಗೆ ರೈಲಿನೊಂದಿಗೇ ಮದುವೆ ಮಾಡುತ್ತೇನೆಂದು ಹೇಳುತ್ತಿದ್ದರು.

ಅವನು ಆರಾಮವಾಗಿ ಕುಳಿತು ಕೈಯಲ್ಲಿ ದಿನಪತ್ರಿಕೆ ಹಿಡಿದು ಕಿಟಕಿಯಲ್ಲಿ ನೋಡುತ್ತಾ ಹೊರಗಿನ ದೃಶ್ಯವನ್ನು ಅನುಭವಿಸುತ್ತಿದ್ದ. ಅಷ್ಟರಲ್ಲಿ ಅದೇ ಪರಿವಾರ ಅಲ್ಲಿಗೆ ಬಂದಿತು. ಅವರ ಮಗಳು ಸುಮಿತ್‌ನ ಎದುರಿಗೇ ಕುಳಿತಳು. ಸುಮಿತ್‌ ಎದ್ದು ಅವರ ಸಾಮಾನುಗಳನ್ನು ಸರಿಯಾಗಿಡಲು ಸಹಕರಿಸಿದ. ರೈಲು ನಿಲ್ದಾಣ ಬಿಟ್ಟಿತು.

ಸ್ವಲ್ಪ ಹೊತ್ತಿನ ನಂತರ ಸುಮಿತ್‌ ಆ ಹುಡುಗಿಯನ್ನು ನೋಡಿದ. ಹಾಲಿನ ಕೆನೆಯ ಬಣ್ಣದ ಮುಖ, ಬಟ್ಟಲು ಕಂಗಳ ರೂಪವತಿ ಆಕೆ. ಆದರೆ ಏಕೋ ಅತ್ತು ಅತ್ತು ಕಣ್ಣು ಕೆಂಪಾದಂತಿತ್ತು. ಅವಳ ಅಂದವಾದ ತುಟಿಗಳಲ್ಲಿ ಚಿಕ್ಕ ಕಿರುನಗು ಇರಲಿಲ್ಲ. ಕಿಟಕಿಯಲ್ಲಿ ಕೈಯಿಟ್ಟು ಗಲ್ಲಕ್ಕೆ ಕೈಯೂರಿ ಕುಳಿತಿದ್ದಳು. ಅವಳ ಕೈಯಲ್ಲಿ ಮದರಂಗಿ ಇತ್ತು. ಅವಳು ಕಿಟಕಿಯತ್ತ ಶೂನ್ಯಭಾವದಿಂದ ನೋಡುತ್ತಿದ್ದಳು. ಅವಳಮ್ಮ ಅಪ್ಪ ಇಬ್ಬರೂ ಸುಮ್ಮನೆ ಕುಳಿತು ತೂಕಡಿಸುತ್ತಿದ್ದರು. ಯಾರಲ್ಲೂ ಉತ್ಸಾಹವಿರಲಿಲ್ಲ.

ರೈಲು ಲೋಂಡಾದ ಕಾಡಿನಲ್ಲಿ ಓಡುತ್ತಿತ್ತು. ಸುಮಿತ್‌ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದ. ಸೂಪ್‌ ಮಾರುವವನು ಟೊಮೇಟೊ ಸೂಪ್‌ ಮಾರಿಕೊಂಡು ಬಂದಾಗ ಅದನ್ನು ತೆಗೆದುಕೊಂಡು ಎದುರಿನವರಿಗೆ ನಿಮಗೆ ಬೇಕಾ ಎಂದು ಕೇಳಿದ. ಅವರು ಬೇಡ ನೀವು ತೆಗೆದುಕೊಳ್ಳಿ ಎಂದರು. ಸುಮಿತ್‌ ಸೂಪ್‌ ಕುಡಿಯುತ್ತಿದ್ದಾಗ ಅವರೇ ಮಾತಿಗಾರಂಭಿಸಿ, ಸುಮಿತ್‌ನನ್ನು ಏನು ಮಾಡುತ್ತಿದ್ದಿ ಎಂದು ಕೇಳಿದರು. ಸುಮಿತ್‌ ತಾನು ಒಬ್ಬ ಎಂಜಿನಿಯರ್‌ ಆಗಿದ್ದು, ತನ್ನಮ್ಮನೊಂದಿಗೆ ಬೆಳಗಾವಿಯಲ್ಲಿ ವಾಸವಾಗಿದ್ದೇನೆಂದು ತಿಳಿಸಿದ. ಅದಕ್ಕವರು ತಾವು ಹೈದರಾಬಾದಿನಲ್ಲಿ ಉಪಾಧ್ಯಾಯರಾಗಿದ್ದು, ಮೂಲತಃ ಬೆಳಗಾವಿಯವರೇ ಎಂದು ಹೇಳಿದರು. ತಮ್ಮ ಮಗಳನ್ನು ಸುಮನಾ ಎಂದು ಪರಿಚಯಿಸಿದರು. ಅವಳು ಬೆಳಗಾವಿಯಲ್ಲಿ ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆಂದೂ ಹೇಳಿದರು. ಸುಮನಾ ಒಲ್ಲದ ಮನಸ್ಸಿನಿಂದ ಸುಮಿತ್‌ನ ಕಡೆ ನೋಡಿ ಕಿರುನಗೆ ಬೀರಿದಳು. ಧಾರವಾಡ ಬರುವಷ್ಟರಲ್ಲಿ ಅವರಮ್ಮ ಸುಮಿತ್‌ನೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡು ಮಾತನಾಡುತ್ತಿದ್ದರು. ರೈಲು ಧಾರವಾಡದಲ್ಲಿ ನಿಂತಾಗ ಸುಮನಾಳನ್ನು ಅವರಪ್ಪ ಬಲವಂತವಾಗಿ ಕೆಳಗೆ ಕರೆದುಕೊಂಡು ಹೋದರು. ಆಗ ಸುಮಿತ್ ಇದೇ ಸರಿಯಾದ ಸಮಯವೆಂದು ಅವರಮ್ಮನನ್ನು ಯಾಕೆ ಸುಮನಾಗೆ ಮೈ ಹುಷಾರಿಲ್ಲವೇ ಎಂದು ಕೇಳಿದ. ಅದಕ್ಕೆ ಅವರಮ್ಮ, ``ಇಲ್ಲಪ್ಪ ಅವಳು ತುಂಬಾ ಉತ್ಸಾಹದಿಂದಿರುವ ಹುಡುಗಿ. ಬೆಳಗಾವಿಯಲ್ಲಿ ನನ್ನ ತಂಗಿಯ ಮನೆಯಲ್ಲಿದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ಪಕ್ಕದ ಮನೆಯ ರಾಘವ ಎಂಬ ಹುಡುಗನೊಂದಿಗೆ ಪ್ರೇಮಾಂಕುರವಾಗಿ ಅವನನ್ನು ಬಹಳ ಪ್ರೀತಿಸಿದಳು. ನನ್ನ ತಂಗಿಗೂ ಆ ಹುಡುಗ ಬಹಳ ಇಷ್ಟ. ಅವನ ಸೌಮ್ಯ ಸ್ವಭಾವ ನಮಗೂ ಇಷ್ಟವಾಯಿತು, ನಮಗೂ ಒಬ್ಬಳೇ ಮಗಳಿದ್ದರಿಂದ ಒಪ್ಪಿಕೊಂಡೆ. ಅವನು ಒಳ್ಳೆಯ ಕೆಲಸದಲ್ಲಿದ್ದ. ರಾಘವನ ತಂದೆ ತಾಯಿಯೊಂದಿಗೆ ಮಾತನಾಡಿದೆವು. ಅವರೂ ಸಂತೋಷದಿಂದ ಒಪ್ಪಿಕೊಂಡರು. ಆದರೆ ನಿಶ್ಚಿತಾರ್ಥಕ್ಕೆ ಒಂದೆರಡು ದಿನ ಮೊದಲು ಅವರ ತಂದೆ ಬಂದು ನಮಗೆ 5 ಲಕ್ಷ ರೂಪಾಯಿ ವರದಕ್ಷಿಣೆ ಬೇಕು, ನಮ್ಮ ಮಗನಿಗೆ ಎಂಟೆಕ್‌ ಕಲಿಸಲು ಅಮೆರಿಕಾಗೆ ಕಳುಹಿಸಬೇಕೆಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ