ಕಥೆ - ವೇದಾ ಮಂಜುನಾಥನ್‌ 

ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ನಿಮ್ಹಾನ್ಸ್ ನಲ್ಲಿ ಅಡ್ಮಿಟ್‌ ಆಗಿದ್ದ ತಮ್ಮನನ್ನು ನೋಡಿಹೋಗಲೆಂದು ಅಂದು ಆಸ್ಪತ್ರೆಗೆ ಬಂದಿದ್ದಳು ಸಂಜನಾ. ಅಲ್ಲಿ ಅನಿರೀಕ್ಷಿತವಾಗಿ ಕಣ್ಣಿಗೆ ಬಿದ್ದಳು ಮಾನ್ಸಿ. ಅದೂ ಹುಚ್ಚಿಯಾಗಿ! ಸಂಜನಾಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಮಾನ್ಸಿಯ ಹತ್ತಿರ ಹೋಗಿ ಮಾತನಾಡಿಸಿದಾಗ, ಅವಳು ತನ್ನ ಕಾಲೇಜು ಗೆಳತಿ ಸಂಜನಾಳನ್ನು ಗುರುತು ಹಿಡಿಯಲಿಲ್ಲ.

ನರ್ಸ್‌ ಬಂದು ಮಾನ್ಸಿಯನ್ನು ಎಳೆದುಕೊಂಡು ಹೋಗಿ ಇಂಜೆಕ್ಷನ್‌ ಚುಚ್ಚಿದಾಗ, ಅವಳು ಸ್ವಲ್ಪ ಹೊತ್ತಿನಲ್ಲೇ ಮಂಪರಿನ ನಿದ್ದೆಗೆ ಜಾರಿಹೋದಳು. ಸಂಜನಾ ನರ್ಸ್‌ನ ಕೈಹಿಡಿದು ಬೇಡಿಕೊಳ್ಳುವಂತೆ ಮಾನ್ಸಿಗೆ ಏನಾಯಿತೆಂದು ಹೇಳಲೇಬೇಕು ಎಂದು ಕೇಳಿಕೊಂಡಳು. ನರ್ಸ್‌ ಸಂಜನಾಳಿಗೆ ಮಾನ್ಸಿಯ ಕಥೆಯನ್ನೆಲ್ಲಾ ಹೇಳತೊಡಗಿದಳು. ಮಾನ್ಸಿಗೆ ಚಿಕ್ಕಂದಿನಲ್ಲಿ ಆದ ಲೈಂಗಿಕ ಕಿರುಕುಳದಿಂದ ಇಂದು ಅವಳು ಹುಚ್ಚಿಯಾಗಿದ್ದಾಳೆ ಎಂದು ಹೇಳಿದಾಗ, ಸಂಜನಾಗೆ ಅರ್ಥವಾಗಲಿಲ್ಲ. ನರ್ಸ್‌ ಬಿಡಿಸಿ ಹೇಳಿದಳು. ಮಾನ್ಸಿ ತನ್ನ ಎರಡನೇ ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ದುರ್ದೈವಿ! ಮಾನ್ಸಿ ಬೆಳೆಯುವ ವಯಸ್ಸಿನಲ್ಲಿ ಅವಳ ತಂದೆ ಅವಳನ್ನು ಮನೆ ಕೆಲಸದವಳ ಕೈಗೆ ಒಪ್ಪಿಸಿ ತಾನು ಸದಾ ಬಿಸ್‌ನೆಸ್‌ನಲ್ಲಿ ಮುಳುಗಿರುತ್ತಿದ್ದರು. ಮಗಳು ಮನೆಯಲ್ಲಿ ಏನು ಮಾಡುತ್ತಿದ್ದಾಳೆ, ಸರಿಯಾಗಿ ಬೆಳೆಯುತ್ತಿದ್ದಾಳಾ, ಅವಳ ಆಟಪಾಠಗಳನ್ನು ಗಮನಿಸದಷ್ಟೂ ಬಿಝಿಯಾಗಿರುತ್ತಿದ್ದರು ಅವಳ ತಂದೆ. ಮಾನ್ಸಿಗೆ ಚಿಕ್ಕಂದಿನಲ್ಲಿ ಯಾರಿಂದಲೋ ಆಗಿರುವ ಲೈಂಗಿಕ ಕಿರುಕುಳದಿಂದ ಅವಳು ಇಂದು ಈ ಸ್ಥಿತಿಗೆ ಬಂದಿದ್ದಾಳೆಂದು ಹೇಳಿ, ಮಾನಸಿಕ ತಜ್ಞರು ಅವಳಿಗೆ ಮಾಡಿದ ಪರೀಕ್ಷೆಗಳಿಂದ ಇದನ್ನೆಲ್ಲಾ ತಿಳಿದುಕೊಂಡಿದ್ದಾರೆಂದು ಹೇಳಿದ ನರ್ಸ್‌ ತನಗೆ ಬೇರೆ ಪೇಶೆಂಟ್‌ಗಳನ್ನು ನೋಡಿಕೊಳ್ಳುವುದು ಇದೆ ಎಂದು ಹೇಳಿ ಹೊರಟುಹೋದಳು.

ಕಾಲೇಜಿನಲ್ಲಿ ಓದುತ್ತಿದ್ದಾಗ ಸಂಜನಾ ಮತ್ತು ಮಾನ್ಸಿ ಸ್ನೇಹಿತೆಯಾಗಿದ್ದರು. ಮಾನ್ಸಿ ಮಾತು ಕಡಿಮೆ. ರಿಸರ್ವ್ ನೇಚರ್‌ನವಳು.  ಅವಳ ತಂದೆ ಆಗರ್ಭ ಶ್ರೀಮಂತರಾಗಿದ್ದುದರಿಂದ ಅವಳು ಜಂಭ ಪಡುತ್ತಿದ್ದಾಳೆಂದು ಬಹಳಷ್ಟು ಜನ ಭಾವಿಸಿದ್ದರು. ಮಾನ್ಸಿ, ಸಂಜನಾಳ ಹತ್ತಿರ ತುಂಬಾ ಕ್ಲೋಸಾಗಿರುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುತ್ತಿದ್ದ ಮಾನ್ಸಿಯ ಬಗ್ಗೆ ಯಾರಿಗೂ ಪೂರ್ತಿಯಾಗಿ ಗೊತ್ತಿರಲಿಲ್ಲ.

ಸಂಜನಾ ಬೇಸರದಿಂದ ಮಾನ್ಸಿ ಈ ದಿನ ಹುಚ್ಚಿಯಾಗಿ ಮಲಗಿರುವುದನ್ನು ನೋಡಿ ನೊಂದಳು. ಮಾನ್ಸಿಯ ಬೆಡ್‌ ಹತ್ತಿರ ಬಂದಳು. ಮಾನ್ಸಿಗೆ ಮಂಪರು ಇಂಜೆಕ್ಷನ್‌ ಕೊಟ್ಟಿದ್ದರಿಂದ ಅವಳು ನಿದ್ದೆ ಮಾಡುತ್ತಿದ್ದಳು. ಕಾಲೇಜಿನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸುಂದರ ಶ್ರೀಮಂತೆ ಇವಳೇನಾ ಎನಿಸಿತು ಸಂಜನಾಳಿಗೆ. ನಿಧಾನವಾಗಿ ಮಾನ್ಸಿಯ ಹಣೆಯ ಮೇಲಿದ್ದ ಕೆದರಿದ ಕೂದಲನ್ನು ಹಿಂದಕ್ಕೆ ತಳ್ಳಿದಳು. ಗೊಂದಲದಲ್ಲಿರುವ ಮುಖ ನಿದ್ದೆಯಲ್ಲೂ ಪ್ರಶಾಂತವಾಗಿರಲಿಲ್ಲ! ಮಾನ್ಸಿ ಸ್ವಲ್ಪ ಹೊತ್ತಿನ ನಂತರ ಕಣ್ಣುಬಿಟ್ಟಳು. ಸಂಜನಾ ತನ್ನ ಗುರುತು ಹೇಳಿ, ಮಾತನಾಡಿಸಿದಳು. ಮಾನ್ಸಿ ಬಹುಶಃ ಅವಳನ್ನು ಗುರುತು ಹಿಡಿದಿರಬಹುದು. ಸನ್ನೆ ಮಾಡಿ ಔಷಧಿ ಇಡುವ ಟೀಪಾಯಿಯ ಡ್ರಾನಲ್ಲಿದ್ದ ತನ್ನ ಡೈರಿಯನ್ನು ತೆಗೆಯುವಂತೆ ಹೇಳಿದಳು. ಸಂಜನಾ ಮಾನ್ಸಿಯ ಡೈರಿಯನ್ನು ತೆಗೆದುಕೊಂಡಳು. ಮಾನ್ಸಿ ಅದನ್ನು ತೆಗೆದುಕೊಂಡು ಹೋಗು ಎಂದು ಹೇಳಿದಳು. ಅಷ್ಟರಲ್ಲಿ ಡಾಕ್ಟರ್‌ ಬಂದರು. ಸಂಜನಾ ಮಾನ್ಸಿಯ ಡೈರಿಯನ್ನು ತನ್ನ ಹ್ಯಾಂಡ್‌ ಬ್ಯಾಗ್‌ನಲ್ಲಿ ಹಾಕಿಕೊಂಡು ಹೊರಟಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ