ನೀಳ್ಗಥೆ - ಎಸ್‌.ಪಿ. ವಿನಿತಾ

ಜೀವಿಕಾ, ಈ ಹೆಸರನ್ನು ಅವಳಿಗೆ ಯಾರು ಇಟ್ಟರೆಂದು ಅವಳಿಗೂ ನೆನಪಿಲ್ಲ. ಅವಳ ತಂದೆ ತಾಯಿ ಇಟ್ಟಿದ್ದಾ ಅಥವಾ ಅವಳು ಬೆಳೆದ ಆಶ್ರಮದವರು ಇಟ್ಟಿದ್ದಾ...?  ಅವಳಿಗೂ ಉತ್ತರ ಹೊಳೆಯಲಿಲ್ಲ. ಜೀವಿಕಾ ಆಶ್ರಮಕ್ಕೆ ಬಂದು ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ, ಈಗ ತನ್ನ ಡಿಗ್ರಿಯನ್ನು ಪೂರ್ಣಗೊಳಿಸಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಅವಳು ನಾಲ್ಕೈದು ವರ್ಷದವಳಿದ್ದಾಗ ಈ ಅನಾಥಾಶ್ರಮಕ್ಕೆ ಬಂದಳೆಂದು, ಆ ಆಶ್ರಮದವರು ಹೇಳಿದ ನೆನಪು ಅವಳಿಗೆ. ಆ ದಿನ ಸೋಮವಾರ ಬೆಳಗಿನ ಸಮಯ ಜೀವಿಕಾ ಎಂದಿನಂತೆ ಕೆಲಸಕ್ಕೆ ಹೊರಟಿದ್ದಳು. ಒಂದು ಮುದ್ದಾದ ಹುಡುಗಿ ಅವರ ಆಶ್ರಮದ ಮೆಟ್ಟಿಲುಗಳ ಮೇಲೆ ಕೂತಿತ್ತು. ಆ ಮಗು ನಿದ್ದೆ ಮಂಪರಿನಲ್ಲಿದ್ದಂತೆ ಕಂಡಿತವಳಿಗೆ. ಸುಮಾರು 4 ವರ್ಷದ ಹುಡುಗಿ. ಅವಳಿಗೆ ತನ್ನ ಹೆಸರೂ ನೆನಪಿದ್ದಂತೆ ಇರಲಿಲ್ಲ. ಜೀವಿಕಾ ಆಶ್ರಮದ ಮೇಲ್ವಿಚಾರಕಿ ಸುಶೀಲಾರ ಬಳಿ ಆ ಪುಟ್ಟ ಹುಡುಗಿಯನ್ನು ಕರೆತಂದಳು. ಇಬ್ಬರೂ ಆ ಹುಡುಗಿಯ ಹೆಸರು, ವಿಳಾಸವನ್ನು ತಿಳಿಯಲು ಎಷ್ಟು ಪ್ರಯತ್ನಪಟ್ಟರೂ ಅವಳಿಗೆ ಏನೂ ಹೇಳದೆ ಸುಮ್ಮನಿದ್ದಳು. ಕೊನೆಗೆ ಸುಶೀಲಾರ ಆದೇಶದಂತೆ ಜೀವಿಕಾ ಅವಳನ್ನು ಆಶ್ರಮದಲ್ಲಿ ಸಹಾಯಕಳಾಗಿ ಕೆಲಸ ಮಾಡುವ ಜ್ಯೋತಿ ಬಳಿ ಕರೆದೊಯ್ದಳು. ಅಲ್ಲಿ ಆ ಮಗುವಿಗೆ ಮಿಕ್ಕ ಅನಾಥ ಮಕ್ಕಳಂತೆ ಊಟ, ವಸತಿ ವ್ಯವಸ್ಥೆ ಮಾಡಿದರು. ಜ್ಯೋತಿ ಮತ್ತು ಜೀವಿಕಾ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು. ಜ್ಯೋತಿ ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಅವಳು ಓದನ್ನು ಮುಂದುವರಿಸದೆ ಆಶ್ರಮದಲ್ಲೇ ಸಣ್ಣವಳಿದ್ದಾಗಲಿಂದಲೂ ಸಹಾಯಕಳಾಗಿ ಕೆಲಸ ಮಾಡಲು ಆರಂಭಿಸಿದ್ದಳು. ಇದರಿಂದ ಸುಶೀಲಮ್ಮನಿಗೆ ಕೆಲಸದ ಹೊರೆ ಎಷ್ಟೋ ಕಮ್ಮಿಯಾಗಿತ್ತು. ಜೀವಿಕಾ ಮತ್ತು  ಜ್ಯೋತಿಯೊಂದಿಗಿದ್ದ ಎಲ್ಲಾ ಮಕ್ಕಳನ್ನು ಯಾರಾದರೊಬ್ಬರು ದತ್ತು ಪಡೆದು ಅವರೆಲ್ಲರೂ ಹೊರಟುಹೋಗಿದ್ದರು. ಆದರೆ ಪ್ರತಿ ಬಾರಿಯೂ ಬೇರೆ ಮಕ್ಕಳನ್ನು ದತ್ತು ಪಡೆಯಲು ಬಂದಾಗ ಇವರಿಬ್ಬರನ್ನು ಮಾತ್ರ ಯಾಕೆ ಯಾರೂ ದತ್ತು ಪಡೆಯಲಿಲ್ಲ? ಎಂಬ ಪ್ರಶ್ನೆ ಅವರಿಬ್ಬರನ್ನೂ ಕಾಡುತ್ತಿತ್ತು. ಆದರೆ ಕಾಲಕ್ರಮೇಣ ಆ ನೋವಿನ ನೆನಪು ಮಾಸಿ ಹೋಗಿತ್ತು. ಆ ಪುಟ್ಟ ಹುಡುಗಿ ಜೀವಿಕಾಳನ್ನು ತುಂಬಾನೆ ಹಚ್ಚಿಕೊಂಡಿತ್ತು. ಜೀವಿಕಾಳಿಗೂ ಅವಳೆಂದರೆ ಎಲ್ಲಿಲ್ಲದ ಕಾಳಜಿ. ಆ ಪುಟ್ಟ ಹುಡುಗಿಗೆ ಗೌರಿ ಎಂದು ಹೆಸರಿಟ್ಟವಳೂ ಇವಳೇ. ಗೌರಿ ಆಶ್ರಮಕ್ಕೆ ಬಂದು ಸುಮಾರು ನಾಲ್ಕು ತಿಂಗಳು ಕಳೆಯಿತು. ಅದೊಂದು ದಿನ ಸಂಜೆ ಕೆಲಸದಿಂದ ವಾಪಸ್ಸಾದಾಗ ಗೌರಿ ಆಶ್ರಮದಲ್ಲಿ ಎಲ್ಲೂ ಕಾಣಿಸಲಿಲ್ಲ. ಜ್ಯೋತಿಯನ್ನು ಕೇಳಿದಾಗ ಮಧ್ಯಾಹ್ನ ಯಾರೋ ಪುಣ್ಯಾತ್ಮರು ಬಂದು ಅವಳನ್ನು ದತ್ತು ಪಡೆದರೆಂದು ಹೇಳಿದಳು. ಜೀವಿಕಾಳಿಗೆ ಅರೆ ಕ್ಷಣ ಸಂಕಟವಾದಂತೆನಿಸಿತು. ತಾನು ಖುಷಿ ಪಡಬೇಕಾದ ವಿಷಯಕ್ಕೆ ಈ ಸಂಕಟವೇಕೆ ಎಂದು ಅವಳ ಅರಿವಿಗೂ ಬರಲಿಲ್ಲ. ಬಹುಶಃ ಗೌರಿಯ ಮೇಲಿನ ಅತಿಯಾದ ಕಾಳಜಿಯಿಂದ ತನಗೆ ಹೀಗನ್ನಿಸುತ್ತಿರಬಹುದು ಎಂದು ಅವಳು ಭಾವಿಸಿದಳು. ಕೊನೆಯದಾಗಿ ಅವಳ ಮುಖವನ್ನು ನೋಡಲಾಗಲಿಲ್ಲವೆಂದು ಹಪಹಪಿಸಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ