ಭಾನುವಾರ ಮುಂಜಾನೆ 6 ಗಂಟೆಗೆಲ್ಲ ವಂದನಾ ಏಳುತ್ತಿದ್ದಂತೆ ದೀಪಕ್‌ ಸಿಡಿಮಿಡಿಗೊಂಡು ಕೇಳಿದ, ``ಇಂದು ಏಕೆ ಇಷ್ಟು ಬೇಗ ಏಳುತ್ತಿರುವೆ?''

``ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ.''

``ಅದೆಂಥ ಕೆಲಸಗಳು?''

``ನೀರು ತುಂಬಿಸಬೇಕು. ವಾಷಿಂಗ್‌ ಮೆಷಿನ್‌ಗೆ ಬಟ್ಟೆ ಹಾಕಬೇಕು. ತಿಂಡಿ ರೆಡಿ ಮಾಡಬೇಕು. ಸ್ನಾನಕ್ಕೆ ನೀರು ಕಾಯಿಸೋದು, ಮಕ್ಕಳ ಹೋಂವರ್ಕ್‌ ಮಾಡಿಸೋದು ಹೀಗೆ ಏನೆಲ್ಲ ಕೆಲಸಗಳಿವೆ.''

``ಅವೆಲ್ಲ  ಕೆಲಸಗಳನ್ನು ಆಮೇಲೂ ಮಾಡಬಹುದು. ಇನ್ನೂ ಸ್ವಲ್ಪ ಹೊತ್ತು ನನ್ನ ಬಳಿ ಮಲಗಿಕೊ,'' ಎಂದು ಹೇಳಿ ಅವಳ ಕೈಹಿಡಿದುಕೊಂಡ.

``ಮುಂಜಾನೆ ಮುಂಜಾನೆಯೇ ಪ್ರೀತಿ ಮಾಡೋ ಅದೃಷ್ಟ ನನಗೆಲ್ಲಿದೆ?'' ಎಂದು ಹೇಳುತ್ತ ವಂದನಾ ಅವನ ಕೈಯಿಂದ ತನ್ನ  ಕೈ ಬಿಡಿಸಿಕೊಂಡು ಮಂಚದಿಂದ ಕೆಳಗಿಳಿದಳು.

ಕೆಲಸದ ಒತ್ತಡದಿಂದ ತತ್ತರಿಸಿಹೋಗಿ ನಿರಾಶೆ ಹಾಗೂ ಸಿಡಿಮಿಡಿಗೊಂಡವಳಂತೆ ಕಂಡುಬಂದ ವಂದನಾ ಹೊಸ ಶೈಲಿಯಲ್ಲಿ ಮಾತನಾಡುತ್ತಿರುವುದನ್ನು ಕಂಡು ದೀಪಕ್‌ಗೆ ಆಶ್ಚರ್ಯದ ಜೊತೆಗೆ ಗಲಿಬಿಲಿ. ಏಕೆಂದರೆ ಭಾನುವಾರದಂದು ಬಹಳ ಹೊತ್ತಿನತನಕ ನಿದ್ರೆ ಮಾಡಲು ತೊಂದರೆಯಾದರೆ ಅವನು ಜಗಳಕ್ಕೆ ಇಳಿದುಬಿಡುತ್ತಿದ್ದ. ಇಂದು ವಂದನಾ ಬೇಗನೇ ಎದ್ದಿರುವುದು ಅವನ ತಿಳಿವಳಿಕೆಗೆ ಹೊರತಾಗಿತ್ತು.

ಪುನಃ ಗಾಢ ನಿದ್ರೆಗೆ ಜಾರಿದ ದೀಪಕ್‌ನನ್ನು ಅರ್ಧ ಗಂಟೆ ಬಳಿಕ ವಂದನಾ ಬೆಡ್‌ ಟೀ ಕೊಡಲೆಂದು ಹೋಗಿ ಎಚ್ಚರಿಸಿದಾಗ ಅವನು ಜೋರಾಗಿ ಕೂಗಿದ, ``ಇಂದು ಭಾನುವಾರ. ಯಾಕೆ ಆಗಾಗ ನನ್ನ ನಿದ್ರೆಗೆ ಅಡ್ಡಿ ಮಾಡುತ್ತಿರುವೆ. ಇಂದು ವರ್ಕಿಂಗ್‌ ಡೇ ಇರುವವರಂತೆ ಬೆಡ್‌ ಟೀ ತಂದು ಯಾಕೆ ತೊಂದರೆ ಕೊಡ್ತಿರುವೆ?''

``ನನಗೆ ಚಹ ಕುಡೀಬೇಕು ಅನಿಸುತಿತ್ತು. ಹಾಗಾಗಿ ಮಾಡಿದೆ. ನನ್ನ ಖಾಲಿ ಕಪ್‌ ನೋಡಿ ನನಗೇಕಿಲ್ಲ ಎಂದು ನೀವು ಜಗಳವಾಡುತ್ತೀರಿ, ಆಗ ಇಡೀ ದಿನ ಅಶಾಂತಿಯಲ್ಲೇ ಕಳೆಯುತ್ತೆ,'' ವಂದನಾ ಮುಗುಳ್ನಗುತ್ತಲೇ ಹೇಳಿದಳು.

``ಮೇಲಿಂದ ಮೇಲೆ ಎಚ್ಚರಗೊಳಿಸಿ ನೀನು ನನಗೆ ತೊಂದರೆ ಕೊಡ್ತಿದೀಯಾ. ನನಗೆ ಈಗಲೇ ಚಹಾ ಕುಡೀಬೇಕಿಲ್ಲ,'' ಎಂದು ಹೇಳಿ ದೀಪಕ್‌ ಮಗ್ಗಲು ಬದಲಿಸಿ ಮಲಗಲು ಪ್ರಯತ್ನಿಸಿದ.

``ಸಂಡೆ ಇರಲಿ ಅಥವಾ ಮಂಡೆ ನನಗೆ ಸೇವೆಯ ಬದಲು ಸಿಗುವುದು ನಿಮ್ಮ ಬೈಗುಳದ ಉಂಡೆ ಮಾತ್ರ,'' ಎಂದು ವಿಭಿನ್ನ ಡೈಲಾಗ್‌ ಹೇಳುತ್ತಾ ವಂದನಾ ಬೆಡ್‌ ರೂಮಿನಿಂದ ಹೊರಗೆ ಹೋದಳು.

ಪೂರಿ, ಆಲೂಗಡ್ಡೆ ಪಲ್ಯಕ್ಕೆ ಸಿದ್ಧತೆ ಆರಂಭಿಸಿ ಆಕೆ ರಾಜು ಮತ್ತು ಸಂಜೀವನನ್ನು ಎಬ್ಬಿಸಲು ಹೋದಳು. ಆದರೆ ಅವರು ಕೂಡ ಭಾನುವಾರದ ನೆಪವೊಡ್ಡಿ ಏಳಲು ನಿರಾಕರಿಸಿದರು. ಆಗ ವಂದನಾ ಅವರ ಬೆಡ್‌ ಮೇಲೆಯೇ ಕುಳಿತು ಮಧುರ ಸ್ವರದಲ್ಲಿಯೇ, ``ಕಳೆದು ಹೋದ ಸಮಯ ಮತ್ತೆಂದೂ ಬರದು ಮಕ್ಕಳೇ, ತಿಂಡಿ ತಿಂದ ನಂತರ ಬಹಳಷ್ಟು ಹೋಂವರ್ಕ್‌ ನಿಮಗಾಗಿ ಕಾಯುತ್ತಿದೆ. ಸೋಮವಾರ ನಡೆಯುವ ಟೆಸ್ಟ್ ಗಾಗಿ ಸಿದ್ಧತೆ ಮಾಡ್ಕೋಬೇಕು. ಉಜ್ವಲ ಭವಿಷ್ಯಕ್ಕಾಗಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಮುದ್ದು ಕಂದಮ್ಮಗಳೇ,'' ಎಂದು ಹೇಳಿದಳು.

``ಅಮ್ಮಾ, ದಯವಿಟ್ಟು ತೊಂದರೆ ಕೊಡಬೇಡಿ,'' 12 ವರ್ಷದ ರಾಜು ಕೋಪದಿಂದಲೇ ಹೇಳಿದ.

``ಅಮ್ಮಾ, ನೀವು ಹೊರಡಿ. ಅಭ್ಯಾಸ ಮಾಡಲು ಇನ್ನೂ ಸಾಕಷ್ಟು ಸಮಯವಿದೆ,'' ರಾಜುವಿಗಿಂತ 2 ವರ್ಷ ಚಿಕ್ಕವನಾದ ಸಂಜೀವ್ ಕೈಯಲ್ಲಿ ದಿಂಬು ಹಿಡಿದು ಮೂಲೆಯ ಬದಿ ಓಡುತ್ತ ಹೇಳಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ