ವ್ಯಂಗ್ಯ - ಪೂರ್ಣಿಮಾ ರಾವ್

``ಸಾಕು.... ಸಾಕು..... ಈಗ ಅನಗತ್ಯವಾಗಿ ಯಾರಾದ್ರೂ ಕ್ಲಾಪ್ಸ್ ಮಾಡ್ತಾ ಕೂತರೆ ನನಗೆ ಕೆಟ್ಟ ಕೋಪ ಬರುತ್ತೆ! ನನ್ನನ್ನು ಹೊಗಳುವ ನೆಪದಲ್ಲಿ ಚಪ್ಪಾಳೆ ತಟ್ಟುತ್ತಾ ಕೂರಬೇಡಿ..... ಅದರ ಬದಲು ಎಲ್ಲರೂ ಮನೆಗೆಲಸದಲ್ಲಿ ನನಗೊಂದಿಷ್ಟು ಸಹಾಯ ಮಾಡಿ!'' ಎಂದು ಕಟಕಟ ಹಲ್ಲು ಕಡಿಯುತ್ತಾ ಗುಡುಗಿದೆ. ಚಪ್ಪಾಳೆ ತಟ್ಟುತ್ತಿದ್ದವರ ಕೈ ಹಾಗೇ ನಿಂತು ಹೋಯ್ತು. ಎಲ್ಲರ ದೃಷ್ಟಿ ಈಗ ಚುರುಕಾಗಿ ನನ್ನಲ್ಲೇ ನೆಟ್ಟಿತು.

``ಮೈಗಳ್ಳತನ ಮಾಡುವುದಕ್ಕೂ ಒಂದು ಲಿಮಿಟ್‌ ಇರಬೇಕು! ಹೆಚ್ಚಿನ ಕೆಲಸ ಮಾಡಲಾಗದಿದ್ದರೆ ಸಣ್ಣಪುಟ್ಟದ್ದಾದರೂ ಮಾಡಬಹುದು ತಾನೇ.....? ಈ ಹಾಳು ಲಾಕ್‌ ಡೌನ್‌ ಡಿಕ್ಲೇರ್‌ಆದಾಗಿನಿಂದ ನನ್ನ ಆಫೀಸಿನ ಕೆಲಸವನ್ನು ವರ್ಕ್‌ಫ್ರಂ ಹೋಮ್ ಅಂತ ಮಾಡುತ್ತಾ, ನಿಮ್ಮೆಲ್ಲರ ಸೇವೆ ಮಾಡೋದೇ ಆಗೋಯ್ತು, ಅದೂ 24/7! ಮೊದಲಾದರೂ ಆಫೀಸಿಗೆ ನೆಮ್ಮದಿಯಾಗಿ ಹೋಗುತ್ತಾ ಅಷ್ಟು ಹೊತ್ತೂ ಈ ಮನೆ ಚಾಕರಿಯಿಂದ ದೂರ ಉಳಿಯುತ್ತಿದ್ದೆ. ಈಗ.... ಅದೂ ಮಾಡೂ..... ಇದೂ ಮಾಡು....

``ಅರೆ..... 4 ಜನ ಇರೋ ಮನೆ ಅಂದ್ರೆ 101 ಕೆಲಸಗಳು ಇರುತ್ತವೆ. ಯಾರಿಗೂ ಯಾವ ಸಹಾಯ ಮಾಡೋದೂ ಬೇಡ, ಅವರವರ ಲ್ಯಾಪ್‌ ಟಾಪ್‌, ಟ್ಯಾಬ್ಲೆಟ್ಟು, ಮೊಬೈಲ್ ‌ಹಿಡಿದುಕೊಂಡು ಕುಳಿತುಬಿಟ್ಟರೆ ನಿಮ್ಮಗಳ ಜಾಗಕ್ಕೆ ತಂದೂ ತಂದೂ ಬಡಿದು ಸೇವೆ ಮಾಡೋದೇ ಆಗೋಯ್ತು! ನಾನೂ ಮನುಷ್ಯಳೇ ಅಲ್ವಾ….? ಎಲ್ಲರೂ ಕಿವಿ ತೆರೆದು ನೆಟ್ಟಗೆ ಕೇಳಿಸಿಕೊಳ್ಳಿ...... ಇವತ್ತಿನಿಂದ ಎಲ್ಲರೂ ನನಗೆ ಸಹಾಯ ಮಾಡಿದಿರೋ ಸರಿ..... ಇಲ್ಲದಿದ್ದರೆ ನಾನೂ ಅಡುಗೆಮನೆಗೆ ಬಾಗಿಲು ಜಡಿದು ಟಿವಿ ಮುಂದೆ ಕೂತುಬಿಡ್ತೀನಿ. ಯಾರಿಗೆ ಏನು ಬೇಕೋ ಬೇಯಿಸಿ ಬಡಿದುಕೊಳ್ಳಿ!''

ನನ್ನ ರೌದ್ರಾವತಾರ ಕಂಡು ತಕ್ಷಣ ಇವರು ಕೈಗೆ ಪೊರಕೆ ತೆಗೆದುಕೊಂಡು ಗುಡಿಸಲು ಆರಂಭಿಸಿಯೇಬಿಟ್ಟರು. ಮಗಳು ಸ್ಮಿತಾ ಒಂದು ಬಟ್ಟೆ ತೆಗೆದುಕೊಂಡು ಎಲ್ಲಾ ಕಡೆ ಡಸ್ಟಿಂಗ್‌ ಆರಂಭಿಸಿದಳು. ಮಗರಾಯ ಸುಮ್ಮನಿರುತ್ತಾನೆಯೇ?

``ಅಮ್ಮಾ, ಎಲ್ಲಾ ಕಡೆ ಬಿದ್ದಿರುವ ಬಟ್ಟೆ ಮಡಿಸಿ ಅವರವರ ವಾರ್ಡ್‌ ರೋಬ್‌ ನಲ್ಲಿಡುತ್ತೇನೆ,'' ಎಂದು ಬಟ್ಟೆ ಮಡಿಸಲು ಆರಂಭಿಸಿದ ಕಿಟ್ಟು.

``ಅದಾದ ಮೇಲೆ ಅಂಗಡಿಯಿಂದ ಸಾಮಾನು ತರೋದಿದ್ರೆ ಹೇಳಿಬಿಡು,'' ಎಂದು ಮೆಲ್ಲಗೆ ಹೇಳಿದ.

``ನೋಡ್ರಿ, ಗುಡಿಸಿ ಆದ್ಮೇಲೆ ಆ ಸಿಂಕ್‌ನಲ್ಲಿ ಬಿದ್ದಿರೋ ಒಂದು ರಾಶಿ ಪಾತ್ರೆ ತೊಳೆದಿಡಿ. ಅಷ್ಟರಲ್ಲಿ ನಾನು ಆಫೀಸಿಗೆ ಕಳಿಸಬೇಕಿರೋ ಈ ಮೇಲ್ಸ್ ಚೆಕ್‌ ಮಾಡಿ ಬರ್ತೀನಿ. ಸ್ಮಿತಾ, ನೀನು ಡಸ್ಟಿಂಗ್‌ ಆದಮೇಲೆ ವಾಶಿಂಗ್‌ ಮೆಶೀನ್‌ಗೆ ಬಟ್ಟೆಗಳನ್ನು ಹಾಕಿಬಿಡು..... ಗಮನವಿರಲಿ, ಮೊದಲು ಎಲ್ಲರ ಲೈಟ್‌ ಕಲರ್‌ ಬಟ್ಟೆ ಹಾಕು, ನಂತರ ಡಾರ್ಕ್‌ ಬಟ್ಟೆಗಳನ್ನು ಹಾಕುವೆಯಂತೆ. ಏನಾದ್ರೂ ಡೌಟ್‌ ಇದ್ದರೆ ನನಗೆ ತೋರಿಸಿ ಮಾಡು.

``ಲೋ ಕಿಟ್ಟು, ಬಟ್ಟೆ ಮಡಿಸಿ ಆದ ಮೇಲೆ ಹೊರಗಿನ ಗಾರ್ಡನ್‌ನಲ್ಲಿ ಎಲ್ಲಾ ಗಿಡಗಳಿಗೂ ನೀರು ಹಾಕು. 4 ದಿನ ಆಯ್ತು ಅವು ನೀರು ಕಂಡು, ಈ ರಾಶಿ ಕೆಲಸದ ಮಧ್ಯೆ ನನಗೆ ಆ ಕಡೆ ಬಿಡುವೇ ಸಿಗಲಿಲ್ಲ.....'' ಎನ್ನುತ್ತಾ ತೀಕ್ಷ್ಣವಾಗಿ ಎಲ್ಲರ ಕಡೆ ಕಣ್ಣಿಂದ ಬಾಣ ಬಿಡುತ್ತಾ, ನನ್ನ ಲ್ಯಾಪ್‌ ಟಾಪ್‌ ಕಡೆ ನಡೆದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ