ನೀಳ್ಗಥೆ - ನಳಿನಿ ಶರ್ಮಾ (WRITER)

ಇಳೆಯೇ ಮುರಿದು ಧರೆಯ ಮೇಲೆ ಬಿದ್ದಂತೆ, ಭಯಾನಕವಾಗಿ ಮಳೆ ಸುರಿಯುತ್ತಿತ್ತು. ಎತ್ತ ನೋಡಿದರೂ ಧೋ ಎಂದು ಬೀಳುತ್ತಿದ್ದ ಮಳೆಯ ನೀರು ಹರಿಯುತ್ತಿತ್ತು. ಸುನಾಮಿಯೇ ಎದ್ದು ಬಂದು ಅಪ್ಪಳಿಸುತ್ತಿದೆಯೇನೊ ಎಂಬಷ್ಟು ಭಯಭೀತಳಾಗಿದ್ದಳು ಅಮೃತಾ. ಮನುಕುಲದ ಜೀವಜಲವಾದ ಮಳೆ, ಇಷ್ಟೊಂದು ರಭಸದಿಂದ ಭೂಮಿಗೆ ಅಪ್ಪಳಿಸುತ್ತಾ ಇನ್ನೇನು ಮನುಷ್ಯ ಜೀವಗಳನ್ನು ಬಲಿ ತೆಗೆದುಕೊಳ್ಳುವ ಹಂತಕ್ಕೆ ತಲುಪಿದ ಆ ದೃಶ್ಯ ಭಯಂಕರವಾಗಿತ್ತು. ಆಫೀಸಿನ ಪೋರ್ಟಿಕೋದ ಮರೆಯಲ್ಲಿ ನಿಂತುಕೊಂಡು, ಮಳೆಯಿಂದ ರಕ್ಷಿಸಿಕೊಳ್ಳುತ್ತಾ ಪತಿಯ ಬರುವಿಕೆಗಾಗಿ ಆಮೃತ ಕಾಯುತ್ತಾ ನಿಂತಿದ್ದಳು. 5 ಗಂಟೆಯಾದ ಮೇಲೆ ಒಬ್ಬೊಬ್ಬರಾಗಿ ಎಲ್ಲ ಸಹೋದ್ಯೊಗಿಗಳೂ ಮನೆಗೆ ಹೊರಟು ಹೋಗಿದ್ದರು. ತಾನು ಬರುವುದು ಎಷ್ಟೇ ವಿಳಂಬವಾದರೂ ಸರಿ, ಬೇರೆಯವರಿಂದ ಮಾತ್ರ ಡ್ರಾಪ್‌ ತೆಗೆದುಕೊಳ್ಳಬೇಡ ಎಂದು ಇವಳಿಗೆ ಪತಿಯ ಆದೇಶವಾಗಿತ್ತು. ಪರಪುರುಷನ ಜೊತೆ, ಅವನ ಬೈಕ್‌ನಲ್ಲಿ ಅಂಟಿಕೊಂಡು ಕುಳಿತ ಹೆಂಗಸರೆಲ್ಲ ಇವನ ದೃಷ್ಟಿಯಲ್ಲಿ ಬಜಾರಿಯರು ಎಂದೇ ಅರ್ಥ. ಇನ್ನು ಪರಪುರುಷನೊಂದಿಗೆ ಕಾರ್‌ನಲ್ಲಿ ಹೋಗುವವರು ಎಂದರೆ ಮುಗಿದೇ ಹೋಯಿತು, ಕಾರ್‌ನ ಒಳಗೆ, ಆ ಏಕಾಂತದಲ್ಲಿ ಅದೇನೇನು ನಡೆಯುತ್ತೊ ಏನೋ? ಎನ್ನುವುದು ಇವನ ಅಭಿಪ್ರಾಯ.

ಆಫೀಸಿನ ಸ್ಟಾಫ್‌ನಲ್ಲಿ ಅರ್ಧದಷ್ಟು ಜನ ಮಹಿಳೆಯರೇ ಇದ್ದು, ಬೇರೆ ಬೇರೆ ಡೆಸಿಗ್ನೇಶನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಆಕರ್ಷಕವಾದ ತರುಣಿಯರೇ ಇದ್ದಾರೆ. ಆದರೆ ಯಾರೊಬ್ಬರ ಗಂಡಂದಿರೂ ಈ ರೀತಿಯ ವಿಕೃತ ಮನೋಭಾವ ಮತ್ತು ಸಂಶಯಪಡುವ ಮನಸ್ಸಿನವರಾಗಿಲ್ಲ. ಎಲ್ಲರೂ ತಂತಮ್ಮ ನೌಕರಿ ಮಾಡುತ್ತಿರುವ ಪತ್ನಿಯರ ಶ್ರೇಯಸ್ಸನ್ನೇ ಬಯಸುತ್ತಿದ್ದರು.

ಇವರ ಬಾಸ್‌ ವಿನೋದ್‌ ಜೋಷಿ, ಎಲ್ಲ ನೌಕರರ ಮೆಚ್ಚುಗೆ ಪಡೆದಿದ್ದರು. ಅವರು ನೌಕರರನ್ನು ಗೌರವಿಸುತ್ತಿದ್ದರು. ಹೀಗೆ ಅಮೃತಾ, ಪ್ರತಿದಿನ ಪೋರ್ಟಿಕೊದಲ್ಲಿ ನಿಂತುಕೊಂಡು ತನ್ನ ಪತಿ ಪಿಕಪ್‌ ಮಾಡಲು ಬರುವುದನ್ನೇ ಎದುರು ನೋಡುವುದನ್ನು ಗಮನಿಸಿದ್ದರು. ಮತ್ತೆ ಕೆಲವೊಂದು ಸಲ, ``ಅಮೃತಾ, ನೀವು ಕೂಡ ಬೇರೆ ಹೆಣ್ಣುಮಕ್ಕಳಂತೆ ಯಾವತ್ತೂ ಡ್ರಾಪ್‌ತೆಗೆದುಕೊಳ್ಳುದಿಲ್ಲವಲ್ಲ ಏಕೆ?'' ಎಂದು ಕೂಡ ಕೇಳಿದ್ದರು. ಇದಕ್ಕೆ ಅಮೃತಾಳ ಮೌನವೇ ಪ್ರತ್ಯುತ್ತರಾಗಿರುತ್ತಿತ್ತು. ತನ್ನ ಪತಿಯ ಕಟ್ಟುನಿಟ್ಟಿನ ಆದೇಶವನ್ನು ಇನ್ನೊಬ್ಬರಿಗೆ ತಿಳಿಸುವುದಾದರೂ ಹೇಗೆ? ಅವಳ ಮೂಕವೇದನೆ ಮಾತ್ರ ಅವಳ ಕಣ್ಣುಗಳಲ್ಲಿಯೇ ಪ್ರತಿಫಲಿಸುತ್ತಿತ್ತು. ಕೊನೆಗೊಂದು ದಿನ ವಿನೋದ್‌ ತಮಾಷೆಯಾಗಿ ಹೇಳಿಯೇಬಿಟ್ಟರು.

``ನೀವು ತುಂಬಾ ಸುಂದರವಾಗಿ ಇದ್ದೀರಾ, ಅದಕ್ಕೆ ನಿಮ್ಮ ಗಂಡ....''

ಆಗ ನೆನಪಾಯಿತು ಅಮೃತಾಳಿಗೆ, ಅವತ್ತೊಂದು ದಿನ ತನ್ನ ಪತಿಗೋಸ್ಕರ ಕಾಯುತ್ತ ನಿಂತು ಒಂದು ಗಂಟೆ ಕಳೆದಿದ್ದರೂ, ಆತ ಎಷ್ಟು ಹೊತ್ತು ಆದರೂ ಬಂದಿರಲಿಲ್ಲ. ಅದೇ ವೇಳೆಗೆ ತಾನೂ ಕೂಡ ಮನೆಗೆ ಹೊರಟಿದ್ದ ಅವರ ಬಾಸ್‌ ಕಾರ್‌ನಲ್ಲಿ ಹೊರಟು ಬಂದಾಗ, `` ಅಮೃತಾ, ಆನ್‌ ದಿ ವೇ ನಿಮ್ಮನ್ನು ಡ್ರಾಪ್‌ ಮಾಡ್ತೀನಿ. ಹೇಗಿದ್ದರೂ ನಿಮ್ಮ ಮನೆ ಕ್ರಾಸ್‌ ಮಾಡಿಕೊಂಡೇ ನನ್ನ ಅಪಾರ್ಟ್‌ಮೆಂಟಿಗೆ ಹೋಗಬೇಕು ನಾನು....'' ಎಂದರು.

ಆ ಮಾತು ಕೇಳಿ, ಹಾವು ತುಳಿದಳಂತೆ ``ಇಲ್ಲ...'' ಎಂದು ಕಿರುಚುತ್ತಾ ಹಿಂದಕ್ಕೆ ಎಗರಿದಳು ಅಮೃತಾ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ