ಕಥೆ - ಶೈಲಾ ಎಸ್‌. ವಾಲಿ

ಸತತ ನಾಲ್ಕು ಹೆಣ್ಣುಮಕ್ಕಳಾದ ನಂತರ ಸರಸ್ವತಿ ಗಂಡ ಮತ್ತು ಅತ್ತೆ ಮನೆಯವರ ಅನಾದರಕ್ಕೆ ಬೇಸತ್ತು ಮನೆ ಬಿಟ್ಟು ಬದುಕುವ ದಾರಿ ಕಂಡುಕೊಂಡಳು. ಗಂಡು ಮಗು ಬೇಕೆಂಬ ದುರಾಸೆಯಲ್ಲಿ ಅವಳ ಗಂಡ ಮತ್ತೊಂದು ಮದುವೆಯಾದ. ಮುಂದೆ ಕುಲದೀಪಕ ತಂದೆಗೆ ಮಾಡಿದ್ದೇನು.....?

ಸರಸ್ವತಿ ಬೀಡಿ ಕಟ್ಟುತ್ತಾ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದಳು. ಗಂಡನ ಹಿಂಸೆಯಿಂದ ಪಾರಾಗಿ ಎಲ್ಲರಿಂದ ದೂರಾಗಿ ತನ್ನ ನಾಲ್ಕು ಹೆಣ್ಣುಮಕ್ಕಳನ್ನು ಕರೆದುಕೊಂಡು ಊರುಬಿಟ್ಟು ಊರಿಗೆ ಬಂದು ಎಲ್ಲರ ಕಣ್ತಪ್ಪಿಸಿ ಜೀವನ ರೂಪಿಸಿಕೊಳ್ಳಲು ಪಟ್ಟ ಶ್ರಮ ಕಡಿಮೆಯೇನಲ್ಲ......

ಹದಿನೈದು ವರ್ಷಗಳ ಹಿಂದೆ ನರಸಿಂಹನನ್ನು ಮದುವೆಯಾಗಿ ಬಂದಾಗಿನಿಂದ ಅವಳ ಕಷ್ಟ ಅಷ್ಟಿಷ್ಟಲ್ಲ..... ಸಾಲ್ದಕ್ಕೆ ಅತ್ತೆ ಮಾವಂದಿರ ಕಿರುಕುಳ.... ಗಾಣದೆತ್ತಿನ ಹಾಗೇ ದುಡಿದರೂ ಸ್ವಲ್ಪ ಕನಿಕರ ಇಲ್ಲದ ಮನುಷ್ಯ ಪ್ರಾಣಿಗಳು.... ಒಂದು ಕ್ಷಣ ಕೂರುವ ಹಾಗಿಲ್ಲ.... ಎಲ್ಲರ ಚಾಕರಿ ಮಾಡುವುದರಲ್ಲಿಯೇ ಸರಸ್ವತಿಯ ಜೀವನ ಸುಣ್ಣವಾಗಿತ್ತು.

ವರ್ಷಕ್ಕೊಂದರಂತೆ ಐದು ವರ್ಷದಲ್ಲಿ ಮೂವರು ಮಕ್ಕಳನ್ನು ಕರುಣಿಸಿದ್ದ ಪುಣ್ಯಾತ್ಮ ಗಂಡ. ಅವಳ ಗ್ರಹಚಾರಕ್ಕೆ ಮೂವರೂ ಹೆಣ್ಣುಮಕ್ಕಳೇ.... ಅವರ ಕಿರುಕುಳಕ್ಕೆ ಇದೊಂದು ಹೊಸ ಸೇರ್ಪಡೆ. ಹೆಣ್ಣು ಬಾಳಿನ ಹುಣ್ಣು ಎಂದು ಶಪಿಸುವುದೇ ಅತ್ತೆಯ ಕೆಲಸವಾಗಿತ್ತು.

ಸರಸ್ವತಿ ಮೂವರು ಮಕ್ಕಳ ಬಳಿಕ ಇನ್ನೊಂದು ಮಗು ಬೇಡವೆಂದರೂ ಗಂಡನ ಒತ್ತಾಯಕ್ಕೆ ನಾಲ್ಕನೇ ಬಾರಿ ಬಸುರಿ ಆದಳು. ಆಗ ಮಗು ಹೆಣ್ಣೋ ಗಂಡೋ ಎಂದು ಡಾಕ್ಟರ್‌ ಗೆ ಲಂಚ ಕೊಟ್ಟು ತಿಳಿದುಕೊಂಡಿದ್ದ. ಈ ಸಲ ಮಗು ಹೆಣ್ಣೇ ಎಂದು ಹೇಳಿದ ಮೇಲೆ ಕೇಳೋ ಹಾಗಿರಲಿಲ್ಲ ಅವನ ಗೋಳು. ಪಾಪ ಸರಸ್ವತಿಯ ಸ್ಥಿತಿ ಯಾವ ಶತ್ರುವಿಗೂ ಬೇಡವಾಗಿತ್ತು.

ಜೊತೆಗೆ ಅತ್ತೆ ಮಾವ ಇಬ್ಬರಿಗೂ ಅವಳೆಂದರೆ ತಿರಸ್ಕಾರ. ಅವಳ ಮುಂದೆಯೇ ಗಂಡ ನರಸಿಂಹನಿಗೆ ಇನ್ನೊಂದು ಮದುವೆ ಆಗುವಂತೆ ಕುಮ್ಮಕ್ಕು. ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದ ಸರಸ್ವತಿ ಗಂಡನಿಗೆ ಇನ್ನೊಂದು ಮದುವೆ ಆಗುವಂತೆ ಅತ್ತೆ ಮಾವ ಹೇಳುವುದನ್ನು ಕೇಳಿ ತಡೆಯಲಾರದೆ ತೀವ್ರ ಆಕ್ಷೇಪ ಮಾಡಿದಳು. ಆದರೂ ಅವಳ ಯಾವೊಂದು ಮಾತೂ ಕೇಳದೆ, ಒಂದು ದಿನ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಅತ್ತೆ ಮಾವ, ಗಂಡ ಹಿಂತಿರುಗಿ ಬರುವಾಗ ಒಂದು ಹೆಣ್ಣಿನ ಜೊತೆ ಬಂದರು. ಇದನ್ನು ನೋಡಿದ ಸರಸ್ವತಿ ಯಾರೆಂದು ಕೇಳಿದಳು.

``ನೀನು ಇನ್ನೇಲೇ ಇವಳ ಜೊತೆ ಹೊಂದಿಕೊಂಡು ಹೋಗುವ...... ನನಗೆ ಗಂಡು ಮಗು ಬೇಕು. ನಮ್ಮ ಮನೆ ಬೆಳಗಲು ಕುಲದೀಪಕ ಮಗ ಬೇಕು. ಅದಕ್ಕೆ ಇನ್ನೊಂದು ಮದುವೆ ಆಗಿದ್ದೇನೆ,'' ಎಂದು ನರಸಿಂಹ ಹಾರಿಕೆಯ ಉತ್ತರ ಕೊಟ್ಟ.

ಅಂದಿನ ರಾತ್ರಿಯೇ ತಾನು ಮಲಗುತ್ತಿದ್ದ ಕೋಣೆಯನ್ನು ಬೇರೊಬ್ಬಳಿಗೆ ಬಿಟ್ಟುಕೊಡುವ ಪರಿಸ್ಥಿತಿ ಸರಸ್ವತಿಗೆ ಎದುರಾಯಿತು. ಇನ್ನು ತನಗೆ ಇಲ್ಲಿ ಉಳಿಗಾಲವಿಲ್ಲ ಎನ್ನುವುದು ಅವಳಿಗೆ ಗೊತ್ತಾಯಿತು.

ರಾತ್ರಿಯೆಲ್ಲಾ ನಿದ್ದೆ ಬಾರದೇ ಹೊರಳಾಡಿ ಒಂದು ನಿರ್ಧಾರಕ್ಕೆ ಬಂದಳು. ಬೆಳಗ್ಗೆ ಎದ್ದ ಕೂಡಲೇ ಗಂಡ, ಅತ್ತೆ ಮಾವರಿಗೆ, ``ಇನ್ನು ನನಗೂ ನಿಮಗೂ ಯಾವುದೇ ಸಂಬಂಧ ಇಲ್ಲ. ನಾನು ನಿಮ್ಮಿಂದ ದೂರ ಹೋಗುತ್ತಿದ್ದೇನೆ,'' ಎಂದು ಹೇಳಿದ ಸರಸ್ವತಿ, ದಿಕ್ಕುತೋಚದೆ ತನಗೆ ಮದುವೆಯಲ್ಲಿ ತನ್ನ ತವರು ಮನೆಯಲ್ಲಿ ಹಾಕಿದ ಬಂಗಾರ ತೆಗೆದುಕೊಂಡು ಮನೆಯಿಂದ ಹೊರಟುಹೋದಳು. ಯಾರೊಬ್ಬರೂ ಅವಳನ್ನು ತಡೆಯುವ ಪ್ರಯತ್ನ ಸಹ ಮಾಡಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ