ಮದುವೆಗೆ ಮೊದಲು ನನ್ನ ಭಾವಿ ಪತ್ನಿ ಡಯೆಟೀಶಿಯನ್‌ ಅಂದರೆ ಆಹಾರತಜ್ಞೆ ಎಂದು ತಿಳಿದಾಗ ನನ್ನ ವೃದ್ಧ ತಂದೆ ತಾಯಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ಸಂತೋಷವಾಗಿತ್ತು. ಮನೆಯಲ್ಲಿದ್ದೇ ಯಾವ ರೀತಿಯ ಆಹಾರ ತಿನ್ನಬೇಕು, ಯಾವುದು ಪಥ್ಯ, ಯಾವುದನ್ನು ತಿಂದರೆ ತೊಂದರೆಯಾಗಬಹುದು, ಯಾವ ವಸ್ತುಗಳು ತಮ್ಮ ಆಹಾರದಲ್ಲಿ ಸೇರಿರಬೇಕು ಎಂದೆಲ್ಲಾ ಅವರಿಗೆ ತಿಳಿದಿರುತ್ತದೆ. ಜೊತೆಗೆ ಅವಳನ್ನು ಮದುವೆಯಾದ ನಂತರ ನನ್ನ ಊಟದ ಗುಣಮಟ್ಟ ಹೆಚ್ಚಾಗುತ್ತದೆ, ಎಂದೆಲ್ಲಾ ಬಹಳ ಸಂತೋಷಪಟ್ಟಿದ್ದೆ. ಒಟ್ಟಿನಲ್ಲಿ ಡಯೆಟೀಶಿಯನ್‌ ಳೊಂದಿಗೆ ಮದುವೆಯ ಬಗ್ಗೆ ನಾನು ಬಹಳಷ್ಟು ಸುಂದರ ಕನಸುಗಳನ್ನು ಕಂಡಿದ್ದೆ.

ಅಂತೂ ನಮ್ಮಿಬ್ಬರ ಮದುವೆ ಆಯ್ತು. ಈ ಪ್ರಪಂಚದಲ್ಲಿ ನಾನೇ ಅತ್ಯಂತ ಸೌಭಾಗ್ಯಶಾಲಿ ಪುರುಷ. ಅದಕ್ಕೇ ಇಷ್ಟು ಒಳ್ಳೆಯ ಗುಣವಂತಳಾದ ಹೆಂಡತಿ ಸಿಕ್ಕಿದ್ದು ಅನ್ನಿಸುತ್ತಿತ್ತು. ಹೀಗೆ ಯೋಚಿಸುವಾಗ ತಮ್ಮ ಕಣ್ಮಣಿಯನ್ನು ನನಗೆ ಕೊಟ್ಟು ಮದುವೆ ಮಾಡಿ ನನ್ನ ಜೀವನವನ್ನು ಧನ್ಯ ಮಾಡಿದ ನನ್ನ ಅತ್ತೆ ಮಾವಂದಿರ ಬಗ್ಗೆ ಕೃತಜ್ಞತೆ ಉಕ್ಕುತ್ತಿತ್ತು. ಮದುವೆಯ ನಂತರ ನಗು, ಸಂತಸದ ವಾತಾವರಣದಲ್ಲಿ ದಿನಗಳು ಕಳೆಯತೊಡಗಿದವು. ಆದರೆ ಒಂದು ಹಳೆಯ ಸೂಕ್ತಿಯಂತೆ ಒಳ್ಳೆಯ ದಿನಗಳು ಬೇಗನೆ ಮುಗಿದು ಹೋಗುತ್ತಂತೆ. ನನ್ನ ಒಳ್ಳೆಯ ದಿನಗಳೂ ಮುಗಿದುಹೋಗುವ ಸಮಯ ಬಂತು. ನನ್ನ ಸಂತಸಗಳ ಮೇಲೆ ನನ್ನನ್ನು ಕಂಡು ಕರುಬರ ದೃಷ್ಟಿ ಬಿತ್ತು. ಒಂದು ಭಾನುವಾರ ಬೆಳಗ್ಗೆ ನಾನು ಎದ್ದಾಗ ನನ್ನ ನವವಿವಾಹಿತೆ ಹೇಳಿದಳು, ``ರೀ, ಇತ್ತೀಚೆಗೆ ನಿಮಗೆ ಬೊಜ್ಜು ಬರ್ತಾ ಇದೆ. ನಿಮ್ಮ ರೂಪ ಹಾಳಾಗ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೀಗಾದರೆ ಚೆನ್ನಾಗಿರಲ್ಲ. ಅದಕ್ಕೆ ಕಾರಣ ಏನೂಂತ ಗೊತ್ತಾ?''

ನನ್ನಾಕೆಯ ಮಾತುಗಳನ್ನು ಕೇಳಿ ನಾನು ತಬ್ಬಿಬ್ಬಾದೆ. ಅವಳ ಬಾಯಿಂದ ನನ್ನ ಬೊಜ್ಜಿನ ಬಗ್ಗೆ ಕೇಳಿ ಬಹಳ ನಾಚಿಕೆಯಾಯಿತು. ಅವಳಿಗೆ ಹೇಗೆ ತಿಳಿಹೇಳಲಿ ಎಂದು ಗೊತ್ತಾಗಲಿಲ್ಲ. ಅವಳು ನನ್ನ ಬೊಜ್ಜಿನ ಬಗ್ಗೆ ಹೇಳಿದ್ದು ಕೇಳಿ ಮುಜುಗರವಾದರೂ ನನ್ನನ್ನು ರಕ್ಷಿಸಿಕೊಳ್ಳಲು ಏನಾದರೂ ಹೇಳಲೇಬೇಕಿತ್ತು. ಆದ್ದರಿಂದ ದೈನ್ಯತೆ ತುಂಬಿದ ಸ್ವರದಲ್ಲಿ, ``ಈಗ ನಾನೇನು ಮಾಡೋಕಾಗುತ್ತೆ. ಆದರೂ ನಾನು ಯಾವುದಾದರೂ ಜಿಮ್ ಗೆ ಸೇರಿಕೊಂಡು ಈ ಬೊಜ್ಜನ್ನು ನಿಯಂತ್ರಿಸ್ತೀನಿ. ಇದರ ಬಗ್ಗೆ ನಿನ್ನ ಚಿಂತೇನ ದೂರ ಮಾಡಲು ಪ್ರಯತ್ನಿಸ್ತೀನಿ,'' ಎಂದೆ.

``ನೀವಂತೂ ಕಾಯಿಲೆ ಕೈಮೀರಿ ಹೋದ್ಮೇಲೆ ಔಷಧಿ ತಗೊಳ್ಳೋ ಮಾತಾಡ್ತೀರಿ. ಇಷ್ಟು ಬೊಜ್ಜು ಬಂದ ಮೇಲೆ ಅದನ್ನು ನಿಯಂತ್ರಿಸೋದಕ್ಕೆ ಪ್ರಯತ್ನಿಸ್ತೀನಿ ಅಂತೀರಿ, ನಿಜವಾದ ವಿಷಯ ನೀವು ಅರ್ಥ ಮಾಡಿಕೊಳ್ತಿಲ್ಲ. ಈ ವಯಸ್ಸಿಗೇ ಬೊಜ್ಜು ಏಕೆ ಬಂತು ಅಂತ ಕಾರಣ ಹುಡುಕಬೇಕು. ಇದಕ್ಕೆ ಕಾರಣ ಏನು ಗೊತ್ತಾ? ನಿಮ್ಮ ಆಹಾರ ಪದ್ಧತಿ. ನೀವು ಕರಿದ ತಿಂಡಿಗಳನ್ನು ಹೆಚ್ಚಾಗಿ ತಿಂತೀರಿ.

``ಅದರಿಂದಾಗಿ ನಿಮ್ಮ ಶರೀರದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿದೆ. ಅದರಿಂದಲೇ ಈ ಬೊಜ್ಜು. ಹೊಸದಾಗಿ ಮದುವೆಯಾದೋರು ನಾವು. ಅದಕ್ಕೇ ನಾನು ಏನೂ ಹೇಳಲಿಲ್ಲ. ಆದರೆ ಇನ್ನು ಮುಂದೆ ನಾನು ನಿಮ್ಮ ಊಟದ ಅಭ್ಯಾಸಗಳಿಗೆ ಸಂಪೂರ್ಣ ಗಮನ ಕೊಡ್ತೀನಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ