ಹಲೋ....! ಏನು ದೋಸ್ತ, ಊಟ ಆಯ್ತಾ.....? ಎಲ್ಲರೂ ಆರಾಮ ಇದ್ದಾರಾ....? ಮತ್ತೇನು ವಿಶೇಷ....! ಎಂದೆಲ್ಲಾ ಕೇಳುತ್ತಲೇ ಮೊಬೈಲ್ ‌ನಲ್ಲಿ ಪುಷ್ಕಳ ಮಾತು ನುರಿಯುವ ಈ ಮಂದಿಯ ಕಿರಿಕಿರಿ ಮಧ್ಯರಾತ್ರಿಯಾದರೂ ತೀರಿರುವುದಿಲ್ಲ ಎಂದರಿತೇ ಗೋವಿಂದರಾಜು ಟಿ.ವಿ.ಯಲ್ಲಿ ಕನ್ನಡ ವಾರ್ತೆ ಮುಗಿದದ್ದೇ ಮೊಬೈಲ್ ಫೋನ್‌ ಗಂಟಲನ್ನು ಹಿಚುಕಿಬಿಡುತ್ತಿದ್ದ. ಬೆಳಗ್ಗೆ ಎದ್ದು ಅದರ ಗಂಟಲ ಗುಂಡಿಯನ್ನು ಸಡಿಲಿಸಿದ್ದೇ ತಡ, ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಮೆಸೇಜ್‌ ಗಳು ಒಂದೊಂದಾಗಿ ಬಿಕ್‌ ಹಿಡಿದಂತೆ ಹೊರಬರುತ್ತಿದ್ದವು. ಅಂಥ ಹತ್ತಾರು ಮೆಸೇಜ್‌ ಗಳ ಸಾಲಲ್ಲಿ ಒಂದಾದರೂ ಕ್ರಿಯೇಟಿವ್ ‌ಆಗಿರಬೇಕಲ್ಲ....? ಎಲ್ಲ ಇನ್ನೊಬ್ಬರಿಂದ ದಬ್ಬಿಸಿಕೊಂಡು.... ದಬ್ಬಿಸಿಕೊಂಡು ಬಂದವುಗಳೇ.... ಯಾವುದೋ ಕವಿಯ ಸಾಲು.... ಎಲ್ಲೋ ಓದಿದ್ದು.... ಕೇಳಿದ್ದು.... ಹೇಳಿದ್ದು.... ಹೀಗೆ ಈ ಹಳಸಲು ಮೆಸೇಜ್‌ ಗಳದ್ದೇ ಒಂದು ದೊಡ್ಡ ಕಿರಿಕಿರಿ.

ಗೋವಿಂದರಾಜು ಸಿಟ್ಟಿನಿಂದ ಆ ಮೊಬೈಲ್ ‌ಸ್ಕ್ರೀನ್‌ ನ್ನು ದಿಟ್ಟಿಸುತ್ತಿರುವಾಗಲೇ ಮತ್ತೊಂದು ಮೆಸೇಜ್‌ ಅಲ್ಲಿ ಟಣ್ಣನೇ ಮಿಂಚಿ ಮಾಯವಾಯಿತು. ಮೊಬೈಲ್ ‌ಕೈಗೆತ್ತಿಕೊಂಡು ಓದುತ್ತಿರುವಂತೆ ಅದು ದಾವಣಗೆರೆಯಲ್ಲಿರುವ ತನ್ನ ಕ್ಲಾಸ್‌ ಮೇಟ್‌ ಸರೋಜಾಳದು ಎಂದು ಗೊತ್ತಾಯಿತು. ಈ ಸರೋಜಾ ಮುಂಚಿನಿಂದಲೂ ಹಾಗೆಯೇ.... ತನ್ನ ಮೊಬೈಲ್ ‌ಕರೆನ್ಸಿ ಖರ್ಚು ಮಾಡದೇ ಹಾಗೇ ಉಳಿಸಿಕೊಳ್ಳಲು ಪರಿಚಯದವರಿಗೆ ಬರೀ ಮಿಸ್ಡ್ ಕಾಲ್ ‌ಕೊಡುವುದು, ಇಲ್ಲವೇ ಹೀಗೆ ಮೆಸೇಜ್‌ ಕೊಡುವುದು ಮಾತ್ರ ಮಾಡುತ್ತಿದ್ದಳು. ತೀರಾ ಆತ್ಮೀಯರ ಭಯಂಕರ ಸುದ್ದಿಗಳನ್ನು ರವಾನಿಸಲು ಮಾತ್ರ ಆಕೆ ಖುದ್ದಾಗಿ ಫೋನ್‌ ಮಾಡುವುದಿತ್ತು. ಇಂಥ ಸರೋಜಾ ನೋಡಲು ಸ್ಛುರದ್ರೂಪಿಯಾಗಿದ್ದರಿಂದ ಆಕೆ ಇನ್ನೂ ಸ್ನಾತಕೋತ್ತರ ಹಂತದ ಮೊದಲ ಸೆಮಿಸ್ಟರ್‌ ನಲ್ಲಿರುವಾಗಲೇ ಡಿಮ್ಯಾಂಡ್‌ ಬಂದಿತ್ತು. ನಮ್ಮವರು ಬೆಸಗೊಂಡರು.... ಶುಭಲಗ್ನ ಆಯಿತು. ಹುಡುಗ ಎಂಜಿನಿಯರ್‌ಅಪ್ಪ ಅಮ್ಮನಿಗೆ ಒಬ್ಬನೇ ಮಗ, ಹೆಸರು ಪ್ರದೀಪ. ದಾವಣಗೆರೆಯ ವಿನೋಬಾನಗರದಲ್ಲಿ ಭವ್ಯ ಬಂಗಲೆಯೊಂದಿಗೆ ಚಳ್ಳಕೇರಿಯಲ್ಲಿ 100 ಎಕರೆ ಜಮೀನಿದೆ, ಮಾಯಕೊಂಡದಲ್ಲಿಯೂ ಒಂದಷ್ಟು ಪೂರ್ವಜರ ಆಸ್ತಿ ಇದೆ. ಅವನಪ್ಪ, ಅಮ್ಮ ಇಬ್ಬರೂ ಮಾಯಕೊಂಡದಲ್ಲಿಯೇ ಇರೋದು. ಹೀಗೆಲ್ಲಾ ಸರೋಜಾ ತನ್ನ ಜೊತೆಗೆ ಓದುವ ಗೆಳತಿಯರ ಎದುರು ತನ್ನ ಗಂಡ ನಾಗುನ ಆಸ್ತಿಯ ವಿವರವನ್ನು ನೀಡಿ ಅವರಿಂದಲೇ ಕಬ್ಬಿನ ಹಾಲು ಕುಡಿದ ಬಿಲ್ ‌ಕಕ್ಕಿಸುವುದಿತ್ತು. ಮದುವೆ ಆದ ಮೇಲೆ ಬಹುಶಃ ಸರೋಜಾ ಮಿಸ್ಡ್ ಕಾಲ್ ‌ಮಾಡಲಿಕ್ಕಿಲ್ಲ ಎಂದು ಬಗೆದ ಗೋವಿಂದರಾಜುವಿಗೆ ತನ್ನ ನಿರೀಕ್ಷೆ ಹುಸಿಯಾದ ಬಗ್ಗೆ ಬೇಸರ ಇತ್ತು. ಸರೋಜಾ ತನ್ನ ಮದುವೆಯ ಸಂದರ್ಭದಲ್ಲಿ ಎಲ್ಲ ಕ್ಲಾಸ್‌ ಮೇಟ್ಸ್ ನ್ನು ಮದುವೆಗೆ ಆಹ್ವಾನಿಸಿದ್ದಳು. ಆಮಂತ್ರಣ ಪತ್ರಿಕೆ ಕೊಡುವಾಗ, ``ನಮ್ಮ ಮನೆಯಲ್ಲಿರೋ ವಸ್ತುಗಳನ್ನೇ ಗಿಫ್ಟ್ ಆಗಿ ಕೊಡಬೇಡಿ, ಏನಾದರೂ ವಿಶೇಷವಾಗಿರೋದನ್ನು ಕೊಡಿ,'' ಎಂದು ಹೇಳಿದ್ದು ಕೇಳಿ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದರು.

ಗೋವಿಂದರಾಜು, ``ನಾವೇನೂ ಕೊಡುವವರಲ್ಲ. ಏಕೆಂದರೆ ನಿನ್ನ ಮಾವನ ಮನೆಯವರು ಆಮಂತ್ರಣದಲ್ಲಿ ಆಶೀರ್ವಾದವೇ ಉಡುಗೊರೆ ಎಂದು ಹಾಕಿರುವುದಿದೆ, ಇಲ್ನೋಡು.....'' ಎಂದು ಸರೋಜಾಗೆ ತೋರಿಸಿದ.

ಆಕೆ ನಗುತ್ತಲೇ, ``ಮಾರಾಯ, ಅದೆಲ್ಲಾ ಹೀಗೆ ಹಾಕಿರ್ತಾರೆ.... ನೀವು ಮಾತ್ರ ಬರಿಗೈಲಿ ಬರಬೇಡಿ,'' ಎಂದು ತಾಕೀತು ಮಾಡಿದಾಗ ಎಲ್ಲರೂ ಗೊಳ್ಳೆಂದು ನಕ್ಕಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ