``ಆಂಟಿ, ಕಿಟ್ಟೀನ ಕರೀರಿ,'' ಕಿಟ್ಟಿಯ ಗೆಳೆಯ ಉಮೇಶ ಬಾಗಿಲಲ್ಲಿ ನಿಂತುಕೊಂಡು ಹೇಳಿದ.

``ಒಳಗೆ ಬಾರೋ ಪುಟ್ಟ, ಕಿಟ್ಟಿ ಇಲ್ಲ, ಹೊರಗಡೆ ಆಡ್ತಿರಬೇಕು ಅಥವಾ ಪಾರ್ಕಿಗೆ ಹೋಗಿರಬೇಕು. ನೀನು ಒಳಗೆ ಬಾ.'' ಸುನೀತಾ ಹೇಳಿದಳು.

ಸುನೀತಾಗೆ ಉಮೇಶ ಬಹಳ ಇಷ್ಟವಾಗಿದ್ದ. ದುಂಡುದುಂಡಗೆ, ಬೆಳ್ಳಗಿದ್ದ ಉಮೇಶ ಗುಡ್ಡ ಗಾಡಿನ ಹುಡುಗ. ಬೆಟ್ಟದ ಮಕ್ಕಳು ಬಹಳ ಮುದ್ದಾಗಿ, ಚೆನ್ನಾಗಿ ಇರ್ತಾರೆ.

`` ಇಲ್ಲ ಆಂಟಿ, ನಿಮ್ಮ ಮನೆಗೆ ಹೋಗಬಾರದು ಅಂತ ನನ್ನಮ್ಮ ಹೇಳಿದ್ದಾರೆ. ನೀವು ತುಂಬಾ ಜಗಳ ಆಡ್ತೀರಂತೆ, ಕಿರುಚಾಡ್ತೀರಂತೆ,'' ಉಮೇಶ ಮುಗ್ಧತೆಯಿಂದ ಹೇಳಿ ಓಡಿಹೋದವು. ಅದರೆ ಸುನೀತಾಗೆ ಆ ಪುಟ್ಟ ಹುಡುಗ ತನ್ನ ಶರೀರದಲ್ಲಿ ಅಗಣಿತ ಮುಳ್ಳುಗಳನ್ನು ಚುಚ್ಚಿದನೇನೋ ಎಂದು ಅನಿಸಿತು. ಅವಳ ಮನಸ್ಸು ರಕ್ತಸಿಕ್ತವಾದಂತಾಯಿತು. ಎಷ್ಟೊಂದು ಪ್ರಶ್ನೆಗಳು, ಎಷ್ಟು ಒಳನೋಟಗಳು ಅವಳ ಒಳಗೆ ಏಳುತ್ತಾ ಬೀಳುತ್ತಾ ಇದ್ದೀ. ಶರೀರದಲ್ಲಿ ಶಕ್ತಿಯೇ ಇಲ್ಲವೇನೋ ಎಂಬಂತೆ ಅವಳು ಸೋಫಾ ಮೇಲೆ ಹಾಗೇ ಕುಳಿತುಬಿಟ್ಟಳು. ಒಂಟಿಯಾಗಿ ಕುಳಿತ ಅವಳ ಮನಸ್ಸಿನೊಳಗೆ ಕೋಲಾಹಲ ಉಂಟಾಯಿತು ಮತ್ತು ಆಕೆ ಸ್ವತಃ ಕಳೆದಹೋದ ವಿಷಯಗಳ ವಿಶ್ಲೇಷಣೆ ಮಾಡತೊಡಗಿದಳು.

ತಾನು ನಿಜವಾಗಲೂ ಜಗಳಗಂಟಿಯೇ? ಅವನು ಸರಿಯಾಗೇ ಹೇಳಿದ್ದ. ಅವಳು ಕಿರುಚುವುದು ಮನೆಯ ಹೊಸಿಲು ದಾಟಿ ಹೊರಗೂ ಕೇಳಿಸುತ್ತಿರಬೇಕು. ಕೇಳಿದವರು ಹೀಗೆ ಹೇಳುತ್ತಾರೆ. ಬಹುಶಃ ಇದೇ ಕಾರಣದಿಂದ ಅಕ್ಕಪಕ್ಕದ ಜನ ಅವಳ ಮನೆಗೂ ಬರುವುದಿಲ್ಲ. ಅವಳನ್ನು ತಮ್ಮ ಮನೆಗೂ ಕರೆಯುವುದಿಲ್ಲ. ನೆರೆಹೊರೆಯವರೇನು ಬಂಧುಗಳು ಕೂಡ ಅಷ್ಟೇ ಅವಳಿಂದ ದೂರ ಇರಲು ನೋಡುತ್ತಾರೆ. ಅವಳ ಹತ್ತಿರ ಮಾತಾಡಲು ಹೆದರುತ್ತಾರೆ. ಅವಳು ಕಟ್ಟಿದ್ದ ಸಾಮ್ರಾಜ್ಯದಲ್ಲಿ ಅವಳು ಒಬ್ಬಳೇ ಇರಬೇಕಾಗುತ್ತದೇನೋ.

ಎಲ್ಲಾ ತಪ್ಪು ತನ್ನೊಬ್ಬಳದೇ…. ಬಾಲ್ಯದಿಂದಲೂ ಇಂತಹದೇ ವಾತಾವರಣ ನೋಡಿದ್ದಾಳೆ. ಅಪ್ಪ ಅಮ್ಮ ಯಾವಾಗಲೂ ಜಗಳವಾಡುತ್ತಿದ್ದುದನ್ನು ಕಂಡಿದ್ದಾಳೆ. ಯಾವ ವಾತಾವರಣದಲ್ಲಿ ಮಕ್ಕಳು ಬೆಳೆದಿರುತ್ತಾರೋ ಅದರ ಪ್ರಭಾವ ಅವರ ವ್ಯಕ್ತಿತ್ವದ ಮೇಲೂ ಬೀಳುತ್ತದೆ. ಜೀವನ ನಡೆಸುವ ರೀತಿಯನ್ನು ಅದಕ್ಕೆ ಅನುರೂಪವಾಗಿ ಮಾಡಿಕೊಳ್ಳುತ್ತಾರೆ.

ಅವರ ದೃಷ್ಟಿ, ವ್ಯವಹಾರ ಎಲ್ಲ ಪರಿಸರದ ಅನುಸಾರ ರೂಪುಗೊಳ್ಳುತ್ತದೆ ಮತ್ತು ಬಾಲ್ಯದ ಅಡಿಪಾಯ ಎಷ್ಟು ಭದ್ರವಾಗಿರುತ್ತದೆಂದರೆ ದೊಡ್ಡವರಾಗುವವರೆಗೆ ಅದು ಬೇರೂರಿಬಿಟ್ಟಿರುತ್ತದೆ. ಆದರೆ ಇದರಲ್ಲಿ ಸುನೀತಾಳ ತಪ್ಪೇನು? ಸಕಾಲದಲ್ಲೇ ತನ್ನನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡದ್ದೇ ಅವಳ ತಪ್ಪು. ತಾಯಿ ಮಾತುಮಾತಿಗೆ ತಂದೆಯ ಜೊತೆ ಜಗಳವಾಡುತ್ತಿದ್ದಳು. ಮನೆಯ ಹತ್ತು ಹಲವು ಕೊರತೆಗಳು ಅವಳನ್ನು ಕಾಡುತ್ತಿದ್ದವು. ನಾಲ್ಕು ಮಕ್ಕಳು ಬೇರೆ. ತಂದೆ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಆರಾಮ ಬಯಸುವ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅವನ ಅಭ್ಯಾಸದಿಂದ ಬೇಸತ್ತ ತಾಯಿ ರೇಗಾಡುತ್ತಿದ್ದಳು. ಅವಳ ಮನದಲ್ಲಿ ಕಹಿ ತುಂಬಿಕೊಂಡಿತ್ತು. ಇದರಿಂದ ತಂದೆಯ ಮೇಲೆ ಯಾವುದೇ ಪರಿಣಾಮವಾಗುತ್ತಿರಲಿಲ್ಲ. ವಿಷಯ ದೊಡ್ಡದಾದಾಗ ಮನೆಯಿಂದ ಹೊರಗೆ ಹೋಗುತ್ತಿದ್ದರು. ಹತಾಶಳಾದ ತಾಯಿ ಕಣ್ಣೀರನ್ನು ಒರೆಸಿಕೊಂಡು ಹೇಗೋ ಹಣ ಹೊಂದಿಸುವ ಉಪಾಯ ಹುಡುಕತೊಡಗುತ್ತಿದ್ದಳು. ತಂದೆಗೆ ಊಟದಲ್ಲಿ ಇಷ್ಟವಾದ ಪದಾರ್ಥ ಇಲ್ಲದಿದ್ದರೆ ತಾಯಿಯ ಮೇಲೆ ಕೈಮಾಡುತ್ತಿದ್ದರು, ಬೈಯುತ್ತಿದ್ದರು. ನಾಲ್ಕು ಮಕ್ಕಳು ಮೂಲೆಯಲ್ಲಿ ಮುದುರಿಕೊಳ್ಳುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ