ಕಥೆ - ಕೆ. ಪ್ರಿಯಂವದಾ 

 ಕಳುಹಿಸಿದವರು ಯಾರೆಂದು ತಿಳಿದಾಗ ಅಚ್ಚರಿಯೋ ಅಚ್ಚರಿ! ಹಾಗಾದರೆ ಕಳುಹಿಸಿದ್ದು ಯಾರು...?

``ಡ್ಯಾಡಿ, ಇಂದು ನೀವು ಮಮ್ಮಿಗೆ ಏನು ಗಿಫ್ಟ್ ಕೊಡುತ್ತಿದ್ದೀರಿ?'' ಮೇಘನಾ ಬೆಳಗ್ಗೆ ಏಳುತ್ತಿದ್ದಂತೆ ಅತಿ ಉತ್ಸಾಹದಿಂದ ತಂದೆಯನ್ನು ಕೇಳಿದಳು.

``ಇಂದು ಏನು ವಿಶೇಷ?'' ನಾನು ಹುಬ್ಬೇರಿಸಿ ಮಗಳತ್ತ ನೋಡಿದೆ.

``ನೀವು ಸರಿ ಡ್ಯಾಡಿ. ಪ್ರತಿ ವರ್ಷದ ಹಾಗೆ  ಈ ಸಲ ಮರೆತುಬಿಟ್ಟಿರಾ? ಇಂದು ವ್ಯಾಲೆಂಟೈನ್‌ ಡೇ! ನೀವು ಪ್ರೀತಿಸುವವರಿಗೆ ಇಂದಿನ ದಿನ ಏನಾದರೂ ಉಡುಗೊರೆ ಕೊಡೋದು ಒಂದು ಪದ್ಧತಿ.''

``ಅದು ನನಗೂ ಗೊತ್ತು. ಆದರೆ ವಿದೇಶೀಯರ ಪದ್ಧತಿಯನ್ನು ನಾನೇಕೆ ಅನುಸರಿಸಬೇಕು ಅಂತೀನಿ.''

``ಡ್ಯಾಡಿ, ಇದು ಸ್ವದೇಶ ವಿದೇಶದ ವಿಷಯವಲ್ಲ, ನಮ್ಮ ಪ್ರೀತಿಯನ್ನು ವ್ಯಕ್ತಪಡಿಸೋ ರೀತಿ.''

``ನಿಜವಾದ ಪ್ರೀತಿಯನ್ನು ಪ್ರಕಟಪಡಿಸಬೇಕು ಅಂತ ನನಗೆ ಅನ್ನಿಸೋದಿಲ್ಲ. ಸೀಮಾ ಮತ್ತು ನನ್ನ ನಡುವಿನ ಪ್ರೀತಿ ಜನ್ಮಜನ್ಮಾಂತರದ್ದು.''

``ಮೇಘಾ, ಹೋಗಿ ಹೋಗಿ ನೀನು ಅವರಿಗೆ ಅರ್ಥ ಮಾಡಿಸೋಕ್ಕೆ ಪ್ರಯತ್ನಪಡುತ್ತಾ ಇದ್ದೀಯಾ?'' ತಂದೆ ಮಗಳ ಮಾತಿನ ಮಧ್ಯೆ ಬಾಯಿಹಾಕುತ್ತಾ ನನ್ನ ಅರ್ಧಾಂಗಿ ಹೇಳಿದಳು, ``ಹಣ ಖರ್ಚು ಮಾಡಬೇಕಾದ ವಿಷಯವನ್ನು ಇವರ ಜೊತೆ ಮಾತನಾಡೋದೇ ದಂಡ. ಇವರು 10 ರೂ.ನ ಗಿಫ್ಟ್ ಕೂಡ ನನಗೆ ತಂದು ಕೊಡೋದು ಬೇಡ.''

``ಎಂಥ ಮಾತನಾಡುತ್ತೀಯಾ ಸೀಮಾ? ನಾನು ಪ್ರತಿ ತಿಂಗಳೂ ನನ್ನ ಪೂರ್ತಿ ಸಂಬಳವೆನ್ನು ನಿನ್ನ ಕೈಗೇ ತಂದು ಕೊಡೋದಿಲ್ಲವೇನು?'' ನಾನು ನೊಂದು ನುಡಿದೆ.

``ಮತ್ತೆ, ಕಾಸು ಕಾಸಿಗೂ ಲೆಕ್ಕ ಕೊಡಲಿಲ್ಲ ಅಂದರೆ ಜಗಳಕ್ಕೆ ಬರುತ್ತೀರಿ. ನನ್ನ ಸಂಬಳವಲ್ಲ ಫ್ಲಾಟ್‌ ಮತ್ತು ಕಾರ್‌ನ ಸಾಲದ ಕಂತು ಕಟ್ಟೋದಕ್ಕೆ ಹೊರಟು ಹೋಗುತ್ತದೆ. ನನಗೆ ಬೇಕಾದ ಹಾಗೆ ಖರ್ಚು ಮಾಡೋದಕ್ಕೆ ನೂರು ರೂಪಾಯಿ ಕೂಡ ಸಿಗೋದಿಲ್ಲ.''

``ನಿನ್ನ ಬೀರುವಿನಲ್ಲಿ ಸೀರೆಗಳ ರಾಶಿ ಇಟ್ಟುಕೊಂಡು ನನ್ನನ್ನು ದೂರುತ್ತಾ ಇದ್ದೀಯಾ? ಏನು ಕಾಲ ಬಂತಪ್ಪ, ಮಗಳ ದೃಷ್ಟಿಯಲ್ಲಿ ಗಂಡನನ್ನು ಸಣ್ಣವನನ್ನಾಗಿ ಮಾಡೋದಕ್ಕೆ ಸುಳ್ಳು ಹೇಳುತ್ತಾ ಇದ್ದೀಯಾ?''

``ಈ ನಾಟಕ ಎಲ್ಲ ಬಿಟ್ಟುಬಿಡಿ. ಬೀರುವಿನಲ್ಲಿರುನ ಸೀರೆಗಳಲ್ಲಿ ನೀವು ಕೊಡಿಸಿರೋದು ಎಷ್ಟು ಹೇಳಿ ನೋಡೋಣ. ಗೌರಿ ಹಬ್ಬಕ್ಕೆ ನನ್ನ ತವರಿನಿಂದ ಸೀರೆಗಳು ಸಿಗುತ್ತಾ ಇರೋದರಿಂದ ಸರಿ ಹೋಯಿತು. ಇಲ್ಲದಿದ್ದರೆ ನನ್ನ ಕಲೀಗ್ಸ್ ಮುಂದೆ ನಾನು ತಲೆ ತಗ್ಗಿಸಬೇಕಾಗುತ್ತಿತ್ತು.''

``ಡ್ಯಾಡಿ, ಒಂದೆರಡು ದಿನ ಮಮ್ಮಿನ ಟೂರ್‌ ಮಾಡಿಸಿಕೊಂಡು ಬನ್ನಿ. ಅವರಿಗೆ ಖುಷಿ ಆಗುತ್ತೆ,'' ನಮ್ಮಿಬ್ಬರ ವಾದವನ್ನು ತಡೆಯುವುದಕ್ಕಾಗಿ ಮೇಘನಾ ವಿಷಯವನ್ನು ಬದಲಿಸಿದಳು.

``ನೀನು ಸುಮ್ಮನಿರು ಮೇಘಾ, ನನಗೆ ಈ ಮನೆಯ ಜಂಜಾಟದಿಂದ ಹೊರಗೆ ಹೋಗೋ ಭಾಗ್ಯ ಇಲ್ಲ ಬಿಡು,'' ಸೀಮಾ ನಾಟಕೀಯವಾಗಿ ಹಣೆ ಚಚ್ಚಿಕೊಳ್ಳುತ್ತಾ ಹೇಳಿದಳು.

``ಯಾಕೆ ಸೀಮಾ, ನೀನು ಪ್ರತಿ ವರ್ಷ ಒಂದೆರಡು ವಾರ ನಿನ್ನ ತವರು ಮನೆಗೆ ಹೋಗಿ ಬರುತ್ತೀಯ ತಾನೇ?'' ನಾನು ಪ್ರತಿಭಟಿಸಿದೆ.

``ಡ್ಯಾಡಿ, ನಾನು ಹೇಳುತ್ತಾ ಇರೋದು, ಯಾವುದಾದರೂ ಹಿಲ್ ‌ಸ್ಟೇಷನ್‌ ಅಂದರೆ ಊಟಿ ಅಥವಾ ಮಡಿಕೇರಿ ಕಡೆ ಸುತ್ತಾಡಿ ಬರುವ ವಿಷಯ,'' ಮೇಘಾ ಬಿಡಿಸಿ ಹೇಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ