ತಾಯಿ ತಂದೆಯರ ಒಬ್ಬಳೇ ಮಗಳಾದ ಲಾಸ್ಯಾ ಅವರ ಪ್ರಪಂಚವಾಗಿದ್ದಳು. ಓದಲಿಕ್ಕಾಗಿ ಬೇರೆ ಊರಿಗೆ ಹೋದ ಅವಳು, ಪ್ರೇಮಕ್ಕೆ ಸಿಲುಕಿ ತಾಯಿ ತಂದೆಯರ ಆಸೆಗೆ ವಿರೋಧವಾಗಿ, ಮದುವೆಯಾಗಿ ಹೊರಟುಹೋದಳು. ಇದನ್ನು ಅವರು ಸಹಜವಾಗಿ ಸ್ವೀಕರಿಸಲು ಸಾಧ್ಯವಾಯಿತೇ......?

``ಎಲ್ಲಾ ಡಾಕ್ಯುಮೆಂಟ್ಸ್ ಸರಿಯಾಗಿ ಇಟ್ಟುಕೊಂಡಿದ್ದೀಯಾ....?'' ಫೋಟೋಕಾಪಿ ಎಲ್ಲವೂ ಎರಡೆರಡು ಸೆಟ್‌ ರೆಡಿ ಇರಲಿ. ಡಾಕ್ಯುಮೆಂಟ್ಸ್ ವೆರಿಫಿಕೇಶನ್‌ ಜಾಗ ಇಲ್ಲಿಂದ ಬಹಳ ದೂರ ಇದೆ. ಬೇಕಂದ್ರೆ ಅಲ್ಲಿ ಕಾಪೀನೂ ಸಿಗಲ್ಲ. ಏನಾದರೂ ಮರೆತರೆ ನಾನು ಜವಾಬ್ದಾರಿ ಅಲ್ಲ ಮಗ,'' ಎಂದು ಸುನಂದಾ ಟೀಚರ್‌ ಮಗಳು ಲಾಸ್ಯಾಳಿಗೆ ಹೇಳಿದರು.

ಲಾಸ್ಯಾ ಆಗ ತಾನೇ ಪಿ.ಯು.ಸಿ ಮುಗಿಸಿ ಎಂಜಿನಿಯರಿಂಗ್‌ ಬೇಡ, ಮೆಡಿಸಿನ್‌ ಓದಬೇಕೆಂಬ ಹಂಬಲ ಇಟ್ಟುಕೊಂಡಿದ್ದಳು. ``ನೀನು ಏನಾದರೂ ಓದು ಆದರೆ 100% ಎಫರ್ಟ್‌ ಹಾಕಬೇಕು,''  ಎಂದು ಮಗಳು ಲಾಸ್ಯಾಳನ್ನು ಜಾಗೃತಗೊಳಿಸುತ್ತಿದ್ದರು ಸುನಂದಾ.

ಸರದಿ ಬಂದಾಗ ಕೌನ್ಸಿಲಿಂಗ್‌ ಗೆ ಹೋದರೆ ಅಲ್ಲಿ ಬಹಳ ಕಾಂಪಿಟೇಶನ್‌ ಇದ್ದ ಕಾರಣ ಅಲೋಪತಿಗೆ ಸೀಟ್‌ ಸಿಗಲಿಲ್ಲ. ಸಿಕ್ಕಿದ್ದು ಆಯುರ್ವೇದಿಕ್‌ ಸೀಟು. ಇದೂ ಕೂಡ ಚೆನ್ನಾಗಿದೆ ಎಂದು ಲಾಸ್ಯಾ ಬಿ.ಎ.ಎಂ.ಎಸ್‌ ಓದಲು ನಿರ್ಧರಿಸಿದಳು. ಬೆಂಗಳೂರಿನ ಹಿರಿಯ ಕ್ಯಾಂಪಸ್‌ ನಲ್ಲಿ ಲಾಸ್ಯಾಳ ಓದು ಪ್ರಾರಂಭವಾಯಿತು.

ಮಗಳು ಇಷ್ಟಪಟ್ಟು ಕಲಿಯುತ್ತಿದ್ದಾಳೆ ನಮಗೇನು ಎಂಬಂತೆ ಲಾಸ್ಯಾಳ ಅಮ್ಮ, ಅಪ್ಪ ನೆಮ್ಮದಿ ತಂದುಕೊಂಡರು. ವಾರ, ಎರಡು ವಾರಗಳಿಗೊಮ್ಮೆ ಬೆಂಗಳೂರಿಗೆ ಹೋಗಿ ಮಗಳನ್ನು ನೋಡಿಕೊಂಡು ಬರುವುದು, ಸುತ್ತಾಡಿಸುವುದು, ಯಾವುದಕ್ಕೂ ಫೀಲ್ ಆಗಬಾರದೆಂದು ಅವಳಿಗೆ ಬೇಕಾದ ವಸ್ತುಗಳನ್ನು ಒಂದು ಹೆಚ್ಚಿಗೆ ಎಂಬಂತೆ ತೆಗೆದು ಕೊಡುತ್ತಿದ್ದರು.

`ನನ್ನ ಆಯ್ಕೆಯ ವಿಷಯವನ್ನೇ ತೆಗೆದುಕೊಂಡಿದ್ದೇನೆ. ಅಮ್ಮ ಹೇಳಿದಂತೆ ಬಹಳ ಚೆನ್ನಾಗಿ ಓದಿಕೊಳ್ಳಬೇಕು,' ಎಂಬ ಆಸೆ ಲಾಸ್ಯಾಳಲ್ಲಿಯೂ ಇತ್ತು. ಆದರೆ ಸ್ವಲ್ಪ ಹೋಮ್ ಸಿಕ್‌. ಸಂಜೆ ಆಗುತ್ತಲೇ ಎಳೆ ಮಕ್ಕಳು ಗಲಾಟೆ ಮಾಡುವಂತೆ ಫೋನ್‌ ಹಿಡಿದು ರಾದ್ಧಾಂತ ಮಾಡಿಬಿಡುತ್ತಿದ್ದಳು.

ಮಗಳು ಹಾಗೆ ಅಳುವಾಗ ಅಪ್ಪ, ``ನಿನಗಿಷ್ಟ ಇಲ್ಲ ಅಂದರೆ ಬಂದುಬಿಡು,'' ಎಂದು ಸಮಾಧಾನಿಸುವ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳಲ್ಲಿ ಲಾಸ್ಯಾ ಮನೆ ಕಡೆ ಅಷ್ಟಾಗಿ ಗಮನ ಕೊಡದೆ ಓದು ಮುಂದುವರಿಸಿದಳು. ಅವಳು ಓದುತ್ತಿದ್ದ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದರು. ಹಾಗೆ ಬಂದ ರೋಗಿಗಳ ಪಟ್ಟಿ ಬರೆದುಕೊಳ್ಳುವಾಗ, ಲಾಸ್ಯಾಳಿಂದ ತಪ್ಪಾಗಿ ಹೋಗುತ್ತಿತ್ತು. `ಮೊದಲನೇ ಪುಟದಲ್ಲಿ ಹೀಗಾಯಿತಲ್ಲ ಹಿರಿಯ ವೈದ್ಯರು ಕೇಳಿದರೆ ಏನು ಹೇಳುವುದು.....?' ಎಂದು ಗಂಜಿಗೆ ಬಿದ್ದ ನೊಣದಂತೆ ಲಾಸ್ಯಾ ಒದ್ದಾಡುತ್ತಿದ್ದಳು. ಲಾಸ್ಯಾಳ ಪೇಚಾಟ ನೋಡಲಾಗದ ಎಂ.ಡಿ. ಓದುತ್ತಿದ್ದ ವೈದ್ಯ ಹರ್ಷ, ಯಾರಿಗೂ ಕಾಣದಂತೆ ಬೇರೆಯದೇ ಪುಟಕ್ಕೆ ರೋಗಿಗಳ ಪ್ರವರವನ್ನು ವರ್ಗಾಯಿಸಿಬಿಟ್ಟ. ಅವಳ ತಪ್ಪು ಯಾರಿಗೂ ತಿಳಿಯಲಿಲ್ಲ.  ಆಗಂತೂ ಲಾಸ್ಯಾಳಿಗೆ ಅನುಭವಿಸಲಾರದಷ್ಟು ಸಂತಸವಾಯಿತು. ಅವಳ ಪಾಲಿಗೆ ಅವನೇ ಹೀರೋ ಎನಿಸಿಬಿಟ್ಟ. ಪರಿಚಯ, ಸ್ನೇಹ, ಮದುವೆಯವರೆಗೂ ಬಂದು ತಲುಪಿತು. ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಪಾರ್ಟಿ ಮಾಡಲು ಹೋದರು ಅನಿರೀಕ್ಷಿತವಾಗಿ ಉಂಗುರವನ್ನು ಬದಲಾಯಿಸಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ