ಪವಿತ್ರಾಳಿಗೆ ಕಪಾಟಿನಲ್ಲಿ ಇಟ್ಟ ಒಂದು ಸೀರೆ ಜಗತ್ತಿನ ಅತ್ಯಂತ ಬೆಲೆಬಾಳು ವಸ್ತುವಾಗಿತ್ತು. ಅದೊಂದು ದಿನ ಅವಳು ಅದೇ ಸೀರೆಯನ್ನು ಕೈಗೆತ್ತಿಕೊಂಡು ನೋಡತೊಡಗಿದಳು. ಅವಳಿಗೆ ಒಮ್ಮೆಲೆ ಅಳು ಬಂದಿತು. ಆಗ ಆಗಿದ್ದಾದರೂ ಏನು......?

ಪವಿತ್ರಾ ಮನೆಯಿಂದ ಬಂದ ಕೊರಿಯರ್‌ ನ್ನು ಬಹಳ ಉತ್ಸಾಹದಿಂದ ತೆರೆದು ನೋಡಿದಳು. ಅದರಲ್ಲಿ 2 ಲೇಯರ್ಸ್‌ ಗಳ ಕೆಳಗೆ 3 ಸೀರೆಗಳು ಇಣುಕುತ್ತಿದ್ದವು. ಅದರಲ್ಲಿ ಒಂದು ಮಣ್ಣಿನ ಬಣ್ಣದ್ದು, ಇನ್ನೊಂದು ಹಸಿರು, ಅದರ ಮೇಲೆ ಹೂಗಳು ಅರಳಿ ನಿಂತಿದ್ದವು. ಮೂರನೆಯದ್ದು ಗಾಢ ಕಿತ್ತಳೆ ಬಣ್ಣದ್ದು.

ಪವಿತ್ರಾ ಸೀರೆಗಳನ್ನು ಕೈಗೆತ್ತಿಕೊಂಡು ಆಲೋಚಿಸತೊಡಗಿದಳು. ತನಗೊಪ್ಪುವ ಸೀರೆ ಇದರಲ್ಲಿ ಒಂದೇ ಒಂದು ಕೂಡ ಇಲ್ಲ. ಆದರೆ ಅಮ್ಮ, ಅತ್ತಿಗೆ ಅಥವಾ ಅಜ್ಜಿಗೆ ಉಡುಗೊರೆ ರೂಪದಲ್ಲಿ ಇಂತಹ ಸಿಂಥೆಟಿಕ್‌ ಜಾರ್ಜೆಟ್‌ ಸೀರೆಗಳು ದೊರೆತಾಗ, ಅವು ತಕ್ಷಣವೇ ಉಡುಗೊರೆ ರೂಪದಲ್ಲಿ ಅವಳಿಗೆ ಬಂದುಬಿಡುತ್ತಿದ್ದವು.

ಅಕ್ಕನಂತೂ ಮುಖ ಸಿಂಡರಿಸುತ್ತಾ, ``ನನ್ನ ಬಳಿಯಂತೂ ಇಟ್ಟಲ್ಲಿಯೇ ಇಟ್ಟುಬಿಡಬೇಕಾಗುತ್ತದೆ. ನೀನಾದರೆ ಸ್ಕೂಲ್ ‌ಗೆ ಉಟ್ಟುಕೊಂಡು ಹೋಗಿ ಅದರ ಬೆಲೆಯನ್ನಾದರೂ ವಸೂಲಿ ಮಾಡಿದ ಹಾಗಾಗುತ್ತದೆ,'' ಎಂದು ಹೇಳುತ್ತಾಳೆ.

ಪವಿತ್ರಾ ನಿಧಾನವಾಗಿ ಮುಗುಳ್ನಗುತ್ತಿದ್ದಳು. ಅವಳ ಬಳಿ ಸಿಂಥೆಟಿಕ್‌ ಜಾರ್ಜೆಟ್‌ ನ ಬಹುದೊಡ್ಡ ಸಂಗ್ರಹವೇ ಇತ್ತು. ಮಕ್ಕಳು ಕೂಡ ಆಗಾಗ ಹೇಳುತ್ತಿರುತ್ತಾರೆ, ``ಬೆಡ್‌ ನ ಕೆಳಭಾಗದಲ್ಲೂ ಅಮ್ಮನ ಸೀರೆಗಳು, ಕಪಾಟಿನಲ್ಲೂ ಅಮ್ಮನ ಸೀರೆಗಳು. ಆದಾಗ್ಯೂ ಅಮ್ಮ ತಮ್ಮ ಬಳಿ ಸಾಕಷ್ಟು ಒಳ್ಳೆಯ ಸೀರೆಗಳಿಲ್ಲ ಎಂದು ಹೇಳುತ್ತಿರುತ್ತಾರೆ.''

ಇಂದು ಶಾಲೆಯ ವಾರ್ಷಿಕೋತ್ಸವ. ಇಂದು ಎಲ್ಲ ಟೀಚರ್ಸ್‌ ಬಹಳಷ್ಟು ಅಲಂಕರಿಸಿಕೊಂಡು ಬಂದಿರುತ್ತಾರೆ. ಬಹಳಷ್ಟು ಟೀಚರ್ಸ್ ಗಳಿಗೆ ಈ ನೌಕರಿ ಮನೆಯಿಂದ ಹೊರಗೆ ಬರುವ ಹಾಗೂ ಜನರ ಜೊತೆ ಬೆರೆಯುವ ಏಕೈಕ ಉಪಾಯವಾಗಿತ್ತು.

ಪವಿತ್ರಾ ಕೂಡ ಹಳದಿ ಬಣ್ಣದ ಸೀರೆ ಉಟ್ಟಿದ್ದಳು. ಅದಕ್ಕೆ ಹೊಂದುವಂತಹ ಎಂಬ್ರಾಯ್ಡರಿ ಮಾಡಿದ ಬ್ಲೌಸ್‌ ಧರಿಸಿದ್ದಳು. ಅವಳು ಶಾಲೆಯ ಗೇಟ್‌ ಗೆ ಬರುತ್ತಿದ್ದಂತೆ ಜಯಂತಿ ಮುಖಾಮುಖಿಯಾದಳು.

ಜಯಂತಿ ನಗುತ್ತಲೇ, ``ಜಾರ್ಜೆಟ್‌ ಲೇಡಿ, ಇಂದಾದರೂ ಶಿಫಾನ್‌ ಅಥವಾ ಕ್ರೇಪ್‌ ಸೀರೆ ಉಡಬಹುದಿತ್ತು,'' ಎಂದಳು.

ಜಯಂತಿ ಗುಲಾಬಿ ಬಣ್ಣದ ಶಿಫಾನ್‌ ಸೀರೆ ಉಟ್ಟಿದ್ದಳು. ಅದಕ್ಕೆ ಹೊಂದುವಂತಹ ಮತ್ತೊಂದು ಆಭರಣ ಕತ್ತನ್ನು ಅಲಂಕರಿಸಿತ್ತು.

``ನಾನಂತೂ ಲಿನೆನ್‌ ಅಥವಾ ಕಾಟನ್‌ ಹೊರತುಪಡಿಸಿ ಬೇರೇನನ್ನೂ ಉಡುವುದಿಲ್ಲ,'' ಎಂದು ನೀಲಾ ಹೇಳಿದಳು.

``ಕಾಟನ್‌ ಸೌತ್‌ ನದ್ದು ಹಾಗೂ ಲಿನೆನ್‌ 24 ಗ್ರಾಂನದ್ದು.''

``ನೀವು ಚೆನ್ನಾಗಿ ಕ್ಯಾರಿ ಮಾಡುತ್ತೀರಿ. ಇಂತಹ ಸೀರೆಗಳಲ್ಲಿ ನಾನೆಲ್ಲಿ ಚೆನ್ನಾಗಿ ಕಾಣುತ್ತೇನೆ,'' ಎಂದು ಪವಿತ್ರಾ ಹೇಳಿದಳು.

ಎಲ್ಲ ವಿದ್ಯಾರ್ಥಿನಿಯರು ದುಬಾರಿ ಸೀರೆ ಉಟ್ಟ ಟೀಚರ್ಸ್‌ ಗಳಿಗಷ್ಟೇ ಕಾಂಪ್ಲಿಮೆಂಟ್‌ ಕೊಡುತ್ತಿದ್ದುದನ್ನು ಪವಿತ್ರಾ ಗಮನಿಸಿದಳು.

ಯಾವುದೇ ವಿದ್ಯಾರ್ಥಿನಿಯರು ಇಲ್ಲವೇ ಟೀಚರ್ಸ್‌ ಅವಳನ್ನು ಹೊಗಳಲಿಲ್ಲ. ಅವಳು ತನ್ನ ಮನೆಯಿಂದ ಹೊರಡುವಾಗ, ಕನ್ನಡಿಯಲ್ಲಿ ತನ್ನ ಮುಖ ನೋಡಿದಾಗ ಅದು ಸರಿಯಾಗಿಯೇ ಕಂಡಿತು.

ಆಗ ಅವಳು ಪ್ರೀತಿಯ ವಿದ್ಯಾರ್ಥಿನಿ ಮಾನಸಾ ಬಂದು ಹೇಳಿದಳು, ``ಮ್ಯಾಮ್, ನೀವು ಎಂದಿನಂತೆ ಇಂದೂ ಚೆನ್ನಾಗಿಯೇ ಕಾಣ್ತೀದೀರಾ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ