ಭೀಮಪ್ಪಹಳ್ಳಿಯ ದಿಟ್ಟ ಹುಡುಗಿ ಮಾಲಾ ಮೊದಲಿನಿಂದ ಮಹಾ ಧೈರ್ಯಸ್ಥೆ. ಆದರೆ ಮದುವೆ ವಿಷಯದಲ್ಲಿ ಹಿರಿಯರ ಮಾತು ಮೀರಲಾಗದೆ ಎರಡನೆ ಮದುವೆಗೆ ಒಪ್ಪಿದಳು. ಮುಂದೆ ಅವಳ ಜೀವನದಲ್ಲಿ ನಡೆದದ್ದೇನು.......?

ಕೈಲಿದ್ದ ಅನಿ ಒಂದೇ ಸಮನೆ ಕೈ ಕೊಸರುತ್ತಾ ಕೆಳಗಿಳಿಯಲು ಸಾಹಸಪಡುತ್ತಿದ್ದಳು. ಸಹನಾಳಿಗೆ ಅವಳನ್ನು ಎತ್ತಿ ಎತ್ತೀ ರಟ್ಟೆಯೆಲ್ಲಾ ನೋಯುತ್ತಿತ್ತು.

``ಅಮ್ಮಾ , ನೋಡಮ್ಮಾ..... ಇನ್ನೂ ನಮ್ಮ ನಂಬರ್‌ ಬರೋದಕ್ಕೆ ಎಷ್ಟು ಹೊತ್ತಾಗುತ್ತೆ.... ಅವಳನ್ನು ಹಿಡಿಯೋಕೆ ಆಗ್ತಿಲ್ಲ....'' ಎಂದು ಸಹನಾ ಹೇಳಿದಳು.

ಶಾರದಮ್ಮ ಎದ್ದು ಹೋಗಿ, ಡಾಕ್ಟರ್‌ ಕನ್ಸೆಲ್ಟಿಂಗ್‌ ರೂಮಿನ ಬಾಗಿಲಿಗೆ ನಿಂತಿದ್ದ ಹುಡುಗನ ಬಳಿ, ``ಎಷ್ಟನೇ ನಂಬರಪ್ಪಾ... ನಡೀತಿರೋದು...? ಇನ್ನೂ ಎಷ್ಟೊತ್ತು ಕಾಯಬೇಕು...?'' ಎಂದರು.

``ಇನ್ನೂ ಮೂರನೇ ನಂಬರ್‌. ಡಾಕ್ಟರ್‌ ಈಗತಾನೇ ಬಂದಿದ್ದಾರೆ. ನಿಮ್ಮ ನಂಬರ್‌ ಬರೋಕೆ ಇನ್ನೂ ಅರ್ಧಗಂಟೆ ಮೇಲಾಗಬಹುದು. ನೀವಿಲ್ಲೇ ಕೂತಿರಿ. ನಿಮ್ಮ ನಂಬರ್‌ ಬಂದಾಗ ನೀವಿಲ್ಲದಿದ್ದರೆ ಮತ್ತೆ ಎಲ್ಲ ಪೇಶೆಂಟ್‌ ಮುಗಿದು, ಕೊನೇಗೇ ನಿಮ್ಮನ್ನು ಕರಿಯೋದು. ಆಮೇಲೆ ಗಲಾಟೆ ಗಿಲಾಟೆ ಮಾಡಂಗಿಲ್ಲ  ಗೊತ್ತಾ.....?'' ಎಂದು ಗತ್ತಿನಿಂದಲೇ ಹೇಳಿ ಡಾಕ್ಟರ್‌ ಬೆಲ್ ಮಾಡಿದ ಶಬ್ದ ಕೇಳಿ ಒಳಗೆ ಹೋದ.

ಸಹನಾಳಿಗೆ ಕುಳಿತು ಕುಳಿತೂ ಸಾಕಾಗಿ ಹೋಗಿತ್ತು. ದೊಡ್ಡವಳು ಅನ್ವಿಕಾ, ಚಿಕ್ಕವಳು ಅನಿ ಇಬ್ಬರೂ ಇದೇ ನರ್ಸಿಂಗ್‌ ಹೋಮ್ ನಲ್ಲೇ ಹುಟ್ಟಿದ್ದರಿಂದ, ತವರಿಗೆ ಬಂದಾಗೆಲ್ಲಾ ಇಲ್ಲಿಯ ಮಕ್ಕಳ ಡಾಕ್ಟರ್‌ ಗೇ ಇಬ್ಬರನ್ನು ತೋರಿಸುತ್ತಿದ್ದರು. ಬೇರೆ ಡಾಕ್ಟರ್‌ ಅಷ್ಟು ಸರಿ ಹೋಗುತ್ತಿರಲಿಲ್ಲ. ನಿನ್ನೆಯಿಂದ ಅನಿಗೆ ಜ್ವರ ಜಾಸ್ತಿಯಾಗಿ ಮೈ ಬಿಸಿಯಾಗಿತ್ತು. ಹಾಗಾಗಿ ಬೆಳಗ್ಗೆಯೇ ಅಮ್ಮನೊಡನೆ ಆಸ್ಪತ್ರೆಗೆ ಬಂದಿದ್ದಳು. ಹಲ್ಲು ಬರುವ ಸಮಯ ಹಾಗೇ ಬಿಡು ಅಂತಾ ಅಮ್ಮ ಹೇಳಿದರೂ, ಆಕೆಗೆ ಸಮಾಧಾನ ಇಲ್ಲ. ಹಾಗಾಗಿ ಮನೆಯಲ್ಲಿ ಪುಟ್ಟ ಅನ್ವಿಕಾಳನ್ನು ತಂಗಿಯ ಸುಪರ್ದಿಗೆ ಬಿಟ್ಟು ಬಂದಾಗಿತ್ತು. ಲೇಟಾಗಿದ್ದಕ್ಕೆ ಅಲ್ಲಿ ಅವಳೇನು ಗಲಾಟೆ ಹಚ್ಚಿರುತ್ತಾಳೋ ಎಂದು ಮತ್ತೊಂದೆಡೆ ಆತಂಕದಲ್ಲೇ ಕಾಲ ಕಳೆಯೋದಾಯಿತು. ತಂಗಿಗೆ ಆಗಾಗ ಫೋನ್‌ ಮಾಡಿ ಅನ್ವಿಕಾಳಿಗೆ ಸಮಾಧಾನ ಮಾಡುತ್ತಾ, ಬರಬೇಕಾದರೆ ಮರೆಯದೆ ನಿನಗೆ ಐಸ್‌ ಕ್ರೀಂ ತರುತ್ತೇನೆ ಎಂದು ಪುಸಲಾಯಿಸುತ್ತಿದ್ದಳು.

ಅಷ್ಟರಲ್ಲಿ ``ಅಲ್ಲಿ ನೋಡೆ, ಅಲ್ಲಿ ಫ್ಲಾಸ್ಕ್ ಹಿಡಿದು ಹೋಗ್ತಾ ಇರೋದು ನಿಮ್ಮ ಲಕ್ಷ್ಮಜ್ಜಿ ತರಹ ಕಾಣ್ತಾ ಇದ್ದಾರೆ ಅಲ್ವಾ,'' ಎಂದು ಶಾರದಮ್ಮ ಹೇಳಿದಾಗ ಸಹನಾ ಅಮ್ಮ ತೋರಿಸಿದ ಕಡೆ ನೋಡಿದಳು. ಅವಳಿಗೂ ಹೌದೆನಿಸಿತ್ತು.

``ತಡೀ ನೋಡಿಕೊಂಡು ಬರ್ತೀನಿ. ಪಾಪ ಯಾರನ್ನು ಆಸ್ಪತ್ರೆಗೆ ತೋರಿಸಿಕೊಂಡು ಹೋಗಲು ಬಂದಿದ್ದಾರೋ ಏನೋ,'' ಎಂದು ಶಾರದಮ್ಮ ದಡದಡ ಅಲ್ಲಿಗೆ ಹೋದರು.

ಸ್ವಲ್ಪ ಹೊತ್ತಿನಲ್ಲೇ ವಾಪಸ್ಸಾದ ಶಾರದಮ್ಮ, ``ಸಹನಾ, ಮಾಲಾಳನ್ನು ಆಸ್ಪತ್ರೆಗೆ  ಕರೆದುಕೊಂಡು ಬಂದಿದ್ದಾರಂತೆ. ಒಂಬತ್ತು ತಿಂಗಳಂತೆ, ಈ ವಾರ ಡೇಟ್‌ ಕೊಟ್ಟಿದ್ದಾರಂತೆ, ನಾಲ್ಕು ದಿನದಿಂದ ಈ ಆಸ್ಪತ್ರೆಯಲ್ಲೇ ಇದ್ದಾರಂತೆ. ಒಂದು ಮಾತೂ ಗೊತ್ತಿಲ್ಲ ನೋಡು, ಬಾ ನೋಡಿ ಮಾತನಾಡಿಸಿಕೊಂಡು ಬರೋಣ,'' ಎಂದರು.

``ಅಮ್ಮಾ, ಅನಿಯನ್ನು ತೋರಿಸಿಕೊಂಡು ಒಂದೇ ಸಲ ಹೋಗೋಣ. ಅಷ್ಟರಲ್ಲಿ ನಮ್ಮ ನಂಬರ್‌ ಬಂದರೆ ಕಷ್ಟ,'' ಎಂದಳು ಸಹನಾ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ