``ವಿನುತಾ, ಇವತ್ತಿನಿಂದ ನೀನೇ ಈ ಮನೆ, ನನ್ನ ಈ ಮುಗ್ಧ ತಮ್ಮನನ್ನು ಸಂಭಾಳಿಸಬೇಕು. ಫ್ಲೈಟ್ಸ್ ತೊಂದರೆ ಇಲ್ಲದಿದ್ದರೆ ನಾನು ಇನ್ನಷ್ಟು ದಿನ ಇಲ್ಲೇ ಉಳಿಯುತ್ತಿದ್ದೆ. ಆದರೆ ಹೊಸದಾಗಿ ಮದುವೆಯಾದ ನಿಮ್ಮಿಬ್ಬರ ಮಧ್ಯೆ ಎಷ್ಟು ದಿನ ಶಿವಪೂಜೆ ನಡುವಿನ ಕರಡಿ ಆಗಿರಲಿ? ಒಳ್ಳೆಯದೇ ಆಯ್ತು, ನಾನೀಗ ಮುಂಬೈಗೆ ಹೊರಟೆ. ಅಲ್ಲಿ ನನ್ನ ಮಕ್ಕಳು ಅವರ ಅಜ್ಜಿ ತಾತಂದಿರನ್ನು ಬಹಳ ಗೋಳುಗುಟ್ಟಿಸಿ ಬಿಟ್ಟಿರುತ್ತಾರೆ. ಅವರಿಗೆ ತಮ್ಮ ಈ ಹೊಸ ಮಾಮಿಯನ್ನು ಭೇಟಿ ಆಗಬೇಕು, ದೆಹಲಿ ಪೂರ್ತಿ ಸುತ್ತಾಡಬೇಕೆಂದು 10 ಸಲ ಹೇಳಿದರು. ಏನು ಮಾಡುವುದು? ಎಲ್ಲಾ ಅರ್ಜೆಂಟ್‌ನಲ್ಲಿ ನಡೆದು ಹೋಯಿತು. ಮಕ್ಕಳನ್ನು ಮತ್ತೆ ಕರೆತಂದರಾಯಿತು,'' ಬಾಯಿ ತುಂಬಾ ಬಡಬಡ ಮಾತನಾಡು ಸುರಭಿ ತನ್ನ ಹೊಸ ಮದುವಣಗಿತ್ತಿ ತಮ್ಮನ ಹೆಂಡತಿಗೆ ಒಂದೇ ಉಸಿರಿನಲ್ಲಿ ವಿಷಯ ಹೇಳಿ ಮುಗಿಸಿ, ದೆಹಲಿ ಏರ್‌ಪೋರ್ಟ್‌ಗೆ ಹೊರಡಲು, ಟ್ಯಾಕ್ಸಿ ಏರಿ ಹಿಂದೆ ಕುಳಿತು ಕೈ ಬೀಸುತ್ತಾ ಹೇಳಿದಳು.

ವಿನುತಾ ನಸುನಗುತ್ತಾ ತಲೆ ಆಡಿಸಿ ಕೈ ಬೀಸಿದಳು. ಒಮ್ಮೆ ಹಿರಿಯ ನಾದಿನಿ ಸುರಭಿ ಕಡೆ ನೋಡುತ್ತಾ ಮತ್ತೊಮ್ಮೆ ಪತಿ ನವೀನ್ ಕಡೆ ನೋಡುತ್ತಾ ಮಂದಹಾಸ ಬೀರುತ್ತಿದ್ದಳು.

ಸುರಭಿ ಮಾತು ಮುಂದುವರಿದಿತ್ತು, ``ಮದುವೆ ಏನೋ ಅವಸರದಲ್ಲಿ ಮುಗಿಯಿತು. ಆದರೆ ನಿಮ್ಮಿಬ್ಬರ ಈ ನಿರ್ಧಾರ ಮೆಚ್ಚತಕ್ಕದ್ದು. ಇನ್ನು ನನಗೆ ಈ ಪೆದ್ದು ತಮ್ಮನ ಕುರಿತು ಚಿಂತಿಸುವ ಅಗತ್ಯವಿಲ್ಲ. ಈ ಹಾಳು ಕೊರೋನಾ ಮಹಾಮಾರಿಯ ಕಾಟದಿಂದಾಗಿ ಎಲ್ಲ ಬಹಳ ಸರಳವಾಗಿಯೇ ಮುಗಿಸಬೇಕಾಯ್ತು. ನೀವಿಬ್ಬರೂ ಅಷ್ಟೆ.... ಬಹಳ ಹುಷಾರಾಗಿರಿ! ಸದ್ಯಕ್ಕಂತೂ ಮನೆಯಲ್ಲೇ ಮಧುಚಂದ್ರ ಮುಗಿಸಿ..... ಆಮೇಲೆ ಇಡೀ ಜೀವನ ಇದ್ದೇ ಇದೆ, ಹೊರಗಿನ ಓಡಾಟಕ್ಕೆ.....'' ಎಂದು ಕಣ್ಣು ಮಿಟುಕಿಸಿದಳು.

``ಸಾಕು ಸಾಕೇ ನಿನ್ನ ಭಾಷಣ.... ಹೊಸದಾಗಿ ಮದುವೆ ಆದ ಜೋಡಿ ಅವರಿಗೆ ಗೊತ್ತಾಗೋಲ್ವೇ? ಟೀಚರ್‌ ಅಂತ ನೀನು ಇಲ್ಲೇ ಪಾಠ ಶುರು ಮಾಡಬೇಡ. ಅಮೆರಿಕಾ ಕಂಡು ಬಂದ ನವೀನನಿಗೆ ನಮ್ಮ ಭಾರತದ ಕೊರೋನಾ ಬಗ್ಗೆ ಹೊಸದಾಗಿ ಹೇಳಬೇಕೇ? ಏನಂತಿ ನವೀನ್‌....?'' ಸುರಭಿಯ ಪತಿ ವಿಶಾಲ್ ‌ಅವನೆಡೆ ಕಣ್ಣು ಮಿಟುಕಿಸುತ್ತಾ ಹೇಳಿದ. ಇವರಿಬ್ಬರೂ ಅವರಿಗೆ ಕೈ ಬೀಸಿ ವಿದಾಯ ಕೋರಿದರು. ಅವರು ಅಲ್ಲಿಂದ ಮುಂಬೈನ ತಮ್ಮ ಮನೆಗೆ ಹೊರಟರು.

ನವೀನ್‌ ವಿನುತಾರ ಮದುವೆ 2 ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ನಡೆದಿತ್ತು. ಅಮೆರಿಕಾದ ವರ ನವೀನ್‌ ಅಲ್ಲಿ ಹಲವು ವರ್ಷಗಳ ಅನುಭವದ ನಂತರ, ನದೆಹಲಿಯ ಬ್ರಾಂಚ್‌ಗೆ ಹೆಡ್‌ ಆಗಿ ಕಂಪನಿಯಿಂದ ನಿಯಮಿಸಲ್ಪಟ್ಟಿದ್ದ. ಹೀಗೆ ಬೇರೆಯವರ ಮುಖಾಂತರ ವರನ ಬಗ್ಗೆ ವಿವರ ಪಡೆದು, ವಿನುತಾರ ತಾಯಿ ತಂದೆ ಬೇಗ ಬೇಗ ಮದುವೆ ನಿಶ್ಚಯಿಸಿದ್ದರು. ಕೊರೋನಾ ಕಾಟದಿಂದಾಗಿ ಮಂಗಳ ಮುಹೂರ್ತಕ್ಕೆ ಕಾಯದೆ, ಇಬ್ಬರು ಮನೆಯವರಿಗೂ ಅನುಕೂಲವಾಗುವಂತೆ ಆಷಾಢ ಕಳೆದ ತಕ್ಷಣ ಕೇವಲ ವಧೂವರರ ಕಡೆ 15-20 ಜನರ ಸಮ್ಮುಖದಲ್ಲಿ ಒಂದು ದೇವಾಲಯದಲ್ಲಿ ಬಲು ಸರಳವಾಗಿ ಮದುವೆ ನೆರವೇರಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ