``ಯಾರೋ ಹಿರಿಯರು ಬಹಳ ಚೆನ್ನಾಗಿ ಹೇಳಿದ್ದಾರೆ, ಯಾವ ಸಂಬಂಧ ಕೂಡಿ ಬರಬೇಕು ಅಂತಿರುತ್ತೋ ಅದು ಆಗಿಯೇ ತೀರುತ್ತದೆ. ನಾವು ನಮ್ಮದೇ ಪ್ರಯತ್ನಕ್ಕೆ ಹಠಬಿದ್ದು ಏನೇನೋ ಮಾಡುತ್ತೇವೆ, ಆಗಬೇಕಾದ್ದು ಆಗಿಯೇ ತೀರುತ್ತದೆ......''

ರಮಣ ಮೂರ್ತಿಗಳ ಮಾತಿಗೆ  ರಮಾಮಣಿ ಎಂದಿನಂತೆ ನಸುನಗುತ್ತಾ ತಲೆದೂಗಿದರು. ಅವರಿಬ್ಬರು ಸುಮಾರು 2 ತಿಂಗಳಿನಿಂದ ಅದೇ ಪಾರ್ಕಿನಲ್ಲಿ ಸಂಜೆ ಹೊತ್ತು ಭೇಟಿಯಾಗುತ್ತಾರೆ. ಹೀಗೆ ಲೋಕಾಭಿರಾಮದ ಮಾತುಗಳು ಗಟ್ಟಿ ಸ್ನೇಹಕ್ಕೆ ತಿರುಗಿದ್ದವು. ಒಂದು ದಿನ ಪರಸ್ಪರ ನೋಡದಿದ್ದರೂ ಇಬ್ಬರಿಗೂ ಏನೋ ಚಡಪಡಿಕೆ ತಪ್ಪುತ್ತಿರಲಿಲ್ಲ. ಈ ದಿನ ಸಹ ಎಂದಿನಂತೆ ಇಬ್ಬರೂ ನೋಡಿ ನಮಸ್ಕಾರ ವಿನಿಮಯ ಮಾಡಿಕೊಂಡು, ತಮ್ಮ ಎಂದಿನ ಕೊನೆ ಕಲ್ಲು ಬೆಂಚಿನ ಮೇಲೆ ಕುಳಿತು ಮಾತುಕಥೆಗೆ ತೊಡಗಿದ್ದರು.

``ಓ..... ಹಾಗಾದರೆ ಇವತ್ತು ಬೆಳಗ್ಗಿನಿಂದಲೇ ಎಲ್ಲಾ ಕೆಲಸಗಳೂ ಸುಸೂತ್ರವಾಗಿ ನಡೆಯುತ್ತಿವೆ ಅನ್ನಿ,'' ರಮಾ ನಸುನಗುತ್ತಾ ಹೇಳಿದರು.

ಹೌದೆಂಬಂತೆ ತಲೆದೂಗಿದ ಮೂರ್ತಿ ಮಾಮೂಲಿ ಕೊರೋನಾ ಕುರಿತು ಮಾತನಾಡಿಕೊಂಡರು. ಈಗಂತೂ ಅದು ಭೇಟಿಯಾದವರು ಮೊದಲು ಮಾತನಾಡುವ ವಿಷಯವಾಗಿತ್ತು.

ರಮಣ ಮೂರ್ತಿ 60+ ದಾಟಿದ್ದರೆ, ರಮಾ ಅವರಿಗಿಂತ 7-8 ವರ್ಷ ಚಿಕ್ಕವರು. ಆದರೂ ಅವರೆಲ್ಲ ಮಾತುಗಳಿಗೆ ಪ್ರೋತ್ಸಾಹಕರಾಗಿ ಸಹನೆಯಿಂದ ಉತ್ತರಿಸುತ್ತಿದರು, ತಮ್ಮ ವಿಚಾರ ವ್ಯಕ್ತಪಡಿಸುತ್ತಿದ್ದರು. ರಮಣ ಮೂರ್ತಿ ಅವರಿಗೆ ತಾವು ತಮ್ಮ ಕುಟುಂಬದಿಂದ ಬಹಳ ನಿರಾಶೆಗೊಂಡಿರುವುದಾಗಿ 3-4 ಸಲ ಹೇಳಿ ಪೇಚಾಡಿಕೊಂಡಿದ್ದರು. ಎಲ್ಲರಿಗೂ ಅವರವರದೇ ಲೋಕ, ತಾವು ಹೇಳಿದ್ದೇ ಸರಿ ಎಂಬ ಧೋರಣೆ. ಹೀಗಾಗಿ ಇವರ ನಿಧಾನದ ಮಾತುಗಳಿಗೆ ಮನೆಯವರ ಬಳಿ ಪುರಸತ್ತಾಗಲಿ, ವ್ಯಯಧಾನವಾಗಲಿ ಇರಲಿಲ್ಲ.

ರಮಣ ಮೂರ್ತಿಗಳ ಸ್ವಭಾವವೇ ಅಂಥದ್ದು. ಹೇಳಿದ್ದನ್ನೇ ಹೇಳುತ್ತಾ ಇರುವ ದಾರ್ಶನಿಕ ಮನೋಭಾವದವರು. ``ರಮಾ ನಿಮಗೆ ಗೊತ್ತೆ....'' ಎಂದು ಶುರು ಮಾಡುತ್ತಿದ್ದರು. ಅವರು ಹೇಳಬಹುದಾದ ವಿಷಯ ಗೊತ್ತಿದ್ದರೂ ರಮಾ ಅದನ್ನೆಂದೂ ತೋರಿಸಿಕೊಳ್ಳುತ್ತಿರಲಿಲ್ಲ. ಅವರು ಎಂದಿನ ತಮ್ಮ ಲಹರಿಯಲ್ಲಿ ಮುಂದುವರಿಸುತ್ತಿದ್ದರು, ``ಈ ಪ್ರಪಂಚದಲ್ಲಿ ಇರುವುದು ಎರಡೇ ಪುಣ್ಯಫಲ. ಒಂದು ನಾವು ಬಯಸಿದ್ದು ನಮಗೆ ಸಿಗದೇ ಇರುವುದು ಹಾಗೂ ಇನ್ನೊಂದು, ನಾವು ಬಯಸಿದ್ದು ಅಪರೂಪವಾಗಿ ಸಿಗುವಂಥದ್ದು.''

ಇದನ್ನು ಕೇಳಿ ರಮಾಮಣಿ ಎಂದಿನ ತಮ್ಮ ಮೃದು ಮಧುರ ಮಂದಹಾಸ ಬೀರಿದರೆ, ರಮಣ ಮೂರ್ತಿ ತಮ್ಮ ಮಾತನ್ನು ಮತ್ತಷ್ಟು ಸ್ಪಷ್ಟಡಿಸುವವರಂತೆ, ``ಆ ಭಗಂತನಿಗೆ ಶರಣಾದರೆ ನಮಗೆ ಬೇಕಾದ ಮನಶ್ಶಾಂತಿ ದೊರಕುತ್ತದೆ. ಪರಮಾತ್ಮನಲ್ಲಿ ಮನಸ್ಸಿಟ್ಟು ತೀರ್ಥಯಾತ್ರೆಗಳನ್ನು ಮಾಡಿ, ದಾನದಕ್ಷಿಣೆಗಳ ಪುಣ್ಯ ಕಾರ್ಯ ಕೈಗೊಂಡರೆ, ಅಂಥ ಸುಖ ದೊರಕುತ್ತದೆ. ಇದಕ್ಕಿಂತ ಇನ್ನೇನು ಬೇಕು?'' ಎನ್ನುತ್ತಿದ್ದರು.

``ಮತ್ತೊಂದು ವಿಷಯ ರಮಾ, ಈ ನಮ್ಮ ಜೀವನ ಅದು ಎಷ್ಟೇ ದೀರ್ಘವಾಗಿರಲಿ, ನಾಸ್ತಿಕರಾಗಿರುವುದರಿಂದ ದೇವರನ್ನು ಮರೆಯುವುದರಿಂದ ಅಷ್ಟೇ ಬೇಗ ಚಿಕ್ಕದಾಗಿಬಿಡುತ್ತದೆ.''

ಇದನ್ನೆಲ್ಲ ಕೇಳುತ್ತಾ ಒಳಗೆ ತಮ್ಮ ಅಭಿಪ್ರಾಯ ಏನೇ ಇರಲಿ, ನಗು ಬರುವಂತಾದರೂ ತೋರಿಸಿಕೊಳ್ಳದೆ, ``ಅದು ಸರಿ ಮೂರ್ತಿಗಳೇ.... ನಿಮ್ಮ ಆಶ್ರಮ ಎಲ್ಲಿದೆ ಅಂತ ಹೇಳಿಬಿಡಿ. ಕೂಡಲೇ ಅಲ್ಲಿಗೆ ಬಂದು ದೀಕ್ಷೆ ತೆಗೆದುಕೊಳ್ಳುವೆ!'' ಎನ್ನುವರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ