ನಿತ್ಯಾ ತನ್ನ ತವರಿಗೆ ಹೋದ ನಂತರ ಶೈಲಜಾ ಬೇಸರ ಪಟ್ಟುಕೊಂಡಳು. ಆದರೆ......``ಇಷ್ಟು ದಿನ ನಾನು, ನಿತ್ಯಾ ನಿಮ್ಮ ಮಗಳು ಅಂತಲೇ ತಿಳಿದಿದ್ದೆ. ಸೊಸೆ ಅಂತ ಗೊತ್ತೇ ಇರಲಿಲ್ಲ,'' ಎದುರು ಮನೆಯ ಮೈಥಿಲಿಯ ಮಾತು ಕೇಳಿ ಶೈಲಜಾ ನಸುನಕ್ಕಳು.

``ಯಾಕೆ ಮಗಳಿಗೂ ಸೊಸೆಗೂ ಏನು ವ್ಯತ್ಯಾಸ? ಇಬ್ಬರೂ ಹುಡುಗಿಯರು, ಮಾಡರ್ನ್‌ ಡ್ರೆಸೆಸ್‌ ಧರಿಸುತ್ತಾರೆ, ಹೊರಗೆ ಕೆಲಸ ಮಾಡುತ್ತಾರೆ. ಹಿಂದಿನ ಹಾಗೆ ಈಗ ಸೊಸೆ ಮೈ ತುಂಬಾ ಸೆರಗು ಹೊದ್ದು ಮುಂಬಾಗಿಲು ತೊಳೆದು ರಂಗೋಲಿ ಇಡಬೇಕಿಲ್ಲವಲ್ಲ.....''

``ಹಾಗಲ್ಲ....'' ಮೈಥಿಲಿ ಮಧ್ಯೆ ಮಾತನಾಡಿದಳು, ``ಮಗಳು ಮಗಳೇ, ಸೊಸೆ ಸೊಸೆಯೇ.... ಅವರ ನಡವಳಿಕೆಯಲ್ಲಿಯೇ ಗೊತ್ತಾಗಿಬಿಡುತ್ತದೆ. ಆದರೆ ನಿತ್ಯಾ ನಿಮ್ಮ ಜೊತೆ ಎಷ್ಟು ಪ್ರೀತಿಯಿಂದ ನಡೆದುಕೊಳ್ಳುತ್ತಾಳೆ, ನಿಮ್ಮ ಬಗ್ಗೆ ಕಾಳಜಿ ಇದೆ, ಎಲ್ಲ ವಿಷಯಗಳನ್ನೂ ಶೇರ್‌ ಮಾಡುತ್ತಾಳೆ. ಈ ರೀತಿ ಮಗಳು ಮಾತ್ರ ಮಾಡಲು ಸಾಧ್ಯ.

``ನಿಮ್ಮಿಬ್ಬರ ಸ್ಟ್ರಾಂಗ್‌ ಬಾಂಡಿಂಗ್‌ ನೋಡಿದರೆ ನೀವಿಬ್ಬರೂ ಅತ್ತೆ ಸೊಸೆ ಅಂತ ಊಹಿಸುವುದಕ್ಕೂ ಸಾಧ್ಯವಿಲ್ಲ. ನೀವಿಬ್ಬರೂ ನಗುನಗುತ್ತಾ ಜೊತೆಯಲ್ಲೇ ಓಡಾಡುವುದನ್ನು ನೋಡಿ ನಮ್ಮ ಬೀದಿಯವರು ಯಾರೂ ನಿಮ್ಮ ಸಂಬಂಧದ ಬಗ್ಗೆ ಕೇಳುವುದಕ್ಕೇ ಹೋಗಲಿಲ್ಲ. ನಿಮ್ಮ ಮಗಳು ಅಂತಲೇ ಎಲ್ಲರೂ ಭಾವಿಸಿದೆ.''

``ಹಾಗಲ್ಲ ಮೈಥಿಲಿ, ಇದು ಯೋಚಿಸಬೇಕಾದ ವಿಷಯ. ಸಾಧಾರಣವಾಗಿ ಹುಡುಗಿಯರು ಒಳ್ಳೆಯವರೇ. ಹುಡುಗಿ ಸೊಸೆಯಾಗಿ ಮನೆಗೆ ಕಾಲಿಟ್ಟ ದಿನದಿಂದಲೇ ಸಂಬಂಧ ಚೆನ್ನಾಗಿರುವಂತೆ ಮಾಡುವ ಪ್ರಯತ್ನ ಪ್ರಾರಂಭಿಸಬೇಕು. ನಾವು ಹಿರಿಯರಾದ್ದರಿಂದ ಅದರ ಪ್ರಾರಂಭ ನಮ್ಮಿಂದಲೇ ಆಗಬೇಕು. ಈ ಪ್ರಯತ್ನವನ್ನು ನಿಮ್ಮ ದೌರ್ಬಲ್ಯ ಅಂತ ಭಾವಿಸಿದ ಪಕ್ಷದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ,'' ಶೈಲಜಾ ತನ್ನ ಅಭಿಪ್ರಾಯ ಹೇಳಿದಳು.

``ನೀವು ಹೇಳುವುದೇನೋ ಸರಿ..... ಆದರೆ ನೀವಿಬ್ಬರೂ ಅಂತಹ ಬಾಂಡಿಂಗ್‌ ಹೇಗೆ ಹೊಂದಿದ್ದೀರಿ? ನನಗೂ ನನ್ನ ಸೊಸೆಯ ಮೇಲೆ ಪ್ರೀತಿ ಇದೆ. ಆದರೆ ಸಂಬಂಧ ಮಾತ್ರ ಕತ್ತಿಯ ಅಲುಗಿನ ಹಾಗೆ ಭಾಸವಾಗುತ್ತದೆ. ಆದರೆ ನಿಮ್ಮಿಬ್ಬರ ಸಂಬಂಧ ಅದೆಷ್ಟು ಸಹಜವಾಗಿ, ಸ್ನೇಹಮಯವಾಗಿ ಇದೆ!''

``ನಿಮ್ಮ ಸೊಸೆ ಸಹ ಬಹಳ ಒಳ್ಳೆಯವಳೇ ಮೈಥಿಲಿ.''

``ಹೌದು,'' ಮೈಥಿಲಿ ಒಂದು ದೀರ್ಘ ಉಸಿರೆಳೆದುಕೊಂಡು ಮಾತು ಮುಂದುವರಿಸಿದಳು, ``ಆದರೆ ಅತ್ತೆ ಸೊಸೆಯರ ಸಂಬಂಧದ ತಂತು ಅದೆಷ್ಟು ಸೂಕ್ಷ್ಮವಾಗಿರುತ್ತದೆಂದರೆ, ಕೊಂಚ ಎಳೆದರೆ ಕಿತ್ತುಹೋಗುವ ಭಯ, ಸಡಿಲ ಬಿಟ್ಟರೆ ಗಂಟಾಗುವ ಭಯ. ಈ ಸಂಬಂಧದಲ್ಲಿ ನಿಶ್ಚಿಂತೆಯಿಂದ ಇರಲಾಗುವುದಿಲ್ಲ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.''

``ಇರಬಹುದು. ಎಲ್ಲರ ಅನುಭವ ಬೇರೆ ಬೇರೆಯಾಗಿರುತ್ತದೆ. ನನಗೆ ನಿತ್ಯಾಳ ಜೊತೆ ಹೀಗೆ ಅನ್ನಿಸುವುದಿಲ್ಲ,'' ಶೈಲಜಾ ಮಾತು ಮುಗಿಸುತ್ತಾ ಹೇಳಿದಳು.

``ಸರಿ ಶೈಲಜಾ, ನಾನು ಹೊರಡುತ್ತೇನೆ. ನಿತ್ಯಾ ಆಫೀಸಿನಿಂದ ಬರುವ ಸಮಯವಾಯಿತು. ಏನಾದರೂ ಅಗತ್ಯವಿದ್ದರೆ ಹೇಳಿ,'' ಎಂದು ಹೇಳಿ ಮೈಥಿಲಿ ಹೊರಟುಹೋದಳು. ಬಹಳ ಹೊತ್ತಿನಿಂದ ಕುಳಿತೇ ಇದ್ದ ಶೈಲಜಾ ಸುಸ್ತಿನಿಂದ ಹಾಸಿಗೆಗೆ ಒರಗಿದಳು.

ಶೈಲಜಾಳಿಗೆ 15 ದಿನಗಳ ಹಿಂದೆ ಬಂದಿದ್ದ ತೀವ್ರ ಜ್ವರ ಅವಳನ್ನು ತೀವ್ರವಾಗಿ ನಿತ್ರಾಣಗೊಳಿಸಿತ್ತು. ಅತಿಯಾದ ಜ್ವರ, ಮೈ ಕೈ ನೋವು, ವಾಂತಿ ಇವೆಲ್ಲದ್ದರಿಂದ ಅವಳು ಕಂಗಾಲಾಗಿದ್ದಳು. ನಿತ್ಯಾ ಆಫೀಸಿಗೆ ರಜೆ ಹಾಕಿ ಹಗಲು ರಾತ್ರಿ ಎನ್ನದೆ ಬಹಳ ಮುತುವರ್ಜಿಯಿಂದ ನೋಡಿಕೊಂಡಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ