ಶಶಿಕಲಾ ಪವಿತ್ರಾಳಿಗೆ ಅವಳ ಮದುವೆ ಬಹಳ ಮುಂದೂಡುವುದು ಬೇಡ ಎಂದು ಮತ್ತೊಮ್ಮೆ ನೆನಪಿಸಿದಳು.``ಈ ವಯಸ್ಸಿನಲ್ಲಿ ಮದುವೆಯೇ? ಯಾಕೆ ಸುಮ್ಮನೆ ತಮಾಷೆ ಮಾಡ್ತೀಯಾ? ಜನ ಏನಂತಾರೆ ಅನ್ನೋದನ್ನೂ ಯೋಚಿಸು.''ಶಶಿ ಇದಕ್ಕೆ ಮುಂಚೆಯೇ ಗೆಳತಿ ಬಳಿ ಈ ವಿಷಯವನ್ನು ಹಲವು ಬಾರಿ ಚರ್ಚಿಸಿದ್ದಳು. ಇಂದು ಮತ್ತೆ ಹೇಳಿದಳು, ``ನಿನ್ನ ಬಗ್ಗೆನೂ ಸ್ವಲ್ಪ ಯೋಚಿಸೇ ಹಸಿ ದಡ್ಡಿ! 45 ವರ್ಷ ಒಂಟಿಯಾಗಿ ಹೀಗೇ ಕಳೆದುಬಿಟ್ಟಿದ್ದಿ. ಈ ನಿನ್ನ ಒಂಟಿತನ, ಚಿಂತೆಗಳು, ಕಷ್ಟ ಕಾರ್ಪಣ್ಯಗಳು ನಿನ್ನನ್ನು ಕಾಡುತ್ತಿರುವಾಗ ಇಷ್ಟು ವರ್ಷ ಯಾರಿಗಾಗಿ ನೀನು ಜೀವ ತೇಯ್ದೆಯೋ ಅವರು ನಿನ್ನನ್ನು ವಿಚಾರಿಸಲು ಬರುತ್ತಾರೆಯೇ? ಜನ ಏನಂತಾರೋ ಅಂತ ತಾನೇ ಅಂತೀಯಾ..... ಯಾವ ಹಾಳು ಜನರೇ..... ನೀನು ಕಷ್ಟಪಡುವಾಗ ನೋಡಿ ಕಿಸಿಯುವ, ಆಡಿಕೊಳ್ಳುವ, ನೀನು ಮೇಲೇರಿದಾಗ ಹೊಟ್ಟೆ ಉರಿಯಿಂದ ಸಾಯುವ ಈ ಹಾಳು ಜನರ ಗೊಡವೆ ನಿನಗೇಕೆ ಬೇಕು? ಮದುವೆ ಆದರೂ ಆಗದೆ ಇದ್ದರೂ ಅವರ ಗಾಸಿಪ್‌ ಟಾಕ್‌ಗೆ ನೀನೊಂದು ವಸ್ತು, ಅಷ್ಟೆ!''

``ಯಾಕೆ ಅಷ್ಟೊಂದು ಆವೇಶ ಪಡ್ತಿ? ಅನ್ಯಾಯವಾಗಿ ನಿನ್ನ ಬಿ.ಪಿ. ಜಾಸ್ತಿ ಆಯ್ತು ನೋಡು. ಇಷ್ಟು ವರ್ಷಗಳೇ ಆಗಿಹೋಯಿತು, ಏನಾಗಬೇಕೋ ಆಗಲಿ ಬಿಡು.''

ಇವಳ ಮಾತು ಮುಗಿದಾಗ ಶಶಿ ಹೊರಟಾಗಿತ್ತು. ಇಬ್ಬರೂ ಪ್ರಾಣ ಸ್ನೇಹಿತೆಯರು, ಒಂದೇ ಕಾಲೋನಿಯಲ್ಲಿದ್ದರು. ವಿವಾಹಿತೆಯಾದ ಶಶಿಕಲಾ ಇಬ್ಬರು ಮಕ್ಕಳ ತಾಯಿ. 45ರ ಪವಿತ್ರಾ ಇನ್ನೂ ಕನ್ಯೆ. ಶಶಿ ಹೊರಟ ನಂತರ ಪವಿತ್ರಾ ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಂಡಳು. ಅವಳು ಹೇಳಿದಂತೆ ತನ್ನ ಅರ್ಧ ಆಯುಷ್ಯವೇ ಕಳೆದುಹೋಗಿದೆ ಎನಿಸಿತು. ತಾನು 20 ವರ್ಷದವಳಾಗಿದ್ದಾಗ ಮಾತ್ರ ಅವಳಿಗೆ ಕನ್ನಡಿ ನೋಡಿಕೊಳ್ಳುವ ಆಸಕ್ತಿ ಇತ್ತು. ಕ್ರಮೇಣ ಎಲ್ಲಾ ಹೋಯ್ತು.

ತಲೆ ಬಾಚುವಾಗಲೂ ಬಾಚಣಿಗೆ ಹಿಡಿದು 4-6 ಬಾರಿ ಬಾಚಿ, ಜಡೆ ಹೆಣೆದು, ಅಭ್ಯಾಸ ಬಲದಿಂದ ಕುಂಕುಮ ಹಚ್ಚಿಕೊಂಡೋ, ಬಿಂದಿ ಇರಿಸಿಕೊಂಡೋ ಮಾಡುವಳು. ಯಾವ ಸ್ನೋಪೌಡರ್‌ಗಳ ಗೊಡವೆಯೂ ಅವಳಿಗೆ ಇರಲಿಲ್ಲ. ಈ ರೀತಿ ಅವಳು ತನ್ನನ್ನು ತಾನು ಕನ್ನಡಿಯಲ್ಲಿ ಗಮನಿಸ ಬಯಸಿದಳು. ನೆರೆತ ಕೂದಲು, ಅಲ್ಲಲ್ಲಿ ಸುಕ್ಕಾದ ಚರ್ಮ, ತುಸು ಸಡಿಲವಾಗಿ ಜೋತುಬಿದ್ದ ಕೆನ್ನೆ, ಗಲ್ಲದ ಬಳಿ ನೆರಿಗೆ, ಕಂಗಳ ಕೆಳಗಿನ ಕಪ್ಪು ವೃತ್ತಗಳು...... ಒಟ್ಟಿನಲ್ಲಿ ನಿನ್ನ ಯೌವನ ಯಾವತ್ತೋ ಜಾರಿಹೋಯಿತು ಎಂದು ಸಾರುತ್ತಿದ್ದ. ತನ್ನನ್ನು ತಾನು ಸಿಂಗರಿಸಿಕೊಳ್ಳುವುದರತ್ತ ಎಂದೂ ಅವಳು ಗಮನ ಕೊಟ್ಟವಳಲ್ಲ. ಇಂದು ನಿಧಾನವಾಗಿ ತಲೆ ಬಾಚಿ, ನೀಟಾಗಿ ಜಡೆ ಹೆಣೆಯೋಣ ಎಂದು ಹಳೆಯ ವಿಚಾರಗಳನ್ನು ನೆನಪಿಸಿಕೊಳ್ಳತೊಡಗಿದಳು.

ಅವಳು ಡಿಗ್ರಿಯ 2ನೇ ವರ್ಷದಲ್ಲಿ ಕಲಿಯುತ್ತಿದ್ದಾಗ ಇನ್ನೂ 20 ವರ್ಷ. ಆಗ ರಸ್ತೆ ಅಪಘಾತದ ದುರಂತಕ್ಕೆ ಸಿಲುಕಿ ಅವರ ತಂದೆ ಆಕಸ್ಮಿಕವಾಗಿ ತೀರಿಕೊಂಡಿದ್ದರು. ಸ್ವಂತ ಮನೆ ಇರಲಿಲ್ಲ. ತಾಯಿಗೆ ನೌಕರಿಯೂ ಇಲ್ಲ. ತಂದೆ ಆಫೀಸಿನಿಂದ ತಾಯಿ ಹೆಸರಿಗೆ ಬರುತ್ತಿದ್ದ ಪೆನ್ಶನ್‌ ಹಣ ಆ ಸಂಸಾರ ನಡೆಸಲು ಏನೇನೂ ಸಾಲುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ