ಶರತ್ ಚಂದ್ರ

ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆ ,ಲಿಂಗ ಭೇದದಂತಹ ಪಿಡುಗು  ಅನಾದಿಕಾಲದಿಂದ ನಮ್ಮ ದೇಶದಲ್ಲಿ ಇದೆ. ಶಿಕ್ಷಣ,ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯ ಬಂದಾಗ ನಮ್ಮ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೂ ಕೂಡ ಇನ್ನೂ ಕೆಲವೊಂದು ಹಳ್ಳಿಗಳಲ್ಲಿ ಮತ್ತು ನಗರದಲ್ಲೂ ಈ ವಿಷಯಗಳಿಗೆ ಸಂಭಂದ ಪಟ್ಟ ಒಂದಷ್ಟು  ಘಟನೆ ಗಳು ದಾಖಲಾಗುತ್ತಿವೆ.

ಈ ಎಲ್ಲಾ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ವನ್ನು 'ತಾಯವ್ವ 'ಚಿತ್ರದ ಮೂಲಕ ನಿರ್ದೇಶಕ ಸಾತ್ವಿಕ್ ಪವನ್ ಮಾಡಿದ್ದಾರೆ.

ಕಥೆ  ಹಳೆಯ ಸಿನಿಮಾ ಗಳ format ನಲ್ಲಿದ್ದರೂ, ಕೂಡ ಹೆಣ್ಣು ಮಗುವಿನ ಬಗ್ಗೆ ತಾರತಮ್ಯ ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆ ಸಮಸ್ಯೆ ಗಳ ವಿಷಯ ಕ್ಕೆ ಸಂಬಂದಿಸಿದ ವಿಷಯ ಗಳನ್ನು ಮನೋರಂಜನಾತ್ಮಕವಾಗಿ ಹೇಳುವ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿ ಯಾಗಿ ದೆ.

ಚಿತ್ರದ ಪ್ರಮುಖ ಪಾತ್ರಧಾರಿ ಮತ್ತು ನಿರ್ಮಾಪಕಿ ಕೂಡ ಆಗಿರುವ ಗೀತಾ ಪ್ರಿಯಾ ಸೇರಿದಂತೆ ಹೆಚ್ಚಿನ ಎಲ್ಲಾ ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರ ಬಿಡುಗಡೆ ಮುನ್ನ ಇದು ಸೂಲಗಿತ್ತಿಯ ಸುತ್ತ ಸುತ್ತುವ ಸಬ್ಜೆಕ್ಟ್  ಇದ್ದು ಸೂಲಗಿತ್ತಿಯರ ಸಮಸ್ಯೆ ಗಳು, ಸವಾಲು ಗಳ ಬಗ್ಗೆ ಜಾಸ್ತಿ ತಿಳಿಸ ಬಹುದೆಂದು ಊಹಿಸಲಾಗಿತ್ತು.  ಆದರೆ ಅಂತಹ ಪ್ರಯತ್ನ ಇಲ್ಲಿ ನಡೆದಿಲ್ಲ.ತಾಯವ್ವ ನ ಪಾತ್ರಕ್ಕೆ ಅಂತಹ ಅವಕಾಶ ವಿಲ್ಲದಿದ್ದರೂ ಕೂಡ ಚಿತ್ರದುದಕ್ಕೂ ಗೀತಾ ಪ್ರಿಯಾ ಮಿಂಚುತ್ತಾರೆ

ಈ ಚಿತ್ರದಲ್ಲಿ ಅಭಿನಯಿಸಿದ ಬಹಳಷ್ಟು ಕಲಾವಿದರಿಗೆ ಇದು ಮೊದಲ ಚಿತ್ರವಾದರೂ ,ಎಲ್ಲಾ ಕಲಾವಿದರಿಂದ ಅಚ್ಚುಕಟ್ಟಾಗಿ ನಿರ್ದೇಶಕರು ಕೆಲಸ ತೆಗೆಯುವ ವಿಷಯದಲ್ಲಿ ಯಶಸ್ಸು ಕಂಡಿದ್ದಾರೆ.

ಉಳಿದಂತೆ ನಿರ್ದೇಶನದ ಜೊತೆಗೆ ಛಾಯಾಗ್ರಾಹಣದ ಜವಾಬ್ದಾರಿ ಕೂಡ ವಹಿಸಿಕೊಂಡಿರುವ  ಸಾತ್ವಿಕ್ ಪವನ್ ಅವರ ಹಳ್ಳಿಯ ಫ್ರೇಮ್ ಗಳು ಹಿತಮಿತ ವಾಗಿದೆ.

1000547712

ಅನಂತ್ ಆರ್ಯನ್ ಅವರು ಗೀತಾಪ್ರಿಯಾ ಅವರೇ ಹಾಡಿರುವ ಜಾನಪದ ಹಾಡಿನ ತುಣುಕುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿದ್ದು ಹಾಡುಗಳು ಕೇಳುವಂತಿವೆ.

ಆದರೆ ಈ ಹಾಡಿನ ತುಣುಕುಗಳು ಚಿತ್ರದ ಓಟಕ್ಕೆ ಅಲ್ಲಲ್ಲಿ ಬ್ರೇಕ್ ಹಾಕುತ್ತವೆ. ಕಥೆ ಚಿತ್ರಕಥೆ ಬರೆದಿರುವ ಪಿ.ಶೇಷಗಿರಿ  ಅವರ ಹಳ್ಳಿ ಭಾಷೆಯ ಸಂಭಾಷಣೆ ಗಳು  ಇಷ್ಟ ವಾಗುತ್ತದೆ

1000547716

ಒಟ್ಟಿನಲ್ಲಿ ಸಾಮಾಜಿಕ ಸಂದೇಶ ವಿರುವ ಕಥೆ ಯನ್ನು ಡಾಕ್ಯುಮೆಂಟರಿ ರೂಪದಲ್ಲಿ ಹೇಳದೆ

ಮನೋರಂಜನಾತ್ಮಕವಾಗಿ ಪ್ರೇಕ್ಷಕ ರಿಗೆ ತಲುಪಿಸುವ

ಉತ್ತಮ  ಪ್ರಯತ್ನವನ್ನುಸಾತ್ವಿಕ್ ಪವನ್ ಮಾಡಿ ದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ