ಮಿನಿ ಕಥೆ - ಶೈಲಾ ಎಸ್‌. ವಾಲಿ

ಕೇವಲ ಶೇ.95 ಅಂಕಗಳನ್ನು ಪಡೆದವರಿಗೆ ಮಾತ್ರ ಶಾಲಾಕಾಲೇಜುಗಳಲ್ಲಿ ಪ್ರವೇಶ ಎನ್ನುವ ಇಂದಿನ ಆಧುನಿಕ ಮನೋಭಾವದ ಶಿಕ್ಷಣ ಸಂಸ್ಥೆಯವರಿಗೆ, ಅನಕ್ಷರಸ್ಥರ ಮಕ್ಕಳು ಏಳಿಗೆ ಹೊಂದುವುದು ಬೇಕಾಗಿಲ್ಲವೇ.....? ಇಂಥವರಿಗೆ ಸುಮನಾ ಪಾಠ ಕಲಿಸಿದ್ದು ಹೇಗೆ.....?

``ಪಾರ್ವತಿ.... ಏನ್‌ ಮಾಡ್ತಾ ಇದ್ದೀಯಾ? ಬೇಗ ಬಾ..... ಬೇಗ ಟಿಫಿನ್‌ ಮುಗಿಸಿ, ಅಲ್ಲಿ ನಿನ್‌ ಮಗನ ಕಾರ್ಯಕ್ರಮಕ್ಕೆ ಹೋಗ್ಬೇಕು.... ನೀನು ಮನೆಗೆ ಹೋಗಿ ಬೇಗ ರೆಡಿ ಆಗಿ ಬಾ.... ಮೊನ್ನೆ ದೀಪಾವಳಿ ಹಬ್ಬಕ್ಕೆ ಕೊಟ್ಟ ಸೀರೆ ಉಟ್ಕೊಂಡು ಬಾ.... ನಿನ್ನ ಮಗನ ಸಾಧನೆಯನ್ನು ನೀನು ಕಣ್ತುಂಬ ನೋಡಬೇಕು, ಸಂಭ್ರಮ ಪಡಬೇಕು.... ಕಾರ್ತಿಕ್‌ ಗೆ ಸಮಾರಂಭಕ್ಕೆ ಬೇಗ ಹೋಗು ಅಂದಿದ್ದೆ, ಹೋಗಿದ್ದಾನೆ ಅಲ್ವಾ.....?'' ಎಂದು ಒಂದೇ ಉಸಿರಿಗೆ ಹೇಳುತ್ತಿದ್ದ ಸುಮನಾ ಪಾರ್ವತಿ ಕಣ್ಣಿಗೆ ದೇವತೆಯಂತೆಯೇ ಕಂಡಳು.

ಏಕೆಂದರೆ ಅದಕ್ಕೂ ಕಾರಣ.... ಪಾರ್ವತಿ ಮಗ ಎಸ್‌.ಎಸ್‌.ಎಲ್.ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೇ ಮೊದಲ ರಾಂಕ್‌ ಬಂದಿದ್ದು, ಇಂದು ಮುಖ್ಯಮಂತ್ರಿ ಕಡೆಯಿಂದ ಪಾರಿತೋಷಕ ಹಾಗೂ ಪ್ರಮಾಣಪತ್ರ ಪಡೆಯುವ ಸಡಗರ ಹಾಗೂ ಸಂಭ್ರಮದ ದಿನವಾಗಿತ್ತು.

ಈಗ್ಗೆ 12 ವರ್ಷಗಳ ಹಿಂದೆ ಸುಮನಾ ತನ್ನ ಮಗಳು ಸಾನ್ವಿಗೆ ಆಆಇಈ ಕಲಿಸುತ್ತಿದ್ದಾಗ, ಮನೆಗೆಲಸಕ್ಕೆ ಬರುತ್ತಿದ್ದ ಪಾರ್ವತಿ ಮಗ ಕಾರ್ತಿಕ್‌ ಕೇವಲ 3 ವರ್ಷದ ಹುಡುಗ, ಸಾನ್ವಿಗಿಂತ ಮೊದಲು ಅವನೇ ಅಕ್ಷರಗಳನ್ನು ಉಚ್ಚರಿಸುತ್ತಿದ್ದ. ಅದನ್ನು ಗಮನಿಸಿದ ಸುಮನಾ ತನ್ನ ಮಗಳ ಜೊತೆಗೆ ಆ ಹುಡುಗನನ್ನೂ ಕೂರಿಸಿಕೊಂಡು ಕಲಿಸಲು ಶುರು ಮಾಡಿದಳು. ಅವನ ಗ್ರಹಣಶಕ್ತಿ, ಕಲಿಯಲು ಅವನಿಗಿದ್ದ ಆಸಕ್ತಿ ಗುರುತಿಸಿದ ಸುಮನಾ, ತನ್ನ ಮಗಳು ಕಲಿಯುತ್ತಿದ್ದ ಪ್ರತಿಷ್ಠಿತ ಶಾಲೆಯ ಅಪ್ಲಿಕೇಶನ್‌ ಫಾರ್ಮ್ ತಂದು ಅದನ್ನು ತಾನೇ ತುಂಬಿ, ಪಾರ್ವತಿ ಗಂಡನನ್ನು ಕರೆಸಿ ಇಬ್ಬರಿಗೂ ಆ ಶಾಲೆಗೆ ಹೋಗಿ ಮಗುವನ್ನು ದಾಖಲು ಮಾಡಿ ಬನ್ನಿ, ಅದರ ಸಂಪೂರ್ಣ ಖರ್ಚು ತಾನೇ ವಹಿಸಿಕೊಳ್ಳುವುದಾಗಿ ಹೇಳಿ ಕಳಿಸಿಕೊಟ್ಟಿದ್ದಳು, ಆದರೆ ಕಾರ್ತಿಕ್‌ ನ ಪೋಷಕರು ಅಕ್ಷರಸ್ಥರಲ್ಲದ ಕಾರಣ ಶಾಲೆಯ ಆಡಳಿತ ಮಂಡಳಿ ಮಗುವನ್ನು ದಾಖಲಾತಿ ಮಾಡಿಕೊಳ್ಳಲಿಲ್ಲ.

ಸಪ್ಪೆ ಮುಖ ಮಾಡಿಕೊಂಡು ಹಿಂದುರುಗಿದ ಪಾರ್ವತಿ ದಂಪತಿಗಳನ್ನು ನೋಡಿ, ತಾನೇ ಖುದ್ದಾಗಿ ಅವರನ್ನು ಪುನಃ ಶಾಲೆಗೆ ಕರೆದುಕೊಂಡು ಹೋದಳು. ಆದರೆ ಶಾಲೆಯ ಪ್ರಾಂಶುಪಾಲರು ತಾವು ಅನಕ್ಷರಸ್ಥ ಪೋಷಕರ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳುವುದಿಲ್ಲ. ಇಬ್ಬರಲ್ಲಿ ಒಬ್ಬರಾದರೂ ಕಡ್ಡಾಯವಾಗಿ ಗ್ರಾಜುಯೇಶನ್‌ ಆಗಿರಲೇಬೇಕೆಂದು ಖಡಾಖಂಡಿತವಾಗಿ ಆಗ್ರಹಿಸಿದರು.

ಸುಮನಾ ಅವರನ್ನು ಪರಿಪರಿಯಾಗಿ ಬೇಡಿಕೊಂಡಳು. ತಾನೇ ಆ ಹುಡುಗನಿಗೂ ಕಲಿಸುವುದಾಗಿ ಹಾಗೂ ಅವನ ಸಂಪೂರ್ಣ ಜವಾಬ್ದಾರಿ ತಾನು ವಹಿಸಿಕೊಳ್ಳುವುದಾಗಿ ಹೇಳಿದರೂ ಶಾಲೆಯ ಆಡಳಿತ ವರ್ಗ ಒಪ್ಪಲೇ ಇಲ್ಲ. ಬೇಸರಗೊಂಡ ಸುಮನಾ ಅದೇ ಶಾಲೆಯಲ್ಲಿ ಒಂದನೇ ತರಗತಿ ಕಲಿಯುತ್ತಿದ್ದ ತನ್ನ ಮಗಳ ಟಿ.ಸಿ ವಾಪಸ್‌ ತೆಗೆದುಕೊಂಡು ಬಂದಳು.

ನಂತರ ತನ್ನ ಮಗಳೊಂದಿಗೆ ಪಾರ್ವತಿಯ ಮಗನನ್ನೂ ಬೇರೆ ಇಂಗ್ಲಿಷ್‌ ಮೀಡಿಯಂ ಸ್ಕೂಲಿ‌ಗೆ ದಾಖಲು ಮಾಡಿ, ಎರಡೂ ಮಕ್ಕಳಿಗೆ ಪ್ರತಿದಿನ ತಾನೇ ಖುದ್ದು ಟ್ಯೂಷನ್‌ ಹೇಳಿಕೊಟ್ಟು ಇಬ್ಬರನ್ನೂ ಕ್ಲಾಸ್‌ ನಲ್ಲಿ ಉತ್ತಮ ಅಂಕ ಪಡೆಯುವ ಮಕ್ಕಳನ್ನಾಗಿ ಮಾಡಿದ್ದಳು. ಹೀಗೆಯೇ ಪ್ರತಿ ತರಗತಿಯಲ್ಲೂ ಪ್ರಥಮ ರಾಂಕ್‌ ಪಡೆಯುತ್ತಿದ್ದ ಕಾರ್ತಿಕ್‌ ಈಗ ಹತ್ತನೇ ತರಗತಿಯಲ್ಲಿ ರಾಜ್ಯಕ್ಕೇ ಪ್ರಥಮ ರಾಂಕ್‌ ಪಡೆಯುವ ಮೂಲಕ ಸುಮನಾಳ ಪರಿಶ್ರಮಕ್ಕೆ ಫಲ ಕೊಟ್ಟಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ