``ಹಲೋ ಮಾಲತಿ.''

``ಹಲೋ ಮಧು.''

``ಎಲ್ಲಾದ್ರೂ ಹೋಗೋಣ್ವಾ?''

``ಎಲ್ಲಿಗೆ?''

``ಯಾವುದಾದ್ರೂ ನಾಟಕಕ್ಕೆ ಹೋಗೋಣ. ಆಮೇಲೆ ಯಾವುದಾದ್ರೂ ಹೋಟೆಲ್‌ನಲ್ಲಿ ಊಟ ಮಾಡೋಣ.''

``ಓ.ಕೆ.'' ನಾನು ಹೇಳಿದೆ.

ನಂತರ ನಾವಿಬ್ಬರೂ ಚಾಟಿಂಗ್‌ ನಿಲ್ಲಿಸಿದೆವು. ನಾನು ಫ್ರೆಶ್‌ ಆಗಲು ಬಾಥ್‌ರೂಮಿಗೆ ಹೋದೆ.

ಇತ್ತ ನೀರಿನ ತಂಪು ಹನಿಗಳು ಸುಡುತ್ತಿದ್ದ ನನ್ನ ಮನಕ್ಕೆ ಶೀತಲತೆ ಕೊಡುತ್ತಿದ್ದರೆ ಅತ್ತ ನಾನು ಮಧುವನ್ನು ಭೇಟಿಯಾಗಲು ಹೊತೊರೆಯುತ್ತಿದ್ದೆ.

ಒಂದು ಕಡೆ ರವಿ ಉಷ್ಣದ ತಾಪವಾಗಿದ್ದರೆ. ಇನ್ನೊಂದು ಕಡೆ ಮಧು ಜೀವನದ ಉತ್ಸಾಹದ ಅಲೆಯಾಗಿದ್ದ. ರವಿಯಂತೂ ಎಂದೂ ನನ್ನ ರೂಪ, ಸೌಂದರ್ಯವನ್ನು ಹೊಗಳಲಿಲ್ಲ. ಏಕೆಂದರೆ ಅವರ ತಟಸ್ಥ ಸ್ವಭಾವ ಅದಕ್ಕೆ ಕಾರಣವಾಗಿತ್ತು. ಆದರೆ ಮಧುವಿಗೆ ನನ್ನನ್ನು ಎಷ್ಟು ಹೊಗಳಿದರೂ ಸಾಲದು.

``ಒಂದು ವೇಳೆ ನೀನು ನನ್ನ ಹೆಂಡತಿಯಾಗಿದ್ದಿದ್ದರೆ.... ಎಷ್ಟು ಚೆನ್ನಾಗಿರುತ್ತಿತ್ತು ಮಾಲತಿ. ನೀನು ಮಾಡುವ ಅಡುಗೆ ಜೊತೆಗೆ ನಿನ್ನ ಸೌಂದರ್ಯದ ಮೋಡಿ. ನಾನಂತೂ ಗಾಳಿಪಟದೊಂದಿಗೆ ಸೂತ್ರ ಬರುವಂತೆ ನಿನ್ನತ್ತ ಸೆಳೆಯಲ್ಪಟ್ಟಿದ್ದೇನೆ,'' ಮಧು ಹೇಳುತ್ತಿದ್ದ.

ನಾನು ಮಧು ಹೇಳಿದ್ದನ್ನು ಕೇಳಿ ಮುಗ್ಧಳಾಗಿ ಮೈಮರೆಯುತ್ತಿದ್ದೆ. ಒಂದು ವೇಳೆ ರವಿಯೂ ಮಧುವಿನಂತೆ ವಾಚಾಳಿಯೂ ನಗುಮುಖದವರೂ ಆಗಿದ್ದಿದ್ದರೆ? ರವಿ ನನ್ನನ್ನು ಇಷ್ಟಪಡುವುದಿಲ್ಲ ಎಂದಲ್ಲ. ಆದರೆ ಇದುವರೆಗೆ ಅವರ ಪ್ರೀತಿಯ ಆವಳನ್ನು ನಾನು ಅಳೆಯಲಾಗಿಲ್ಲ.

ರವಿ ತಮಗೆ ಒಂದು ಸೀಮಾರೇಖೆ ಹಾಕಿಕೊಂಡಿದ್ದಾರೆ. ಫೈಲುಗಳು ಮತ್ತು ಲ್ಯಾಪ್‌ಟಾಪ್‌ ಅವರ ಬದುಕಾಗಿದೆ. ಅವರು ನನ್ನನ್ನೂ ಒಂದು ಫೈಲ್ ತರಹ ಕಾಣುತ್ತಾರೆ. ಅವರು ನನ್ನ ಬಳಿ ಇದ್ದಾಗ, ಒಂದು ಕಂಪನಿಯ ಸಿಇಓ ನನ್ನನ್ನು ತದೇಕಚಿತ್ತದಿಂದ ನೋಡುತ್ತಿರುವಂತೆ ಅನ್ನಿಸುತ್ತದೆ.

ಅವರ ಪ್ರೀತಿಯ ಕಾವು, ಅವರ ಹುಚ್ಚಾಟ, ಪರಸ್ಪರರಲ್ಲಿ ಕಳೆದುಹೋಗುವ ಇಚ್ಛೆ ಈಗ ಎಲ್ಲೋ ಮಾಯವಾದಂತಿದೆ.

ನಾನು ಅವರ ಬಳಿ ಹೋದಾಗಲೆಲ್ಲಾ ಅವರು ಕೈಯಲ್ಲಿದ್ದ ಫೈಲನ್ನು ಮುಚ್ಚಿ, ``ಉಫ್‌, ಮಾಲತಿ ನಾಳೆ ಒಂದು ಅರ್ಜೆಂಟ್ ಮೀಟಿಂಗ್‌ ಇದೆ,'' ಎನ್ನುತ್ತಾರೆ.

ನಾನು ರೇಗಿ ಏಳತೊಡಗಿದಾಗ ಇದ್ದಕ್ಕಿದ್ದಂತೆ ನನ್ನನ್ನು ಮುಟ್ಟಲೋ ಬೇಡವೋ ಎಂಬಂತೆ ತೋಳುಗಳಿಂದ ಬಳಸುತ್ತಿದ್ದರು. ಅವರು ನನ್ನನ್ನು ಚೆನ್ನಾಗಿ ಪ್ರೀತಿಸಲಿ, ನನ್ನ ಪ್ರೀತಿಯಲ್ಲಿ ಮುಳುಗಿರಲಿ ಎಂದು ಬಯಸುತ್ತಿದ್ದೆ. ಆದರೆ ಈ ಬಯಕೆ ನನ್ನ ಎದೆಯಲ್ಲಿ  ಒಂದು ನೋವಾಗಿ ಉಳಿದಿದೆ.

ಅವರ ಕೆಲಸದ ಒತ್ತಡ, ಜೊತೆಗೆ ಅವರ ಅಂತರ್ಮುಖಿ ಸ್ವಭಾವದಿಂದಾಗಿ ನನಗೆ ಉತ್ತುಂಗ ಸುಖ ಸಿಗುತ್ತಿರಲಿಲ್ಲ.

ನಾನು ಬೇಸರಪಡುತ್ತೇನೆಂದು ಅವರು ನನ್ನ ಹತ್ತಿರ ಬರುತ್ತಾರೆ. ದೈಹಿಕ ಸಂಬಂಧವನ್ನು ಯಾಂತ್ರಿಕವಾಗಿ ಮುಗಿಸಿ ಅತ್ತ ತಿರುಗಿ ಮಲಗಿಬಿಡುತ್ತಾರೆ. ಕೂಡಲೇ ಅವರಿಗೆ ಗಾಢ ನಿದ್ರೆ ಬಂದುಬಿಡುತ್ತದೆ. ಆದರೆ ನಾನು ವ್ಯಾಕುಲತೆಯಿಂದ ಮಗ್ಗುಲು ಬದಲಿಸುತ್ತಿರುತ್ತೇನೆ.

ಒಮ್ಮೊಮ್ಮೆ ಗಂಡನಿಗೆ `ಅಲ್ರೀ, ಯಾಂತ್ರಿಕವಾದ ದೈಹಿಕ ಸಂಬಂಧದಿಂದ ಮಹಿಳೆಗೆ ಸಂತೃಪ್ತಿ ಸಿಗಲ್ಲಾಂತ ನಿಮಗೆ ಗೊತ್ತಾಗಲ್ವಾ?' ಎಂದು ಕೇಳಿಯೇಬಿಡೋಣ ಎನಿಸುತ್ತಿತ್ತು, ಯಾವುದೇ ಸಂಬಂಧ, ಸಂಪೂರ್ಣ ತನುಮನದಿಂದ ಏರ್ಪಟ್ಟಾಗಲೇ ಅದು ಯಶಸ್ವಿಯಾಗುತ್ತದೆ. ಆದರೆ ಅವರು ನನ್ನ ಭಾವನೆಗಳಿಗೆ ಎಲ್ಲಿ ಬೆಲೆ ಕೊಡುತ್ತಾರೆ? ಪ್ರೀತಿ ಎಂತಹ ಅನುಭೂತಿಯೆಂದರೆ ತಪ್ಪು ಸರಿಗಳ ನಡುವೆ ಅಂತರ ತಿಳಿಯುವುದಿಲ್ಲ. ಬದಲಾಗಿ ಪ್ರೀತಿ ಸಂಪೂರ್ಣ ಸಮರ್ಪಣೆ ಬಯಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ