ನೀನು ನನ್ನ ಹೆಂಡತಿ, ಆದ್ದರಿಂದ ನನ್ನ ಸೇವೆ ಮಾಡಲೇಬೇಕು. ನನ್ನ ಮಕ್ಕಳಿಗೆ ತಾಯಿ ನೀನು, ಹೀಗಾಗಿ ಅವರನ್ನು ಸಾಕಿ ಸಲಹಬೇಕು. ಅತ್ತೆ, ಮಾವಂದಿರಿಗೆ ಸೊಸೆಯಾಗಿರುವೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾನು ನಿನ್ನ ಗಂಡನಾಗಿದ್ದರಿಂದ ನೀನು ನಮ್ಮೆಲ್ಲರನ್ನೂ ಸಾಕಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿರುವೆಯೋ ಇಲ್ಲವೋ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಗಮನಿಸುವುದು ನನ್ನ ಕರ್ತವ್ಯ, ಎನ್ನುವ ಗಂಡಂದಿರೇ ಹೆಚ್ಚು.

ಇದರ ಜೊತೆಗೆ ಹೆಂಡತಿಯರ ಜೀವನದ ಹಾಡು ಪಾಡುಗಳಿಗೇನೂ ಕೊರತೆಯಿಲ್ಲ. `ಏತಿ ಅಂದ್ರೆ ಪ್ರೇತಿ' ಎನ್ನುವ ಮೂದೇವಿ ಪಂಗಡದವರಂತೂ ಇದ್ದೇ ಇದ್ದಾರೆ. ಅವರು ಬಾಯಿ ತೆರೆದರೆ ಸಾಕು, ನಾಲಿಗೆಯ ತುದಿ ಮೇಲೆ ಒಂದೇ ವೇದವಾಕ್ಯ, ``ಅರೆ ವಾಹ್, ಮದುವೆ ಮಾಡಿಕೊಂಡಿದ್ದೇನಯ್ಯ.... ನಾನೇನೂ ನಿನ್ನ ಜೊತೆ ಕಳ್ಳತನದಿಂದ ಓಡಿಬಂದಿಲ್ಲ. ಸಪ್ತಪದಿ ತುಳಿದಿದ್ದೇನೆ. ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡಿದ್ದೇನೆ. ಹೀಗಾಗಿ ನನ್ನ ಎಲ್ಲಾ ಬೇಕು ಬೇಡಗಳನ್ನು ಗಮನಿಸಬೇಕಾದದ್ದು ನಿನ್ನ ಕರ್ತವ್ಯ. ಸಾಲ ಸೋಲಾನಾದ್ರೂ ಮಾಡು, ದರೋಡೆಯನ್ನಾದ್ರೂ ಮಾಡು, ಒಟ್ಟಾರೆ ನನಗೆ ಬೇಕಾದ್ದನ್ನು ತಂದು ಹಾಕು ಅಷ್ಟೇ,'' ಎನ್ನುವ ಹೆಂಡಂದಿರಿಗೂ ಕೊರತೆ ಇಲ್ಲ.

ನಮ್ಮ ತೀವ್ರ ಅಧ್ಯಯನ, ಸಂಶೋಧನೆ ಹಾಗೂ ಗಂಡ ಹೆಂಡತಿಯರೊಂದಿಗೆ ಚರ್ಚೆ ನಡೆಸಿದ ಆಧಾರದ ಮೇರೆಗೆ ಕೆಲವು ವಿಶಿಷ್ಟಾತಿ ವಿಶಿಷ್ಟ ಗಂಡ ಹೆಂಡತಿಯರನ್ನು ಬೇರೆ ಬೇರೆ ಮಾಡಿದ್ದೇವೆ. ಅಂದ್ರೆ... ವರ್ಗೀಕರಿಸಿದ್ದೇವೆ. ಈ ವಿಶೇಷ ವರ್ಗೀಕರಣ ಕೇವಲ ಗಂಡಹೆಂಡತಿಯರಿಗೆ ಮಾತ್ರ. ಈಗ ಈ ವರ್ಗಗಳನ್ನು ಆಧರಿಸಿ ನಿಮ್ಮನ್ನು ನೀವೇ ಪ್ರಮಾಣೀಕರಿಸಿಕೊಂಡು, ನೀವು ಯಾವ ವರ್ಗಕ್ಕೆ ಸೇರುತ್ತೀರಿ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಿ. ಇಲ್ಲಿ ಉದ್ದೇಶಪೂರ್ವಕವಾಗಿಯೇ ನಾವು ಎರಡು ಪಕ್ಷಗಳನ್ನು ಹುಟ್ಟುಹಾಕಿದ್ದೇವೆ. ಏಕೆಂದರೆ, ಯಾವುದಾದರೊಂದೇ ಪಕ್ಷವನ್ನು ಅಟ್ಟಕ್ಕೇರಿಸಿ ಇನ್ನೊಂದು ಪಕ್ಷದವರ ಕೆಂಗಣ್ಣಿಗೆ ಗುರಿಯಾಗುವ ಸಾಹಸ, ಧೈರ್ಯ ನಮ್ಮಲ್ಲಿಲ್ಲ. ಅದೂ ಅಲ್ಲದೆ ನಮಗೂ ಒಂದು ಸಂಸಾರ ಅಂತಾ ಇದ್ದೇ ಇದೆಯಲ್ಲ.... ಅದಕ್ಕೇ ಭಯ.

ಕಂಗೆಟ್ಟ ಗಂಡ ಹೆಂಡತಿ : ಕಂಗೆಟ್ಟ ಗಂಡಂದಿರ ವಿಶೇಷತೆ ಏನೆಂದರೆ, ಹೆಂಡತಿ ಏನಕ್ಕಾದ್ರೂ `ರೀ....' ಅಂತಾ ಕೂಗಿದರೆ ಸಾಕು, ಅವಳ ಧ್ವನಿ ಅಡಗುವ ಮುನ್ನವೇ `ಜೀ ಹುಜೂರ್‌' ಎನ್ನುವ ಟೋನ್‌ನಲ್ಲಿ ತಕ್ಷಣ ಪ್ರತ್ಯಕ್ಷರಾಗಿಬಿಡುತ್ತಾರೆ. ಆದರೆ ಯಾವೊಂದು ಬೇಡಿಕೆಯನ್ನೂ ಪೂರೈಸುವುದಿಲ್ಲ. ಸದಾಕಾಲ ದಿಕ್ಕು ತಪ್ಪಿದವರಂತೆಯೇ ಇರುತ್ತ ಇನ್ನುಳಿದವರನ್ನೂ ಕಂಗೆಡಿಸುತ್ತಿರುತ್ತಾರೆ. ಕುಡಿದ ಕಾಫಿ ಕಪ್‌ನ್ನು ಸೋಫಾದ ಅಡಿಗೆ ತಳ್ಳಿಬಿಡುತ್ತಾರೆ.

ಇನ್ನು ಹೆಂಡತಿಯರ ವಿಷಯಕ್ಕೆ ಬರೋದಾದ್ರೆ, ಅವರಿಗೆ ವರ್ಷದ ಮೂನ್ನೂರ ಅರವತ್ತೈದು ದಿನ ತಲೆನೋವು, ಸೊಂಟನೋವು ಇದ್ದೇ ಇರುತ್ತದೆ. ಏನೇ ಕೆಲಸ ಮಾಡಲು ಹೇಳಿದರೂ ಹೂಂಗುಟ್ಟುತ್ತಾರೆ. ಆದರೆ ಯಾವೊಂದು ಕೆಲಸವನ್ನೂ ಮಾಡಿರುವುದಿಲ್ಲ. ಏನಪ್ಪಾ ಮಾಡೋದು....? ಬೆಳಗ್ಗೆಯಿಂದ ಸಂಜೆವರೆಗೂ ಎಷ್ಟು ಏಗಿದರೂ ಈ ಮನೆ ಕೆಲಸಗಳು ಮುಗಿಯೋದೇ ಇಲ್ಲ ಎಂದು ಇಡೀ ದಿನ ಗೊಣಗುತ್ತಲೇ ಕಾಲ ಕಳೆಯುತ್ತಾರೆ. ಯಾರಿಗೂ ನನ್ನ ಬಗ್ಗೆ ಕಾಳಜಿಯಿಲ್ಲ, ಚಿಂತೆಯಿಲ್ಲ ಎಂದು ಹಿಡಿಶಾಪ ಹಾಕುತ್ತ ಒಂದು ಗಂಟೆಯಲ್ಲಿ ಮಾಡಿ ಮುಗಿಸುವ ಕೆಲಸಕ್ಕೆ ಅರ್ಧ ದಿನ ತಗೋತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ