ಬೆಳಗ್ಗೆ 10 ಗಂಟೆಯ ವೇಳೆಗೆ ನಮ್ರತಾಳನ್ನು ಭೇಟಿಯಾಗಲೆಂದು ಅವಳ ಮನೆಗೆ ಹೋಗಿದ್ದೆ. ಅವಳು ಸುಮಂತ್‌ನನ್ನು ತನ್ನ ಬದುಕಿನಿಂದ ದೂರವಿರಿಸಬೇಕೆಂಬ ನಿರ್ಧಾರ ತಳೆದಿದ್ದಾದರೂ ಏಕೆ? ಎಂಬುದು ನನಗೆ ತಿಳಿಯಬೇಕಾಗಿತ್ತು. ನನ್ನ ಪ್ರಶ್ನೆ ಕೇಳಿ ನಮ್ರತಾಳಿಗೆ ತುಂಬಾ ಕಸಿವಿಸಿಯಾಯಿತು. ಸ್ವಲ್ಪ ಸಮಯ ಶಾಂತಳಾಗಿದ್ದು, ನಂತರ ಮಾತನಾಡತೊಡಗಿದಳು.

``ತನುಜಕ್ಕಾ, ಅವರು ತಮ್ಮ ದುಶ್ಚಟದಿಂದಾಗಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲ ನಮ್ಮಿಬ್ಬರ ಮಧ್ಯೆ ದೊಡ್ಡ ಕಂದಕವನ್ನೇ ಹುಟ್ಟು ಹಾಕಿದ್ದಾರೆ. ಆ ಕಂದಕವನ್ನು ಹೋಗಲಾಡಿಸಲು ನನಗೆ ಕಿಂಚಿತ್ತೂ ಆಶಾಭಾವನೆಯಿಲ್ಲ,'' ಎನ್ನುತ್ತಾ ರೋದಿಸತೊಡಗಿದಳು.

``ಈಗ ವಿಪರೀತ ಕುಡಿತೀದ್ದಾನೇನು?'' ಎಂದು ನಾನು ಚಿಂತಿತ ಸ್ವರದಲ್ಲಿ ಕೇಳಿದೆ.

``ಹೌದು ಅಕ್ಕ, ಸಂಜೆಗತ್ತಲು ಆವರಿಸಿದರೇ ಮುಗಿಯಿತು, ಅವರಿಗೆ ಕುಡಿಯದೇ ಇರಲಾಗುವುದಿಲ್ಲ. ಮನೆಯಲ್ಲಿ ಅವರ ತಂದೆತಾಯಿ ಕೂಡ ಕುಡಿಯುತ್ತಾರೆ. ಸುಮಂತ್‌ ಗೆಳೆಯರೊಂದಿಗೆ ಇದ್ದರೂ, ಕ್ಲಬ್‌ನಲ್ಲಿ ಇದ್ದರೂ ಸರಿ, ಕೈಯಲ್ಲಿ ಗ್ಲಾಸ್‌ಹಿಡಿದುಕೊಂಡೇ ಇರುತ್ತಾರೆ.

``ವ್ಯಾಪಾರ ವ್ಯವಹಾರದ ಅಭಿವೃದ್ಧಿಗಾಗಿ ಇಂತಹ ಪಾರ್ಟಿಗಳು ನಡೆಯುತ್ತಲೇ ಇರಬೇಕಾಗುತ್ತೆ ಎನ್ನುತ್ತಾರೆ. ಹೀಗೆ ದುಂದುವೆಚ್ಚ ಮಾಡಿಯೇ ಹತ್ತು ಲಕ್ಷಕ್ಕೂ ಹೆಚ್ಚು ಬಂಡವಾಳ ನಷ್ಟ ಮಾಡಿಕೊಂಡಿದ್ದಾರೆ.''

``ನೀನು ಸುಮಂತ್‌ನನ್ನು ತುಂಬಾ ಪ್ರೀತಿಸುತ್ತಿಯಲ್ಲವೇ?''

``ಅದೇನೊ ನಿಜ. ಆದ್ರೆ ಇವತ್ತಿನ ಪರಿಸ್ಥಿತಿ ನೋಡಿದರೆ ಜೀವನಪೂರ್ತಿ ಅವರೊಂದಿಗೆ ಇರುವುದು ಸಾಧ್ಯವೇ ಇಲ್ಲ.''

``ಪ್ರೀತಿಗೆ ಅದ್ಭುತ ಶಕ್ತಿ ಇರುತ್ತದೆ ನಮ್ರತಾ. ನೀನು ಇಷ್ಟು ಬೇಗ ಸೋಲು ಒಪ್ಪಿಕೊಳ್ಳಬಾರದು.''

``ಅಕ್ಕಾ ಪ್ಲೀಸ್‌, ನಾನೇನು ಪ್ರಯತ್ನ ಮಾಡಲಿಲ್ಲ ಎಂಬ ಆರೋಪ ಮಾತ್ರ ನನ್ನ ಮೇಲೆ ಹೊರಿಸುವ ಪ್ರಯತ್ನ ಮಾಡದಿರಿ. ನಾನು ಸುಮಂತ್‌ಗೆ ಕೈ ಜೋಡಿಸಿ ಬೇಡಿಕೊಂಡೆ. ಅತ್ತೂಕರೆದು ಮಾಡಿದೆ, ಕೊನೆಗೆ ಬೇಸರದಿಂದ ರೇಗಾಡಿದೆ, ಕೂಗಾಡಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಕುಡಿಯುವುದನ್ನು ಬಿಟ್ಟುಬಿಡುತ್ತೇನೆಂದು ಭರವಸೆ ಕೊಟ್ಟರೆ ಹೊರತು, ಯಾವತ್ತೂ ಆ ಚಟದಿಂದ ದೂರವಾಗಲಿಲ್ಲ,'' ಎನ್ನುತ್ತಾ ಕಣ್ಣೀರು ಒರೆಸಿಕೊಂಡಳು.

``ಹೀಗಾಗಿ ನಾನವರಿಗೆ ಬುದ್ಧಿವಾದ ಹೇಳುವುದನ್ನೇ ನಿಲ್ಲಿಸಿಬಿಟ್ಟೆ. ಆಮೇಲಂತೂ, ಸುಧಾರಿಸುವುದಿರಲಿ ತೀರ ಅಸಹ್ಯ ಭಾಷೆಯಲ್ಲಿ ಮಾತನಾಡುವುದು, ಹೊಡೆಯುವುದು ಕೂಡ ಶುರುವಾಗಿಬಿಟ್ಟಿದೆ. ಒಂದು ಸಲ ಮಾತ್ರವಲ್ಲ, ಸುಮಾರು ಸಲ ನನ್ನ ಮೇಲೆಯೇ ಕೈ ಎತ್ತಿದ್ದಾರೆ....''

ಸ್ವಲ್ಪ ಹೊತ್ತು ನಿಶ್ಶಬ್ದವಾಗಿದ್ದು ನಂತರ ನಾನೇ ಕೇಳಿದೆ, ``ಅಕಸ್ಮಾತ್‌ ಅವನು ಸಂಪೂರ್ಣ ಕುಡಿಯುವುದನ್ನು ನಿಲ್ಲಿಸಿಬಿಟ್ಟರೆ, ಮತ್ತೆ ನೀನು ಅವನನ್ನು ಸ್ವೀಕರಿಸಬಲ್ಲೆಯಾ?''

``ವ್ಯರ್ಥ ಕನಸುಗಳನ್ನು ತೋರಿಸಬೇಡಿ ಅಕ್ಕ.''

``ಮೊದಲು ನೀನು ನನ್ನ ಪ್ರಶ್ನೆಗೆ ಉತ್ತರ ಕೊಡು.''

``ನಾನೇನೊ ಸುಮಂತ್‌ನೊಂದಿಗೇ ಬಾಳಿ ಬದುಕಬೇಕೆಂದೇ ಆಶಿಸುತ್ತೇನೆ. ಆದರೆ ಇದನ್ನೆಲ್ಲ ಕಂಡು ಮದುವೆ ಮಾಡಿಕೊಳ್ಳುವುದೇ ಬೇಡ ಎನಿಸುತ್ತಿದೆ. ಪ್ರೀತಿ ಪ್ರೇಮದ ಬಗ್ಗೆ ನನಗೆ ವಿಶ್ವಾಸವೇ ಇಲ್ಲದಂತಾಗಿದೆ,'' ಎಂದ ಅವಳ ಧ್ವನಿಯಲ್ಲಿ ವಿಪರೀತ ನೋವಿತ್ತು.

``ನಾನೀಗಲೇ ಸುಮಂತ್‌ನ ಬಳಿ ಹೋಗಿ ಮಾತನಾಡುತ್ತೇನೆ. ಸಾಯಂಕಾಲ ನೀನೂ ಕ್ಲಬ್‌ನತ್ತ ಬಂದುಬಿಡು. ಸುಮಂತ್‌ನೊಂದಿಗೆ ಮಾತನಾಡಿರುವುದನ್ನು ನಿನಗೆ ಹೇಳುತ್ತೇನೆ,'' ಎಂದು ಹೇಳಿ ಅವಳ ಭುಜ ಮೃದುವಾಗಿ ತಟ್ಟಿ ನಾನು ಹೊರಡಲು ತಯಾರಾದೆ.

ಸ್ವಲ್ಪ ಹೊತ್ತಿನ ಬಳಿಕ ಸುಮಂತ್‌ನ ಮನೆಯಲ್ಲಿ ಕಾಲಿರಿಸುತ್ತಿದ್ದಂತೆಯೇ ಆ ಮನೆ ಸೂತಕದಲ್ಲಿರುವಂತೆ ಭಾಸವಾಯಿತು. ಅವನ ತಂದೆ ದಿನೇಶ್‌ ಅಂಕಲ್ ಕೋಪದಿಂದ ಕುದಿಯುತ್ತಲಿದ್ದರು. ಸೀಮಾ ಆಂಟಿಯ ಕಣ್ಣುಗಳು ಊದಿಕೊಂಡಂತಾಗಿದ್ದು, ಈಗಷ್ಟೇ ಅವರು ವಿಪರೀತ ರೋದಿಸಿದ್ದಾರೆಂದು ಕಂಡುಬರುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ