``ಕೋಳಿ ಕಳ್ಳ ನಂಬರ್‌ 4.....'' ಎಂದು ನಗುತ್ತಾ ಪೂರ್ಣಿಮಾ ಕೂಗಿದಾಗ ಉಳಿದೆಲ್ಲ ಮಹಿಳಾ ಮಣಿಯರೂ ಕಿಲಕಿಲನೆ ನಗತೊಡಗಿದರು.

ಕೊಂಚ ಮುನಿಸಿಕೊಂಡ ರೇಣುಕಾ, ``ಪೂರ್ಣಿಮಾ, ಪ್ಲೀಸ್‌ ಹಾಗೆಲ್ಲ ಮಾಡಬೇಡ ಕಣೇ ನಂಬರ್‌ ಮಿಸ್‌ ಆಗುತ್ತದೆ. ಚೆನ್ನಾಗಿ ಕಲಕಿ ಹಾಕು,'' ಎಂದು ಹೇಳಿದಳು.

ಸ್ನೇಹಾ ಮತ್ತು ಮಿಸೆಸ್‌ ಪಾಟೀಲ್‌, ಪರಸ್ಪರ ಫೆವಿಕಾಲ್ ‌ಅಂಟಿಸಿಕೊಂಡ ರೀತಿಯಲ್ಲಿ ಒಂದು ಮೂಲೆಯ ಸೋಫಾದ ಮೇಲೆ ಕುಳಿತಿದ್ದರು. ಪಾರ್ಟಿಗೆ ಬಂದಾಗಿನಿಂದಲೇ ಅವರ ಮಧ್ಯೆ ಗುಸುಗುಸು ಪಿಸುಪಿಸು ಆರಂಭವಾಗಿತ್ತು.

``ಡುಮ್ಮು ಸೇಠ್‌ ನಂಬರ್‌ 8,'' ಎಂದು ಕೂಗಿದಳು ಪೂರ್ಣಿಮಾ.

ಸ್ನೇಹಾ ತನ್ನ ಹಾಸ್ಯಭರಿತ ಧ್ವನಿಯಲ್ಲಿ ಬಿನ್ನಾಣದ ನಗೆ ಬೀರುತ್ತ, ``ಪೂರ್ಣಿಮಾ, ನೀನೀಗ?`ಒನ್‌ ಫ್ಯಾಟ್‌ ಮೇಜರ್‌ ನಂಬರ್‌ 8' ಅಂತಾ ಕರೆಯೋದನ್ನು ನಿಲ್ಲಿಸಿಬಿಟ್ಟೆಯಾ?'' ಎಂದು ನಗೆ ಚಟಾಕಿ ಹಾರಿಸಿದಳು.

ಭಯಭೀತಳಾದ ಪೂರ್ಣಿಮಾ? ``ಏನು ಮಾಡ್ಲಿ ಸ್ನೇಹಾ? ಹಿಂದೆ ಒಂದ್ಸಲ ರೇಣುಕಾಳ ಕಿಟಿ ಪಾರ್ಟಿಯಲ್ಲಿ ಮಿಸೆಸ್‌ ಪಾಟೀಲ್ ‌ಬೇಸರ ಮಾಡಿಕೊಂಡಿದ್ದಳಲ್ಲ!'' ಎಂದು ಮಾತು ತೇಲಿಸಿದಳು.

ಮಿಸೆಸ್‌ ಪಾಟೀಲ್ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ, ``ಹೆ....ಹ್ಹೆ.....ಹ್ಹೆ..... ಹಾಗೇನಿಲ್ಲಪ್ಪ! ಮಿಸ್ಟರ್‌ಪಾಟೀಲ್ ‌ಈಗ ಕರ್ನಲ್ ಆಗಿದ್ದಾರೆ. ಅವರ ವೆಯ್ಟ್ ಕೂಡ ಭಾರಿ ಕಡಿಮೆಯಾಗಿದೆ. ಇದೆಲ್ಲ ಒಂಥರಾ ಗೇಮ್ ಅಲ್ವಾ? ಸ್ಪೋರ್ಟಿವ್ ಆಗಿ ತಗೋಬೇಕು,'' ಎಂದಳು.

ನಡುವೆ ಬಾಯಿ ಹಾಕಿದ ಸ್ವೀಟಿ, ``ಇದೇನಿದು ಮಿಸೆಸ್‌ ಪಾಟೀಲ್‌? ಅಷ್ಟೊಂದು ಆತ್ಮವಿಶ್ವಾಸದಿಂದ ಹೇಳುತ್ತಿರುವಿರಲ್ಲ. ಪ್ರತಿದಿನ ಕರ್ನಲ್ ರನ್ನು ತೂಕಕ್ಕೆ ಹಾಕುತ್ತೀರೇನು?'' ಎನ್ನುತ್ತಾ ಮತ್ತೊಂದು ಬಾಂಬ್‌ ಸಿಡಿಸಿದಳು.ಇದನ್ನು ಕೇಳಿದ ಎಲ್ಲಾ ಸದಸ್ಯರೂ ಕಿಲಕಿಲ ನಗತೊಡಗಿದರು. ಮಿಸೆಸ್‌ ಪಾಟೀಲ್ ‌ಕೂಡ ಬಲವಂತದ ನಗೆವೊಂದನ್ನು ನಕ್ಕು ಮೌನವಾದಳು.

``ಪೂರ್ಣಿಮಾ, ಬೇಗ ಶುರು ಮಾಡಮ್ಮ ನಿನ್ನ ತಂಬೋ......ಲಾ. ಇವತ್ತು ನನ್ನ ನಾದಿನಿ ಕೂಡ ಬಂದಿದ್ದಾಳೆ,'' ಎಂದು ಸ್ನೇಹಾ ಕೊಂಚ ಗಟ್ಟಿಯಾಗಿಯೇ ಕೂಗಿದಳು.

ಆಗ ಎಚ್ಚೆತ್ತುಕೊಂಡ ರೇಣುಕಾ, ``ಅಯ್ಯೋ ಹೌದು, ಮಧ್ಯಾಹ್ನ ಅನ್ನುವಷ್ಟರಲ್ಲಿ ನನ್ನ ಮಗು ಕೂಡ ಸ್ಕೂಲಿಂದ ಬಂದುಬಿಡುತ್ತೆ.....'' ಎಂದು ದನಿಗೂಡಿಸಿದಳು.

ದೊಡ್ಡ ಸ್ಟೇನ್‌ಲೆಸ್‌ ಸ್ಟೀಲ್ ಡಬ್ಬವೊಂದರಲ್ಲಿ ಹಾಕಿಡಲಾಗಿದ್ದ, ಚಿಕ್ಕ ಚಿಕ್ಕ ನೀಲಿ ಬಣ್ಣದ ಪ್ಲಾಸ್ಟಿಕ್‌ ನಂಬರ್‌ ಕಾಯಿನ್‌ಗಳನ್ನು ಚೆನ್ನಾಗಿ ಕುಲುಕಿದಳು ಪೂರ್ಣಿಮಾ. ನಂತರ ಠಣ್‌ ಠಣಾ ಠಣ್‌ ಎಂದು ಸದ್ದು ಮಾಡುತ್ತಿದ್ದ ಸ್ಟೀಲ್ ಡಬ್ಬಿಯಿಂದ ಒಂದು ಕಾಯಿನ್ ಮೇಲೆತ್ತಿದಳು,

``ಟೆಂಡರ್‌ ಏಜ್‌,'' ಎಂದು ಕೂಗಿದಳು.

ಆಗ ಸ್ವೀಟಿ, ``ಸೆಕೆಂಡ್‌ ಲೈನ್‌ ಪ್ಲೀಸ್‌....'' ಎನ್ನುತ್ತ ಮೇಲೆದ್ದಳು. ಸ್ವೀಟಿಯ ಸೆಕೆಂಡ್‌ ಲೈನ್‌ ಕಂಪ್ಲೆಟ್‌ ಆಯಿತು.

``ಬನ್ನಿ, ಚೆಕ್‌ ಮಾಡಿಸಿಕೊಳ್ಳಿ.....'' ಎಂದಳು ರೇಣುಕಾ.

``ರೇಣುಕಾ ಇವಳನ್ನೇ ಬೋಗಿಯನ್ನಾಗಿ ಮಾಡು. ಸಕತ್ತಾಗಿರುತ್ತೆ!'' ಎಂದು ಸ್ನೇಹಾ ಟಾಂಟ್‌ ಹೊಡೆದಳು.

ಆದರೆ ಟೀಮ್ ನಲ್ಲಿ ಸ್ವೀಟಿಯದು ಅಂಥದ್ದೇನು ಇಂಪ್ರೆಶನ್‌ ಇರಲಿಲ್ಲ. ಅವಳು ಆಟದಲ್ಲಿ ಸುಮಾರು ಸಲ ಮೋಸ ಮಾಡುವಾಗೆಲ್ಲ ಸಿಕ್ಕಿಬಿದ್ದಿದ್ದಳು. ತುಂಬ ಜಗಳಗಂಟಿ ಕೂಡ. ಜಟ್ಟಿ ಸೋತರೂ ಮೀಸೆ ಮಣ್ಣಾಗಲಿಲ್ಲವಂತೆ, ಹೀಗೆ ಇವಳು. ಕೊನೆಗೂ ಈ ಸಲ ಒಳ್ಳೆಯ ನಂಬರ್‌ ಬಂದಿತ್ತು.

``ತೆಗಿ ಐವತ್ತು ರೂಪಾಯಿ....'' ಎಂದು ಗೆದ್ದ ಉತ್ಸಾಹದಲ್ಲಿ ಸ್ವೀಟಿ ಕೇಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ