`ಏ ಇಶ್ಕ್ ನಹೀ ಆಸಾನ್‌' ಎಲ್ಲಾ ಸಿ.ಡಿ.ಗಳ ನಡುವೆ ಇದೇ ಕಣ್ಣಿಗೆ ಏಕೆ ಬಿತ್ತೋ? ಹೌದಲ್ವಾ ಅಂತ ಮನಸ್ಸಿನಲ್ಲಿ ಅಂದುಕೊಂಡವನೇ ಪಲ್ಸರ್‌ ಹತ್ತಿ ನೇರವಾಗಿ ಮನೆ ಕಡೆ ಹೊರಟೆ.

``ಒಂದೊಳ್ಳೆ ಸಿ.ಡಿ. ತಗೊಂಡು ಬನ್ರಿ. ಈವತ್ತು ರಜಾ, ಮನೆಯಲ್ಲೇ ಇರ್ತಿವಲ್ಲ ಟಿ.ವಿ. ನೋಡಿ ನೋಡಿ ಬೇಜಾರಾಗಿದೆ. ಒಳ್ಳೆ ಸಿನಿಮಾ ಆದ್ರೂ ನೋಡೋಣ. ನೀವಂತೂ ಸಿನಿಮಾಗೆ ಕರ್ಕೊಂಡು ಹೋಗಿ ಹದಿನೈದು ವರ್ಷಾನೇ ಆಯ್ತು,'' ಅಂತಾ ಶ್ವೇತಾ ಪ್ರೀತಿಯಿಂದ ಹೇಳಬಹುದಾದದ್ದನ್ನು ಸಿಡುಕುತ್ತಲೇ ಹೇಳಿದ್ದು ಮನೆ ಮುಂದೆ ಬೈಕ್‌ ನಿಲ್ಲಿಸಿದಾಗಲೇ ನೆನಪಾದದ್ದು.

ಗಾಡಿ ಸೌಂಡ್‌ ಕೇಳಿ ಒಳಗಿನಿಂದ ಖುಷಿಯಾಗಿ ಬಂದವಳೇ, ``ಯಾವ ಸಿ.ಡಿ. ತಂದ್ರಿ?'' ಎಂದಳು.

``ಎಲ್ಲಾ ನೀನು ನೋಡಿರೋದೇ, ಯಾವ್ದೂ ಹೊಸದು ಇರಲಿಲ್ಲ.''

``ನಿಮಗೇ ಅಂತ ಹೊಸ ಸಿನಿಮಾ ಪೈರೇಟ್‌ ಮಾಡಿ ಇಟ್ಟಿರ್ತಾರಾ? ಇರೋದ್ರಲ್ಲೇ ಒಂದೊಳ್ಳೆ ಸಿನಿಮಾ ಆಯ್ಕೆ ಮಾಡಿಕೊಂಡು ತರಬಾರದೇನ್ರಿ......''

``ಒಳ್ಳೇದು ಆಯ್ಕೆ ಮಾಡ್ಕೊಂಡಿದ್ರಲ್ಲಿ ನೀನೇ ಕಡೆಯವಳು ಕಣೆ. ಆಮೇಲೆ ನನ್ನ ಲೈಫ್‌ನಲ್ಲಿ ಯಾವ್ದೂ ಒಳ್ಳೇದು ಸಿಗಲಿಲ್ಲ.''

``ಆಹಾ! ಮಾತಲ್ಲೇ ಅರಮನೆ ಕಟ್ಟಿ, ನನ್ನ ರಾಣಿ ಹಾಗೆ ಕೂರಿಸಿಬಿಡ್ತೀರಿ,'' ಅಂತ ಮುಖ ತಿರುಗಿಸಿಕೊಂಡು ಹೊರಟುಬಿಟ್ಟಳು.

ಒಳಗೆ ಬಂದವನೇ ಉಸ್ಸಪ್ಪ ಅಂತ ಕುಕ್ಕರಿಸಿದೆ. ಪಕ್ಕದಲ್ಲಿದ್ದ ದಿನಪತ್ರಿಕೆ ಕೈಗೆತ್ತಿಕೊಂಡೆ.

``ಪೇಪರ್‌ ಹಿಡ್ಕೊಂಡು ಕೂತ್ಬಿಟ್ರೆ ಆಯ್ತು. ಮನೇಲಿ ಒಂದು ಕೆಲಸಕ್ಕೂ ಸಹಾಯ ಮಾಡಬೇಡಿ,'' ಒಳಗಿನಿಂದಲೇ ಅವಳು ಗೊಣಗಾಡುತ್ತಿದ್ದುದು ಕೇಳಿಸಿತು.

``ಬಂದೆ ಬಂದೆ, ಯಾಕೆ ಸುಮ್ಮನೇ ಗೊಣಗ್ತೀಯಾ? ಏನು ಮಾಡಬೇಕು ಹೇಳು ಮಾಡ್ತೀನಿ,''ಎಂದೆ.

use-ke-liye-2

``ಈ ಬೆಳ್ಳುಳ್ಳಿನೆಲ್ಲಾ ಸುಲಿದಿಡಿ,'' ಅಂತ ಅರ್ಧ ಕೆ.ಜಿ. ಬೆಳ್ಳುಳ್ಳಿ ತಟ್ಟೆಗೆ ಸುರಿದು ತಂದು ಕೈಗೆ ಕೊಟ್ಟಳು.

ಬೆಳ್ಳುಳ್ಳಿ ಸುಲಿಯಲು ಕೈಗೆತ್ತಿಕೊಂಡಾಗ ಮತ್ತೆ ನೆನಪಾಯಿತು `ಏ ಇಶ್ಕ್ ನಹೀ ಆಸಾನ್‌.' ಆದ್ರೂ ಇದೆಲ್ಲವನ್ನೂ ಸಹಿಸಿಕೊಂಡು ಕಾಲಘಟ್ಟದ ಜೊತೆಗೆ ಇಬ್ಬರೂ ಪರಸ್ಪರ ಕಷ್ಟ ಸುಖದಲ್ಲಿ ಜೊತೆಯಾಗಿ ಹೆಜ್ಜೆ ಹಾಕುವುದೇ ಪ್ರೇಮದ ಸಿಹಿ ಬದುಕು ಅಂತ ಹೃದಯ ಹೇಳಿದರೂ, ಸಾಕಪ್ಪ ಇವಳ ಸಹವಾಸ ಅಂತ ಆ ಮನಸ್ಸು ಹಿಂದಿನಿಂದ ಕೆಣಕಿತು.

ನಾವಿಬ್ಬರೂ ಮದುವೆಗೆ ಮುಂಚೆ ಪರಸ್ಪರರನ್ನು ಪ್ರೀತಿಸುತ್ತಿದ್ದ ದಿನಗಳ ನೆನಪಾಯಿತು. ಇಂದಿನ ಹಾಗೆ ಆ ಕಾಲದಲ್ಲಿ ಮೊಬೈಲ್‌,  ಎಸ್‌.ಎಂ.ಎಸ್‌., ಇಮೇಲ್ ‌ಇಂಥ ಯಾವುದೇ ಎಲೆಕ್ಟ್ರಾನಿಕ್‌ ಮಾಧ್ಯಮಗಳು ಪ್ರೇಮಿಗಳ ಸಹಾಯಕ್ಕೆ ಇರಲಿಲ್ಲ. ಬಿಡುವು ಸಿಕ್ಕಾಗೆಲ್ಲಾ ಕೂತು ಪುಟಗಟ್ಟಲೆ ಪತ್ರ ಬರೆದು ವಾರಕ್ಕೆ ಒಂದು ದಿನ ಪೋಸ್ಟ್ ಮಾಡುತ್ತಿದ್ದೆ.

ಆ ವಾರ ಪತ್ರ ಬರದಿದ್ದರೆ ತವಕ ಹೆಚ್ಚಾಗುತ್ತಿತ್ತು. ಅವಳು ಬರೆದ ಹಳೆ ಪತ್ರಗಳನ್ನು ಓದಿಕೊಂಡು ಹೊಸ ಪತ್ರ ಬರೋವರೆಗೂ ದಿನ ನೂಕುವುದೆಂದರೆ ಎಷ್ಟೋ ವರ್ಷ ಕಳೆದ ಹಾಗಾಗುತ್ತಿತ್ತು.

ಕೆಲವೊಮ್ಮೆ ಪತ್ರ ಬರೆಯುವ ಸಮಯದಲ್ಲಿ ಕೇಳುವ ಹಾಡುಗಳೂ ಪತ್ರದಲ್ಲಿ ಬರೆಯಲ್ಪಡುತ್ತಿದ್ದವು. `ತೇರೇ ಮೇರೆ ಸಪನೆ ಅಬ್ ಏಕ್‌ ರಂಗ್‌ ಹೈ, ಹೋ ಜಹಾ ಬೀ ಲೇಜಾಯೆ ರಹೇ ಹಂ ಸಂಗ್‌ ಹೈ,' ಹಾಡು ಬರೆದಿದ್ದು ಈಗಲೂ ನೆನಪಿದೆ. ಅದರಲ್ಲಿ ಬರುವ ಒಂದು ಸಾಲು ಹೀಗಿದೆ, `ತೇರೇ ದುಃಖ್‌ ಅಬ್‌ ಮೇರೆ, ಮೇರೆ ಸುಖ್‌ ಅಬ್‌ ತೇರೇ, ತೇರೇ ಏ ದೋ ನೈನಾ ಚಾಂದ್‌ ಔರ್ ಸೂರಜ್‌ ಮೇರೆ....' ನಿಜಕ್ಕೂ ಎಂಥ ಅದ್ಭುತ ಸಾಹಿತ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ