ರಾಜಶ್ರೀ ಮೈಸೂರಿನಲ್ಲಿ ಖರೀದಿ ಮಾಡುತ್ತಿರುವಾಗ ಒಂದು ಧ್ವನಿ ಕೇಳಿ ಚಕಿತಳಾದಳು. ಅವಳು ಅತ್ತಿತ್ತ ತಿರುಗಿ ನೋಡಿದಳು. ಆದರೆ ಯಾರೊಬ್ಬರೂ ಕಾಣಿಸಲಿಲ್ಲ. ಬಹುಶಃ ಅದು ತನ್ನದೇ ಹೆಸರಿನ ಬೇರೆ ಯಾರನ್ನೋ ಕೂಗಿದ ಶಬ್ದವಾಗಿರಬಹುದು ಎಂದುಕೊಂಡು ಆಕೆ ಅಂಗಡಿಯವನಿಗೆ ಹಣ ಕೊಟ್ಟು ಹೆಜ್ಜೆ ಹಾಕಬೇಕು ಎನ್ನುತ್ತಿರುವಾಗಲೇ ಪುನಃ `ರಾಜಶ್ರೀ' ಎಂದು ಕೂಗಿದ ಶಬ್ದ ಕೇಳಿಸಿತು. ಈ ಸಲ ಅವಳು ತಿರುಗಿ ನೋಡಿದಾಗ ಚಾಕಲೇಟ್‌ ಬಣ್ಣದ ಡ್ರೆಸ್‌ ತೊಟ್ಟಿದ್ದ ಯುವತಿಯೊಬ್ಬಳು ತನ್ನತ್ತಲೇ ಓಡಿ ಬರುತ್ತಿರುವುದು ಕಾಣಿಸಿತು.

ರಾಜಶ್ರೀ ಅವಳ ಕಡೆಯೇ ದಿಟ್ಟಿಸಿ ನೋಡುತ್ತ ಆಕೆ ಯಾರಿರಬಹುದು ಎಂದು ತರ್ಕ ಮಾಡಿದಳು. ತಕ್ಷಣವೇ ಹೊಳೆದಂತಾಗಿ, ``ನೀವಾ, ನೀನಿಲ್ಲಿ?'' ಎಂದು ಆಶ್ಚರ್ಯಚಕಿತಳಾಗಿ ಕೇಳಿದಳು.

ಅವಳು ತನ್ನ ಹಳೆಯ ಗೆಳತಿಯನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದಳು.

``ನಾವಿಬ್ಬರೂ ಅಗಲಿ 5 ವರ್ಷಗಳೇ ಆದಲ್ಲ. ಹೇಗಿದ್ದೀಯಾ ನೀನು?'' ನೀಲಾ ಅಚ್ಚರಿಯ ಧ್ವನಿಯಲ್ಲಿ ಕೇಳಿದಳು.

``ನಾನು ಸೆಮಿನಾರ್‌ ಅಟೆಂಡ್‌ ಮಾಡಲು ಇಲ್ಲಿಗೆ ಬಂದಿದ್ದೆ, ಇಂದು ರಾತ್ರಿ ವಾಪಸ್‌ ಹೋಗಲೇಬೇಕು. ನಿನ್ನನ್ನು ಇಲ್ಲಿ ಕಂಡು ನನಗೆ ನಂಬಿಕೆಯೇ ಬರ್ತಿಲ್ಲ. ನಾವಿಬ್ಬರೂ ಹೀಗೆ ಭೇಟಿ ಆಗ್ತೀವಿ ಎಂದು ಖಂಡಿತ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ,'' ರಾಜಶ್ರೀ ಆಶ್ಚರ್ಯಬೆರೆತ ಸ್ವರದಲ್ಲಿ ಹೇಳಿದಳು, ``ನಿನ್ನೊಂದಿಗೆ ಇನ್ನೂ ಬಹಳಷ್ಟು ಮಾತನಾಡಬೇಕಿದೆ. ನಿನಗೆ ಅರ್ಜೆಂಟ್‌ ಕೆಲಸ ಏನೂ ಇಲ್ಲ ತಾನೆ? ಯಾವುದಾದರೂ ಕಾಫಿ ಶಾಪ್‌ಗೆ ಹೋಗಿ ಕಾಫಿ ಕುಡೀತಾ ಮಾತಾಡೋಣ ಬಾ.''

``ಬೇಡ ಬೇಡ ರಾಜಶ್ರೀ. ಇಲ್ಲಿಯೇ ಸಮೀಪದಲ್ಲಿಯೇ ನನ್ನ ಮನೆ ಇದೆ. ಅಲ್ಲಿಯೇ ಹೋಗಿ ಹರಟೆ ಹೊಡೆಯೋಣ. ಬಹಳ ವರ್ಷಗಳ ನಂತರ ಭೇಟಿಯಾಗಿದ್ದೇವಾ?'' ನೀಲಾ ತನ್ನ ಮನಸ್ಸಿನ ಮಾತು ಹೇಳಿದಳು. ರಾಜಶ್ರೀ ನೀಲಾಳೊಂದಿಗೆ ಹರಟೆ ಹೊಡೆಯುವ ಅವಕಾಶ ತಪ್ಪಿಸಿಕೊಳ್ಳಲು ಸಿದ್ಧಳಿರಲಿಲ್ಲ. ಅವಳು ತನ್ನ ಅತ್ತೆಗೆ ಫೋನ್‌ ಮಾಡಿ ನಾನು ಸಂಜೆ ಹೊತ್ತಿಗೆ ವಾಪಸ್ ಬರ್ತೀನಿ ಎಂದು ಹೇಳಿದಳು. ಅಷ್ಟರಲ್ಲಿಯೇ ನೀಲಾ ಆಟೋವೊಂದನ್ನು ನಿಲ್ಲಿಸಿದ್ದಳು. ಮಾತುಮಾತಿನಲ್ಲಿ ಮನೆ ಯಾವಾಗ ಬಂತು ಅಂತಾ ಗೊತ್ತೇ ಆಗಲಿಲ್ಲ.
``ವಾಹ್! ನೀಲಾ, ನೀನು ಮೈಸೂರಿನಲ್ಲೇ ಫ್ಲ್ಯಾಟ್‌ ತಗೊಂಡೆ ಅನ್ನು.''

``ಇಲ್ಲ, ಇಲ್ಲ, ಇದು ಬಾಡಿಗೆ ಫ್ಲ್ಯಾಟ್‌.''

ಮೂರನೇ ಮಹಡಿಯಲ್ಲಿ ನೀಲಾಳ ಪುಟ್ಟದಾದ ಫ್ಲ್ಯಾಟ್‌ ನೋಡಿ ರಾಜಶ್ರೀ ಬಹಳ ಖುಷಿಗೊಂಡಳು. ಕೋಣೆಯನ್ನು ಅಂದವಾಗಿ ಅಲಂಕರಿಸಲಾಗಿತ್ತು.

ನೀಲಾ ಆರಂಭದಿಂದಲೇ ರಿಸರ್ವ್ ‌ಮೈಂಡೆಡ್‌. ಆದರೆ ರಾಜಶ್ರೀ ಬಿಂದಾಸ್‌ ಪ್ರವೃತ್ತಿಯವಳು. ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜಿನತನಕ ಇಬ್ಬರ ಸ್ನೇಹ ಉತ್ತುಂಗ ತಲುಪಿತ್ತು. ರಾಜಶ್ರೀಗೆ ಹುಬ್ಬಳಿಯ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು ಹಾಗೂ ನೀಲಾ ಮೈಸೂರಿಗೆ ಹೊರಟುಹೋದಳು. ಆರಂಭದಲ್ಲಿ ಇಬ್ಬರೂ ಗೆಳತಿಯರು ಪತ್ರ ಹಾಗೂ ಫೋನ್‌ ಮುಖಾಂತರ ಸಂಪರ್ಕದಲ್ಲಿದ್ದರು. ಆ ಬಳಿಕ ಇಬ್ಬರೂ ಅದೆಷ್ಟು ವ್ಯಸ್ತರಾಗಿ ಬಿಟ್ಟರೆಂದರೆ, ಹಲವು ವರ್ಷಗಳ ಬಳಿಕ ಇಂದೇ ಭೇಟಿಯಾಗಿದ್ದರು.

ಮನೆ ತಲುಪುತ್ತಿದ್ದಂತೆಯೇ ರಾಜಶ್ರೀ ತನ್ನ ಕೆರಿಯರ್‌ ಹಾಗೂ ಮದುವೆ ನಿಶ್ಚಯ ಆಗುವ ಬಗ್ಗೆ ಎಲ್ಲ ಮಾಹಿತಿ ನೀಡಿದಳು. ಆದರೆ ನೀಲಾ ಮಾತ್ರ ಇಂತಹ ಪ್ರಶ್ನೆಗಳ ಉತ್ತರದಿಂದ ದೂರ ದೂರ ಇರಲು ಪ್ರಯತ್ನಿಸುತ್ತಿದ್ದಳು. ರಾಜಶ್ರೀ ಸೋಫಾದ ಮೇಲೆ ಕೂರುತ್ತಿದ್ದಂತೆಯೇ ಉತ್ಸಾಹದಿಂದ ಕೇಳಿದಳು, ``ನೀಲಾ, ನೀನು ಈವರೆಗೂ ಮದುವೆಯ ಬಗ್ಗೆ ಏನಾದರೂ ಯೋಚಿಸಿದಿಯೋ ಅಥವಾ ಇಲ್ಲವೇ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ