ಸುರಿ ಮಳೆಯಲ್ಲಿ ನನ್ನಾಕೆಯ ಬೆಡಗು ಬಿನ್ನಾಣಗಳಿಗೆ ನಾನು ಕರಗಿಹೋದೆ. ಅವಳನ್ನು ಕರೆದುಕೊಂಡು ಮಾಳಿಗೆಯ ಮೇಲೆ ಹೋದೆ. ಆದರೆ ಅವಳ ಈ ಹಟಕ್ಕೆ ಇಂದಿನವರೆಗೆ ಬೆಲೆ ತೆರುತ್ತಲೇ ಇದ್ದೇನೆ, ಮುನಿಯಮ್ಮ ವಾಪಸ್‌ ಬರುವುದನ್ನೇ ಕಾಯುತ್ತಿದ್ದೇನೆ.

ಚಲನಚಿತ್ರಗಳಲ್ಲಿ ಸುರಿವ ಮಳೆಯಲ್ಲಿ ತೆಳುವಾದ ಬಟ್ಟೆಗಳಲ್ಲಿ ನೆನೆಯುತ್ತಾ, ವಯ್ಯಾರ ಮಾಡುತ್ತಾ ಹೀರೋನೊಂದಿಗೆ ಹಾಡುತ್ತಾ ಕುಣಿಯುವ ಹೀರೋಯಿನ್‌ಗಳನ್ನು ಕಂಡು ನನ್ನ ಹೆಂಡತಿ ವಿಚಲಿತಳಾಗುತ್ತಾಳೆ. ನನ್ನನ್ನೂ ವಿಚಲಿತಗೊಳ್ಳುವಂತೆ ಮಾಡುತ್ತಾಳೆ. ಹಾಗೆ ನೋಡಿದರೆ ನನ್ನ ಹೆಂಡತಿ ಬಹಳ ರಸಿಕಳು. ವಿಶೇಷವಾಗಿ ಹಸಿರು ವಾತಾವರಣ, ಮಳೆ ಸುರಿಯುತ್ತಿದ್ದರಂತೂ ಅವಳು ಇನ್ನಷ್ಟು ರೊಮ್ಯಾಂಟಿಕ್‌ ಆಗುತ್ತಾಳೆ.

ಒಮ್ಮೆ ಮಳೆಗಾಲದ ರಾತ್ರಿಯಲ್ಲಿ ನನ್ನ ಹೆಂಡತಿ ಚಡಪಡಿಸುತ್ತಾ ಎದ್ದಳು. ನನ್ನನ್ನು ಎಬ್ಬಿಸುತ್ತಾ, ``ರೀ, ಈಗ ಹವಾಮಾನ ಸೊಗಸಾಗಿದೆ. ನಿಮ್ಮ ಮೇಲೆ ಪ್ರೀತಿ ಉಂಟಾಗಿದೆ,'' ಎಂದಳು.

ನಾನು ನಿದ್ದೆಗಣ್ಣಿನಲ್ಲಿ ಹೇಳಿದೆ, ``ಅದಕ್ಕೆ.....?''

``ಇಂಥ ವಾತಾವರಣದಲ್ಲಿ ಯಾರಾದರೂ ನಿದ್ದೆ ಮಾಡ್ತಾರಾ?'' ನನ್ನಾಕೆ ಹೇಳಿದಳು.

``ನಾಳೆ ಆಪೀಸಿಗೆ ಹೋಗಬೇಕು. ಬಹಳ ಕೆಲಸ ಇದೆ.''

ಅವಳು ರೊಮ್ಯಾಂಟಿಕ್‌ ಮೂಡ್‌ನಲ್ಲಿ, ``ಎಂದಾದರೂ ಒಮ್ಮೊಮ್ಮೆ ಪ್ರೀತಿಸೋದು ಕಲೀರಿ,'' ಎಂದಳು.

ನಾನು ಬೇಸರದಿಂದ, ``ಪ್ರೀತಿಯಿಂದ ಹೊಟ್ಟೆ ತುಂಬಲ್ಲ ಕಣೆ,'' ಎಂದೆ.

ಅವಳು ವಯ್ಯಾರದಿಂದ, ``ಕೆಲಸದ ಮಾತು ಬಿಡ್ರಿ, ಜೀವಮಾನವೆಲ್ಲ ಅದು ಇದ್ದೇ ಇರುತ್ತೆ. ಆದರೆ ಇಂಥ ಹವಾಮಾನ ನಮಗೆ ಮತ್ತೆ ಮತ್ತೆ ಸಿಗಲ್ಲ,'' ಎಂದಳು.

ಈ ಬಾರಿ ನನ್ನಾಕೆಯ ರೊಮ್ಯಾಂಟಿಕ್‌ ಬೆಡಗು ಬಿನ್ನಾಣಗಳಿಗೆ ನಾನು ಕರಗಿಹೋದೆ. ಅವಳ ಕೈ ಹಿಡಿದು ರಾತ್ರಿ 1 ಗಂಟೆಗೆ ಸುರಿಯುವ ಮಳೆಯಲ್ಲಿ ಮಾಳಿಗೆಯ ಮೇಲೆ ಕರೆದುಕೊಂಡು ಬಂದೆ. ಸುತ್ತಲೂ ಗಾಢಾಂಧಕಾರವಿತ್ತು. ಇಡೀ ನಗರ ಮಳೆಯಲ್ಲಿ ತೋಯುತ್ತಿತ್ತು.

ನನ್ನಾಕೆ ಮೆಲ್ಲಗೆ ಹಾಡು ಗುನುಗುಟ್ಟುತ್ತಿದ್ದಳು. ನನಗೂ ಅದಕ್ಕೆ ಆ್ಯಕ್ಟ್ ಮಾಡಲು ಹೇಳಿದಳು. ಅವಳ ಹಾಡು ಹೀಗಿತ್ತು :

ಸ್ವಾತಿ ಮುತ್ತಿನ ಮಳೆ ಹನಿಯೇ, ಮೆಲ್ಲ ಮೆಲ್ಲನೆ ಧರೆಗಿಳಿಯೇ ನನ್ನಾ ರಾಜನ ಪ್ರೀತಿಯ......ಹಾಡುತ್ತಾ ಹಾಡುತ್ತಾ ಅವಳ ಧ್ವನಿ ತಾರಕಕ್ಕೇರುತ್ತಿತ್ತು. ಅವಳು ನಿಶ್ಚಿಂತೆಯಿಂದ ಹಾಡಿಗೆ ಅಭಿನಯಿಸುತ್ತಲೂ ಇದ್ದಳು.

ಒಂದೇ ಹಾಡಿಗೆ ಮುಗಿಯಿತು ಅಂದುಕೊಂಡ್ರಾ? ಮತ್ತೆ ಶುರುವಾಯಿತು ನೋಡಿ : ಪಟಪಟ ಮಳೆ ಹನಿ.... ಬಾನಿಂದ ಜಾರುತಿದೆ... ನಾವಿಬ್ಬರೂ ಛಾವಣಿಯ ಮೇಲೆ ಹಾಡಿ ಕುಣಿಯುತ್ತಿದ್ದಾಗ ಬೀಟ್‌ ಪೊಲೀಸನೊಬ್ಬ ನಮ್ಮ ರಸ್ತೆಗೆ ಬಂದ. ಛಾವಣಿಯ ಮೇಲೆ ಯಾರೋ ಕಳ್ಳರು ಹತ್ತಿರಬೇಕು ಎಂದು ಅವನಿಗೆ ಅನ್ನಿಸಿತು. ಅವನು ಛಾವಣಿಯ ಮೇಲೆ ಟಾರ್ಚ್‌ ಬೆಳಕನ್ನು ಬಿಡುತ್ತಾ ಜೋರಾಗಿ ಸೀಟಿ ಊದಿದ. ಏನಾದರೂ ಎಡವಟ್ಟು ಆಗಬಾರದೆಂದು ನಾನು ಅವಳಿಗೆ ಕೆಳಗೆ ಹೋಗುವಂತೆ ಹೇಳಿದೆ. ಆದರೆ ಅವಳು ಹೊರಡಲು ತಯಾರಾಗಲಿಲ್ಲ. ಆಗ ನಾನು ಸುರಿ ಮಳೆಯಲ್ಲೇ ಅವಳನ್ನು ಕೆಳಗೆ ಕೂಡಿಸಿದೆ. ಸ್ವಲ್ಪ ಹೊತ್ತಿನ ಬಳಿಕ ಪೊಲೀಸ್‌ ಹೊರಟುಹೋದ.

ಈಗ ಮಳೆ ಇನ್ನೂ ಜೋರಾಯಿತು. ನನ್ನಾಕೆ ಕುಳಿತುಕೊಂಡೇ ನನ್ನ ಎದೆಯ ಮೇಲೆ ತನ್ನ ತಲೆಯಿಟ್ಟು ಹೇಳಿದಳು, ``ಇಂದು ಸಮಯ ಇಲ್ಲೇ ನಿಂತುಹೋಗಲಿ. ಮಳೆ ಸುರಿಯುತ್ತಲೇ ಇರಲಿ, ನಾವಿಬ್ಬರೂ ಹೀಗೇ ಮಳೆಯಲ್ಲಿ ನೆನೆಯುತ್ತಿರೋಣ,'' ನಂತರ ಜೋರಾಗಿ ನಗತೊಡಗಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ