ನನ್ನ ಕಥೆ ಕೇಳಿ ಪಾಠ ಕಲಿಯಿರಿ ಅಥವಾ ಕಲಿಯದಿರಿ ಅದು ನಿಮ್ಮಿಚ್ಛೆ. ಆದರೆ ನಾನಂತೂ ದಂತ ಚಿಕಿತ್ಸಕರನ್ನು ನೋಡಿದ ಕೂಡಲೇ ನನ್ನ ನಿಯಂತ್ರಣ ಕಳೆದುಕೊಳ್ತೀನಿ.

ಈ ಕಥೆ ಪೌರಾಣಿಕ ಕಾಲದ ಯಾವುದೋ ದಂತಕಥೆಯಲ್ಲ. ಆದರೆ ಇದು ನನ್ನ ದವಡೆಯ ಒಂದು ಹಲ್ಲಿನ ಅಲೌಕಿಕ ಕಥೆ. ಹಲ್ಲಿನಲ್ಲಿ ನೀರು ಒಸರಿ ಇದು ಆರಂಭವಾಯಿತು. ಈ ಕಥೆಯಲ್ಲಿನ ಡಾಕ್ಟರ್‌ರ ಅದ್ಭುತ ಸಹಾಯವನ್ನು ಮರೆಯಲಾಗುವುದಿಲ್ಲ. ನಾನು ಡೆಂಟಿಸ್ಟ್ ಬಳಿ ಹೋಗಿ ಹಲ್ಲಿನಲ್ಲಿ ಒಂದು ರೀತಿ ಬಿಸಿ, ಥಂಡಿ ಆಗುತ್ತದೆಂದು ಹೇಳಿದಾಗ ಅವರಿಗೆ ಖುಶಿಯಾಯಿತು. ಅವರು ತಮ್ಮ ಯಂತ್ರದಿಂದ ನೀರೆರಚಿ ಹಲ್ಲನ್ನು ಪರೀಕ್ಷಿಸಿ ಕೇಳಿದರು, ``ಇಲ್ಲಿ ತಣ್ಣಗಾಗುತ್ತಾ?''

ನಾನು `ಹೌದು' ಎಂದಾಗ ಅವರು ಏನೋ ಯೋಚಿಸುವ ಮುದ್ರೆಯಲ್ಲಿ ನಿಂತುಕೊಂಡರು.

``ಡಾಕ್ಟ್ರೇ ನನ್ನ ಹಲ್ಲು.....'' ನನ್ನ ಮಾತು ಕೇಳಿ ಅವರ ಯೋಚನೆಗೆ ಭಂಗ ಬಂತು.

ಅವರು ಹೇಳಿದರು, ``ನೋಡಿ, ಇದರಲ್ಲಿ ಸಣ್ಣ ರಂಧ್ರ ಕೊರೆಯಬೇಕು. ಆಮೇಲೆ ಹಲ್ಲಿನ ಬುಡದಲ್ಲಿ `ಪಸ್‌' ಇದೆಯೇ ಎಂದು ನೋಡಬೇಕು.''

ನನಗೆ ಗಾಬರಿಯಾಗಿ ಹೇಳಿದೆ, ``ಅದು ಹೇಗಾಗುತ್ತೆ ಸರ್‌, ಪಸ್‌ ಎಲ್ಲಿಂದ ಬರುತ್ತೆ?''

ಡಾಕ್ಟರ್‌ ಬುದ್ಧಿವಂತರು. ಅವರು ಹೇಳಿದರು, ``ಅದನ್ನು ನೋಡೋದು ನಮ್ಮ ಕೆಲಸ.''

ನಂತರ ಅವರು ನನ್ನ ಬಾಯಲ್ಲಿ ಒಂದು ಮೆಶಿನ್‌ ಫಿಟ್‌ ಮಾಡಿ ರಂಧ್ರ ಕೊರೆಯಲು ಶುರು ಮಾಡಿದರು. ಸ್ವಲ್ಪ ಹೊತ್ತು ಮೆಶಿನ್ ಚಲಾಯಿಸಿದ ನಂತರ ಡಾಕ್ಟರ್‌,``ಈಗ ಉಗೀರಿ. ನೋಡೋಣ ಏನು ಬರುತ್ತೇಂತ,'' ಎಂದರು.

ನಾನು ಉಗಿದಾಗ ರಕ್ತ ಬಂತು. ನನ್ನ ಹಲ್ಲಿನ ಜೊತೆಗೆ ಡಾಕ್ಟರ್‌ ರಕ್ತವನ್ನೂ ಸುರಿಸಲಿದ್ದಾರೆ ಅನ್ನಿಸಿತು.

ಆಗ ಡಾಕ್ಟರ್‌ ಹೇಳಿದರು, ``ನಿಮ್ಮ ಹಲ್ಲಿನ 2 ಎಕ್ಸ್-ರೇ ತೆಗಲೇಬೇಕು.''

``ಆಯ್ತು. ಅದನ್ನೂ ತೆಗೆದ್ಬಿಡಿ.''

ಅವರು ಎಕ್ಸ್-ರೇ ತೆಗೆದು ಬಹಳ ದೀರ್ಘವಾಗಿ ಅದನ್ನೇ ಗಮನಿಸುತ್ತಾ ಹೇಳಿದರು, ``ತುಂಬಾ ಪಸ್‌ ಇದೆ. ನಿಮಗೆ ಔಷಧಿ ಬರೆದು ಕೊಡ್ತೀನಿ. ನೋವು ಹೆಚ್ಚಾದರೆ ನಾಳೆ ಬನ್ನಿ.''

``ಮೊದಲು ಬರೀ ಬಿಸಿ, ಥಂಡಿ ಆಗುತ್ತಿತ್ತು. ಈಗ ನೋವು ಶುರು ಆಗಿದೆ,'' ನಾನು ಹೇಳಿದೆ.

``ಔಷಧಿ ತಗೊಳ್ಳಿ. ಎಲ್ಲ ಸರಿಹೋಗುತ್ತೆ. ಒಳಗೆ ತುಂಬಾ ಕೀವು ತುಂಬಿಕೊಂಡಿದೆ. ಹಲ್ಲನ್ನು ಸರಿಪಡಿಸೋಕೆ ಎರಡೂವರೆ ಸಾವಿರ ರೂ. ಪ್ಯಾಕೇಜ್‌ ಇದೆ,'' ಡಾಕ್ಟರ್‌ ಹೇಳಿದರು.

ನನಗೆ ಭಯವಾಯಿತು. ನಾನು ಹೇಳಿದೆ, ``ಡಾಕ್ಟ್ರೇ, ದುಡ್ಡು ಎಷ್ಟಾದ್ರೂ ತಗೊಳ್ಳಿ. ಹಲ್ಲು ಸರಿಪಡಿಸಿ.''

``ಏನೂ ಭಯ ಪಡಬೇಕಿಲ್ಲ. ಪಾನ್‌ ತಿನ್ನುವುದರಿಂದ ನಿಮ್ಮ ಹಲ್ಲು, ದವಡೆಗಳು ಸವೆದು ಹೋಗಿವೆ. ಎಲ್ಲಾ ಹಲ್ಲುಗಳಲ್ಲೂ ಸಮಸ್ಯೆ ಇದೆ. ಆದರೆ ಮೊದಲು ಈ ಹಲ್ಲನ್ನು ಸರಿಪಡಿಸೋಣ. ಇಲ್ಲದಿದ್ದರೆ  ಎಲ್ಲಾ ವಸಡುಗಳಿಗೂ ಚಿಕಿತ್ಸೆ ಮಾಡಬೇಕಾಗುತ್ತದೆ,'' ಎಂದು ಡಾಕ್ಟರ್‌ ಹೇಳಿದರು.

ನಾನು ಹೊರಡತೊಡಗಿದಾಗ ಡಾಕ್ಟರ್‌ ಹೇಳಿದರು, ``1500 ರೂ. ಕಟ್ಟಿ ಹೋಗಿ.''

ನಾನು ಗೊಣಗುತ್ತಾ 1500 ರೂ. ಕೊಟ್ಟೆ.

ಅವರು ದುಡ್ಡು ಪಡೆದು, ``ಊಟ, ತಿಂಡಿ ಇನ್ನೊಂದು ಸೈಡ್‌ನಿಂದ ತಿನ್ನಿ. ನಾನು ಈಗ ತಾನೇ ರಫ್‌ ಫಿಲ್ಲಿಂಗ್‌ ಮಾಡಿದ್ದೀನಿ. ನೋವಿದ್ದರೆ ನಾಳೆ ಬನ್ನಿ,'' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ