``ಹಲೋ ವಿನು.... ಹೇಗಿದ್ದಿ? ನಾನು ಕಣೆ..... ಶಾಲಿ ಮಾತಾಡ್ತಿದ್ದೀನಿ..... ನಿನ್ನ  ಪ್ರಾಣಸಖಿ!'' ಎಂದು ಶಾಲಿನಿ ಅತಿ ಉತ್ಸಾಹದಲ್ಲಿ ಬಡಬಡ ಮಾತನಾಡಿದಳು. ಇದನ್ನು ಕೇಳಿಸಿಕೊಂಡ ವಿನುತಾಳಿಗೆ ಅರ್ಥ ಮಾಡಿಕೊಳ್ಳಲು 2 ನಿಮಿಷ ಬೇಕಾಯಿತು. ತಕ್ಷಣ ಅವಳ ನೆನಪಿನಶಕ್ತಿ ಜಾಗೃತಗೊಂಡು ಫೋನ್‌ ಮಾಡಿದವಳಾರೆಂದು ಗುರುತಿಸಿದಳು.

``ಅರೆ ಶಾಲಿ ನೀನಾ.....! ಇದೇನೇ ದಿಢೀರ್‌ ಅಂತ ಇಷ್ಟು ವರ್ಷಗಳ ಬಳಿಕ..... ನೀನು ಆ ದಿನೇಶನ್ನ ಮದುವೆಯಾಗಿ ಅಮೆರಿಕಾಗೆ ಹಾರಿದವಳು, ಅಂತೂ ನೆನಪಿಸಿಕೊಂಡು ಆಕಸ್ಮಿಕವಾಗಿ ಈಗ ಕಾಲ್ ‌ಮಾಡಿದ್ದಿ. ನೀನು ಮೈಸೂರಿಗೆ ಬರ್ತಿದ್ದೀಯೇನೇ?'' ವಿನುತಾ ತನ್ನ ಮನದ ಗಾಬರಿ ಮರೆಮಾಚುತ್ತಾ ಕೇಳಿದಳು.

``ಅಯ್ಯೋ..... ಇದೇನೇ ಇಷ್ಟೊಂದು ಪ್ರಶ್ನೆಗಳ ಮಳೆ ಸುರಿಸುತ್ತಿದ್ದಿ.... ಇರು, ಇರು.... ಒಂದೊಂದಾಗಿ ಹೇಳ್ತೀನಿ, ಈಗಷ್ಟೆ ನಿನ್ನ ಜೊತೆ ಮಾತು ಶುರು ಮಾಡಿದ್ದೀನಿ.....'' ಶಾಲಿನಿ ತನ್ನ ಅಭ್ಯಾಸ ಬಲದಂತೆ ಪಕಪಕ ನಗುತ್ತಾ ಉತ್ತರಿಸಿದಳು.

``ಅದೆಲ್ಲ ಆಮೇಲಾಗಲಿ..... ಮೊದಲು ನನ್ನ ಪ್ರಶ್ನೆಗೆ ಉತ್ತರಿಸು. ನನ್ನ ಆ ಹಳೆಯ ಪ್ರಿಯತಮ ಇದ್ದನಲ್ಲ ನವೀನ್‌, ಅವನ ಬಗ್ಗೆ ಏನಾದರೂ ಸುದ್ದಿ ಗೊತ್ತೇನೇ.....? ಬಹುಶಃ ನನ್ನ ತರಹ ಅವನೂ ಸಹ ನಮ್ಮ ಗತಕಾಲದ ಪ್ರೇಮ ಕಾದಂಬರಿಯ ಕೆಲವು ಪುಟಗಳನ್ನು ಇಟ್ಟುಕೊಂಡಿರಬಹುದು......'' ಎಂದಿನ ತನ್ನ ಕಾವ್ಯ ಧಾಟಿಯಲ್ಲಿ ಕೇಳಿದಳು ಶಾಲಿನಿ. ಇತ್ತ ಕೇಳುತ್ತಿದ್ದ ವಿನುತಾಳ ಕೈಯಿಂದ ಫೋನ್‌ ಜಾರುವುದರಲ್ಲಿತ್ತು.

ಅವಳು ಹೇಗೆ ಹೇಳಬಲ್ಲಳು..... ಶಾಲಿನಿಯ ಮಾಜಿ ಪ್ರಿಯಕರನೇ ಈಗ ತನ್ನ ಹಾಲಿ ಪ್ರಿಯತಮನೆಂದು.... ಯಾವ ಪ್ರೇಮ ಕಾದಂಬರಿಯ ಪುಟಗಳ ಕುರಿತು ಶಾಲಿನಿ ಹೇಳುತ್ತಿದ್ದಳೋ, ಅದೇ ಪುಟಗಳು ಇದೀಗ ಅವಳ ಬಾಳ ಡೈರಿಯ ನಿತ್ಯನೂತನ ಪುಟಗಳಾಗಿವೆ..... ಹಿಂದೆ ಶಾಲಿನಿಗೆ ಪ್ರಿಯನಾದವನು ಈಗ ಅವಳ ಪ್ರಿಯ ಗಂಡನಾಗಿದ್ದ.

ವಿನುತಾಳಿಗೆ ಯಾವ ಉತ್ತರ ಹೊಳೆಯಲ್ಲಿಲವಾಗಿ ಬೇಕೆಂದೇ ``ಹಲೋ.... ಹಲೋ....'' ಎನ್ನುತ್ತಾ ನೆಟ್‌ ವರ್ಕ್‌ ಸರಿ ಇಲ್ಲ ಎಂಬಂತೆ ವರ್ತಿಸಿದಳು. ಅತ್ತ ಲೈನ್‌ ಕಟ್‌ ಮಾಡಿದವಳೇ ಇತ್ತ ತಕ್ಷಣ ತನ್ನ ಫೋನ್‌ ಸ್ವಿಚ್‌ ಆಫ್‌ ಮಾಡಿದಳು ವಿನುತಾ. ಸದ್ಯಕ್ಕಂತೂ ಅವಳು ಶಾಲಿನಿಯ ಯಾವ ಪ್ರಶ್ನೆಗೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಅವಳು ಬೆಡ್‌ ರೂಮಿಗೆ ಬಂದು ಬುಡ ಕಡಿದ ಬಾಳೆಯ ಮರದಂತೆ ಹಾಸಿಗೆ ಮೇಲೆ ಬಿದ್ದಳು. ಅವಳಿಗೆ ಕಾಲೇಜಿನ ಜೀವನದ ಪ್ರತಿಯೊಂದು ಘಟನೆಗಳೂ ಸುರುಳಿ ಸುರುಳಿಯಾಗಿ ಬಿಚ್ಚಿಕೊಂಡವು.

ಡಿಗ್ರಿ ಓದುತ್ತಿದ್ದಾಗ ಶಾಲಿನಿ, ವಿನುತಾ, ನವೀನ್‌, ಎಲ್ಲರೂ ಸಹಪಾಠಿಗಳು. ಶಾಲಿನಿ ನವೀನ್‌ ಪ್ರೇಮಿಗಳು. ಅವರು ಅಂತಿಮ ವರ್ಷಕ್ಕೆ ಬರುವ ಹೊತ್ತಿಗೆ ಇವರಿಬ್ಬರ ಮದುವೆ ಸಾಧ್ಯವಿಲ್ಲವೆಂದು ಶಾಲಿನಿ ಮನೆಯವರು ಪಟ್ಟುಹಿಡಿದಿದ್ದರು. ಅದೇನಾಯಿತೋ ಏನೋ... ಹಲವು ತಿಂಗಳ ನಂತರ ಶಾಲಿನಿಯ ಮನೆಯವರು ಅವಳನ್ನು ಅಮೆರಿಕಾದಲ್ಲಿ ಕೆಲಸದಲ್ಲಿದ್ದ ಶ್ರೀಮಂತ ವರ ದಿನೇಶನೊಡನೆ ಮದುವೆಯಾಗಲು ಒಪ್ಪಿಸಿದ್ದರು. ಶಾಲಿನಿ ಈ ವಿವರ ತಿಳಿಸಿದಾಗ ವಿನುತಾಳೇ ಅವಳನ್ನು ಸಮಾಧಾನಪಡಿಸಿದ್ದಳು.

``ಆದರೆ ಶಾಲಿ.... ನೀನು ಆ ನವೀನ್‌ ನನ್ನು ಹೀಗೆ ಒಂದೇ ಸಲ ನಡುನೀರಲ್ಲಿ ಕೈ ಬಿಡುವುದು ಸರಿಯೇ? ಅವನಿಗಂತೂ ನಿನ್ನ ಮೇಲೆ ಅಖಂಡ ಭರವಸ ಇದೆ.  ನಿನ್ನನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೇಮಿಸುತ್ತಾನೆ. ಅವನು ಖಂಡಿತಾ ಹೃದಯ  ಕಳೆದುಕೊಂಡು ಭಗ್ನಪ್ರೇಮಿಯಾಗಿ ಹುಚ್ಚನಾಗುತ್ತಾನೆ..... ಅವನು ಅದಕ್ಕೂ ಮಿಗಿಲಾಗಿ ತನಗೇ ಏನಾದರೂ ಮಾಡಿಕೊಂಡುಬಿಟ್ಟರೆ ಎಂದು ನನಗೆ ಬಹಳ ಹೆದರಿಕೆ.....'' ವಿನುತಾ ಅಂತೂ ತನಗೆ ಗೊತ್ತಿದ್ದನ್ನೆಲ್ಲ ಹೇಳಿದ್ದಳು. ಅವರಿಬ್ಬರ ಪ್ರೇಮ ಪ್ರೀತಿಗೆ ಇವಳು ಪ್ರತ್ಯಕ್ಷ ಸಾಕ್ಷಿಯಾಗಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ