ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಕಿರಣಗಳು ತಿಳಿ ಹಳದಿ ಬಣ್ಣದ ಪರದೆಗೆ ಬಂಗಾರದ ಲೇಪನವನ್ನು ಒದಗಿಸಿದ್ದ. ನನ್ನ ದೃಷ್ಟಿ ಅಲ್ಲಿಂದ ಸರಿದು ಡ್ರಾಯಿಂಗ್‌ ರೂಮ್ ನಲ್ಲಿ ಸಜ್ಜುಗೊಳಿಸಲಾಗಿದ್ದ ತಿಳಿ ನೀಲಿ ಬಣ್ಣದ ಸೋಫಾ ಸೆಟ್‌ಗ್ಲಾಸ್‌ ಟಾಪ್‌ ನಿಂದ ಹೊಳೆಯುತ್ತಿದ್ದ ಟೀಪಾಯ್‌, ಶೆಲ್ಫ್ ನಲ್ಲಿ ಜೋಡಿಸಿಟ್ಟಿದ್ದ ಸುಂದರ ಶೋಪೀಸ್‌ ಗಳ ಮೇಲೆ ಹರಿದಾಡಿ, ಮತ್ತೆ ಎದುರಿಗೆ ಕುಳಿತಿದ್ದ ನನ್ನ ಮಗಳು ಅಕ್ಷತಾಳ ಮೇಲೆ ನೆಟ್ಟಿತು. ಟೇಬಲ್ ಮೇಲೆ ಇರಿಸಿದ್ದ ಫೋಟೊ ಫ್ರೇಮಿನಲ್ಲಿ ಅಕ್ಷತಾಳ ಜೊತೆಗಿದ್ದ ಯುವಕನ ಚಿತ್ರವನ್ನು ನೋಡಬಾರದೆಂದು ಬಹಳ ಪ್ರಯತ್ನಿಸುತ್ತಾ ಅತ್ತಿತ್ತ ದೃಷ್ಟಿ ಹೊರಳಿಸಿದೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಪತಿ ಆನಂದರಾಮರ ಕೋಪ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದುನ್ನು ಕಂಡೂ ಕಾಣದಂತೆ ಕುಳಿತೆ. ಆದರೆ ನನ್ನ ಮನಸ್ಸಿನಲ್ಲಿ ಹರಿದಾಡುತ್ತಿದ್ದ ಭಾವನೆಗಳು ನನ್ನ ಮುಖದ ಮೇಲೆ ಗೋಚರಿಸುತ್ತಿದ್ದಿರಬಹುದು.

ಮಹಾನಗರದಲ್ಲಿ ಉದ್ಯೋಗದಲ್ಲಿದ್ದ ಮಗಳನ್ನು ನೋಡಲೆಂದು ಬಂದ ನಮಗೆ ಅವಳು ತನ್ನ ಬಗ್ಗೆ ತಿಳಿಸಿದ ವಿಷಯ ಆಘಾತಕಾರಿಯಾಗಿತ್ತು. ಮುಂದೆ ಅವಳೇನು ಹೇಳಿದಳೆಂದು ನನಗೆ ಅರ್ಥವಾಗಲೇ ಇಲ್ಲ. ನನ್ನ ಬುದ್ಧಿ ಸ್ಥಗಿತವಾಗಿಬಿಟ್ಟಿತು. ನನ್ನ ಕನ್ನಡಕದ ಗಾಜು ಮಂಜು ಮಂಜಾಯಿತು. ಆದರೆ ಅದನ್ನು ತೆಗೆದು ಒರೆಸಿಕೊಳ್ಳಲು ನನ್ನಿಂದಾಗಲಿಲ್ಲ. ನನ್ನ ಮುದ್ದು ಮಗಳು, ಕೆಲವೇ ವರ್ಷಗಳ ಹಿಂದೆ ನನ್ನ ಬೆರಳು ಹಿಡಿದು ನಡೆಯುತ್ತಿದ್ದಳು, ಅಪ್ಪ ಅಮ್ಮನ ಹಿಂದೆ ಮುಂದೆಯೇ ಸುತ್ತಿತ್ತಿದ್ದಳು, ಅಪ್ಪನ ಹತ್ತಿರ ಅದು ಬೇಕು, ಇದು ಬೇಕು ಎಂದು ಕೇಳಿ ತೆಗೆಸಿಕೊಳ್ಳುತ್ತಿದ್ದಳು, ಅವಳೇ ಈಗ ಇಲ್ಲಿ ನಮ್ಮ ಮುಂದೆ ಕುಳಿತು ತನ್ನ ಬಗ್ಗೆ ಅಂಜಿಕೆಯಿಲ್ಲದೆ ಹೀಗೆ ಹೇಳುತ್ತಿರುವಳೇ? ಮನೆಯಿಂದ ಹೊರಗೆ ಹೋಗಿ ಉದ್ಯೋಗ ಮಾಡಿದಾಕ್ಷಣ ತಾನೇ ತೀರ್ಮಾನ ತೆಗೆದುಕೊಳ್ಳುವಷ್ಟು ದೊಡ್ಡವಳಾಗಿಬಿಟ್ಟಳೇ.....? ಯಾವುದೋ ಹುಡುಗನೊಂದಿಗೆ..... ವಿವಾಹ ಮಾಡಿಕೊಳ್ಳದೆಯೇ ಜೊತೆಯಲ್ಲಿರುವುದು.....? ಸಂಬಂಧವಿಲ್ಲದ ಈ ಸಂಬಂಧಕ್ಕೊಂದು ಹೊಸ ನಾಮಧೇಯ.... ಲಿವ್ ‌ಇನ್‌ ರಿಲೇಶನ್‌ ಶಿಪ್‌.

ನನ್ನ ಕಣ್ಣೀರು ಕೆನ್ನೆಯನ್ನು ತೋಯಿಸಲು ಸಿದ್ಧವಾಗಿತ್ತು. ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಿತ್ತು. ನನ್ನ ಪತಿಯ ಬಿಗಿದ ಮುಷ್ಟಿಯನ್ನು ಕಂಡಾಗ ಅವರ ಕೋಪ ಸಿಡಿಯಲಿದೆ ಎನ್ನಿಸಿತು.

ಯಾವುದೋ ಲೋಕದಲ್ಲಿ ಅವ್ಯಕ್ತ ಭಾವನೆಗಳೊಂದಿಗೆ ತೊಳಲಾಡುತ್ತಿದ್ದ ನಾನು `ಅಮ್ಮಾ......' ಎಂದು ನನ್ನ ಹತ್ತಿರದಲ್ಲೇ ಕರೆದ ಧ್ವನಿ ಕೇಳಿ ಬೆಚ್ಚಿದೆ. ಅಕ್ಷತಾ ಟೀಪಾಯ್‌ ನ್ನು ಕೊಂಚ ಹಿಂದೆ ಸರಿಸಿ, ನನ್ನ ಮುಂದೆ ನೆಲದ ಮೇಲೆ ಕುಳಿತಿದ್ದಳು.

``ನನ್ನ ಈ ವಿಷಯ ನಿಮಗೆ ಬೇರೆಯವರಿಂದ ತಿಳಿಯುವ ಮೊದಲು ನಾನೇ ತಿಳಿಸಬೇಕೆಂದುಕೊಂಡೆ. ಅದಕ್ಕಾಗಿಯೇ ನೀವು ಬರಲೆಂದು ಕಾಯುತ್ತಿದ್ದೆ,'' ಅಕ್ಷತಾ ನಮಗೆ ವಿಷಯವನ್ನು ಅರ್ಥ ಮಾಡಿಸುವ ಪ್ರಯತ್ನದಲ್ಲಿದ್ದಳು, ``ನನಗೆ ನಿಮ್ಮ ಮೇಲೆ ಬಹಳ ಪ್ರೀತಿ. ಗೌರವ ಇದೆ. ಆದರೆ ನೀವು ನನ್ನನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಮತ್ತು ಅಭಯ್‌..... ಪರಸ್ಪರ ಮೆಚ್ಚುಗೆಯ ಕಾರಣದಿಂದಾಗಿ ಜೊತೆಯಲ್ಲಿ ವಾಸಿಸುತ್ತಿದ್ದೇವೆ. ಆದರೆ ನಮ್ಮ ನಮ್ಮ ಕೆಲಸಗಳನ್ನು ಅಂದರೆ ಪಾತ್ರೆ, ಬಟ್ಟೆ ತೊಳೆಯುವಂತಹ ಕೆಲಸಗಳನ್ನು ನಾವು ನಾವೇ ಮಾಡಿಕೊಳ್ಳುತ್ತೇವೆ. ಮನೆಯ ಖರ್ಚನ್ನು ಹಂಚಿಕೊಳ್ಳುತ್ತೇವೆ. ನಾನು ಅವನಿಗಾಗಿ ಊಟ ಮಾಡದೆ ಕಾದು ಕುಳಿತಿರುವುದಿಲ್ಲ. ಅವನು ನಿಮ್ಮ ವಿಚಾರವಾಗಿ ನನ್ನನ್ನು ಹಂಗಿಸುವಂತಿಲ್ಲ....

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ