``ನಿಶಾ....'' ಕಿಶೋರ್‌ ಪತ್ನಿಯ ಮೇಲೆ ರೇಗಾಡಿದ, ``ನನ್ನ ಮುಂದೆ ಹೀಗೆ ಮಾತನಾಡಲು ನಿನಗೆಷ್ಟು ಧೈರ್ಯ? ಜೋಕೆ! ಇನ್ನೊಂದು ಸಲ ಬಾಯಿಬಿಟ್ಟರೆ ನೋಡಿಕೊ. ನಿನ್ನಂಥವಳಿಗೆ ನಾನು ಸಲಿಗೆ ಕೊಟ್ಟದ್ದು ಹೆಚ್ಚಾಯಿತು.''

ಕಿಶೋರ್‌ ಇನ್ನೂ ಅದೇನೇನು ಹೇಳಿದನೋ ನಿಶಾಳಿಗೆ ಗೊತ್ತಿಲ್ಲ. ಆದರೆ ಮರು ಮಾತಿಗೆ ಅವನು ಹೇಳು, ``ನಿನ್ನಂಥವಳು.... ನಿನ್ನಂಥ ಹೆಣ್ಣು....'' ಎನ್ನುವ ಪದಗಳು ಮಾತ್ರ ಅವಳ ಕಿವಿಯಲ್ಲಿ ಗುಂಯ್‌ ಗುಡುತ್ತಿರುತ್ತದೆ. ಅವಳು ಹಿಂದೆ ಹೇಗಿದ್ದಳೋ ಇಂದೂ ಹಾಗೇ ಇದ್ದಾಳೆ. ಅದೇಕೋ ಅವನು ಮಾತ್ರ ಹಾಗೇ ಛೇಡಿಸುತ್ತಿರುತ್ತಾನೆ. ಅವನ ಮಾತು ಕೇಳಿ ಕೇಳಿ ನಿಶಾಳಿಗೆ ತನಗೆ ವ್ಯಕ್ತಿತ್ವವೇ ಇಲ್ಲವೆನಿಸಿಬಿಟ್ಟಿದೆ.

ನಿಶಾ ತಾಯಿ ತಂದೆಗೆ ಒಬ್ಬಳೇ ಮಗಳು. ಬಹಳ ಪ್ರೀತಿಯಿಂದ, ಮುದ್ದಿನಿಂದ ಬೆಳೆಸಿದ್ದರು. ತಂದೆ ನಗರದ ಹೆಸರಾಂತ ಬಿಲ್ಡರ್‌. ಕಟ್ಟಡಗಳನ್ನು ಕಟ್ಟಿ ಮಾರುವ ಉದ್ಯೋಗ ಅವರದು. ನಿಶಾ ಹುಟ್ಟಿದ ನಂತರ ಅವರ ಬಿಸ್‌ ನೆಸ್‌ ಬಹಳ ಚೆನ್ನಾಗಿ ಬೆಳೆದುದರಿಂದ, ಮಗಳು ಹುಟ್ಟಿದ ಗಳಿಗೆ ಒಳ್ಳೆಯದೆಂದು ಹೆಮ್ಮೆಪಡುತ್ತಿದ್ದರು. ಮಗಳ ಯಾವುದೇ ಇಚ್ಛೆಯನ್ನೂ ಕಡೆಗಣಿಸುತ್ತಿರಲಿಲ್ಲ. ನಗರದ ಪ್ರತಿಷ್ಠಿತ ಶಾಲೆ ಕಾಲೇಜುಗಳಲ್ಲಿ ಅವಳ ವಿದ್ಯಾಭ್ಯಾಸ ನಡೆಯಿತು.

ನಿಶಾ ಸುಂದರ ಯುವತಿ. ಪಾಠ ಪ್ರವಚನಗಳಲ್ಲಿಯೂ ಜಾಣೆ. ಕಾಲೇಜಿನ ಸಮಾರಂಭಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಳು. ಹೀಗಾಗಿ ಸ್ನೇಹಿತ ವರ್ಗಕ್ಕೆ ಮಾತ್ರವಲ್ಲದೆ, ಅಧ್ಯಾಪಕ ವರ್ಗಕ್ಕೂ ಮೆಚ್ಚುಗೆಯಾಗಿದ್ದಳು. ಎಲ್ಲರೂ ಅವಳನ್ನು ಹೊಗಳುತ್ತಿದ್ದರು. ಇಷ್ಟಾದರೂ ಅವಳಲ್ಲಿ ಅಹಂಕಾರ, ದರ್ಪಗಳಿರಲಿಲ್ಲ. ಮನೆ ಮತ್ತು ಕಾಲೇಜಿನಲ್ಲಿ ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಂಡು ನಡೆಯುತ್ತಿದ್ದಳು.

ಒಂದು ದಿನ ರಾತ್ರಿ ನಿಶಾಳ ತಂದೆ ಕೆಲಸ ಮುಗಿಸಿ ಮನೆಗೆ ಬಂದರು ಹಾಗೇ ಸೋಫಾದ ಮೇಲೆ ಕುಸಿದುಬಿದ್ದರು. ಅದನ್ನು ಕಂಡ ನಿಶಾ ಕೂಡಲೇ ನೆರೆಮನೆಯವರ ಸಹಾಯದಿಂದ ತಂದೆಯನ್ನು ಆಸ್ಪತ್ರೆಗೆ ಸಾಗಿಸಿದಳು. ಹೃದಯಾಘಾತವಾಗಿದ್ದ ತಂದೆಯನ್ನು ಉಳಿಸಿಕೊಂಡಳು. ಅಂದಿನಿಂದ ತಾಯಿ ತಂದೆಗೆ ಅವಳ ಮೇಲೆ ಪ್ರೀತಿ ವಿಶ್ವಾಸ ಮತ್ತೂ ಹೆಚ್ಚಿತು.

``ನನ್ನ ಮಗಳು ಗಂಡು ಮಗನಿಗಿಂತ ಕಡಿಮೆಯಲ್ಲ!'' ಎಂದು ಅವರು ಹೆಮ್ಮೆಯಿಂದ ಹೇಳುತ್ತಿದ್ದರು.

ಮಗಳ ಬಿಎಸ್ಸಿ ಡಿಗ್ರಿ ಮುಗಿದಾಗ ಅವಳಿಗೆ ಮದುವೆ ಮಾಡಬೇಕೆಂದು ತಂದೆ ಯೋಚಿಸಿದರು. ಅಳಿಯನ ಸಹಕಾರ ಸಿಕ್ಕಿದರೆ ತಮ್ಮ ಕೆಲಸಕ್ಕೆ ಅನುಕೂಲವಾಗುವುದೆಂದು ಅವರ ಎಣಿಕೆ. ಆದರೆ ನಿಶಾಳಿಗೆ ಎಂಎಸ್ಸಿ ಓದುವ ಬಯಕೆ. ಮಗಳ ಆಸೆಗೆ ಅಡ್ಡಿಪಡಿಸಲು ತಾಯಿ ತಂದೆಗೆ ಮನಸ್ಸಾಗಲಿಲ್ಲ.

ನಿಶಾ ಎಂಎಸ್ಸಿ ವ್ಯಾಸಂಗಕ್ಕೆ ಪ್ರವೇಶ ಪಡೆದಳು. ಡಿಗ್ರಿ ಓದುವಾಗ ಕಾಲೇಜಿಗೆ ಬಸ್‌ ನಲ್ಲಿ ಹೋಗುತ್ತಿದ್ದಳು. ಈಗ ಅವಳಿಗೆ ಅನುಕೂಲವಾಗಲೆಂದು ತಂದೆ ಕಾರು ತೆಗೆದುಕೊಟ್ಟರು. ದಿನ ಅವಳು ಕಾರಿನಲ್ಲೇ ಕಾಲೇಜಿಗೆ ಹೋಗತೊಡಗಿದಳು. ಅವಳ ಒಂದಿಬ್ಬರು ಗೆಳತಿಯರೂ ಅವಳ ಜೊತೆ ಹೋಗುತ್ತಿದ್ದರು. ತನ್ನ ಜಾಣ್ಮೆಯಿಂದಾಗಿ ನಿಶಾ ಹೊಸ ಕಾಲೇಜಿನಲ್ಲಿಯೂ ಎಲ್ಲರ ಗಮನ ಸೆಳೆದಳು.

ನಿತ್ಯದ ಪರಿಪಾಠದಂತೆ ನಿಶಾ ಒಂದು ದಿನ ಕ್ಲಾಸ್‌ ಮುಗಿದ ನಂತರ ಲೈಬ್ರೆರಿಗೆ ಹೋದಳು. ಬುಕ್‌ ರಾಕ್‌ ನಲ್ಲಿ ಅವಳು ಪುಸ್ತಕಗಳನ್ನು ಪರಿಶೀಲಿಸುತ್ತಿರುವಾಗ ಯಾರೋ ಹಿಂದೆ ಬಂದು ನಿಂತಂತೆ ಭಾಸವಾಯಿತು. ತಿರುಗಿ ನೋಡಿದಾಗ ಅಲ್ಲಿ ಒಬ್ಬ ಯುವಕ ನಿಂತಿದ್ದ. ಕಳೆದ ಕೆಲವಾರು ದಿನಗಳಿಂದ ಇದೇ ಯುವಕ ತನ್ನ ಹಿಂದೆ ಕಾಲೇಜಿನ ಆವರಣದಲ್ಲಿ ಇರುತ್ತಿದ್ದುದನ್ನು ನಿಶಾ ಗಮನಿಸಿದ್ದಳು. ಇವಳು ತಿರುಗಿ ನೋಡಿದಾಗ ಅವನು ಮುಗುಳ್ನಕ್ಕ. ಆದರೆ ನಿಶಾ ಏನೂ ಪ್ರತಿಕ್ರಿಯಿಸದೆ ದೂರ ಸರಿದಳು. ನಂತರದ ದಿನಗಳಲ್ಲಿ ಅವನು ಎದುರಿಗೇ ಕಾಣತೊಡಗಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ