``ವಿನ್‌ ವಿನ್‌ ಸಿಚುಯೇಶನ್‌ ಅಂದ್ರೆ ಎರಡೂ ಪಕ್ಷಗಳಿಗೂ ಲಾಭ ಆಗಬೇಕು. ಉದಾ, ನಾವು ಯಾವುದೋ ಸಾಮಗ್ರಿಯನ್ನು 50/ ರೂ.ಗಳಲ್ಲಿ ತಯಾರು ಮಾಡಿ ಅದನ್ನು 80/ ರೂ.ಗೆ ಮಾರಿದರೆ ಅದು ನಮಗೆ ಲಾಭ ತರುವ ದಂಧೆ. ಆದರೆ ಅದೇ ಸಾಮಗ್ರಿಯನ್ನು ಯಾರಾದರೂ ಮಾರ್ಕೆಟ್‌ ನಲ್ಲಿ ಅಷ್ಟು ದಿನ 100/ ರೂ. ಕೊಟ್ಟು ತೆಗೆದುಕೊಳ್ಳುತ್ತಿದ್ದರೆ, ಖಂಡಿತಾ ಅಂದಿನಿಂದ ಅವರು ನಮ್ಮ ಪ್ರಾಡಕ್ಟ್ ಕೊಳ್ಳುತ್ತಾರೆ. ಅಂದ್ರೆ ನಮ್ಮ 80/ರ ಪ್ರಾಡಕ್ಟ್ ಅವರಿಗೆ 20/ರ ಲಾಭ ತಂದುಕೊಡುತ್ತದೆ ಹಾಗೂ ನಮಗೂ 30/ ರೂ. ಲಾಭ ಕೊಡುತ್ತದೆ. ಇದನ್ನೇ ವಿನ್‌ ವಿನ್‌ ಸಿಚುಯೇಶನ್‌ ಎನ್ನುತ್ತಾರೆ,'' ಮಾರ್ಕೆಟಿಂಗ್‌ ಮ್ಯಾನೇಜರ್‌, ಸೋಮೇಶ್‌, ತನ್ನ ಕಂಪನಿಯ ಹೊಸ ಸೇಲ್ಸ್ ಎಕ್ಸಿಕ್ಯುಟಿವ್ಸ್ ಗೆ ಹೀಗೆ ತರಬೇತಿ ನೀಡುತ್ತಿದ್ದ.

ಸೋಮೇಶ್‌ ಆ ಕಂಪನಿಗೆ ಸೇರಿ ಈಗಾಗಲೇ 12 ವರ್ಷ ಕಳೆದಿತ್ತು. ಮ್ಯಾನೇಜರ್‌ ಆದಕಾರಣ ಹೊಸಬರಿಗೆ ಟ್ರೇನಿಂಗ್‌ ಕೊಡುವ ಜವಾಬ್ದಾರಿ ಈಗ ಅವನದೇ ಆಗಿತ್ತು. 12 ವರ್ಷಗಳಲ್ಲಿ ಅವನ ಹುದ್ದೆ, ಆದಾಯ ಹೆಚ್ಚಿದ್ದಲ್ಲದೆ, ಸಂಸಾರ ದೊಡ್ಡದಾಗಿತ್ತು. ಇತ್ತೀಚೆಗಷ್ಟೆ ಅವನು 2ನೇ ಮಗುವಿನ ತಂದೆಯಾಗಿದ್ದ. ಈ ಬಾರಿ ಸಂತೋಷಕ್ಕಿಂತ ಹೆಚ್ಚಾಗಿ ಜವಾಬ್ದಾರಿ ಹೆಚ್ಚಿರುವುದು ಅವನ ಅರಿವಿಗೆ ಬಂದಿತ್ತು. ವರ್ಷ ವರ್ಷ ಅದೇ ತರಹದ ಕೆಲಸ ಮಾಡಿ ಮಾಡಿ ಕಂಪನಿಯಲ್ಲಿ ಹೆಚ್ಚುತ್ತಿದ್ದ ಜವಾಬ್ದಾರಿಗಳಿಂದ ಅವನು ಬೇಸತ್ತಿದ್ದ. ಅವನ ಹೆಂಡತಿ ರಮಾ ಸದಾ ಮಕ್ಕಳ ಜಂಜಾಟದಲ್ಲೇ ಮುಳುಗಿರುತ್ತಿದ್ದಳು.

ಆಗ ಮಧ್ಯಾಹ್ನ 2ರ ಊಟದ ಸಮಯ. ಆಫೀಸಿನಲ್ಲಿ ಸಹೋದ್ಯೋಗಿಗಳ ಜೊತೆ ಸೋಮೇಶ್‌ ಊಟಕ್ಕೆ ಕುಳಿತಿದ್ದ. ಮನೆಯಿಂದ ತಂದಿದ್ದ ಲಂಚ್‌ ಬಾಕ್ಸ್ ತೆರೆದ ತಕ್ಷಣ ಅವನು ಮುಖ ಕಿವುಚಿದ.

``ಏನ್ರಿ.... ಇವತ್ತೂ ಮೇಡಂ ನಿಮಗೆ ಚಪಾತಿ ಜೊತೆ ಸೋರೆಕಾಯಿ ಪಲ್ಯ ಕಳುಹಿಸಿದ್ದಾರಾ?'' ಮಾಧವ ಇವನ ಡಬ್ಬಿಯತ್ತ ತಿರುಗಿ ನೋಡದೆ ಇವನ ಮುಖಚರ್ಯೆಯಿಂದಲೇ ಊಹಿಸಿದ್ದ. ಸೋಮೇಶನಿಗೆ ಮೊದಲೇ ಸೋರೆಕಾಯಿಯನ್ನು ಕಂಡರಾಗುತ್ತಿರಲಿಲ್ಲ. ಈ ದಿನ ಮತ್ತಷ್ಟು ಬೇಸರ ಹೆಚ್ಚಿತು.

ಆ ಡಬ್ಬಿಯನ್ನು ಅಲ್ಲೇ ಬಿಟ್ಟ ಸೋಮೇಶ್‌ ನಿಧಾನವಾಗಿ ಕ್ಯಾಂಟೀನಿನತ್ತ ಹೆಜ್ಜೆ ಹಾಕಿದ.

``ಸಾರ್‌, ನೀವು ನಿಮ್ಮ ಬಾಕ್ಸ್ ನ್ನು ಹಾಗೆ ಓಪನ್‌ ಆಗಿ ಬಿಟ್ಟು ಬಂದಿರುವಿರಿ,'' ಕೋಮಲ ದನಿಯೊಂದು ತನ್ನನ್ನು ಕರೆದಂತಾಗಲು ಅವನು ಹೊರಳಿ ನೋಡಿದ. ತಮ್ಮ ಕಂಪನಿಗೆ ಹೊಸದಾಗಿ ಮಾರ್ಕೆಟಿಂಗ್‌ ಎಗ್ಸಿಕ್ಯುಟಿವ್ ‌ಆಗಿ ಸೇರಿದ್ದ ಹುಡುಗಿ ರಮ್ಯಾ, ಅವನ ಟಿಫನ್‌ ಬಾಕ್ಸ್ ಹಿಡಿದು ಅವನು ಇದ್ದಲ್ಲಿಗೆ ಬಂದಳು. ಆ ಕಂಪನಿಯಲ್ಲಿ ಇನ್ನೂ ಅನೇಕ ಹುಡುಗಿಯರಿದ್ದರು, ಸೋಮೇಶ್‌ ಮಾತ್ರ ಅವರೆಲ್ಲರ ಜೊತೆ ಬಲು ಬಿಗುವಾಗಿ, ಅತಿ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದ. ಇಷ್ಟು ಕ್ಯಾಶ್ಯುಯೆಲ್ ‌ಆಗಿ ಯಾವ ಹುಡುಗಿಯೂ ಸಲುಗೆ ತೆಗೆದುಕೊಂಡು ವರ್ತಿಸಿರಲಿಲ್ಲ.

``ಸಾರ್‌, ನಾನು ಇದನ್ನು ಈ ಟೇಬಲ್ ಮೇಲೆಯೇ ಇಡ್ತಿದ್ದೀನಿ,'' ಎಂದಳು. ಅದಕ್ಕೆ ಅವನೇನೂ ಉತ್ತರಿಸಲಿಲ್ಲ.

``ಸಾರ್‌, ನೀವು ತಪ್ಪು ತಿಳಿಯದಿದ್ದರೆ, ನಾನೂ ಇಲ್ಲೇ ಕುಳಿತು ಊಟ ಮಾಡಬಹುದೇ? ಆ ಕಡೆ ದೊಡ್ಡ ಟೇಬಲ್ ಇದೆಯಲ್ಲ..... ಅಲ್ಲಿ ಕುರ್ಚಿ ಖಾಲಿ ಇಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ