ಮಧ್ಯಾಹ್ನದ ಊಟ ಮಾಡಿ ಕೆಲಸ ಮುಗಿಸಿ ಕಿಟಕಿಯಿಂದ ಆಚೆ ನೋಡಿದರು ಸುನಂದಮ್ಮ. ಮಳೆ ಇನ್ನೇನು ಬಂದೇಬಿಟ್ಟೀತು ಎನ್ನುವಂತೆ ಮೋಡಗಳು ಆವರಿಸಿವೆ. ಒಂದು ರೀತಿಯ ಮಬ್ಬಾದ ವಾತಾವರಣ. ಮಟಮಟ ಮಧ್ಯಾಹ್ನವಾದರೂ ಮನೆಯ ಒಳಗೆ ಒಂದು ರೀತಿಯ ಕತ್ತಲು. ಮೇಲೆ ಬೆವರಿಳಿಸುವ ಸೆಕೆ. `ಉಷ್‌....!' ಎಂದು ರೂಮಿನೆಡೆಗೆ ಹೊರಟರು. ಮಂಚದ ಮೇಲೆ ಆರಾಮವಾಗಿ ನಿದ್ರಿಸುತ್ತಿರುವ ಪತಿಯನ್ನು ಕಂಡು ಇಂತಹ ಸೆಕೆಯಲ್ಲೂ ಅದು ಹೇಗೆ ಹೊದ್ದು ಮಲಗುತ್ತಾರೋ ಎಂಬಂತೆ ನೋಡಿ ಹೊರಬಂದರು. ತಮಗೂ ನಿದ್ದೆ ಬಂದಂತಿದೆ. ಆದರೂ ಮಲಗಲು ಹೋದರೆ ಹತ್ತಬೇಕಲ್ಲ. ಈ ಸೆಕೆಯಲ್ಲಿ ತಮ್ಮಿಂದ ಮಲಗಲಾಗದೆಂಬುದು ಅವರಿಗೆ ಗೊತ್ತು.

ಏನಾದರೂ  ಓದಿದರಾಯಿತೆಂದು ಪಕ್ಕದ ಕೋಣೆಗೆ ಬಂದರು. ಎಲ್ಲ ಓದಿರುವ ಕಾದಂಬರಿಗಳೇ. ಇತ್ತೀಚೆಗೆ ಯಾವುದೇ ಹೊಸ ಪುಸ್ತಕ ತರಲಾಗಿಲ್ಲ. ಮತ್ತೊಮ್ಮೆ ಓದಿ ತಾನೇನು ಪರೀಕ್ಷೆ ಬರೆಯಬೇಕೆ ಎಂದುಕೊಂಡು ಮೂಲೆಯಲ್ಲಿದ್ದ ಹಳೆಯ ಕಪಾಟಿನತ್ತ ನೋಡಿದರು. ತಕ್ಷಣ ಅವರಿಗೆ ತಮ್ಮ ಹಳೆಯ ಪತ್ರಗಳ ನೆನಪಾಯಿತು. ಆಗೆಲ್ಲ ತಾವು ಸುದ್ದಿಗಾಗಿ ಪತ್ರಗಳಿಗೆ ಕಾಯುತ್ತಿದ್ದರು. ಪತ್ರ ಬಂದೊಡನೆ ಬಿಚ್ಚಿ ಓದುವುದು ವಿಷಯ ತಿಳಿದು ಇನ್ನೊಬ್ಬರಿಗೆ ಮುಟ್ಟಿಸುವುದು. ಅದೆಲ್ಲ ಎಷ್ಟು ಚೆನ್ನಾಗಿತ್ತು. ಈಗ ಸುಮ್ಮನೆ ಕೂರುವ ಬದಲು ಆ ಹಳೆಯ ಪತ್ರಗಳನ್ನು ಓದಿದರಾಯಿತು ಎಂದುಕೊಂಡರು.

ಕಪಾಟಿನಲ್ಲಿದ್ದ ಪತ್ರದ ಗಂಟನ್ನು ಬಿಚ್ಚಿ ಒಂದೊಂದಾಗಿ ತೆಗೆಯತೊಡಗಿದರು. ಬಹುತೇಕ ಪತ್ರಗಳೆಲ್ಲ ತಮಗೆ ಗಂಡನಿಂದ ಬಂದದ್ದು. ಕೆಲವು ಮದುವೆಗೆ ಮುನ್ನ, ಇನ್ನುಳಿದ ಮದುವೆಯ ನಂತರ. ಅದೇನು ಪತ್ರಗಳೋ ಒಂದರಲ್ಲೂ ಸಾರವೇ ಇಲ್ಲ. `ನಾನು ಇಲ್ಲಿ ಬಂದು ಮುಟ್ಟಿದೆ. ಈ ವಾರ ಕೆಲಸ ಮುಗಿಯುತ್ತಿದ್ದಂತೆ ರವಿವಾರ ಹೊರಟು ಬಂದುಬಿಡುತ್ತೇನೆ. ಮಕ್ಕಳಿಗೂ ತಿಳಿಸು,' ಕೆಲಸದ ಮೇಲೆ ಬೇರೆ ಊರಿಗೆ ಹೋದಾಗ ಇವರು ಬರೆದಿದ್ದ ಪತ್ರವಲ್ಲ ಇದು ಎಂದು ಯೋಚಿಸುತ್ತಾ ಗಂಡ ಬರೆದಿದ್ದ ಪತ್ರಗಳನ್ನೆಲ್ಲ ಆ ಕಡೆ ಸರಿಸಿದರು. ಇವರಿಗೆ ನೆಟ್ಟಗೆ ಸ್ವಾರಸ್ಯದ ಒಂದು ಪತ್ರವನ್ನು ಬರೆಯಲಾಗುವುದಿಲ್ಲ. ಮೊದಲು ಪತ್ರ ಬರೆಯುವುದನ್ನು ಇವರಿಗೆ ನಾನೇ ಕಲಿಸಬೇಕು ಅಂದುಕೊಂಡರು.

ತಕ್ಷಣವೇ ಛೇ! ಛೇ! ಬೇಡ ಬೇಡ. ಈಗಿನ ಕಾಲದಲ್ಲಿ ಇವರು ಯಾರಿಗೆ ಪತ್ರ ಬರೆಯಬೇಕಿದೆ? ಸರಿಯಾಗಿ ಫೋನಿನಲ್ಲಿ ಮಾತನಾಡಿದರಾಯಿತೆಂದು ಕ್ಷಣದಲ್ಲೇ ತಮ್ಮ ಅನಿಸಿಕೆಯನ್ನು ಬದಲಾಯಿಸಿದರು. ತಾವು ಒಮ್ಮೆಯೂ ಇವರೊಡನೆ ಫೋನ್‌ ನಲ್ಲಿ ಮಾತನಾಡಲೇ ಇಲ್ಲವಲ್ಲ ಎಂಬುದು ಆಗಲೇ ಹೊಳೆದದ್ದು ಸುನಂದಮ್ಮನಿಗೆ. `ಆ ಕಾಲದಲ್ಲಿ ಅದೆಲ್ಲ ಎಲ್ಲಿತ್ತು ಮಣ್ಣು!' ಎಂದು ಗುನುಗುತ್ತ ಮತ್ತೊಂದು ಹಳೆಯ ಪತ್ರವನ್ನು ಕೈಗೆ ತೆಗೆದುಕೊಂಡು ನೋಡಿದರೆ ಕಳುಹಿಸಿದವರ ವಿಳಾಸವೇ ಇಲ್ಲ. ತುಂಬಾ ವರ್ಷಗಳ ಹಿಂದಿನದಾದ್ದರಿಂದ ಕೆಲವು ಅಕ್ಷರಗಳು ಅಸ್ಪಷ್ಟವಾಗಿದ್ದರೂ ಅಕ್ಷರಗಳನ್ನು ಊಹಿಸಿ ಓದಬಹುದಾಗಿತ್ತು. ತಮಗೇ ಬಂದ ಪತ್ರವೆಂದು ಖಚಿತವಾಯಿತು. ಪತ್ರವನ್ನು ಓದತೊಡಗಿದರು.

ಪ್ರಿಯ ಶ್ರೀಮತಿ ಸುನಂದಾ ಸುಧೀಂದ್ರ,

ಇದೇನು, ಇಷ್ಟೊಂದು ದಿನಗಳ ಮೇಲೆ ನಿನ್ನನ್ನು ನೆನೆಸುತ್ತಿದ್ದೇನೆಂದು ಯೋಚಿಸುತ್ತಿರುವೆಯಾ? ನಿನ್ನ ಯೋಚನೆ ಸಹಜ. ನಾನಾದರೂ ಏನು ಮಾಡಲಿ? ಇತ್ತೀಚೆಗೆ ಬರೀ ಕೆಲಸ. ಮನಸ್ಸಿನಲ್ಲಿ ಯೋಚಿಸಲು ಈಗ ಬೇಕಾದಷ್ಟು ಜನರಿದ್ದಾರೆ. ಕೆಲವರ ಸಮಸ್ಯೆಗಳಿವೆ. ಕೆಲವರ ವಿಚಾರಗಳು ಬಲು ಕ್ಲಿಷ್ಟವಾಗಿವೆ. ಕೆಲವರನ್ನು ಅರಿತುಕೊಳ್ಳುವುದರಲ್ಲಿ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಇದೆಲ್ಲದರ ಮಧ್ಯೆ ನಿನ್ನನ್ನು ನೆನೆಯುವುದು ಸ್ವಲ್ಪ ಕಷ್ಟವೇ ಅಂದರೆ ಸುಳ್ಳಾಗದು. ಆದರೂ ಏನು ಮಾಡ್ಲಿ? ನೀನು ಮಾಡಿರುವ ಕೆಲಸವೇ ಅಂತದು. ನಿನ್ನನ್ನು ನೆನೆಯದೆ ಬೇರೆ ಮಾರ್ಗವೇ ಇಲ್ಲದಂತಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ