ವಂಶ ಮುಂದುವರಿಯಲು ನಿಸರ್ಗ ತನಗೆ ಗಂಡುಮಗು ಕರುಣಿಸಲಿಲ್ಲ, ಹೆಣ್ಣುಮಗುವನ್ನಷ್ಟೇ ನೀಡಿತು ಎಂಬ ಬಗ್ಗೆ ಶಿವರಾಮ್ ಅವರಿಗೆ ಎಳ್ಳಷ್ಟೂ ಖೇದವಿರಲಿಲ್ಲ. ಮಗಳು ಇಲ್ಲಿ ಮಗ, ಆಗಿರಬಹುದು. ಎಲ್ಲರೂ ತಮ್ಮ ತಮ್ಮ ಅದೃಷ್ಟ ಹೊತ್ತುಕೊಂಡೇ ಭೂಮಿಗೆ ಬಂದಿರುತ್ತಾರೆ. ಇಬ್ಬರಲ್ಲೂ ಭೇದಭಾವ ಮಾಡುವುದನ್ನು ಅವರು ಪಾಪ ಎಂದೇ ಭಾವಿಸುತ್ತಿದ್ದರು. ಆದರೆ ಅವರ ಹೆಂಡತಿ ವನಜಾಕ್ಷಿಗೆ ಮಾತ್ರ ಪುತ್ರನ ಅಪೇಕ್ಷೆಯ ಕನಸು ನನಸಾಗದೇ ಹೋಗಿತ್ತು. ಹೀಗಾಗಿ ಅವರು ಬಾಲ್ಯದಿಂದಲೇ ಮಗಳನ್ನು ಮಗನೆಂಬಂತೆ ಬೆಳೆಸತೊಡಗಿದರು. ವಿಷಯ ಇಷ್ಟೇ ಆಗಿದ್ದರೆ ಏನೂ ತೊಂದರೆಯಾಗುತ್ತಿರಲಿಲ್ಲ. ಆದರೆ ಅವರು ತಮ್ಮ ಅತಿಯಾದ ಪ್ರೀತಿಯಿಂದ ಮಗಳನ್ನು ಹಾಳುಗೆಡವತೊಡಗಿದ್ದರು. ಈ ಕಾರಣದಿಂದ ಆಕೆ ಅಮ್ಮನ ಹಾಗೆ ಮುಂಗೋಪಿ ಹಾಗೂ ಹಠಮಾರಿ ಸ್ವಭಾವದವಳಾಗತೊಡಗಿದ್ದಳು. ಮಗಳ ಈ ಸ್ವಭಾವದ ಕಾರಣದಿಂದ ಆಕೆ ಬಹು ಬೇಗ ಸ್ನೇಹಿತರ ವಲಯದಲ್ಲಿ ಕುಖ್ಯಾತಿ ಪಡೆಯಬಹುದು ಎಂದು ತಂದೆ ಶಿವರಾಮ್ ಅವರಿಗೆ ಸದಾ ಅನಿಸುತ್ತಿತ್ತು. ಪತ್ನಿಗೆ ಈ ಬಗ್ಗೆ ಅದೆಷ್ಟೋ ಬಾರಿ ತಿಳಿಸಿ ಹೇಳಿದರೂ ಅದು ಹೊಳೇಲಿ ಹುಣಿಸೆಹಣ್ಣು ತೊಳೆದಂತೆ ಆಯಿತು.

ಶಿವರಾಮ್ ಅವರ ಸಂದೇಹ ನಿರಾಧಾರವಾಗಿಯೇನೂ ಉಳಿಯಲಿಲ್ಲ. ಸುನೀತಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಕಾಲೋನಿಯಿಂದ ತಕರಾರುಗಳು ಕೇಳಿ ಬರಲಾರಂಭಿಸಿದ್ದವು. ಸ್ಕೂಲ್ ‌ಬಸ್‌ ನಲ್ಲಿ ತನ್ನ ಸೀಟಿನಲ್ಲಿ ಬೇರೆ ಯಾರೋ ಕುಳಿತಿರುವುದನ್ನು ಸಹಿಸಿಕೊಳ್ಳುವುದು ಆಕೆಯ ಸ್ವಭಾದಲ್ಲೇ ಬಂದಿರಲಿಲ್ಲ. ಹೆಚ್ಚಿನ ಮಕ್ಕಳು ಆಕೆಯಿಂದ ದೂರ ದೂರವೇ ಇರಲು ಪ್ರಯತ್ನಿಸುತ್ತಿದ್ದರು. ಯಾರಾದರೊಬ್ಬರು ಆಕೆಗೆ ಸ್ನೇಹಿತರಾದರೆ, ಅವಳ ಕಠೋರ ಸ್ವಭಾವದ ಕಾರಣದಿಂದ ಅವರ ಸ್ನೇಹ ಬಹುಬೇಗ ತುಂಡರಿಸುತಿತ್ತು. ಅವಳು ಅಭ್ಯಾಸ ಮಾಡುವುದರಲ್ಲಿ ಮುಂದೆ ಇದ್ದಳು. ಆದರೆ ಮುಂಗೋಪಿತನದಿಂದಾಗಿ ಎಲ್ಲರಿಗೂ ಆಕೆ ಜಗಳಗಂಟಿ ಎನಿಸಿಕೊಂಡಿದ್ದಳು. ಎಷ್ಟೋ ಸಲ ಶಿಕ್ಷಕರು ಅವಳಿಗೆ ದಂಡ ಕೂಡ ವಿಧಿಸುತ್ತಿದ್ದರು. ಆದರೆ ಅವಳ ಟೀಚರ್‌ ಗೂ ಕೂಡ ಆಕೆಯ ಸ್ವಭಾವ ಬದಲಿಸಲು ಆಗಿರಲಿಲ್ಲ.

ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿದ್ದಂತೆಯೇ ಸುನೀತಾಗೆ ಕೀಳರಿಮೆ ಎನಿಸಲಾರಂಭಿಸಿತು. ಅವಳಿಗೆ ಬೋರ್ಡ್‌ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕಗಳು ಬಂದಿದ್ದ. ಆದರೆ ಆಕೆಯ ಕ್ಲಾಸ್‌ ನಲ್ಲಿ ಅವಳನ್ನು ಮೀರಿಸುವ ಅನೇಕ ವಿದ್ಯಾರ್ಥಿಗಳು ಇದ್ದರು.  ಕೆಲವರಂತೂ ಶೇ.97ಕ್ಕೂ ಹೆಚ್ಚು ಅಂಕ ಪಡೆದಿದ್ದರು. ಅಂತಹ ವಿದ್ಯಾರ್ಥಿಗಳು ಸಾಕಷ್ಟು ಸ್ಮಾರ್ಟ್‌ ಪ್ರತಿಭಾನ್ವಿತರು ಆಗಿರುವುದರ ಜೊತೆಗೆ ಬೇರೆಯವರೊಂದಿಗೆ ಬೆರೆಯುವ ಸ್ವಭಾವದರಾಗಿದ್ದರು. ಆ ಹುಡುಗ ಹುಡುಗಿಯರು ಭೇದಭಾವ ಮಾಡದೆ ಎಲ್ಲರೊಂದಿಗೆ ಸಹಜ ಹಾಗೂ ಸ್ನೇಹಭಾವದಿಂದ ಇರುತ್ತಿದ್ದರು. ಇದರಿಂದಾಗಿ ಸುನೀತಾಗೆ ಬಹಳ ಸಿಡಿಮಿಡಿ ಉಂಟಾಗುತ್ತಿತ್ತು. ಕಾಲೇಜು ಶುರುವಾದ ಬಳಿಕ ಮೊದಲ ವಾರದಲ್ಲಿಯೇ ಕೆಲವು ಹುಡುಗರು ಯಾವುದೊ ನೆಪದಲ್ಲಿ ಸುನೀತಾಳೊಂದಿಗೆ ನಿಕಟತೆ ಬೆಳೆಸಿಕೊಳ್ಳಲು ಪ್ರಯತ್ನಿಸಿದಾಗ, ಸುನೀತಾ ಅವರನ್ನು ಛೀಮಾರಿ ಹಾಕಿ ದೂರ ಓಡಿಸಿದ್ದಳು. ಜೊತೆಗೆ ರಾಗಿಂಗ್‌ ಆರೋಪ ಹೊರಿಸಿ ದೂರು ನೀಡುವುದಾಗಿ ಬೆದರಿಕೆ ಕೂಡ ಹಾಕಿದ್ದಳು. ದೂರು ಕೊಟ್ಟರೆ ತಮ್ಮ ಭವಿಷ್ಯ ಅಂಧಕಾರವಾಗುವುದೆಂದು ಹೆದರಿ ಆಕೆಯ ಬಳಿ ಸುಳಿಯಲು ಹಿಂದೇಟು ಹಾಕತೊಡಗಿದರು. ಸಹಪಾಠಿಗಳು ಆಕೆಯನ್ನು `ಮುಂಗೋಪಿ ಸುನೀತಾ' ಎಂದೇ ಕರೆಯಲು ಶುರು ಮಾಡಿಬಿಟ್ಟರು. 3 ವರ್ಷ ಕಾಲೇಜಿನಲ್ಲಿ ಓದಿಯೂ ಅವಳ ಸ್ವಭಾವದಲ್ಲಿ ಕಿಂಚಿತ್ತೂ ಬದಲಾವಣೆಯಾಗಲಿಲ್ಲ. ಅವಳೊಂದಿಗೆ ಗೆಳೆತನ ಮಾಡುವುದನ್ನು ಯಾರೂ ತಮ್ಮ ಅದೃಷ್ಟ ಎಂದು ಭಾವಿಸಲಿಲ್ಲ. ಶಿವರಾಮ್ ತಮ್ಮ ಇಳಿ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಸುನೀತಾಳ ವಿವಾಹವನ್ನು ಬೇಗನೇ ಮಾಡಿ ಮುಗಿಸಬೇಕು ಎಂದುಕೊಂಡಿದ್ದರು. ಆದರೆ ಹೆಂಡತಿ ವನಜಾಕ್ಷಿ ಮಾತ್ರ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದರು. ಅವರ ಹಠಕ್ಕೆ ಪ್ರತಿಯಾಗಿ ಸುನೀತಾ ಎಂಬಿಎ ಮಾಡಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಫೈನಾನ್ಸ್ ಎಗ್ಸಿಕ್ಯೂಟಿವ್ ‌ಹುದ್ದೆಯ ನೌಕರಿ ಪಡೆದಿದ್ದಳು. ಕಂಪನಿಯಲ್ಲಿ ಕೆಲಸ ಶುರು ಮಾಡುತ್ತಿದ್ದಂತೆಯೇ ತನ್ನ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಆಕೆಗೆ ಅನಿಸತೊಡಗಿತು. ಕಾಲೇಜಿಗಿಂತ ಇಲ್ಲಿ ಟೀಮ್ ವರ್ಕ್‌ ಗೆ ಹೆಚ್ಚು ಮಹತ್ವವಿತ್ತು. ಮಾತೇ ಆಡದೇ ಮುಖ ಊದಿಸಿಕೊಂಡು ಕೂತಿರುವುದರಿಂದ ಕೆಲಸ ಆಗುವಂತಿರಲಿಲ್ಲ. ಹೀಗಾಗಿ ಸುನೀತಾ ನಗುತ್ತ ಮಾತಾಡುವುದನ್ನು ಕಲಿತುಕೊಂಡಳು. ಆದರೆ ಅವಳ ಗರ್ವ ಮಾತ್ರ ಎಳ್ಳಷ್ಟೂ ಕಡಿಮೆಯಾಗಿ ಇರಲಿಲ್ಲ. ಹೀಗಾಗಿ ಸಹೋದ್ಯೋಗಿಗಳು ಮತ್ತು ಅಧೀನ ಕೆಲಸಗಾರರು ಸಾಕಷ್ಟು ಅಂತರ ಕಾಪಾಡಿಕೊಳ್ಳುವುದರಲ್ಲಿಯೇ ತಮ್ಮ ಜಾಣತನವಿದೆಯೆಂದು ಭಾವಿಸಿದ್ದರು. ಯಾವಾಗ ಮೇಡಂ ತಮ್ಮ ಮೇಲೆ ಕೆಂಗಣ್ಣು ಬೀರಬಹುದೆಂದು ಅವರು ಸದಾ ಜಾಗೃತರಾಗಿರುತ್ತಿದ್ದರು. ಇತ್ತ ಸುನೀತಾಳ ವಿವಾಹದ ವಯಸ್ಸು ಮೀರುತ್ತ ಹೊರಟಿತ್ತು. ಶಿವರಾಮ್ ಅವರಿಗೂ ಮಗಳ ಬಗ್ಗೆ ಯೋಚಿಸಿ ಯೋಚಿಸಿ ನಿದ್ದೆ ಮಾಯವಾಗಿಬಿಟ್ಟಿತ್ತು. ಮದುವೆಯ ಬಗ್ಗೆ ಮಾತುಕಥೆ ನಡೆಸುತ್ತಿದ್ದಾಗೆಲ್ಲ ತಾಯಿಮಗಳು ಏನಾದರೊಂದು ಷರತ್ತು ಹಾಕಿ ಮದುವೆ ವಿಷಯ ಮುಂದೂಡುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ