ಆ ದಿನಗಳನ್ನು ಹೇಗೆ ತಾನೇ ಮರೆಯಲು ಸಾಧ್ಯ? ಕೊರೋನಾದ ಮಹಾಮಾರಿಯ ಕಾರಣದಿಂದ ದೇಶಾದ್ಯಂತ ತುರ್ತು ಲಾಕ್‌ ಡೌನ್‌ ಹೇರಲಾಗಿತ್ತು. ಎಲ್ಲೆಡೆಯೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೊದಲನೆಯದು, ಅಪರಿಚಿತ ರೋಗ, ಇನ್ನೊಂದೆಡೆ ಆ ರೋಗಕ್ಕೆ ಯಾವುದೇ ಔಷಧಿಗಳಿರಲಿಲ್ಲ. ಹೀಗಾಗಿ ಭಯ ಎಲ್ಲೆಡೆ ಪಸರಿಸುತ್ತಿತ್ತು. ಎಲ್ಲರೂ ಕತ್ತಲೆಯಲ್ಲಿ ಬಾಣ ಬಿಡುತ್ತಿದ್ದರು. ಔಷಧಿಗಳ ಹೊರತಾಗಿ ಯಾರೊ ಕಷಾಯದ ಬಗ್ಗೆ ಹೇಳುತ್ತಿದ್ದರೆ, ಮತ್ತೆ ಕೆಲವರು ಯೋಗ ಪ್ರಾಣಾಯಾಮದ ಬಗ್ಗೆ ಸಲಹೆ ನೀಡುತ್ತಿದ್ದರು. ಯಾರಿಗೆ ಯಾವುದು ತೋಚುತ್ತದೋ ಅವರು ಅದನ್ನೇ ಪ್ರಯೋಗ ಮಾಡುತ್ತಿದ್ದರು.

ರೈಲುಗಳಾಗಲಿ, ಬಸ್‌ ಗಳಾಗಲಿ ಸಂಚರಿಸುತ್ತಿರಲಿಲ್ಲ. ಕೋಚಿಂಗ್‌ ಸೆಂಟರ್‌ ಹಾಗೂ ಹಾಸ್ಟೆಲ್ ‌ಗಳನ್ನು ಖಾಲಿ ಮಾಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬಹುದೂರದಿಂದ ಬಂದವರು ಬಹಳ ತೊಂದರೆ ಅನುಭವಿಸುತ್ತಿದ್ದರು.

ನಿಕಿತಾಳ ಜೊತೆಗೂ ಹೀಗೆಯೇ ಆಯಿತು. ಅವಳು ತನ್ನ ವೀಕೆಂಡ್‌ ನ್ನು ಮನೋಜ್‌ ಜೊತೆಗೆ ಕಳೆಯಲೆಂದು  ಹೋಗಿ ಈ ಜಂಜಾಟದಲ್ಲಿ ಸಿಲುಕಿದ್ದಳು. ಅವರಿಬ್ಬರು ಮೊದಲ ಬಾರಿಗೆ ಹೀಗೆ ಸುತ್ತಾಡಲು ಹೋಗಿರಲಿಲ್ಲ. ಅವರು ಆಗಾಗ ಈ ತೆರನಾದ ಶಾರ್ಟ್‌ ಟ್ರಿಪ್‌ ಪ್ಲಾನ್‌ ಮಾಡುತ್ತಲೇ ಇರುತ್ತಿದ್ದರು.

ಅಂದಹಾಗೆ ಇಬ್ಬರು ತಮ್ಮ ಮನೆಗಳಿಂದ ಬಹುದೂರದ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಯಾವುದೇ ಅಡೆತಡೆಗಳು ಇರಲಿಲ್ಲ. ಭವಿಷ್ಯದಲ್ಲಿ ಮದುವೆ ಮಾಡಿಕೊಳ್ಳುತ್ತೇವೋ ಇಲ್ಲವೋ ಎಂಬ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೇ ಇಬ್ಬರೂ ವರ್ತಮಾನದಲ್ಲಿ  ಜೀವಿಸುತ್ತಿದ್ದರು.

ಜನತಾ ಕರ್ಫ್ಯೂ ಘೋಷಣೆಯ ಜೊತೆ ಜೊತೆಗೆ ಮುಂಬರುವ ದಿನಗಳಲ್ಲಿ ಲಾಕ್‌ ಡೌನ್‌ ಹೇರುವ ಬಗೆಗಿನ ಸುಳಿವು ಕೂಡ ದೊರಕಿತು. ನಿಕಿತಾ ಹಾಗೂ ಮನೋಜ್‌ ಕೂಡ ತಾವೆಷ್ಟು ದಿನಗಳ ಕಾಲ ದೂರ ಇರಬೇಕಾಗಿ ಬರುತ್ತದೋ ಎಂದು ಯೋಚಿಸಿ ನಾವೇಕೆ ಮುಕ್ತವಾಗಿ ಜೀವಿಸಬಾರದು ಎನ್ನುವುದು ಅವರ ಧೋರಣೆ ಆಗಿತ್ತು.

ಅಂದಹಾಗೆ ನಿಕಿತಾ ವರ್ಕಿಂಗ್‌ ವುಮನ್‌ ಹಾಸ್ಟೆಲ್ ‌ನಲ್ಲಿ ವಾಸಿಸುತ್ತಿದ್ದಳು. ಮನೋಜ್‌ ಒಂದು ಪಿಜಿಯಲ್ಲಿದ್ದ. ಇಬ್ಬರೂ ಮನೋಜ್ ನ ಸ್ನೇಹಿತ ಶಶಿಧರ್‌ ಮನೆಯಲ್ಲಿ ಉಳಿದುಕೊಳ್ಳೋಣ ಎಂದು ಯೋಚಿಸಿದರು. ಸರಿಯಾಗಿ ಅದೇ ಸಮಯಕ್ಕೆ ಶಶಿಧರ್‌ ತನ್ನ ಗೆಳೆಯರೊಂದಿಗೆ ಗೋವಾಕ್ಕೆ ಹೋಗಿದ್ದ. ಹೀಗಾಗಿ ಅವನ ಮನೆ ಖಾಲಿಯಿತ್ತು. ಅದೇ ಅವಕಾಶದ ಲಾಭ ಪಡೆದುಕೊಂಡು ಇಬ್ಬರೂ ಎರಡು ದಿನ ರಜೆ ಪಡೆದು ಮಂಗಳೂರಿಗೆ ಹೊರಟರು.

ಇಬ್ಬರೂ ವೀಕೆಂಡ್‌ ನ ಎಂಜಾಯ್‌ ಮಾಡುತ್ತಿದ್ದರು. ಅಷ್ಟರಲ್ಲಿ ದೇಶಾದ್ಯಂತ ಲಾಕ್‌ ಡೌನ್‌ ಘೋಷಣೆ ಮಾಡಲಾಯಿತು. ಆ ಸುದ್ದಿ ಕೇಳುತ್ತಿದ್ದಂತೆ ಮನೋಜ್‌ ನ ಕಣ್ಣಲ್ಲಿ ಅದೇನೊ ಹೊಳಪು ಕಂಡಿತು.`ಹಮ್ ತುಮ್ ಏಕ್‌ ಕಮರೇ ಮೇ ಬಂದ್‌ ಹೋ.... ಔರ್ ಚಾಬಿ ಖೋ ಜಾಯ್‌.....' ಎಂದು ಹಾಡು ಗುನುಗುನಿಸುತ್ತಾ ನಿಕಿತಾಳತ್ತ ನೋಡಿದ.

``ನಿನಗೆ ನಗು ಬರುತ್ತಿದೆ. ಆದರೆ ನಾವು ಎಂತಹ ಸಂಕಷ್ಟಕ್ಕೆ ಸಿಲುಕಿಬಿಟ್ಟೆವು ಎನ್ನುವ ಅಂದಾಜು ನಿನಗಿದೆಯಾ?'' ನಿಕಿತಾ ಅವನನ್ನು ಗಂಭೀರಗೊಳಿಸಲು ಪ್ರಯತ್ನಿಸಿದಳು.

``ಇದರಲ್ಲಿ ನಾವು ತೊಂದರೆ ಅನುಭವಿಸುವುದೇನಿದೆ? ನಾವು ಇಲ್ಲಿ ಹೇಗೆ ಸಿಲುಕಿದ್ದೇವೋ, ಹಾಗೆಯೇ ಪಣಜಿಯಲ್ಲಿ ಶಶಿಧರ್ ಸಿಲುಕಿಕೊಂಡಿದ್ದಾನೆ. ಈ ಮನೆಯಲ್ಲಿ ಅಡುಗೆ ಸಾಮಗ್ರಿಗಳ ಸಂಗ್ರಹವಂತೂ ಇದ್ದೇ ಇದೆ. ಹೇಗೂ ನೀನು ಅಡುಗೆ ಮಾಡ್ತೀಯಾ, ನಾನು ಅದರ ರುಚಿ ಸವಿತೀನಿ,'' ಎನ್ನುತ್ತಾ ಮನೋಜ್‌ ಅವಳನ್ನು ನಿಶ್ಚಿಂತಳಾಗಿಸಲು ಪ್ರಯತ್ನಿಸಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ